‘ನೆಟ್‌ಫ್ಲಿಕ್ಸ್’ನಲ್ಲಿ ಬಿಡುಗಡೆಯಾದ ‘ಅನ್ನಪೂರ್ಣಿ’ ಚಿತ್ರದಲ್ಲಿ ಶ್ರೀರಾಮನ ಅವಮಾನ ! 

  • ಮುಸ್ಲಿಂ ನಾಯಕರಿಂದ ಭಗವಾನ ಶ್ರೀರಾಮನು ಮಾಂಸಾಹಾರ ಸೇವಿಸುತ್ತಿರುವ ಉಲ್ಲೇಖ !

  • ಚಲನಚಿತ್ರದಲ್ಲಿ ‘ಲವ್ ಜಿಹಾದ್’ಗೆ ಪ್ರೋತ್ಸಾಹ !

  • ಬ್ರಾಹ್ಮಣ ಹಿಂದೂ ಹುಡುಗಿಯೊಬ್ಬಳು ನಮಾಜಪಠಣ ಮಾಡುತ್ತ ಬಿರಿಯಾನಿ ಮಾಡುತ್ತಿರುವ ಪ್ರಸಂಗ !

  • ಚಲನಚಿತ್ರದ ವಿರುದ್ಧ ಪೊಲೀಸರಲ್ಲಿ ದೂರು !

ಮುಂಬಯಿ – ‘ಅನ್ನಪೂರ್ಣಿ’ ಈ ‘ನೆಟ್‌ಫ್ಲಿಕ್ಸ್’ ನ ‘ಒಟಿಟಿ’ (ಒವರ ದ ಟಾಪ, ಅಂದರೆ `ಆಪ್‘ ಮಾಧ್ಯಮದಿಂದ ಚಲನಚಿತ್ರ, ಧಾರಾವಾಹಿ ಮುಂತಾದ ಕಾರ್ಯಕ್ರಮಗಳನ್ನು ನೋಡುವುದು) ವೇದಿಕೆಯ ಮೇಲಿನಿಂದ ಪ್ರಸಾರವಾಗುತ್ತಿರುವ ಚಲನಚಿತ್ರಗಳಲ್ಲಿ, ಹಿಂದೂ ಬ್ರಾಹ್ಮಣ ಹುಡುಗಿಯನ್ನು ಬಿರ್ಯಾನಿ ತಯಾರಿಸಲು ನಮಾಜಪಠಣ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಚಲನಚಿತ್ರದ ನಾಯಕ ಈ ಹುಡುಗಿಗೆ ‘ಶ್ರೀರಾಮನು ವನವಾಸದಲ್ಲಿ ಮಾಂಸಾಹಾರ ಸೇವಿಸುತ್ತಿದ್ದ’ ಎಂದು ಹೇಳುತ್ತಿರುವುದು ಕಾಣಿಸುತ್ತಿದೆ. ಇದರಿಂದ `ನೆಟ್ ಫ್ಲಿಕ್ಸ’ ಮತ್ತು `ಝೀ ಸ್ಟುಡಿಯೋಸ’ ಇವರ ವಿರುದ್ಧ `ಹಿಂದೂ ಐ.ಟಿ. ಸೆಲ್’ ಈ ಸಂಸ್ಥೆಯ ಸಂಸ್ಥಾಪಕ ರಮೇಶ ಸೋಲಂಕಿ ಅವರು ಮುಂಬಯಿ ಪೊಲೀಸರಿಗೆ ದೂರು ನೀಡಿದ್ದಾರೆ.

