ಅಯೋಧ್ಯೆಯ ತೀರ್ಪನ್ನು ತಡೆಯಲು ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಇವರ ವಿರುದ್ಧ ಮಹಾಭಿಯೋಗವನ್ನು ನಡೆಸುವ ಪ್ರಯತ್ನವನ್ನು ಮಾಡಿದ ಕಾಂಗ್ರೆಸ್ ಸಹಿತ ಇತರ ೭ ಪಕ್ಷಗಳು !

ಮುಖ್ಯನ್ಯಾಯಮೂರ್ತಿ ರಂಜನ ಗೋಗೋಯಿ

ಆಗಿನ ಮುಖ್ಯನ್ಯಾಯಮೂರ್ತಿ ರಂಜನ ಗೋಗೋಯಿ ಇವರು ರಾಮಜನ್ಮಭೂಮಿ ಪ್ರಕರಣದ ತೀರ್ಪನ್ನು ಅತ್ಯಂತ ಬುದ್ಧಿವಂತಿಕೆಯಿಂದ ಹೇಗೆ ನೀಡಿದರು ಹಾಗೂ ಅದರಲ್ಲಿನ ಅವರ ಅನುಭವದ ಬಗ್ಗೆ ಅವರು ‘ಜಸ್ಟಿಸ್ ಫಾರ್ ದ ಜಜ್ : ಆಟೋಬಾಯೋಗ್ರಾಫಿ’ ಈ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ೪೦ ದಿನಗಳ ಆಲಿಕೆಯ ನಂತರ ಸರ್ವೋಚ್ಚ ನ್ಯಾಯಾಲಯದ ೫ ಜನ ನ್ಯಾಯಾಧೀಶರ ವಿಭಾಗೀಯ ಪೀಠವು ೯ ನವೆಂಬರ್ ೨೦೧೯ ರಂದು ತೀರ್ಪು ನೀಡಿತು ಹಾಗೂ ‘೨.೭೭ ಎಕರೆ ಭೂಮಿಯನ್ನು ಹಿಂದೂಗಳಿಗೆ ನೀಡಲು ಆದೇಶ ನೀಡಿತು. ಈ ರೀತಿ ೫೦೦ ವರ್ಷಗಳಿಂದ ನಡೆಯುತ್ತಿದ್ದ ಅಯೋಧ್ಯೆಯ ವಿವಾದ ಹಾಗೂ ಹಿಂದೂಗಳ ಹಳೆಯ ಸಂಘರ್ಷವು ಮುಗಿಯಿತು. ಆಗ ರಂಜನ ಗೋಗೋಯಿ ದೇಶದ ಮುಖ್ಯನ್ಯಾಯಮೂರ್ತಿ ಆಗಿದ್ದರು, ಅವರ ಅಧ್ಯಕ್ಷತೆಯಲ್ಲಿನ ವಿಭಾಗೀಯ ಪೀಠವು ಈ ಐತಿಹಾಸಿಕ ತೀರ್ಪನ್ನು ನೀಡಿತ್ತು.

