ಕಾನೂನು ವಿಭಾಗದ 4 ವಿದ್ಯಾರ್ಥಿಗಳ ಅರ್ಜಿಯನ್ನು ಮುಂಬೈ ಉಚ್ಚನ್ಯಾಯಾಲಯ ತಿರಸ್ಕರಿಸಿದೆ.

ರಾಜ್ಯ ಸರಕಾರ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧದ ಪ್ರಕರಣ

ಮುಂಬಯಿ – ರಾಜ್ಯ ಸರಕಾರವು ಶ್ರೀ ರಾಮಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತದಿಂದ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧ ಕಾನೂನು ವಿಭಾಗದ ನಾಲ್ವರು ವಿದ್ಯಾರ್ಥಿಗಳು ಮುಂಬೈ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ‘ರಾಜ್ಯ ಸರಕಾರ ಘೋಷಿಸಿರುವ ರಜೆ ತನ್ನ ಮನಸ್ಸಿನಂತಿದೆ. ಇಂತಹ ರಜೆಯನ್ನು ಘೋಷಿಸಲು ರಾಜ್ಯ ಸರಕಾರದ ಅಧಿಕಾರದಲ್ಲಿಲ್ಲ’ ಎಂದು ಅರ್ಜಿಗಳಲ್ಲಿ ಹೇಳಲಾಗಿತ್ತು. ಈ ಅರ್ಜಿಯನ್ನು ಮುಂಬೈ ಉಚ್ಚನ್ಯಾಯಾಲಯ ತಿರಸ್ಕರಿಸಿದೆ. ಇಂತಹ ಅರ್ಜಿಯಿಂದ ನಮಗೆ ಆಘಾತವಾಗಿದೆ. ಅರ್ಜಿಯಲ್ಲಿ ಇನ್ನಿತರ ಗಂಭೀರ ಹೇಳಿಕೆಗಳಿವೆ. ಅರ್ಜಿಯಲ್ಲಿ ತಿಳಿಸಿರುವಂತಹ ಹೇಳಿಕೆಗಳ ಬಗ್ಗೆ ಕಾನೂನಿನ ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ ಕಲ್ಪನೆ ಇದೆ ಎಂದು ನಂಬುವುದು ನಮಗೆ ಕಷ್ಟ ಎಂದು ನ್ಯಾಯಾಲಯವು ವಿಚಾರಣೆಯಲ್ಲಿ ಹೇಳಿದೆ. ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರಿದ್ದ ವಿಶೇಷ ಪೀಠದ ಮುಂದೆ ವಿಚಾರಣೆ ನಡೆಯಿತು.

‘ಬಾಹ್ಯ ಕಾರಣಗಳಿಗಾಗಿ ಅರ್ಜಿ ಸಲ್ಲಿಸಲಾಗಿದೆಯೆನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಅರ್ಜಿಯೇ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ. ನ್ಯಾಯಾಲಯಕ್ಕೆ ಬರುವ ಅರ್ಜಿದಾರರು ಕೇವಲ ಸ್ವಚ್ಛ ಕೈಗಳಿಂದ ಮಾತ್ರವಲ್ಲ, ಸ್ವಚ್ಛವಾದ ಮನಸ್ಸಿನೊಂದಿಗೆ ಬರಬೇಕು.’ ಎಂದು ನ್ಯಾಯಾಲಯ ಹೇಳಿದೆ.

1. ಸರಕಾರದ ನಿರ್ಣಯ ರಾಜಕೀಯ ಪ್ರೇರಿತವಲ್ಲ ಮತ್ತು ಮೂಲಭೂತ ಹಕ್ಕುಗಳಿಗೆ ಅಪಾಯ ನಿರ್ಮಾಣ ಮಾಡುವಂತಹದ್ದಲ್ಲ. ನಿರ್ಣಯವು ಕಾರ್ಯನೀತಿಯ ನಿರ್ಧಾರವಾಗಿದೆ. 17 ರಾಜ್ಯಗಳು ಸಾರ್ವಜನಿಕ ರಜೆಯನ್ನು ಘೋಷಿಸಿವೆ. ಅಂತಹ ನಿರ್ಣಯ ಕಾರ್ಯಕಾರಿ ನೀತಿಯ ವ್ಯಾಪ್ತಿಯಡಿಯಲ್ಲಿ ಬರುತ್ತದೆ ಎಂದು ನ್ಯಾಯಾಲಯ ಹೇಳಿದೆ.

2. `ನಿರ್ದಿಷ್ಟ ಧರ್ಮದೆಡೆಗೆ ವಾಲಿಸುವುದು ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿಲ್ಲ’, ಎಂದು ಅರ್ಜಿದಾರರು ಹೇಳಿದಾಗ, ` ರಾಜ್ಯ ಸರಕಾರಕ್ಕೆ ರಜೆ ಘೋಷಿಸುವ ಸಂಪೂರ್ಣ ಅಧಿಕಾರವಿದೆ’, ಎಂದು ಸರಕಾರಿ ನ್ಯಾಯವಾದಿಗಳು ಹೇಳಿದರು.

ಸಂಪಾದಕರು ನಿಲುವು

* ಅರ್ಜಿಯು ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿದೆ ಎಂದು ನ್ಯಾಯಾಲಯದ ಅಭಿಪ್ರಾಯ