ಜನವರಿ ೨೨ ರಂದು ಅಯೋಧ್ಯೆಯಲ್ಲಿ (ಉತ್ತರಪ್ರದೇಶ) ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಇದರ ನಿಮಿತ್ತ….
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ದಿನ ಹತ್ತಿರವಾಗುತ್ತಿರುವಂತೆ, ಹಿಂದೂಗಳಲ್ಲಿ ರಾಮಭಕ್ತಿಯ ಅಲೆ ಹೆಚ್ಚಾಗುತ್ತಿದೆ. ಶ್ರೀರಾಮನಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯವೂ ಹಿಂದೂಗಳಿಗೆ ಆತ್ಮೀಯ ಎನಿಸುತ್ತಿದೆ. ಶ್ರೀರಾಮನಿಗೆ ಸಂಬಂಧಿಸಿದ ಕಥೆಗಳನ್ನು ಕೇಳುತ್ತ, ಆ ಕಥೆಗಳ ಚಿತ್ರೀಕರಣವನ್ನು ಟಿವಿಯ ಮೇಲೆ ನೋಡುತ್ತಾ ಹಿಂದೂ ಸಮಾಜ ಬೆಳೆದಿದೆ. ಶ್ರೀರಾಮನಿಗೆ ಸಂಬಂಧಿಸಿದ ಕೆಲವು ಸ್ಥಳಗಳು ಪ್ರಸಿದ್ಧವಾಗಿದೆ. ಆ ವಿಷಯದಲ್ಲಿ ಹಿಂದೂಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಮಾಹಿತಿಯಿದೆ; ಆದರೆ ಕೆಲವು ಸ್ಥಳಗಳ ಬಗ್ಗೆ ಕೇವಲ ಕೇಳಿದ್ದಾನೆ ಮತ್ತು ಕೆಲವು ವಿಷಯಗಳ ಬಗ್ಗೆ ಅವನು ಅಜ್ಞಾನಿಯಾಗಿದ್ದಾನೆ. ಆ ಸ್ಥಳಗಳ ವಿಷಯದಲ್ಲಿ ಈ ಲೇಖನದಿಂದ ತಿಳಿಸಿಕೊಡುವ ಪ್ರಯತ್ನ ಇದಾಗಿದೆ. – ಶ್ರೀ. ಯಜ್ಞೇಶ ಸಾವಂತ |
೧. ಪ್ರಯಾಗರಾಜ
ರಾಮಾಯಣದ ಪ್ರಕಾರ, ಪ್ರಯಾಗರಾಜದಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾಮಾತೆ ಇವರು ೧೪ ವರ್ಷಗಳ ವನವಾಸಕ್ಕೆ ಹೋಗುವಾಗ ಮೊದಲ ಬಾರಿಗೆ ವಿಶ್ರಾಂತಿ ಪಡೆದರು. ಉತ್ತರಪ್ರದೇಶ ರಾಜ್ಯದ ಪ್ರಯಾಗರಾಜ ಹಿಂದೂಗಳಿಗೆ ಸಧ್ಯ ಧಾರ್ಮಿಕ ದೃಷ್ಟಿಯಿಂದ ಮಹತ್ವದ ಸ್ಥಾನವಾಗಿದೆ. ಇಲ್ಲಿ ಅತಿ ದೊಡ್ಡ ಕುಂಭಮೇಳವನ್ನು ಆಚರಿಸಲಾಗುತ್ತದೆ. ಗಂಗಾ, ಯಮುನಾ ಮತ್ತು ಸರಸ್ವತಿ ಈ ನದಿಗಳ ಸಂಗಮದಲ್ಲಿ ಅಂದರೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
೨. ಚಿತ್ರಕೂಟ ಪರ್ವತ
ಸಧ್ಯ ಈ ಸ್ಥಳವು ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ನಡುವೆ ಇದೆ. ಇಲ್ಲಿಯೇ ಭರತನು ಪ್ರಭು ಶ್ರೀರಾಮನನ್ನು ಭೇಟಿಯಾಗಿ ಅವನಿಗೆ ತಂದೆಯ ನಿಧನದ ಸುದ್ದಿಯನ್ನು ತಿಳಿಸಿ, ಅಯೋಧ್ಯೆಗೆ ಹಿಂತಿರುಗುವಂತೆ ವಿನಂತಿಸಿದನು. ವನವಾಸದ ತನ್ನ ಹೆಚ್ಚಿನ ಸಮಯವನ್ನು ಶ್ರೀರಾಮನು ಇಲ್ಲಿಯೇ ಕಳೆದನು. ಚಿತ್ರಕೂಟ ಪರ್ವತದಲ್ಲಿ ಶ್ರೀರಾಮ ಮತ್ತು ಸೀತೆ ವಾಸಿಸಿದ ಅನೇಕ ಗುರುತುಗಳು ಅಸ್ತಿತ್ವದಲ್ಲಿದೆ.
