ರಾಮಮಂದಿರದಿಂದ ರಾಮರಾಜ್ಯದ ಕಡೆಗೆ !

೫ ಆಗಸ್ಟ್ ೨೦೨೦ ರಂದು ಒಂದು ಮಹಾನ ಕಾರ್ಯ ಆರಂಭವಾಯಿತು. ಅಯೋಧ್ಯೆಯಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭಹಸ್ತಗಳಿಂದ ರಾಮಮಂದಿರದ ಪುನರ್ಸ್ಥಾಪನೆಯ ಮಹಾನ ಕಾರ್ಯ ಆರಂಭವಾಯಿತು. ಅಗಣಿತ ರಾಮಭಕ್ತರ ಕಣ್ಣುಗಳಿಗೆ ತೃಪ್ತಿಯನ್ನು ನೀಡುವ ರಾಮಮಂದಿರದ ಭೂಮಿಪೂಜೆಯ ಸಮಾರಂಭವು ಅಯೋಧ್ಯೆಯಲ್ಲಿ ನಡೆಯಿತು.

ಇಂದು ಪ್ರಭು ಶ್ರೀರಾಮರ ಕೃಪೆಯಿಂದ ಪುನಃ ಮಂದಿರದ ನಿರ್ಮಾಣ ಕಾರ್ಯ ನಡೆದಿದೆ. ಈ ಆನಂದವನ್ನು ಆಚರಿಸುವಾಗ ನಾವು ಕಾರಸೇವಕರ ಯೋಗದಾನ ಹಾಗೂ ಅನಂತರದ ಗಲಭೆಯಲ್ಲಿ ಮೃತರಾದ ಸಾವಿರಾರು ಹಿಂದೂಗಳನ್ನು ಮರೆಯುವಂತಿಲ್ಲ. ಹಾಗಾಗಿ ಆ ಕುರಿತು ಕೆಲವು ವಿಚಾರಗಳ ಮಂಡನೆ.

ರಾಮರಾಜ್ಯದ ನಿರ್ಮಿತಿಗಾಗಿ ಏನು ಮಾಡಬೇಕು ?

ಇದಕ್ಕಾಗಿ ಮೊದಲು ಈ ಸಂಕಲ್ಪನೆಯನ್ನು ಜನರಿಗೆ ತಲುಪಿಸಬೇಕು. ಈ ವಿಷಯದಲ್ಲಿರುವ ತಪ್ಪು ತಿಳುವಳಿಕೆ ಗಳನ್ನು ದೂರಗೊಳಿಸಬೇಕಾಗುವುದು. ಅತೀ ಸಣ್ಣ ಮಕ್ಕಳಿಗೂ ಈ ರಾಮರಾಜ್ಯದ ಕನಸನ್ನು ನೋಡಲು ಕಲಿಸಬೇಕಾಗಿದೆ. ಇದನ್ನು ನಾವು ರಾಮಮಂದಿರ ಪುನರ್ನಿರ್ಮಾಣದಿಂದ ಮಾಡಲು ಸಾಧ್ಯವಿದೆ. ಅದರಿಂದ ನಾವು ಪ್ರೇರಣೆ ಪಡೆದು ನಮಗೆ ರಾಮರಾಜ್ಯದ ಕಡೆಗೆ ಹೋಗುವ ಪ್ರವಾಸವನ್ನು ಆರಂಭಿಸಲಿಕ್ಕಿದೆ. ಈ ಪ್ರವಾಸ ದೊಡ್ಡದು ಹಾಗೂ ಸಂಘರ್ಷ ಮಯವಾಗಿರಬಹುದು; ಆದರೆ ಇದರಲ್ಲಿ ನಾವು ನಿಶ್ಚಿತವಾಗಿ ಯಶಸ್ವಿಯಾಗುವೆವು; ಮಂದಿರದ ಪುನರ್ನಿರ್ಮಾಣ ಆದಂತೆ ರಾಮರಾಜ್ಯವನ್ನೂ ಪುನರ್ನಿರ್ಮಾಣ ಮಾಡಲಿಕ್ಕಿದೆ. ಅದಕ್ಕಾಗಿ ನಮಗೆ ನಮ್ಮ ವಿಚಾರಗಳ ಮೇಲೆ ನಿಷ್ಠೆ, ಸಂಯಮ ಇರಬೇಕು.