ಅಯೋಧ್ಯೆಯ ರಾಮಜನ್ಮಭೂಮಿ ಪ್ರಕರಣದಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್.ಯು. ಖಾನ್ ಇವರು ವಿವಾದಾತ್ಮಕ ಭೂಮಿಯನ್ನು ಹೇಗೆ ಹಂಚುವುದು ಎಂಬುದರ ಪ್ರಮಾಣವನ್ನು ನೀಡಿ ತೀರ್ಪನ್ನು ನೀಡಿದರು, ಆಗಲೆ ಆ ನಿರ್ಣಯದ ವಿರುದ್ಧ ೨೧ ಅರ್ಜಿಗಳು ದಾಖಲಾದವು. ೫ ಡಿಸೆಂಬರ್ ೨೦೧೭ ರಂದು ಆಗಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಇವರ ಮುಂದೆ ಯುಕ್ತಿವಾದಕ್ಕಾಗಿ ಬಂದಿತ್ತು; ಆದರೆ ಅಂದಿನ ಕಾಂಗ್ರೆಸ್ಸಿನ ಮುಖಂಡರು ಹಾಗೂ ವಕೀಲ ಕಪಿಲ ಸಿಬ್ಬಲ ಇವರಿಗೆ ಇದರ ಆಲಿಕೆಯನ್ನು ೨೦೧೯ ರ ಚುನಾವಣೆಯ ನಂತರ ನಡೆಸುವ ಇಚ್ಛೆಯಿತ್ತು; ಆದರೆ ದೀಪಕ್ ಮಿಶ್ರಾ ಇವರಿಗೆ ಅದು ಒಪ್ಪಿಗೆಯಿರಲಿಲ್ಲ; ಆದ್ದರಿಂದ ಅವರ ವಿರುದ್ಧ ಮಹಾಭಿಯೋಗವನ್ನು ನಡೆಸುವ ಪ್ರಯತ್ನ ನಡೆಯಿತು. ‘ಈ ತೀರ್ಪನ್ನು ತಡೆಯಲು ಷಡ್ಯಂತ್ರವನ್ನು ರಚಿಸಲಾಗಿತ್ತು’, ಎಂದು ಮಾಜಿ ಮುಖ್ಯನ್ಯಾಯಮೂರ್ತಿ ಹಾಗೂ ಸಂಸದ ರಂಜನ ಗೋಗೋಯಿ ಇವರು ತಮ್ಮ ಆತ್ಮಚರಿತ್ರೆಯಲ್ಲಿ ಗೌಪ್ಯಸ್ಫೋಟವನ್ನು ಮಾಡಿದ್ದಾರೆ.

೧. ಮಹಾಭಿಯೋಗ ಪ್ರಸ್ತಾಪವನ್ನು ‘ರಾಜಕೀಯ ಅಸ್ತ್ರ’ ಎಂದು ಬಳಸುವ ಹುನ್ನಾರ !

ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಇವರ ವಿರುದ್ಧ ಕಾಂಗ್ರೆಸ್ ಸಹಿತ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರವಾದಿ ಕಾಂಗ್ರೆಸ್, ‘ಸಿ.ಪಿ.ಐ’ ಪಕ್ಷ, ಮುಸ್ಲಿಮ್ ಲೀಗ್ ಹಾಗೂ ಝಾರಖಂಡ ಮುಕ್ತಿ ಮೋರ್ಚಾ ಈ ೭ ವಿಪಕ್ಷಗಳು ಮಹಾಭಿಯೋಗ ನಡೆಸಲು ಅಂದಿನ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯಾ ನಾಯ್ಡು ಇವರಿಗೆ ೭೧ ಜನ ಸಂಸದರ ಸಹಿಗಳನ್ನು ಪ್ರಸ್ತುತಪಡಿಸಿದ್ದರು. ಅದರಲ್ಲಿ ಕಾಂಗ್ರೆಸ್ಸಿನ ಸಂಸದರು ಹಾಗೂ ವಕೀಲ ಕಪಿಲ ಸಿಬ್ಬಲ ಉತ್ಸಾಹದಿಂದ ಭಾಗವಹಿಸಿದ್ದರು. ಆಗ ಕೇಂದ್ರ ಸಚಿವರಾಗಿದ್ದ ಅರುಣ ಜೆಟ್ಲಿ ಇವರು ಮಹಾಭಿಯೋಗ ಪ್ರಕ್ರಿಯೆಯನ್ನು ‘ರಾಜಕೀಯ ಅಸ್ತ್ರ’ವೆಂದು ಹೇಗೆ ಉಪಯೋಗಿಸಲಾಗುತ್ತಿದೆ ಎಂಬುದನ್ನು ಹೇಳಿದ್ದರು. ದೀಪಕ್ ಮಿಶ್ರಾ ಇವರ ನಂತರದ ಮುಖ್ಯನ್ಯಾಯಮೂರ್ತಿಯಾದ ರಂಜನ ಗೋಗೋಯಿ ಇವರು ಈ ಪ್ರಕರಣವನ್ನು ೪ ಜನವರಿ ೨೦೧೯ ರಂದು ತಮ್ಮ ಅನುಮತಿಯಿಲ್ಲದೇ ಬೋರ್ಡ್‌ಗೆ ಹೇಗೆ ತರಲಾಯಿತು, ಎಂಬುದನ್ನು ಹೇಳಿದರು. ಮುಖ್ಯನ್ಯಾಯಮೂರ್ತಿಯೆಂದು ರಂಜನ ಗೋಗೋಯಿ ಇವರು ಈ ಪ್ರಕರಣವನ್ನು ೫ ನ್ಯಾಯಾಧೀಶರ ವಿಭಾಗೀಯ ಪೀಠಕ್ಕೆ ಒಪ್ಪಿಸುವ ನಿರ್ಣಯವನ್ನು ಮಾಡಿದ್ದರು, ಅದರಲ್ಲಿ ಅವರ ಹೊರತು ನ್ಯಾಯಾಧೀಶ ಎಸ್.ಎ ಬೋಬಡೆ, ಎನ್.ವಿ. ರಮಣ,