೩. ನಾಸಿಕದಲ್ಲಿರುವ ಸೀತಾಗುಹೆ !
ಇಲ್ಲಿನ ಪ್ರಮುಖ ಸ್ಥಳವೆಂದರೆ ಸೀತಾ ಗುಂಫಾ (ಗುಹೆ). ನಾಸಿಕದ ಪಂಚವಟಿ ಪ್ರದೇಶದಲ್ಲಿ ಗೋದಾವರಿ ತೀರದಲ್ಲಿ ಶ್ರೀ ಕಾಳಾರಾಮ ದೇವಸ್ಥಾನದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಈ ಪ್ರಾಚೀನ ಸೀತಾ ಗುಹೆ ಇದೆ. ಈ ಸ್ಥಳದಲ್ಲಿ ನೂರಾರು ವರ್ಷಗಳಷ್ಟು ಹಳೆಯ ೫ ಬೃಹತ್ ಆಲದಮರಗಳಿವೆ. ಈ ಆಲದ ಮರದ ಕೆಳಗೆ ಸೀತಾಮಾತೆಯ ಸಂಸಾರ(ಜಗತ್ತು) ಇತ್ತು ಎನ್ನುವುದು ಭಕ್ತರ ನಂಬಿಕೆಯಾಗಿದೆ. ಇಲ್ಲಿಯೇ ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ್ದನು. ಇದೇ ಪ್ರದೇಶದಿಂದ ರಾವಣನು ಸೀತೆಯನ್ನು ಅಪಹರಿಸಿದ್ದನು. ಗುಹೆ ಪೂರ್ಣವಾಗಿ ಕಲ್ಲಿನಲ್ಲಿ ಕೆತ್ತಲಾಗಿದ್ದು, ಒಂದು ಸಮಯಕ್ಕೆ ಒಬ್ಬ ವ್ಯಕ್ತಿ ಮಾತ್ರ ಈ ಸ್ಥಳದಲ್ಲಿ ಕುಳಿತುಕೊಂಡು ಪ್ರವೇಶಿಸಬಹುದು. ೭-೮ ಅಡಿ ಕೆಳಗೆ ಹೋದರೆ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರ ಮೂರ್ತಿಗಳ ದರ್ಶನವಾಗುತ್ತದೆ.
ಸೀತಾ ಗುಹೆಯ ವಿಷಯದಲ್ಲಿ ಅಧ್ಯಯನಕಾರರು ಹೇಳುವುದೇನೆಂದರೆ, ಇದೇ ಗುಹೆಯಿಂದ ೭ ರಿಂದ ೮ ಕಿ.ಮೀ ಅಂತರದಲ್ಲಿ ರಾಮಶೇಜ ಕೋಟೆಗೆ ಹೋಗಲು ಸುರಂಗ ಮಾರ್ಗವಿದೆ. ಶ್ರೀರಾಮನು ಇದೇ ಮಾರ್ಗವನ್ನು ಬಳಸುತ್ತಿದ್ದನು. ರಾಮಶೆಜ್ ಕೋಟೆಯ ಮೇಲೆ ಕೂಡ ಸ್ವಲ್ಪ ಕಾಲದವರೆಗೆ ಶ್ರೀರಾಮನು ವಾಸಿಸಿದ್ದನು. ಈ ಸ್ಥಾನವನ್ನು ಸುರಕ್ಷತೆಯ ದೃಷ್ಟಿಯಿಂದ ಅನೇಕ ವರ್ಷಗಳಿಂದ ಸದ್ಯಕ್ಕೆ ಮುಚ್ಚಲಾಗಿದೆ.
