ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಸೋಮಪುರಾ ಮನೆತನದ ಅದ್ವಿತೀಯ ಕಾರ್ಯ !

ಅಯೋಧ್ಯೆಯ ರಾಮಮಂದಿರದ ನೀಲನಕ್ಷೆಯನ್ನು ವಾಸ್ತುಶಿಲ್ಪಿ ಶ್ರೀ. ಚಂದ್ರಕಾಂತ ಸೋಮಪುರಾ (೮೦ವರ್ಷ) ಇವರು ತಯಾರಿಸಿದರು. ಶ್ರೀ. ಚಂದ್ರಕಾಂತ ಸೋಮಪುರಾ ಇವರು ಕಳೆದ ೩೦ ವರ್ಷಗಳಿಂದ ರಾಮಮಂದಿರ ಹೇಗಿರಬೇಕು ಎಂಬುದಕ್ಕಾಗಿ ಪರಿಶ್ರಮ ಪಟ್ಟಿದ್ದಾರೆ. ೧೯೯೨ ರಲ್ಲಿ ಬಾಬರಿಯ ಗುಮ್ಮಟವನ್ನು ಕೆಡವಲಾಯಿತು ಅದರ ನಂತರ ರಾಮಜನ್ಮಭೂಮಿಯ ವಿಷಯವು ೨೭ ವರ್ಷಗಳ ಕಾಲ ನ್ಯಾಯಾಯಲದ ತೀರ್ಪಿನ ನಿರೀಕ್ಷೆಯಲ್ಲಿತ್ತು. ಆದರೆ ಆ ಕಾಲದಲ್ಲಿಯೂ ವಿಶ್ವ ಹಿಂದೂ ಪರಿಷತ್ತಿನ ಅಂದಿನ ರಾಷ್ಟ್ರೀಯ ಅಧ್ಯಕ್ಷ (ದಿ.) ಅಶೋಕ ಸಿಂಘಲ ಇವರು ಶ್ರೀ. ಚಂದ್ರಕಾಂತ ಸೋಮಪುರಾ ಇವರನ್ನೂ ತಮ್ಮೊಂದಿಗೆ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದರು. ಅವರು ಉದ್ದೇಶಿತ ಮಂದಿರದ ಅಳತೆಯನ್ನು ಭದ್ರತಾವ್ಯವಸ್ಥೆಗೂ ಗಮನಕ್ಕೆ ಬರದಹಾಗೆ ಕೇವಲ ಕಾಲಿನ ಹೆಜ್ಜೆಗಳ ಆಧಾರದಲ್ಲಿ ತೆಗೆದುಕೊಂಡಿದ್ದರು ಮತ್ತು ಅದರಿಂದ ಉದ್ದೇಶಿತ ರಾಮಮಂದಿರದ ನೀಲನಕ್ಷೆಯನ್ನು ತಯಾರಿಸಿದ್ದರು

