ಜನವರಿ ೨೦೨೪ ರಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು ಆಗ ನಡೆಯುವ ಸೂಕ್ಷ್ಮ ಪ್ರಕ್ರಿಯೆಯ ಬಗ್ಗೆ ಓರ್ವ ಸಂತರು ಮಾಡಿದ ಪರೀಕ್ಷಣೆ

೧. ಓರ್ವ ಸಂತರು ಇವರಿಗೆ ಅರಿವಾದ ಸೂಕ್ಷ್ಮ ಜ್ಞಾನದ ವಿಷಯದ ಚಿತ್ರದ ಸ್ಪಂದನಗಳ ಪ್ರಮಾಣ

ಟಿಪ್ಪಣಿ ೧ : ಮಂದಿರದಲ್ಲಿ ಮೂರ್ತಿಯ ಪ್ರಾಣಪ್ರತಿಷ್ಠೆಯಾದ ನಂತರ ಸಗುಣ ಚೈತನ್ಯವು ಮೂರ್ತಿರೂಪದಲ್ಲಿ ಪ್ರತ್ಯಕ್ಷ ಅಲ್ಲಿರಲಿದೆ.

೨. ಶ್ರೀರಾಮತತ್ತ್ವ

೨ ಅ. ಶ್ರೀರಾಮತತ್ತ್ವವು ಮಂದಿರದಲ್ಲಿ ಅಖಂಡವಾಗಿ ಆಕರ್ಷಿತವಾಗುವುದು
೨ ಅ ೧. ಮಂದಿರದ ಸುತ್ತಲೂ ಶ್ರೀರಾಮತತ್ತ್ವದ ಕವಚ ಇರುವುದು
೨ ಅ ೨. ಶ್ರೀರಾಮತತ್ತ್ವದ ವಲಯ ತಯಾರಾಗಿ ಅದು ವ್ಯಾಪಕ ಸ್ವರೂಪದಲ್ಲಿ ಮಂದಿರದ ಪರಿಸರದಲ್ಲಿ ಪಸರಿಸುವುದು : ಶ್ರೀರಾಮತತ್ತ್ವವು ಮಂದಿರದ ಅಡಿಯಲ್ಲಿ ಕಾರ್ಯನಿರತವಾಗಲಿಕ್ಕೆ ಇದೆ. ಆದರೆ ಅನೇಕ ವರ್ಷ ಅದು (ಶ್ರೀರಾಮತತ್ತ್ವ) ನಿರ್ಬಂಧಿಸ ಲ್ಪಟ್ಟಿತ್ತು. ಆದರೂ ಶ್ರೀರಾಮತತ್ತ್ವವು ಇಂದಿಗೂ ಅಲ್ಲಿ ಉಳಿದಿದೆ.

ಇದು ಶ್ರೀರಾಮನ ಜನ್ಮಭೂಮಿಯಾಗಿರುವುದರಿಂದ ಅಲ್ಲಿ ಮೂಲತಃ ಅನೇಕ ವರ್ಷಗಳಿಂದ ಶ್ರೀರಾಮತತ್ತ್ವವು ಕಾರ್ಯನಿರತ ವಾಗಿದೆ. ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆಯಾದಾಗ ಅಲ್ಲಿ ಅವಿರತವಾಗಿ ಮಂತ್ರಪಠಣವಾಗುತ್ತಿರುವಾಗ ಶ್ರೀರಾಮತತ್ತ್ವವು ಜಾಗೃತಗೊಂಡು ಅದು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿ ಶ್ರೀರಾಮತತ್ತ್ವವು ಎಲ್ಲೆಡೆ ಪ್ರವಹಿಸಲಿದೆ.