೪. ಕಿಷ್ಕಿಂಧಾ ನಗರ
ಕಿಷ್ಕಿಂಧಾ ನಗರವೇ ದಂಡಕಾರಣ್ಯದ ಭಾಗವಾಗಿತ್ತು. ದಂಡಕಾರಣ್ಯದ ವಿಸ್ತಾರ ವಿಂಧ್ಯಾಚಲದಿಂದ ದಕ್ಷಿಣದ ಸಮುದ್ರ ತೀರದವರೆಗೆ ವಿಸ್ತರಿಸಿತ್ತು. ಕಿಷ್ಕಿಂದೆಯಲ್ಲಿ ವಾನರರ ರಾಜ್ಯವಿತ್ತು. ಇಲ್ಲಿ ವಾಲಿಯ ರಾಜ್ಯವಿತ್ತು. ಪ್ರಭು ಶ್ರೀರಾಮನು ವಾಲಿಯ ವಧೆ ಮಾಡಿ ಸುಗ್ರೀವನಿಗೆ ರಾಜ್ಯಾಭಿಷೇಕವನ್ನು (?) ಇದೇ ನಗರದಲ್ಲಿ ಮಾಡಿದ್ದನು. ಸೀತೆಯು ಲಂಕೆಯಲ್ಲಿ ಇದ್ದಾಳೆಂದು ಹನುಮಂತನಿಂದ ತಿಳಿದಾಗ ಪ್ರಭು ಶ್ರೀರಾಮನು ಇಲ್ಲಿಂದಲೇ ವಾನರಸೇನೆಯೊಂದಿಗೆ ಲಂಕೆಯ ಕಡೆಗೆ ಹೊರಟನು. ಈ ಪ್ರದೇಶ ಸಧ್ಯ ಕರ್ನಾಟಕದಲ್ಲಿದೆ.
೫. ಋಷ್ಯಮುಖ ಪರ್ವತ
ಈ ಸ್ಥಳವು ಸಧ್ಯ ಕರ್ನಾಟಕದಲ್ಲಿದೆ. ತುಂಗಭದ್ರಾ ನದಿಯನ್ನು ದಾಟಿ ಇಲ್ಲಿಗೆ ಹೋಗಬೇಕಾಗುತ್ತದೆ. ಇದೇ ಆ ದಿವ್ಯ ಸ್ಥಾನವಾಗಿದೆ. ಇಲ್ಲಿ ಪ್ರಭು ಶ್ರೀರಾಮನ ಪರಮಭಕ್ತ ಹನುಮಂತನ ಭೇಟಿ ಮೊದಲ ಬಾರಿಗೆ ಆಗಿತ್ತು. ವಾಲಿಯ ಭಯದಿಂದ ಸುಗ್ರೀವನು ತನ್ನ ಕೆಲವು ಮಂತ್ರಿಗಳೊಂದಿಗೆ ಇಲ್ಲಿ ಆಶ್ರಯ ಪಡೆದಿದ್ದನು. ರಾವಣನು ಸೀತಾಮಾತೆಯನ್ನು ಆಕಾಶದಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ ಸೀತಾಮಾತೆ ತನ್ನ ಆಭರಣಗಳನ್ನು ಇದೇ ಪರ್ವತದ ತುದಿಯಲ್ಲಿ ಎಸೆದಿದ್ದಳು. ಇಲ್ಲಿಯೇ ಹನುಮಂತನು ಸುಗ್ರೀವ ಮತ್ತು ಶ್ರೀರಾಮನ ಭೇಟಿಯನ್ನು ಮಾಡಿಸಿದ್ದನು.
