ಸಾಧಕರು ಸೂಚನೆ ಮತ್ತು ವಾಚಕರಿಗೆ ವಿನಂತಿ
ಭಾರತದಲ್ಲಿ ಅಲ್ಲಲ್ಲಿಯೇ ಸಂತರು ಇದ್ದಾರೆ. ಈ ಸಂತರು ವಿಶಿಷ್ಟ ಸಾಧನಾಮಾರ್ಗದಿಂದ ಸಾಧನೆ ಮಾಡಿ ಸಂತತ್ವ ಪಡೆದಿರುತ್ತಾರೆ. ಆದ್ದರಿಂದ ಸಮಾಜದಲ್ಲಿನ ಅನೇಕ ಜನರು ಸನ್ಮಾರ್ಗದಲ್ಲಿ ಸಾಗುತ್ತಿದ್ದಾರೆ. ಅಂತಹ ಸಂತರ ಬಗ್ಗೆ ಬಹಳಷ್ಟು ಬಾರಿ ಅದೇ ಜಿಲ್ಲೆಯ ಅಥವಾ ನೆರೆಯ ಪ್ರದೇಶದಲ್ಲಿನ ಜನರಿಗೆ ಮಾತ್ರ ತಿಳಿದಿರುತ್ತದೆ. ಸಂತರು ಪ್ರಸಿದ್ಧಿವಿಮುಖರಾಗಿರುವುದರಿಂದ ಅವರು ಆ ವಿಶಿಷ್ಟ ಪ್ರದೇಶದ ಹೊರಗೆ ಬಹಳಷ್ಟು ಪರಿಚಿತರಾಗಿರುವು ದಿಲ್ಲ. ಅಂತಹ ಸಂತರ ಪರಿಚಯ ಎಲ್ಲರಿಗೂ ಆಗಬೇಕು, ಹಾಗೂ ಆ ಸಂತರ ಬೋಧನೆ ಮತ್ತು ಚರಿತ್ರೆಯಿಂದ ಜನಸಾಮಾನ್ಯರಿಗೂ ಸಾಧನೆ ಮಾಡಲು ಪ್ರೇರಣೆ ದೊರೆಯಬೇಕು, ಎಂಬ ಉದ್ದೇಶದಿಂದ ಅವರ ಮಾಹಿತಿಯನ್ನು ಸನಾತನ ಪ್ರಭಾತದಲ್ಲಿ ಪ್ರಸಾರ ಮಾಡುವವರಿದ್ದೇವೆ. ಆದಷ್ಟು ಬೇಗನೇ ಸನಾತನದ ಗ್ರಂಥ ಗಳಲ್ಲಿಯೂ ಈ ಮಾಹಿತಿ ಸೇರಿಸಲಾಗುವುದು. ಸಂತರ ಮಾಹಿತಿ ಪ್ರಸಾರ ಮಾಡಲು ಪ್ರಯತ್ನಿಸುವುದು ಸಹ ಧರ್ಮಸೇವೆಯೇ ಆಗಿದೆ. ಸಾಧಕರೇ ಮತ್ತು ವಾಚಕರೆ, ನೀವೆಲ್ಲರೂ ಈ ಧರ್ಮ ಸೇವೆಯ ಲಾಭ ಪಡೆಯಬೇಕು. ಅದಕ್ಕಾಗಿ ಇಂತಹ ಸಂತರ ಬಗ್ಗೆ ಸುಲಭವಾಗಿ ಉಪಲಬ್ಧ ಇರುವ ಮಾಹಿತಿಯನ್ನು ಮುಂದೆ ನೀಡಿರುವ ಇ-ಮೇಲ್ ವಿಳಾಸಕ್ಕೆ ಅಥವಾ ಅಂಚೆ ಮೂಲಕ ಕಳುಹಿಸಬೇಕು. ಈ ಮಾಹಿತಿಯಲ್ಲಿ ಮುಖ್ಯವಾಗಿ ಮುಂದಿನ ಅಂಶಗಳ ಸಮಾವೇಶಗೊಳಿಸಬೇಕು.
೧. ಸಂತರ ಹೆಸರು, ಅವರ ಜನ್ಮ ದಿನಾಂಕ, ಜನ್ಮತಿಥಿ, ಜನ್ಮಸ್ಥಳ, ಜನ್ಮ ಸಮಯ, ಈಗ ವಾಸಿಸುತ್ತಿರುವ ಸ್ಥಳ, ವಯಸ್ಸು ಇತ್ಯಾದಿ
೨. ಅವರ ಬಾಲ್ಯ, ಅವರ ಮಾಡಿರುವ ಸಾಧನೆ, ಅವರ ಬೋಧನೆ, ಅವರ ಶಿಷ್ಯ ಪರಿವಾರ, ಅವರ ಗುರುಗಳ ಮಾಹಿತಿ ಇತ್ಯಾದಿ
೩. ಆ ಸಂತರ ಬಗ್ಗೆ ಇರುವ ಮಾಹಿತಿ ವಿಶೇಷಾಂಕ, ಮಾಸಿಕ, ಪುಸ್ತಕ ಮುಂತಾದ ಸ್ವರೂಪದಲ್ಲಿ ಪ್ರಸಾರ ವಾಗಿರುವುದರ ಪ್ರತಿ ಅಥವಾ ಜೆರಾಕ್ಸ್ ಅಥವಾ ಸ್ಕ್ಯಾನ್ ಇಮೇಜ್ ಕಳುಹಿಸಿ.
೪. ಆ ಸಂತರು ಸನಾತನದ ಸಂಪರ್ಕದಲ್ಲಿ ಇದ್ದರೆ ಅಥವಾ ಈ ಹಿಂದೆ ಸನಾತನ ಪ್ರಭಾತದಲ್ಲಿ ಅವರ ಮಾಹಿತಿ ಪ್ರಸಾರವಾಗಿದ್ದರೆ ಹಾಗೆ ತಿಳಿಸಿ.
೫. ಆ ಸಂತರ ೨ – ೩ ಛಾಯಾಚಿತ್ರಗಳನ್ನು ಕೂಡ ಕಳುಹಿಸಿ.
ಸಾಧಕರು ಮೇಲಿನ ಮಾಹಿತಿಯನ್ನು ಜಿಲ್ಲಾ ಸೇವಕರ ಮಾಧ್ಯಮದಿಂದ ಕಳುಹಿಸಬೇಕು ಹಾಗೂ ವಾಚಕರು ಈ ಮಾಹಿತಿ ನೇರ ಕಳುಹಿಸಬೇಕು. ಇ-ಮೇಲ್ : [email protected] |
– ಸಂಕಲನ ವಿಭಾಗ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೧೦.೨೦೨೩)