೨ ಅ ೩. ಶ್ರೀರಾಮತತ್ತ್ವದ ಕಣಗಳು ಕಾರಂಜಿಯಂತೆ ವಾತಾವರಣ ದಲ್ಲಿ ಪಸರಿಸುವುದು : ಈ ಸ್ಥಳದಲ್ಲಿ ಶ್ರೀರಾಮನ ಕೃಪಾದೃಷ್ಟಿ ಇರುವುದರಿಂದ ಹೀಗಿದೆ.
೨ ಆ. ಚೈತನ್ಯ
೨ ಆ ೧. ಚೈತನ್ಯದ ವಲಯವು ಶ್ರೀರಾಮ ಮಂದಿರದಲ್ಲಿ ಕಾರ್ಯನಿರತವಾಗುವುದು : ಮಂದಿರದಲ್ಲಿ ಶ್ರೀರಾಮತತ್ತ್ವವು ಕಾರ್ಯನಿರತವಾಗಲಿಕ್ಕಿದ್ದರಿಂದ ಹೀಗಾಗುವುದು. ಶ್ರೀರಾಮನ ಮಂದಿರವಾಗಬೇಕೆಂದು ಹೋರಾಡಿದ ಜನರ ತಳಮಳ ಮತ್ತು ಭಾವದಿಂದ ಹೀಗಾಗಿದೆ ಹಾಗೆಯೇ ಮಂದಿರ ಕಟ್ಟುವ ಕಾರ್ಯದಲ್ಲಿ ಪಾಲ್ಗೊಂಡ ಜನರಲ್ಲಿಯೂ ಭಾವವಿದೆ.
೨ ಆ ೨. ಚೈತನ್ಯದ ವಲಯವು ವಾತಾವರಣದಲ್ಲಿ ವ್ಯಾಪಕ ಸ್ವರೂಪದಲ್ಲಿ ಪಸರಿಸುವುದು : ಹಿಂದೂ ಧರ್ಮದ ವಿಷಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಹಿಂದೂ ಧರ್ಮದ ಪ್ರಸಾರಕ್ಕಾಗಿ, ಹಾಗೂ ಹಿಂದೂಗಳಲ್ಲಿ ಧರ್ಮಾಚರಣೆಯ ಮಹತ್ವ ಮತ್ತು ಸಂಘಟಿತವೃತ್ತಿಯನ್ನು ಮೂಡಿಸಲು ಹೀಗಾಗುವುದು.
೨ ಇ. ಶಕ್ತಿ : ಶಕ್ತಿಯ ಕಣಗಳು ಶ್ರೀರಾಮಮಂದಿರದಲ್ಲಿ ಕಾರ್ಯನಿರತವಾಗಿ ಅದು ವಾತಾವರಣದಲ್ಲಿ ಪಸರಿಸುವುದು.
೨ ಈ. ಧರ್ಮಶಕ್ತಿಯ ಕಣಗಳು ಚಕ್ರಾಕಾರದಲ್ಲಿ ಕಾರ್ಯನಿರತವಾಗಿ ಅವು ವಾತಾವರಣದಲ್ಲಿ ಪಸರಿಸುವುದು : ಜನರು ಹಿಂದೂ ಸಂಸ್ಕ್ರತಿಯಂತೆ ಆಚರಣೆ ಮಾಡಬೇಕು, ಜನರಲ್ಲಿ ಹಿಂದೂ ಧರ್ಮ, ದೇವತೆಗಳ ಮೇಲಿನ ಶ್ರದ್ಧೆ ಹೆಚ್ಚಾಗಬೇಕೆಂದು ಹೀಗಾಗುವುದು
೨ ಉ. ಆನಂದದ ವಲಯವು ರಾಮಮಂದಿರದಿಂದ ನಿಧಾನವಾಗಿ ಪಸರಿಸಲು ಆರಂಭವಾಗುವುದು.

೩. ಇತರ ಅಂಶಗಳು

ಅ. ಯಾವಾಗ ರಾಮಭಕ್ತರು ಮಂದಿರಕ್ಕೆ ಬಂದು ಶ್ರೀರಾಮನಲ್ಲಿ ಪ್ರಾರ್ಥನೆ ಮಾಡುವರೋ ಆಗ ಅಲ್ಪ ಭಾವ ಇದ್ದವರಿಗೆ ಶೇ. ೦.೫ ಮತ್ತು ಹೆಚ್ಚು ಭಾವ ಇರುವ ರಾಮಭಕ್ತರಿಗೆ ಶೇ. ೧.೧೫ ರಷ್ಟು ಶ್ರೀರಾಮತತ್ತ್ವದ ಲಾಭವಾಗುವುದು.
ಆ. ಶ್ರೀರಾಮನ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿ ಮಂದಿರದಲ್ಲಿ ಶ್ರೀರಾಮನ ಅಸ್ತಿತ್ವ ಉಳಿಸಲು ರಾಮಮಂದಿರದ ಪುರೋಹಿತರು ೩ ರಿಂದ ೭ ವರ್ಷಗಳ ಕಾಲ ಧಾರ್ಮಿಕ ವಿಧಿ ಮತ್ತು ಮಂತ್ರಪಠಣ ಮಾಡುವುದು ಅವಶ್ಯಕವಾಗಿದೆ.

– ಓರ್ವ ಸಂತರು (೧೭.೬.೨೦೨೩)

ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಒಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ ಎನ್ನುತ್ತಾರೆ.