೧. ಪ್ರಭು ಶ್ರೀರಾಮರನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಏಕೆ ಹೇಳುತ್ತಾರೆ ?

ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಎಂದರೆ ಮಾನವೀಯತೆಯ ಮಹಾನ ಸ್ವಪ್ನವಲ್ಲ, ಅದು ನಿಜವಾದ ಇತಿಹಾಸವಾಗಿದೆ !
ಪ್ರತ್ಯಕ್ಷ ಪರಮೇಶ್ವರನೇ ಈ ಭೂಮಿಯಲ್ಲಿ ಜನ್ಮ ತಾಳಿ ಎಲ್ಲ ಮರ್ಯಾದೆಗಳ ಪಾಲಿಸಿ ಶ್ರೇಷ್ಠ ನಾಗುವುದು ಹೇಗೆ ? ಎಂಬುದರ ವಾಸ್ತವಿಕ ಪಾಠವೆಂದರೆ ಪ್ರಭು ಶ್ರೀರಾಮ ! ರಾಮಾಯಣದಲ್ಲಿ ಮಹರ್ಷಿ ವಿಶ್ವಾಮಿತ್ರರು ದಶರಥನಿಗೆ ಹೇಳುತ್ತಾರೆ, ‘ತಾರುಣ್ಯ, ಧನ, ಸಾಮರ್ಥ್ಯ ಹಾಗೂ ಪಿತ್ರಾರ್ಜಿತ ಆಸ್ತಿ ಈ ನಾಲ್ಕು ವಿಷಯಗಳಲ್ಲಿ ಯಾವುದಾದರೊಂದು ವಿಷಯ ಕೈಯಲ್ಲಿ ಬಂದರೂ ಮಾನವನು ತನ್ನನ್ನು ಶ್ರೇಷ್ಠನೆಂದು ತಿಳಿಯುತ್ತಾನೆ; ಆದರೆ ನಿನ್ನ ಪುತ್ರನಲ್ಲಿ ಈ ನಾಲ್ಕೂ ವಿಷಯಗಳಿದ್ದರೂ ಅವನು ಉನ್ಮತ್ತನಾಗಿಲ್ಲ (ಅಹಂಕಾರಿ ಆಗಿಲಲ್).’ ಆದ್ದರಿಂದ ಶ್ರೀರಾಮರನ್ನು ‘ಮರ್ಯಾದಾಪುರುಷೋತ್ತಮ’ ಎನ್ನುತ್ತಾರೆ. ಎಲ್ಲ ಸಂಕಟಗಳನ್ನು ಎದುರಿಸಿ ಅವರು ಮಾನವನಿಗೆ, ‘ಎಷ್ಟೇ ಸಂಕಟಗಳು ಬಂದರೂ ತನ್ನ ಸಾಮರ್ಥ್ಯದ ಮೇಲಿನ ವಿಶ್ವಾಸ ಹಾಗೂ ಪರಮೇಶ್ವರನ ಮೇಲಿನ ಶ್ರದ್ಧೆಯನ್ನು ಕಡಿಮೆಯಾಗಲು ಬಿಡಬಾರದು, ಆಗ ನಾವು ಖಂಡಿತವಾಗಿ ಯಶಸ್ವಿಯಾಗುತ್ತೇವೆ’ ಎಂದು ಹೇಳಿದ್ದಾರೆ

೨. ರಾಮಮಂದಿರವೆಂದರೆ ಜಗತ್ತಿಗೆ ಯೋಗ್ಯ ಮಾರ್ಗವನ್ನು ತೋರಿಸುವ ಶ್ರೇಷ್ಠ ವಾಸ್ತುವಿನ ನಿರ್ಮಾಣ !

