ತೈವಾನಅನ್ನು ಚೀನಾದಿಂದ ರಕ್ಷಿಸುವ ಕಾರ್ಯ ಮಾಡುತ್ತೇನೆ !- ರಾಷ್ಟ್ರಪತಿ ಲಾಯ್ ಚಿಂಗ್-ಟೆ

ತೈವಾನ್ ನ ನೂತನ ಆಯ್ಕೆಯಾದ ರಾಷ್ಟ್ರಪತಿ ಲಾಯ್ ಚಿಂಗ್-ಟೆ ಅವರ ಹೇಳಿಕೆ !

ರಾಷ್ಟ್ರಪತಿ ಲಾಯ್ ಚಿಂಗ್-ಟೆ

ತಾಯ್ಪೆ (ತೈವಾನ) – ತೈವಾನ್ ನಲ್ಲಿ ನಡೆದ ರಾಷ್ಟ್ರಪತಿ ಹುದ್ದೆಯ ಚುನಾವಣೆಯಲ್ಲಿ ಲಾಯ್ ಚಿಂಗ್-ಟೆ ಜಯಗಳಿಸಿದ್ದಾರೆ. ಅವರು ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ನಾವು ದೇಶವನ್ನು ಚೀನಾದಿಂದ ರಕ್ಷಿಸಲು ಕಾರ್ಯವನ್ನು ಮಾಡುವವರಿದ್ದೇವೆ. ಚೀನಾ ಭವಿಷ್ಯದಲ್ಲಿ ನಮ್ಮ ಹೊಸ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ. ನಮಗೆ ಬೆದರಿಕೆ ಹಾಕುವುದರಿಂದ ಅವರಿಗೆ ಏನೂ ಸಿಗುವುದಿಲ್ಲ ಎನ್ನುವುದನ್ನು ಚೀನಾ ಅರಿತುಕೊಳ್ಳಬೇಕು. ಶಾಂತಿಯುತವಾಗಿ ಚರ್ಚಿಸುವುದರಿಂದಲೇ ಪ್ರಯೋಜನವಾಗಲಿದೆ ಎಂದು ಹೇಳಿದರು.

1. ತೈವಾನ ರಕ್ಷಣಾ ಸಚಿವಾಲಯವು, ಚೀನಾದ ‘ಏರ್ ಬಲೂನ್’ (ಗ್ಯಾಸ ತುಂಬಿರುವ ದೊಡ್ಡ ಬಲೂನುಗಳು) ನಮ್ಮ ಗಡಿಯಲ್ಲಿ ಹಾರುತ್ತಿರುವುದು ಕಂಡುಬಂದಿದೆ. ನಾವು ಇದನ್ನು ನಿಷೇಧಿಸುತ್ತೇವೆ. ಈ ಘಟನೆಯು ನಮ್ಮ ವಿಮಾನಗಳ ಹಾರಾಟಕ್ಕೆ ಅಪಾಯಕಾರಿಯಾಗಿದೆ. ಇದಾದ ನಂತರ ವಾಯು ಪ್ರದೇಶದಲ್ಲಿ ಚೀನಾದ 8 ಯುದ್ಧ ವಿಮಾನಗಳು ಮತ್ತು ಸಮುದ್ರದಲ್ಲಿ 6 ಯುದ್ಧ ನೌಕೆಗಳು ಬಂದಿವೆ.

2. ಅಮೇರಿಕಾವು ಲಾಯ್ ಚಿಂಗ್-ಟೆ ಇವರ ಗೆಲುವಿಗಾಗಿ ಅಭಿನಂದಿಸಿದ್ದಾರೆ. ಅಮೇರಿಕಾವು, ನಾವು ತೈವಾನ ದೇಶದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ತೈವಾನಗೆ ಸಹಾಯ ಮಾಡುತ್ತೇವೆ ಎಂದು ಹೇಳಿದೆ.

ತೈವಾನನಲ್ಲಿ ಆಗುತ್ತಿರುವ ಬದಲಾವಣೆಯಿಂದ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ! – ಚೀನಾದ ಅಹಂಕಾರಿ ಹೇಳಿಕೆ

ಇನ್ನೊಂದೆಡೆ ಚೀನಾ ತೈವಾನ ಚುನಾವಣೆಯ ವಿಷಯದ ಬಗ್ಗೆ ಮಾತನಾಡಿ, ತೈವಾನನಲ್ಲಿ ನಡೆಯುವ ಯಾವುದೇ ಬದಲಾವಣೆಯಿಂದ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದರಿಂದ `ತೈವಾನ ಚೀನಾದ ಭಾಗವಾಗಿದೆ’, ಈ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಅಂತರಾಷ್ಟ್ರೀಯ ಸಮುದಾಯವು ಚೀನಾದ ಈ ವಿಷಯವನ್ನು ತಿಳಿದುಕೊಳ್ಳೂವುದು ಮತ್ತು ಅದನ್ನು ಗಂಭೀರತೆಯಿಂದ ಪರಿಗಣಿಸಬೇಕು ಎಂದು ಹೇಳಿದೆ.