1. ರಮೇಶ ಸೋಲಂಕಿ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ಜಗತ್ತಿನಾದ್ಯಂತ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಸಂತೋಷವನ್ನು ಆಚರಿಸಲಾಗುತ್ತಿರುವಾಗ `ಅನ್ನಪೂರ್ಣಿ’ ಈ ಹಿಂದೂ ವಿರೋಧಿ ಚಲನಚಿತ್ರ ನೆಟಫ್ಲಿಕ್ಸ್ ಮೇಲೆ ಪ್ರದರ್ಶನವಾಗಿದೆ. ‘ಝೀ ಸ್ಟುಡಿಯೋಸ’ ಮತ್ತು `ಟ್ರಾಯಟೆಂಟ್ ಆರ್ಟ್ಸ’ ಈ ಚಲನಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಚಲನಚಿತ್ರದಲ್ಲಿ ನಟ (ಫರ್ಹಾನ್) ನಟಿಯನ್ನು ಮಾಂಸ ತಿನ್ನಲು ಪ್ರೋತ್ಸಾಹಿಸುತ್ತಿರುವಾಗ, ‘ಭಗವಾನ್ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಮಾಂಸವನ್ನು ತಿನ್ನುತ್ತಿದ್ದನು’ ಎಂದು ಹೇಳುತ್ತಿದ್ದಾನೆ, ಹಾಗೆಯೇ ಈ ಚಲನಚಿತ್ರ ‘ಲವ್ ಜಿಹಾದ್’ ಅನ್ನು ಪ್ರೋತ್ಸಾಹಿಸುತ್ತದೆ. ಈ ಚಲನಚಿತ್ರವನ್ನು ಶ್ರೀರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬೇಕೆಂದು ಪ್ರದರ್ಶಿಸಲಾಗಿದೆ.

2. ಸೋಲಂಕಿ ಅವರು ದೂರಿನಲ್ಲಿ ನಟರಾದ ನೀಲೇಶ್ ಕೃಷ್ಣ, ಜಯ, ಜತಿನ್ ಸೇಠಿ, ಅರ್. ರವೀಂದ್ರನ, ಪುನಿತ್ ಗೋಯೆಂಕಾ, ಶರಿಕ್ ಪಟೇಲ್, ನಟಿ ಮೋನಿಕಾ ಶೇರ್ಗಲ್ ಮತ್ತು ನಯನತಾರಾ ಇವರ ಹೆಸರುಗಳನ್ನು ನಮೂದಿಸಿದ್ದಾರೆ.

3. ಈ ಚಲನಚಿತ್ರದಲ್ಲಿ ಓರ್ವ ಹಿಂದೂ ಪುರೋಹಿತರ ಮಗಳ ಪ್ರಿಯಕರ ಮುಸ್ಲಿಂ ಯುವಕ ಆಗಿರುವನೆಂದು ತೋರಿಸಲಾಗಿದೆ. ಅಥವಾ ಚಿತ್ರದಲ್ಲಿ ಬ್ರಾಹ್ಮಣ ಹುಡುಗಿಯೊಬ್ಬಳನ್ನು ‘ಶೆಫ್ ಇಂಡಿಯಾ’ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವಂತೆ ತೋರಿಸಲಾಗಿದೆ. ಇಲ್ಲಿ ಅವಳು ನಮಾಜಪಠಣ ಮಾಡಿ ಬಿರಿಯಾನಿ ತಯಾರಿಸುತಿದ್ದಾಳೆ. ಈ ವಿಷಯದಲ್ಲಿ ಅವಳು, ನಮಾಜಪಠಣ ಮಾಡಿ ಬಿರ್ಯಾನಿ ತಯಾರಿಸಿದ್ದರಿಂದ ಅದಕ್ಕೆ ಹೆಚ್ಚು ರುಚಿ ಬರುತ್ತದೆ ಎಂದು ಹೇಳುತ್ತಾಳೆ.

ಸಂಪಾದಕೀಯ ನಿಲುವು

ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿಗೆ ಪ್ರಮಾಣಪತ್ರ ನೀಡುವಾಗ ಇದು ಕಾಣಿಸುವುದಿಲ್ಲವೇ ? ಅಥವಾ ‘ಲಂಚ ನೀಡಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ’ ಎಂದು ಅವರ ಮೇಲೆ ಹೊರಿಸಿರುವ ಆರೋಪ ನಿಜವೆಂದು ತಿಳಿಯುವುದೇ ?

ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿರುವ ಈ ಮಂಡಳಿಯನ್ನು ಈಗ ಸರಕಾರ ಗಂಭೀರತೆಯಿಂದ ಪರಿಗಣಿಸುವ ಅಗತ್ಯವಿದೆ !