ಶ್ರೀ. ಚಂದ್ರಕಾಂತ ಸೋಮಪುರಾ ಇವರು ತಯಾರಿಸಿರುವ ಅಯೋಧ್ಯೆಯ ಶ್ರೀ ರಾಮಮಂದಿರದ ಮಾದರಿ

ಶ್ರೀ. ಚಂದ್ರಕಾಂತ ಸೋಮಪುರಾ ಇವರ ಮನೆತನದ ವಿಷಯದಲ್ಲಿ

ಕಳೆದ ೫೦೦ ವರ್ಷಗಳಿಂದ ಸೋಮಪುರಾ ಮನೆತನವು ಮಂದಿರದ ಕಟ್ಟಡಕಾಮಗಾರಿಯನ್ನು ಮಾಡುತ್ತಿದೆ. ಸೋಮಪುರಾ ಕುಟುಂಬವು ಇಂದಿನ ತನಕ ದೇಶ-ವಿದೇಶಗಳಲ್ಲಿ ೨೦೦ ಕ್ಕಿಂತಲೂ ಹೆಚ್ಚು ಮಂದಿರಗಳನ್ನು ಕಟ್ಟಿದೆ. ಸಾಕ್ಷಾತ್ ಭಗವಾನ ವಿಶ್ವಕರ್ಮರೇ ಸೋಮಪುರಾ ಮನೆತನಕ್ಕೆ ದೇವಸ್ಥಾನ ನಿರ್ಮಿತಿಯ ಕಲೆಯನ್ನು ಕಲಿಸಿದ್ದರು ಎಂಬ ಶ್ರದ್ಧೆ ಈ ಮನೆತನದವರಿಗಿದೆ. ಮಂದಿರ ಕಟ್ಟುವುದು ಇವರ ವ್ಯವಹಾರವಾಗಿದ್ದರೂ ಇವರು ಅದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಿಲ್ಲ. ಮಂದಿರ ನಿರ್ಮಿತಿಯ ವ್ಯವಹಾರದಲ್ಲಿರುವ ಶ್ರೀ. ಚಂದ್ರಕಾಂತ ಸೋಮಪುರಾ ಇವರದ್ದು ೧೫ ನೇ ಪೀಳಿಗೆಯಾಗಿದೆ. ಶ್ರೀ. ಚಂದ್ರಕಾಂತ ಸೋಮಪುರಾ ಇವರ ಪುತ್ರರಾದ ಶ್ರೀ. ನಿಖಿಲ ಮತ್ತು ಶ್ರೀ ಆಶೀಷ ಇವರು ೧೬ ನೇ ಮತ್ತು ಶ್ರೀ. ನಿಖಿಲ ಇವರ ಪುತ್ರ ೧೭ನೇ ಪೀಳಿಗೆಯ ಪ್ರತಿನಿಧಿಗಳಾಗಿದ್ದಾರೆ. ಶ್ರೀ. ಚಂದ್ರಕಾಂತ ಸೋಮಪುರಾ ಇವರು ಕೊರೊನಾ ಮಹಾಮಾರಿಯ ಕಾಲದಲ್ಲಿ ಅಯೋಧ್ಯೆಯ ಭೂಮಿ ಪೂಜೆಗೆ ಹೋಗಿರಲಿಲ್ಲ ಆದರೆ ಶ್ರೀ. ಆಶೀಷ ಮತ್ತು ಶ್ರೀ. ನಿಖಿಲ ಇವರು ನೇರವಾಗಿ ಕರ್ಣಾವತಿಯಿಂದ ಭೂಮಿಪೂಜೆಯ ಮಹೋತ್ಸವಕ್ಕಾಗಿ ಅಯೋಧ್ಯೆಯಲ್ಲಿ ಉಪಸ್ಥಿತರಿದ್ದರು.