೬. ಚಿಂತಾಮಣಿ ದೇವಸ್ಥಾನ
ಆನೆಗುಂಡಿಯಲ್ಲಿ ಚಿಂತಾಮಣಿ ದೇವಸ್ಥಾನದಲ್ಲಿರುವ ಒಂದು ಸ್ಥಾನದಲ್ಲಿ ರಾಮನು ವಾಲಿಯ ಮೇಲೆ ಇಲ್ಲಿಂದಲೇ ಬಾಣವನ್ನು ಬಿಟ್ಟು ಅವನನ್ನು ವಧಿಸಿದ್ದನು ಎನ್ನುವುದು ಸ್ಥಳೀಯ ಜನರ ನಂಬಿಕೆಯಾಗಿದೆ.
೭. ಮಾಲ್ಯವಂತ ರಘುನಾಥ ದೇವಸ್ಥಾನ
ಮಾಲ್ಯವಂತ ರಘುನಾಥ ದೇವಸ್ಥಾನವು ಮಾಲ್ಯವಂತ ಪರ್ವತದ ಮೇಲಿದೆ. ಇಲ್ಲಿಯೇ ಶ್ರೀರಾಮನೇ ಚಾತುರ್ಮಾಸ ಮಾಡಿದ್ದನು. ಸುಗ್ರೀವನು ಕಿಷ್ಕಿಂಧೆಯ ರಾಜನಾದ ನಂತರ ಪ್ರಭು ಶ್ರೀರಾಮ ಮತ್ತು ಲಕ್ಷ್ಮಣರು ಈ ಪರ್ವತದ ಮೇಲೆ ೪ ತಿಂಗಳುಗಳನ್ನು ಕಳೆದಿದ್ದರು. ಪ್ರಭು ಶ್ರೀರಾಮನಿಗೆ ನೀರಡಿಕೆಯಾದಾಗ ಕುಡಿಯಲು ನೀರು ಸಿಗಬೇಕೆಂದು ಲಕ್ಷ್ಮಣನೇ ಇಲ್ಲಿಯ ಭೂಮಿಯ ಮೇಲೆ ಬಾಣವನ್ನು ಬಿಟ್ಟನು. ಆಗ ಬಾಣ ಭೂಮಿಯನ್ನು ಭೇದಿಸಿ ನೀರಿನ ಕಾರಂಜಿ ಉತ್ಪನ್ನವಾಗಿದೆ ಮತ್ತು ಅಲ್ಲಿಯೇ ಒಂದು ಕೊಳದ ನಿರ್ಮಾಣವಾಯಿತು.
