೨ ಮೇ ೧೯೨೧ ರಂದು ಝಾನ್ಸಿಯಲ್ಲಿ ಜನಿಸಿದ ಬ್ರಿಜ್ ಬಾಸೀ ಲಾಲ (ಬಿ.ಬಿ. ಲಾಲ) ಇವರು ದೇಶದ ಹೆಸರಾಂತ ಪುರಾತತ್ತ್ವ ಶಾಸ್ತ್ರಜ್ಞರಾಗಿದ್ದಾರೆ. ಅವರು ೧೯೬೮ ರಿಂದ ೧೯೭೨ ಈ ಅವಧಿಯಲ್ಲಿ ಭಾರತೀಯ ಪುರಾತತ್ತ್ವ ವಾಸ್ತು ವಿಭಾಗದ ಮುಖ್ಯ ಸಂಚಾಲಕರಾಗಿದ್ದು ಯುನೆಸ್ಕೋ ಸಹಿತ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ದ್ದಾರೆ. ಅವರು ಸಂಸ್ಕೃತ ಭಾಷೆ ಮತ್ತು ವೇದಗಳಲ್ಲಿಯೂ ಪಾರಂಗತರಾಗಿದ್ದಾರೆ. ಸುಪ್ರಸಿದ್ಧ ಬ್ರಿಟಿಷ ಪ್ರಾಚೀನವಾಸ್ತುತಜ್ಞ ಮಾರ್ಟಿಮರ್ ವಿಲರ್ ಇವರ ಮಾರ್ಗದರ್ಶನದಲ್ಲಿ ಅವರು ಅಧ್ಯಯನ ಆರಂಭಿಸಿದರು. ಬಿ.ಬಿ. ಲಾಲರು ಆಫ್ರಿಕಾದಲ್ಲಿಯೂ ಪ್ರಾಚೀನ ವಾಸ್ತುಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ೧೯೫೫ ರಲ್ಲಿ ಬಿ.ಬಿ. ಲಾಲ ಇವರು ಮಹಾಭಾರತದಲ್ಲಿ ವರ್ಣಿಸಿರುವ ನಗರಗಳ ವಿಷಯದಲ್ಲಿ ಉತ್ಖನನ ಕಾರ್ಯ ಮಾಡಿದರು. ಹಸ್ತಿನಾಪುರ, ಇಂದ್ರಪ್ರಸ್ತ, ಸೋನಪತ, ಪಾನಿಪತ, ತಿಲಪತ, ಬಘಪತ ಇತ್ಯಾದಿ ಅನೇಕ ಸ್ಥಳಗಳಲ್ಲಿ ಸಂಶೋಧನೆ ಮಾಡಿ ಅವರು ಕ್ರಿ.ಪೂ. ೧೩೦೦ ರಲ್ಲಿನ ಮಾನವರ ಕುರುಹುಗಳನ್ನು ಶೋಧಿಸಿದರು. ೧೯೭೫ ರಿಂದ ೧೯೮೦ ಈ ಅವಧಿಯಲ್ಲಿ ರಾಮಜನ್ಮಭೂಮಿಯ ಪರಿಸರದಲ್ಲಿನ ೧೪ ಸ್ಥಳಗಳ ಸಂಶೋಧನೆಯನ್ನು ಅವರಿಗೆ ಒಪ್ಪಿಸಿದಾಗ ಅವರು ಬಾಬರಿ ಕಟ್ಟಡದ ಅಡಿಯಲ್ಲಿ ಹಾಗೂ ಆ ಪರಿಸರದಲ್ಲಿ ವ್ಯಾಪಕ ಉತ್ಖನನವನ್ನು ಮಾಡಿ ಬಾಬರಿಯ ಹಿಂದಿನ ಕಾಲದಲ್ಲಿ ಅದೇ ಸ್ಥಾನದಲ್ಲಿ ಹಿಂದೂಗಳ ಮಂದಿರ ಇತ್ತು, ಎಂಬುದನ್ನು ಪುರಾವೆ ಸಹಿತ ಸಿದ್ಧಗೊಳಿಸಿದ್ದಾರೆ. ಅವರು ನೀಡಿದ ವರದಿಯನ್ನು ರಾಮಜನ್ಮಭೂಮಿ ಪ್ರಕರಣದಲ್ಲಿ ನ್ಯಾಯಾಲಯ ಪುರಾವೆಯೆಂದು ಸ್ವೀಕರಿಸಿದೆ. ಅವರನ್ನು ೨೦೦೦ ನೇ ಇಸ್ವಿಯಲ್ಲಿ ‘ಪದ್ಮಭೂಷಣ’ ಪುರಸ್ಕಾರದಿಂದ ಸನ್ಮಾನಿಸಲಾಯಿತು.