ಇಂತಹ ಈ ಶ್ರೀರಾಮರ ಮಂದಿರ ಇಂದು ನಿರ್ಮಾಣ ಆಗಿದೆ. ಈ ಮಂದಿರವೆಂದರೆ ಪ್ರತಿಯೊಬ್ಬ ಹಿಂದೂವಿಗಷ್ಟೇ ಅಲ್ಲ, ಪ್ರತಿಯೊಬ್ಬ ಮಾನವನಿಗೆ ಮಹತ್ವದ್ದಾಗಿದೆ. ರಾಮರು ಮಾಡಿದ ಸಂಘರ್ಷ, ಅವರು ಪಾಲಿಸಿದ ಮರ್ಯಾದೆ, ತಮ್ಮ ಜೀವನದಲ್ಲಿ ಮಾಡಿದ ತ್ಯಾಗ ಹಾಗೂ ಅನಂತರ ನಿರ್ಮಿಸಿದ ಮಹಾನ ರಾಷ್ಟ್ರ ಇವೆಲ್ಲದರ ಪ್ರತೀಕವೇ ಈ ಮಂದಿರ. ರಾಮಮಂದಿರ ವಿಶ್ವ ನಿರ್ಮಾಣ ಕಾರ್ಯದ ಊರ್ಜೆಯ ಸ್ರೋತವಾಗಿದೆ. ಈ ರಾಮಮಂದಿರವು ತನ್ನ ಧರ್ಮದ ಬಗ್ಗೆ ನಿಷ್ಠೆ ಹಾಗೂ ಸಮಾಜದ ವಿಷಯದಲ್ಲಿ ಕೃತಜ್ಞರಾಗಿರುವುದರ ಸಂಕೇತವಾಗಿದೆ. ಅದೇ ರೀತಿ ಅಶುಭ, ಧರ್ಮದ್ರೋಹಿ, ಅಧರ್ಮ ಹಾಗೂ ತಪ್ಪು ವಿಷಯಗಳೊಂದಿಗೆ ಹೇಗೆ ಹೋರಾಡಬೇಕು, ಎಂಬುದನ್ನು ಈ ರಾಮಮಂದಿರ ಕಲಿಸುವುದು. ಈ ಮಂದಿರದ ಪುನರ್ನಿರ್ಮಾಣದ ಕಾರ್ಯ ವೆಂದರೆ, ಹಣ ವ್ಯರ್ಥಗೊಳಿಸುವುದಲ್ಲ, ಅದು ಜಗತ್ತಿಗೆ ಯೋಗ್ಯ ಮಾರ್ಗವನ್ನು ತೋರಿಸುವ ಶ್ರೇಷ್ಠ ವಾಸ್ತುವಿನ ನಿರ್ಮಿತಿಯಾಗಿದೆ.

೩. ರಾಮರಾಜ್ಯವನ್ನು ತರುವುದರಲ್ಲಿನ ಸವಾಲುಗಳು

ಇಂತಹ ಈ ರಾಮರಾಜ್ಯದ ವಿಚಾರ ಮಾಡುತ್ತಿರುವಾಗ ಅದರ ಮುಂದಿರುವ ಸವಾಲುಗಳ ವಿಚಾರವನ್ನೂ ಮಾಡಬೇಕು.

ಅ. ಶ್ರದ್ಧೆಯ ಸವಾಲು : ಎಲ್ಲಕ್ಕಿಂತ ಮಹತ್ವದ ಸವಾಲು ಎಂದರೆ, ಇಂದು ನಾವು ನಮ್ಮ ಶ್ರದ್ಧೆಯಿಂದ ಬಹಳ ದೂರ ಹೋಗಿದ್ದೇವೆ. ಈ ಶ್ರದ್ಧೆಯೆಂದರೆ, ತಮ್ಮ ಧರ್ಮ, ಈಶ್ವರ ಹಾಗೂ ಕಾರ್ಯದ ಮೇಲಿರುವ ಶ್ರದ್ಧೆ. ನಮಗೆ ನಮ್ಮ ಹಿಂದೂ ಧರ್ಮದ ಮೇಲೆ ಶ್ರದ್ಧೆ ಇಲ್ಲ. ನಮಗೆ ಅದರ ಬಗ್ಗೆ ನಾಚಿಕೆಯಾಗುತ್ತದೆ. ದೇವರ ಮೇಲೆ ನಮಗೆ ವಿಶ್ವಾಸವಿಲ್ಲ. ನಮ್ಮ ಮನಸ್ಸಿನ ವಿರುದ್ಧ ಏನಾದರೂ ಘಟಿಸಿದರೆ ನಮಗೆ ದೇವರ ಮೇಲೆ ವಿಶ್ವಾಸ ಉಳಿಯುವುದಿಲ್ಲ. ನಮಗೆ ನಮ್ಮ ಕಾರ್ಯದ ಬಗ್ಗೆಯೂ ಪ್ರೀತಿಯಿಲ್ಲ, ಕೇವಲ ಹಣ ಸಂಪಾದಿಸುವ ಸಲುವಾಗಿ ಮಾಡುತ್ತೇವೆ.