ಯೂ.ಯೂ. ಲಳಿತ ಹಾಗೂ ಡಿ.ವೈ. ಚಂದ್ರಚೂಡ ಇವರಿದ್ದರು. ಉತ್ತರಪ್ರದೇಶ ಸರಕಾರವು ಮೌಖಿಕ ಸಾಕ್ಷಿಯ ೧೩ ಸಾವಿರ ಪುಟಗಳ ಭಾಷಾಂತರವನ್ನು ಪ್ರಸ್ತುತಪಡಿಸಿತು. ಅದಕ್ಕೆ ಒಪ್ಪಿಗೆ ತೆಗೆದುಕೊಳ್ಳಲು ಎರಡೂ ಪಕ್ಷಗಳಿಗೆ ಅಭ್ಯಾಸಕ್ಕಾಗಿ ೨ ತಿಂಗಳ ಅವಧಿಯನ್ನು ನೀಡಲಾಗಿತ್ತು. ಅನಂತರ ಒಪ್ಪಂದಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಲಾಯಿತು, ಅದು ವಿಫಲವಾಯಿತು. ಆದ್ದರಿಂದ ಸರ್ವೋಚ್ಚ ನ್ಯಾಯಾಲಯ ೬ ಆಗಸ್ಟ್ ೨೦೧೯ ರಂದು ಬೆಳಗ್ಗೆ ೧೦.೩೦ ಕ್ಕೆ ಆಲಿಕೆಯನ್ನು ಆರಂಭಿಸಿತು.

೨. ದೈವೀ ಶಕ್ತಿ ಖಟ್ಲೆಯನ್ನು ಮುಗಿಸಲು ಪ್ರೋತ್ಸಾಹಿಸುತ್ತಿತ್ತು !

ಮುಖ್ಯನ್ಯಾಯಮೂರ್ತಿ ರಂಜನ ಗೋಗೋಯಿ ಅವರು ತಮ್ಮ ಪುಸ್ತಕದಲ್ಲಿ ಮುಂದಿನಂತೆ ಬರೆದಿದ್ದಾರೆ, ಸಂಪೂರ್ಣ ಆಲಿಕೆಯ ಸಮಯದಲ್ಲಿ ಅವರಿಗೆ ಒಂದು ದಿನವೂ ೩-೪ ಗಂಟೆಗಳಿಗಿಂತ ಹೆಚ್ಚು ಮಲಗಲು ಸಾಧ್ಯವಾಗಲಿಲ್ಲ. ಈ ಪ್ರಕರಣವನ್ನು ಅವರ ಸಹಾಯಕ ನ್ಯಾಯಾಧೀಶರು ಹುಚ್ಚರ ಹಾಗೆ ಅಧ್ಯಯನ ಮಾಡುತ್ತಿದ್ದರು. ಯಾವುದೋ ದೈವೀ ಶಕ್ತಿ ಈ ಖಟ್ಲೆಯನ್ನು ಮುಗಿಸಲು ನಮ್ಮನ್ನು ಪ್ರೋತ್ಸಾಹಿಸುತ್ತಿತ್ತು ಎಂಬ ವಿಶ್ವಾಸ ನನಗಿದೆ. ಆ ೩ ತಿಂಗಳ ಆಲಿಕೆಯ ಸಮಯದಲ್ಲಿ ವಿಭಾಗೀಯ ಪೀಠದ ಯಾವ ನ್ಯಾಯಾಧೀಶರೂ ಒಂದು ದಿನವೂ ರಜೆ ತೆಗೆದುಕೊಂಡಿರಲಿಲ್ಲ. ಯಾವ ನ್ಯಾಯಾಧೀಶರಿಗೂ ಜ್ವರ ಅಥವಾ ನೆಗಡಿಯೂ ಆಗಿರಲಿಲ್ಲ. ಆ ಸಮಯದಲ್ಲಿ ಓರ್ವ ನ್ಯಾಯಾಧೀಶರ ಒಬ್ಬ ಸಂಬಂಧಿಕರು ಐ.ಸಿ.ಯು. ನಲ್ಲಿದ್ದರು, ‘ಅವರ ನಿಧನವಾದರೆ ನಾನು ಕೆಲವು ದಿನ ರಜೆ ತೆಗೆದುಕೊಳ್ಳಬೇಕಾಗುವುದು’ ಎಂದು ಹೇಳಿದ್ದರು; ಆದರೆ ರಂಜನ ಗೋಗೋಯಿಯವರು ಅವರು ಆರೋಗ್ಯದಿಂದಿರುವರು ಎಂಬ ಆಶ್ವಾಸನೆಯನ್ನು ನೀಡಿದ್ದರು. ಆದರೆ ಹಾಗಾಗಲಿಲ್ಲ ಒಂದು ವೇಳೆ ಹಾಗೆ ಆಗಿದ್ದರೂ ನ್ಯಾಯಾಧೀಶರು ಚೇತರಿಸಿಕೊಂಡಿರುತ್ತಿದ್ದರು.

