೧. ೯ ನವೆಂಬರ್ ೨೦೧೯
ಸರ್ವೋಚ್ಚ ನ್ಯಾಯಾಲಯದ ೫ ಜನ ನ್ಯಾಯಾಧೀಶರ ವಿಭಾಗೀಯಪೀಠವು ರಾಮ ಮಂದಿರದ ನಿರ್ಮಾಣಕ್ಕಾಗಿ ೨.೭೭ ಎಕರೆ ಭೂಮಿಯನ್ನು ಟ್ರಸ್ಟ್‌ಗೆ ನೀಡುವ ತೀರ್ಪನ್ನು ನೀಡಿತು. ಈ ಭೂಮಿಗೆ ಬದಲಾಗಿ ಅಯೋಧ್ಯೆಯಲ್ಲಿ ಮಸೀದಿ ಕಟ್ಟಲು ಸುನ್ನಿ ವಕ್ಫ್ ಬೋರ್ಡಕ್ಕೆ ೫ ಎಕರೆ ಭೂಮಿ ನೀಡಬೇಕೆಂದು ನ್ಯಾಯಾಲಯವು ಹೇಳಿತು.
೨. ೫ ಫೆಬ್ರವರಿ ೨೦೨೦
ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕನುಸಾರ ಕೇಂದ್ರ ಸರಕಾರವು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವನ್ನು (ಟ್ರಸ್ಟ) ಸ್ಥಾಪಿಸಿತು. ಅದರಲ್ಲಿ ೧೫ ಜನ ಸದಸ್ಯರನ್ನು ನೇಮಿಸಲಾಯಿತು. ನ್ಯಾಸದಲ್ಲಿ ೯ ಸ್ಥಾಯಿ (ಖಾಯಂ ಸ್ವರೂಪದ) ಮತ್ತು ೬ ಜನ ನಾಮನಿರ್ದೇಶಿತ ಸದಸ್ಯರಿದ್ದರು.
೩. ೬ ಫೆಬ್ರವರಿ ೨೦೨೦
ಕೇಂದ್ರ ಸರಕಾರವು ೧ ರೂಪಾಯಿಯ ದೇಣಿಗೆಯಿಂದ ‘ರಾಮಮಂದಿರ ನಿರ್ಮಿತಿಯ ಅಭಿಯಾನ’ವನ್ನು ಆರಂಭಿಸಿತು.
೪. ೧೯ ಫೆಬ್ರವರಿ ೨೦೨೦
ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮೊದಲ ಸಭೆ ದೆಹಲಿಯಲ್ಲಿ ನೆರವೇರಿತು. ಇದರಲ್ಲಿ ಮಹಂತ ನೃತ್ಯ ಗೋಪಾಲದಾಸ ಇವರು ಅಧ್ಯಕ್ಷರಾಗಿ ಮತ್ತು ವಿಶ್ವ ಹಿಂದು ಪರಿಷದ್‌ನ ಮಹಾಕಾರ್ಯದರ್ಶಿ ಚಂಪತ್ ರಾಯ ಇವರು ಕಾರ್ಯದರ್ಶಿಯಾಗಿ ಆಯ್ಕೆಯಾದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೆಂದ್ರ ಮಿಶ್ರಾ ಇವರು ದೇವಸ್ಥಾನ ಕಟ್ಟಡ ಕಾಮಗಾರಿಯ ಸಮಿತಿಯ ಅಧ್ಯಕ್ಷರಾಗಿ ಮತ್ತು ನ್ಯಾಸದ ಕೋಶಾಧ್ಯಕ್ಷರೆಂದು ಪುಣೆಯ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರನ್ನು ಆಯ್ಕೆ ಮಾಡಲಾಯಿತು.
೫. ೧೫ ಮಾರ್ಚ್ ೨೦೨೦
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ನೇತೃತ್ವದಲ್ಲಿ ರಾಮಲಲ್ಲಾನ ಮೂರ್ತಿಯನ್ನು ತಾತ್ಕಾಲಿಕವಾಗಿ ದೇವಸ್ಥಾನದಲ್ಲಿ ಸ್ಥಳಾಂತರಿಸಲಾಯಿತು.
೬. ೫ ಆಗಸ್ಟ್ ೨೦೨೦
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಸ್ತಗಳಿಂದ ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆಯಾಯಿತು ಮತ್ತು ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭವಾಯಿತು.
೭. ೧೫ ಜನವರಿ ೨೦೨೧
ರಾಮ ಮಂದಿರದ ನಿರ್ಮಿತಿಗಾಗಿ ರಾಷ್ಟ್ರಪತಿ ರಾಮನಾಥ ಕೊವಿಂದ ಇವರು ‘ದಾನ ಮೊಹಿಮ್’ ಈ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನದಿಂದ ನ್ಯಾಸವು ಸುಮಾರು ೩ ಸಾವಿರದ ೫೦೦ ಕೋಟಿ ರೂಪಾಯಿಗಳ ನಿಧಿಯನ್ನು ಸಂಗ್ರಹಿಸಿತು.
೮. ೧ ಜೂನ್ ೨೦೨೨
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಂದಿರದ ಗರ್ಭಗುಡಿಯ ಶಂಕುಸ್ಥಾಪನೆಯನ್ನು ಮಾಡಿದರು.
೯. ೨೫ ಅಕ್ಟೋಬರ್ ೨೦೨೩
ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ೨೨ ಜನವರಿ ೨೦೨೪ ರಂದು ನಡೆಯಲಿರುವ ಪ್ರಭು ಶ್ರೀರಾಮನ ಅಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಮಂತ್ರಣವನ್ನು ಸ್ವೀಕರಿಸಿದರು.