ಆ. ಕರ್ತವ್ಯದ ವಿಷಯದಲ್ಲಿ ಉದಾಸೀನತೆ : ರಾಮರಾಜ್ಯದ ಬಗ್ಗೆ ಇನ್ನೊಂದು ಸವಾಲೆಂದರೆ ಕರ್ತವ್ಯದ ಬಗ್ಗೆ ಉದಾಸೀನತೆ !

ನಾವು ನಮ್ಮ ಕುಟುಂಬ, ಸಮಾಜ ಹಾಗೂ ದೇಶದ ಬಗ್ಗೆ ಇರುವ ಕರ್ತವ್ಯದ ಅರಿವನ್ನು ಇಟ್ಟುಕೊಳ್ಳಬೇಕು. ಅದರಲ್ಲಿ ಸಮನ್ವಯ ಇಡ ಬೇಕು. ಕುಟುಂಬದ ಸುಖಕ್ಕಾಗಿ ಯಾವುದೇ ವಿಷಯವನ್ನು ಮಾಡುವಾಗ ಸಮಾಜಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕುಟುಂಬವನ್ನು ಯೋಗ್ಯರೀತಿಯಲ್ಲಿ ನೋಡಿಕೊಂಡು ನಾವು ನಮ್ಮ ಸ್ವಲ್ಪ ಸಮಯವನ್ನು ಸಮಾಜ-ದೇಶ ಹಿತಕ್ಕಾಗಿ ಕೊಡಬಹುದು.

ಇ. ನೈತಿಕತೆಯ ಪಾಲನೆ : ರಾಮರಾಜ್ಯಕ್ಕಾಗಿ ಇನ್ನೂ ಒಂದು ಮಹತ್ವದ ವಿಷಯವೆಂದರೆ, ನೈತಿಕತೆಯ ಪಾಲನೆ. ನಾವು ನಮ್ಮ ಜೀವನದಲ್ಲಿ ನೈತಿಕತೆಯನ್ನು ನಿಶ್ಚಿತವಾಗಿ ಪಾಲಿಸಬಹುದು. ನಮ್ಮ ಸ್ವಂತದ ಸುಖದ ವಿಚಾರ ಮಾಡುವಾಗ ನಮ್ಮಿಂದಾಗಿ ಇತರರು ದುಃಖಿಯಾಗುವುದಿಲ್ಲವಲ್ಲ ಎಂಬುದನ್ನು ನಾವು ನೋಡಬೇಕು. ನಮ್ಮ ಇಚ್ಛೆಗಳು ಪೂರ್ಣ ಆಗುವಾಗ ನಾವು ಇಷ್ಟಾದರೂ ವಿಚಾರ ಮಾಡಿದರೆ ರಾಮರಾಜ್ಯ ದೂರವಿಲ್ಲ. ಸಾವಿರಾರು ಹಿಂದೂಗಳು ಇಚ್ಛಿಸುವ ಹಿಂದೂ ರಾಷ್ಟ್ರವು ರಾಮರಾಜ್ಯಕ್ಕಿಂತ ಬೇರೆಯಾಗಿಲ್ಲ, ಹಾಗೆಯೇ ಇದೆ. ಅದರಲ್ಲಿ ಧರ್ಮದ ವಿಷಯದಲ್ಲಿ ಶ್ರದ್ಧೆ, ದೇಶದ
ಬಗ್ಗೆ ಕರ್ತವ್ಯ ಹಾಗೂ ಪರಸ್ಪರ ನೈತಿಕತೆಯ ಪಾಲನೆ ಮಹತ್ವದ್ದಾಗಿದೆ. – ಕು. ಅನ್ನದಾ ವಿನಾಯಕ ಮರಾಠೆ, ಚಿಪಳೂಣ, ಮಹಾರಾಷ್ಟ್ರ.