೩. ನಿರ್ಣಯ ನೀಡಿದ ನಂತರ ಆನಂದಾಚರಣೆ ನಡೆಯಿತು !

ಪ್ರತಿದಿನದ ಆಲಿಕೆಯ ನಂತರ ಈ ಐದೂ ಜನ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯವರ ಕಕ್ಷೆಯಲ್ಲಿ ಚಹಾತಿಂಡಿಗಾಗಿ ಭೇಟಿಯಾಗುತ್ತಿದ್ದರು. ಆ ಸಮಯದಲ್ಲಿ ಅವರು ಖಟ್ಲೆಯ ವಿವಾದದ ಬಗ್ಗೆ ಮಾತನಾಡುತ್ತಿದ್ದರು; ಆದರೆ ಕೊನೆಯ ದಿನಗಳಲ್ಲಿ ‘ವಿವಾದಾತ್ಮಕ ಭೂಮಿಯನ್ನು ಹಿಂದೂಗಳ ವಶಕ್ಕೆ ಕೊಡಬೇಕು ಹಾಗೂ ಮುಸಲ್ಮಾನರಿಗೆ ಮಸೀದಿಗಾಗಿ ಪ್ರತ್ಯೇಕ ೫ ಎಕರೆ ಭೂಮಿ ಸಿಗಬೇಕು’, ಎಂಬ ಚರ್ಚೆ ಆರಂಭವಾಯಿತು. ಅಯೋಧ್ಯೆಯ ಪ್ರಕರಣದಲ್ಲಿ ಒಂದೇ ತೀರ್ಪನ್ನು ಬರೆಯಲಾಯಿತು ಹಾಗೂ ಅದನ್ನು ಯಾರು ಬರೆದರು ? ಎಂಬುದನ್ನು ಬಹಿರಂಗಪಡಿಸಲಿಲ್ಲ.