೮. ಸುಚಿಂದ್ರಂನಲ್ಲಿರುವ ಮಾರುತಿ ದೇವಸ್ಥಾನ
ತಮಿಳುನಾಡಿನ ನಾಗರಕೋಯಿಲ್‌ನಲ್ಲಿರುವ ಸುಚಿಂದ್ರಂ ಆಂಜನೇಯರ ಹನುಮಾನ ದೇವಸ್ಥಾನವು ಪ್ರಸಿದ್ಧವಾಗಿದೆ. ಇಲ್ಲಿರುವ ಮುಖ್ಯ ದೇವಾಲಯವನ್ನು ‘ಥನುಮಲಯ’ ಅಥವಾ ‘ಸ್ಥಾನುಮಲಯನ’ ದೇವಸ್ಥಾನ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಇಲ್ಲಿ ಬ್ರಹ್ಮ, ವಿμÀಣ್Ä ಮತ್ತು ಮಹೇಶನ ದೇವಸ್ಥಾನವಿದ್ದರೂ, ಇಲ್ಲಿಯ ಮಾರುತಿಯ ದೇವಸ್ಥಾನ ಮತ್ತು ಅದರ ಮೂರ್ತಿ ವೈಶಿμಟ್ಯ್Àಪೂರ್ಣವಾಗಿದೆ. ಲಕ್ಷ್ಮಣನನ್ನು ಇಂದ್ರಜಿತನು ಬ್ರಹ್ಮಾಸ್ತ್ರದಿಂದ ಪ್ರಜ್ಞೆ ತಪ್ಪಿಸುತ್ತಾನೆ, ಆಗ ಮಾರುತಿಯು ಸಂಜೀವನಿ ವನಸ್ಪತಿಯನ್ನು ತರಲು ಹೋಗುತ್ತಾನೆ. ಸಂಜೀವನಿ ವನಸ್ಪತಿ ಯಾವುದು? ಎನ್ನುವುದು ಗಮನಕ್ಕೆ ಬಾರದ ಕಾರಣ ಸಂಜೀವನಿ ವನಸ್ಪತಿಯ ಸಂಪೂರ್ಣ ಪರ್ವತವನ್ನೇ ಮಾರುತಿಯು ಎತ್ತಿಕೊಂಡು ಲಂಕೆಗೆ ತರುತ್ತಾನೆ. ಈ ಪರ್ವತದ ಕೆಲವು ಭಾಗಗಳು ಬಿದ್ದ ಸ್ಥಳದಲ್ಲಿ ಈ ಪುರಾತನ ಮಾರುತಿ ದೇವಸ್ಥಾನವಿದೆ.
೯. ಹತ್ಯಾಹರಣ ತೀರ್ಥ
ಉತ್ತರಪ್ರದೇಶದ ಹರ್ದೋಯಿಯಲ್ಲಿ ಹತ್ಯಾಹರಣ ತೀರ್ಥವಿದೆ. ಪ್ರಭು ಶ್ರೀರಾಮನು ರಾವಣನನ್ನು ವಧಿಸಿದ ಬಳಿಕ ಹತಿಯಾಹರನ್ ಯಾತ್ರಾ ಸ್ಥಳವಿದೆ. ರಾವಣನನ್ನು ಹತ್ಯೆ ಮಾಡಿದ ಬಳಿಕ ಶ್ರೀರಾಮನು ಬ್ರಹ್ಮಹತ್ಯೆಯ ಕಳಂಕದಿಂದ ಮುಕ್ತಿಯನ್ನು ಪಡೆಯಲು ದೇಶಾದ್ಯಂತವಿರುವ ಕೆಲವು ತೀರ್ಥಗಳಲ್ಲಿ ಸ್ನಾನ ಮಾಡಿದನು. ಇಲ್ಲಿಯ ತೀರ್ಥದಲ್ಲಿ ಸ್ನಾನ ಮಾಡಿದ ಬಳಿಕ ಶ್ರೀರಾಮನು ಬ್ರಹ್ಮಹತ್ಯೆಯ ಎಲ್ಲಾ ಪಾಪಗಳಿಂದ ಮುಕ್ತನಾದನು. ಆದ್ಧರಿಂದಲೇ ಈ ಯಾತ್ರಾಸ್ಥಳಕ್ಕೆ ‘ಹತ್ಯಾಹರಣ ತೀರ್ಥ’ ಎಂದು ಹೆಸರಾಯಿತು.
