‘ಮಾರ್ಚ್ 15 ರೊಳಗೆ ಭಾರತವು ಮಾಲ್ಡೀವ್ಸ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಬೇಕಂತೆ !’- ಮಾಲ್ಡೀವ್ಸ್ ನಿಂದ ಭಾರತಕ್ಕೆ ಸೂಚನೆ

ಮಾಲ್ಡೀವ್ಸ್ ನಿಂದ ಭಾರತಕ್ಕೆ ಸೂಚನೆ !

ಭಾರತದೊಂದಿಗೆ 100 ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳನ್ನು ಸಹ ಪರಿಶೀಲಿಸಲಾಗುವುದು !

ಮಾಲೆ (ಮಾಲ್ಡೀವ್ಸ್) – ಮಾಲ್ಡೀವ್ಸ್‌ನಲ್ಲಿ ನೆಲೆಸಿರುವ ಭಾರತೀಯ ಸೈನಿಕರನ್ನು ಮಾರ್ಚ್ 15 ರೊಳಗೆ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮೊಯಿಜ್ಜು ಭಾರತವನ್ನು ಹೇಳಿದ್ದಾರೆ. ಪ್ರಸ್ತುತ ಭಾರತೀಯ ಸೇನೆಯ 88 ಸೈನಿಕರು ಮತ್ತು ಅಧಿಕಾರಿಗಳು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.

1. ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ಸಾರ್ವಜನಿಕ ನೀತಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಇಬ್ರಾಹಿಂ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ್ 15 ರೊಳಗೆ ಭಾರತವು ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಅಧ್ಯಕ್ಷ ಮೊಯಿಜ್ಜು ಅಧಿಕೃತವಾಗಿ ಕೇಳಿಕೊಂಡಿದ್ದಾರೆ. ಮೊಯಿಜ್ಜು ಸರಕಾರದ ನೀತಿಯ ಪ್ರಕಾರ ಭಾರತೀಯ ಸೇನೆ ಮಾಲ್ಡೀವ್ಸ್‌ನಲ್ಲಿ ಉಳಿಯುವಂತಿಲ್ಲ. ಮಾಲ್ಡೀವ್ಸ್‌ನ ಜನರು ಭಾರತಕ್ಕೆ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ವಿನಂತಿಸಲು ಹೊಸ ಸರಕಾರಕ್ಕೆ ಸಧೃಢ ಬಹುಮತವನ್ನು ನೀಡಿದ್ದಾರೆ. ಮಾಲ್ಡೀವ್ಸ್‌ನ ಹೊಸ ಸರಕಾರವು ಈಗ ಭಾರತದೊಂದಿಗೆ 100 ದ್ವಿಪಕ್ಷೀಯ ಒಪ್ಪಂದಗಳನ್ನು ಪರಿಶೀಲಿಸುತ್ತಿದೆ.

2. ಮಾಲ್ಡೀವ್ಸ್ ಮತ್ತು ಭಾರತವು ಸೈನ್ಯವನ್ನು ಹಿಂತೆಗೆದುಕೊಳ್ಳುವ ಸೂತ್ರವನ್ನು ಚರ್ಚಿಸಲು ಉನ್ನತ ಮಟ್ಟದ ಗುಂಪನ್ನು ರಚಿಸಿದೆ. ಈ ನಿಟ್ಟಿನಲ್ಲಿ, ಈ ಗುಂಪಿನ ಮೊದಲ ಸಭೆಯು ಜನವರಿ 14 ರಂದು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಭಾರತದ ಹೈಕಮಿಷನರ್ ಮುನು ಮಹಾವರ್ ಉಪಸ್ಥಿತರಿದ್ದರು. ನಾಜಿಂ ಇವರು ಇಂತಹ ಸಭೆ ನಡೆಸಲಾಗಿದೆ ಎಂಬ ವರದಿಗಳನ್ನು ದೃಢಪಡಿಸುತ್ತಾ, ಮಾರ್ಚ್ 15ರೊಳಗೆ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡುವುದು ಸಭೆಯ ಮುಖ್ಯ ವಿಷಯವಾಗಿತ್ತು ಎಂದು ಹೇಳಿದರು.

(ಸೌಜನ್ಯ:The Indian Express)

ಸಂಪಾದಕರ ನಿಲುವು

* ಮಾಲ್ಡೀವ್ಸ್‌ನ ಅಂತಹ ಸಲಹೆಯನ್ನು ನಿರ್ಲಕ್ಷಿಸಿ ಭಾರತವು ಮಾಲ್ಡೀವ್ಸ್ ಅನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಭಾರತೀಯರು ಭಾವಿಸಿದರೆ, ಅದು ತಪ್ಪಾಗಬಾರದು !

* ನಾಳೆ ಭಾರತ ತನ್ನ ಸೈನ್ಯವನ್ನು ಹಿಂತೆಗೆದುಕೊಂಡರೆ, ಚೀನಾದ ಸೈನಿಕರು ಅಲ್ಲಿ ಬೀಡುಬಿಟ್ಟು ಭಾರತಕ್ಕೆ ಅಪಾಯವಾಗುವುದಕ್ಕಿಂತ ಮಾಲ್ಡೀವ್ಸ್ ಅನ್ನು ವಶಕ್ಕೆ ಪಡೆಯುವುದು ಭಾರತಕ್ಕೆ ಯೋಗ್ಯವಾಗಲಿದೆ !