ಐದೂ ಜನ ನ್ಯಾಯಾಧೀಶರು ಅದಕ್ಕೆ ಸಹಿ ಹಾಕಿದರು. ಮುಖ್ಯನ್ಯಾಯಮೂರ್ತಿ ರಂಜನ ಗೋಗೋಯಿ ಇವರಿಗೆ ‘ಈ ಪ್ರಕರಣದ ನಿರ್ಣಯದಲ್ಲಿ ೧ ನಿಮಿಷವೂ ವಿಳಂಬ ಆಗಬಾರದು’, ಎಂದು ಅನಿಸುತ್ತಿತ್ತು. ನಿರ್ಣಯವನ್ನು ಬಿಡುಗಡೆ ಮಾಡಿದ ನಂತರ ನ್ಯಾಯಾಲಯ ಕ್ರಮಾಂಕ ಒಂದರಲ್ಲಿನ ನ್ಯಾಯಾಧೀಶರ ಗ್ಯಾಲರಿಯಲ್ಲಿ ಅಶೋಕ ಚಕ್ರದ ಸಮೀಪ ಎಲ್ಲ ನ್ಯಾಯಾಧೀಶರು ಒಟ್ಟಾಗಿ ಛಾಯಾಚಿತ್ರ ತೆಗೆಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅನಂತರ ಸಾಯಂಕಾಲ ಗೋಗೋಯಿ ಇವರು ತಮ್ಮ ಸಹಾಯಕ ನ್ಯಾಯಾಧೀಶರನ್ನು ತಾಜ್ ಮಾನಸಿಂಗ್ ಹೊಟೇಲ್‌ನಲ್ಲಿ ಉತ್ಸವವನ್ನು ಆಚರಿಸಲು ಕರೆದರು. ಮರುದಿನ ಸರ್ವೋಚ್ಚ ನ್ಯಾಯಾಲಯ ಪ್ರಕಾಶನ ಮಾಡಿದ ಒಂದು ಪುಸ್ತಕದ ಬಿಡುಗಡೆಯ ಸಮಾರಂಭಕ್ಕಾಗಿ ಅವರು ತಾಯಿ ಮತ್ತು ಪತ್ನಿಯ ಜೊತೆಗೆ ಆಸಾಮ್‌ನಲ್ಲಿನ ದಿಬ್ರುಗಡಕ್ಕೆ ಪ್ರಯಾಣ ಮಾಡಿದರು. ಅಲ್ಲಿಂದ ಹಿಂತಿರುಗಿದ ನಂತರ ಅವರು ನಿವೃತ್ತಿಯ ಕೊನೆಯ ದಿನದ ವರೆಗೆ ಸೇವೆಯಲ್ಲಿದ್ದರು. ಅವರು ಈ ಪ್ರಕರಣವನ್ನು ಒಂದು ಸವಾಲು ಎಂದು ಸ್ವೀಕರಿಸಿದ್ದರು ಹಾಗೂ ಅದಕ್ಕಾಗಿ ಅವರು ಅವರ ವಿದೇಶ ಪ್ರವಾಸವನ್ನೂ ರದ್ದುಪಡಿಸಿದ್ದರು.

೪. ಸವಾಲನ್ನು ಎದುರಿಸುವ ನಿರ್ಣಯ

ನ್ಯಾಯಾಧೀಶ ರಂಜನ ಗೋಗೋಯಿ ಇವರು ಕಲಮ್ ೩೭೦ (ಜಮ್ಮು-ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನ ನೀಡುವ ಕಲಮ್) ರದ್ದುಪಡಿಸುವುದರ ವಿರುದ್ಧದಲ್ಲಿ ದಾಖಲಾದ ಅರ್ಜಿಗಳಿಗೆ ಸಮಯ ನೀಡಲಿಲ್ಲ; ಏಕೆಂದರೆ ಅವರಿಗೆ ಅಯೋಧ್ಯೆಯ ಪ್ರಕರಣವನ್ನು ಪೂರ್ಣಗೊಳಿಸಲಿಕ್ಕಿತ್ತು. ರಂಜನ ಗೋಗೋಯಿಯವರು ಮುಂದೆ ಹೀಗೆ ಬರೆದಿದ್ದಾರೆ, ‘ನಾನು ಸವಾಲನ್ನು ಎದುರಿಸುವ ನಿರ್ಣಯವನ್ನು ತೆಗೆದು ಕೊಂಡೆನು ಹಾಗೂ ನಕಾರಾತ್ಮಕ ಟಿಪ್ಪಣಿಗಳ ಮೂಲಕ ವೈಯಕ್ತಿಕ ಗಮನ ನೀಡಲು ಮಹತ್ವ ಕೊಡಲಿಲ್ಲ. ಇಂದು ರಾಮಮಂದಿರ ಸಾಕಾರಗೊಳ್ಳುತ್ತಿರುವಾಗ ಅದರ ನಿಮಿತ್ತ ನಾವು ರಂಜನ ಗೋಗೋಯಿಯವರಿಗೂ ಧನ್ಯವಾದ ಸಲ್ಲಿಸಬೇಕು.

(ಆಧಾರ : ಸಾಪ್ತಾಹಿಕ ‘ಹಿಂದೂಸ್ಥಾನ ಪೋಸ್ಟ್’)