೧೦. ರಾಮೇಶ್ವರಂ ಧಾಮ
ಹಿಂದೂಗಳ ೪ ಧಾಮಗಳಲ್ಲಿ, ತಮಿಳುನಾಡಿನ ಭಾರತದ ತುದಿಯಲ್ಲಿರುವ ಪ್ರದೇಶವೆಂದರೆ ರಾಮೇಶ್ವರಂ ಆಗಿದೆ. ಲಂಕೆಯ ಮೇಲೆ ಆಕ್ರಮಣ ಮಾಡುವ ಮೊದಲು, ಶ್ರೀರಾಮನು ಇಲ್ಲಿಯೇ ಭಗವಾನ ಶಿವನನ್ನು ಪೂಜಿಸಿದ್ದನು. ಇಲ್ಲಿಂದ ಮುಂದೆ ಧನುμÉಕ್ÆÃಡಿಯಿಂದ ಶ್ರೀರಾಮನು ಲಂಕೆಗೆ ಹೋಗಲು ವಾನರಸೇನೆಯೊಂದಿಗೆ ಸಮುದ್ರದ ಮೇಲೆ ರಾಮಸೇತುವೆಯನ್ನು ನಿರ್ಮಿಸಿದ್ದನು. ರಾವಣನನ್ನು ಹತ್ಯೆ ಮಾಡಿದ ಬಳಿಕ, ಬ್ರಹ್ಮ ಹತ್ಯೆಯ ಪಾಪದಿಂದ ಮುಕ್ತವಾಗಲು ರಾಮೇಶ್ವರಂನಲ್ಲಿ ಸೀತೆಯೊಂದಿಗೆ ಶಿವನ ಉಪಾಸನೆಯನ್ನು ಮಾಡಿನು. ಶ್ರೀರಾಮನು ಹನುಮಂತನನ್ನು ಒಂದು ಶಿವಲಿಂಗವನ್ನು ತರಲು ಕಳುಹಿಸಿದ್ದನು; ಆದರೆ ಹನುಮಂತನಿಗೆ ಬರಲು ವಿಳಂಬವಾಗಿದ್ದರಿಂದ ಶ್ರೀರಾಮ ಮತ್ತು ಸೀತೆಯು ಒಂದು ಮರಳಿನ ಶಿವಲಿಂಗವನ್ನು ತಯಾರಿಸಿ ಅದರ ಮೇಲೆಯೇ ಅಭಿμÉÃಕ ಮಾಡಿದರು. ಹನುಮಂತನು ಶಿವಲಿಂಗವನ್ನು ತೆಗೆದುಕೊಂಡ ಬಂದ ಬಳಿಕ ಮರಳಿನಿಂದ ತಯಾರಿಸಿದ ಶಿವಲಿಂಗವನ್ನು ಅಲ್ಲಿಂದ ಸರಿಸಲು ಪ್ರಯತ್ನಿಸಿದನು; ಆದರೆ ಅದು ಆ ಸ್ಥಳದಿಂದ ಕದಲಿಲ್ಲ. ಇದೇ ರಾಮೇಶ್ವರಂನಲ್ಲಿರುವ ಶಿವಲಿಂಗವಾಗಿದೆ. ಅದನ್ನು ೧೨ ಜ್ಯೋತಿಲಿರ್ಂಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ.
೧೧. ಜನಕಪುರ
ನೇಪಾಳದ ಜನಕಪುರ ಸೀತಾ ಮಾತೆಯ ಜನ್ಮಸ್ಥಳವೆಂದು ಪ್ರಸಿದ್ಧವಾಗಿದೆ. ಇಲ್ಲಿಯೇ ಶ್ರೀರಾಮನ ವಿವಾಹ ಸೀತಾ ಮಾತೆಯೊಡನೆ ಆಗಿತ್ತು. ಇಲ್ಲಿ ಸೀತಾಮಾತೆಯ ಅರಮನೆ ಇದೆ. ಜನಕಪುರ ಸದ್ಯ ಕಾಠಮಂಡುವಿನ ಆಗ್ನೇಯದಲ್ಲಿದ್ದು, ಭಾರತದ ಗಡಿಯಿಂದ ೨೦ ಕಿ.ಮೀ. ದೂರದಲ್ಲಿದೆ. ಮದುವೆಯ ಪಂಚಮಿಯಂದು ರಾಮ ಭಕ್ತರು ‘ಸೀತಾಮಡಿ’ ಎಂದು ಗುರುತಿಸಲ್ಪಡುವ ಸ್ಥಳಕ್ಕೆ ಭೇಟಿ ನೀಡುತ್ತಾರೆ.
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೩೧.೧೨.೨೦೨೩)