೧. ಮಂದಿರ ಕಾಮಗಾರಿಯ ಶೈಲಿ ಮತ್ತು ಸೋಮಪುರಾ ಮನೆತನದ ಸಂಬಂಧ

ಮಂದಿರ ಕಾಮಗಾರಿಯಲ್ಲಿ ನಾಗರಶೈಲಿ, ದ್ರವಿಡ ಶೈಲಿ ಮತ್ತು ವೆಸರ ಶೈಲಿ ಹೀಗೆ ೩ ಶೈಲಿಗಳಿವೆ. ಅದರಲ್ಲಿ ನಾಗರ ಶೈಲಿಯು ಪ್ರಾಮುಖ್ಯವಾಗಿ ಉತ್ತರಭಾರತದಲ್ಲಿ ಉಪಯೋಗಿಸುವಂತಹ ಶೈಲಿಯಾಗಿದೆ. ಹಿಮಾಲಯದಿಂದ ನೇರವಾಗಿ ವಿಂದ್ಯರಾಜ ಪರ್ವತಶ್ರೇಣಿಯ ತನಕ ಹರಡಿರುವ ಉತ್ತರಭಾರತದ ವಿಶಾಲ ಭೂಭಾಗದಲ್ಲಿ ಈ ಶೈಲಿಯ ಅಸಂಖ್ಯಾತ ಮಂದಿರಗಳನ್ನು ಇದಕ್ಕೂ ಮೊದಲು ಕಟ್ಟಲಾಗಿದೆ. ಒಡಿಶಾದಲ್ಲಿರುವ ಭುವನೇಶ್ವರದ ಲಿಂಗರಾಜ ಮಂದಿರ, ಪುರಿಯ ಜಗನ್ನಾಥ ಮಂದಿರ, ಕೊನಾರ್ಕನ ಸೂರ್ಯಮಂದಿರ, ಇವೆಲ್ಲವುಗಳಲ್ಲಿಯೂ ಇದೇ ಹಿಂದೂ ಸ್ಥಾಪತ್ಯಶೈಲಿಯನ್ನು ಅವಲಂಬಿಸಲಾಗಿದೆ. ಇತ್ತೀಚಿಗೆ ಈ ಶೈಲಿಯ ಮಂದಿರ ಎಂದರೆ ಸೋಮನಾಥ ಮಂದಿರ. ಸೊಮಪುರಾ ಇವರೇ ಅದರ ಶಿಲ್ಪಕಾರರಾಗಿದ್ದರು. ಸೋಮನಾಥ ಮಂದಿರ ದೇಶದಾದ್ಯಂತವಿರುವ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಭಾರತವು ಸ್ವತಂತ್ರವಾದ ನಂತರ ೧೯೫೦-೫೧ರಲ್ಲಿ ಕನ್ಹಯ್ಯಾಲಾಲ್ ಮುನ್ಶಿ ಇವರ ನೇತೃತ್ವದಲ್ಲಿ ಸೋಮನಾಥ ಮಂದಿರವನ್ನು ಮತ್ತೊಮ್ಮೆ ಕಟ್ಟಲಾಯಿತು. ಆಗ ಮಂದಿರದ ಕಾಮಗಾರಿಯ ಸಂಪೂರ್ಣ ಹೊಣೆಯು ಮಂದಿರ ಸ್ಥಾಪತ್ಯಕಾರ ಎಂದು ಶ್ರೀ.ಚಂದ್ರಕಾಂತ ಸೋಮಪುರಾ ಇವರ ಅಜ್ಜ ಪದ್ಮಶ್ರೀ ಪ್ರಭಾಶಂಕರ ಸೋಮಪುರಾ ಇವರೇ ನಿಭಾಯಿಸಿದ್ದರು. ಪ್ರಭಾಶಂಕರ ಸೋಮಪುರಾ ಇವರು ಕೇವಲ ಮಂದಿರ ವಾಸ್ತುಶಿಲ್ಪಕಾರರಷ್ಟೇ ಅಲ್ಲ. ಅವರು ಮಂದಿರ ಕಾಮಗಾರಿಯ ಬಗ್ಗೆ ೧೪ ಪುಸ್ತಕಗಳನ್ನೂ ಬರೆದಿದ್ದಾರೆ. ಅವು ಇಂದು ಈ ಶಾಸ್ತ್ರದ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿವೆ.

೨. ಚಂದ್ರಕಾಂತ ಸೋಮಪುರಾ ಇವರು ರಾಮಜನ್ಮ ಭೂಮಿಯ ಬಗ್ಗೆ ನುಡಿದ ಮಾತು ಸತ್ಯವಾದುದು !

ನರೇಂದ್ರ ಮೋದಿಯವರು ಗುಜರಾತನ ಮುಖ್ಯಮಂತ್ರಿಯಾಗಿದ್ದಾಗ ಶ್ರೀ.ಚಂದ್ರಕಾಂತ ಸೋಮಪುರಾ ಇವರ ಮನೆಗೆ ಹೋಗುತ್ತಿದ್ದರು. ಆಗ ಅವರು ‘ರಾಮಮಂದಿರವನ್ನು ಯಾವಾಗ ಕಟ್ಟುವಿರಿ? ಎಂದು ಶ್ರೀ. ಸೋಮಪುರಾ ಇವರ ಬಳಿ ಕೇಳುತ್ತಿದ್ದರು. ಆಗ ಶ್ರೀ.ಸೋಮಪುರಾ ಇವರು ಗಮ್ಮತ್ತಿನಿಂದ ‘ನೀವು ಪ್ರಧಾನಮಂತ್ರಿಯಾಗಿ, ಆಗ ರಾಮಮಂದಿರದ ದಾರಿಯು ಸುಗಮವಾಗುವುದು, ಅದಾದೊಡನೆ ನಿಮ್ಮ ಕೈಯಲ್ಲಿ ಭೂಮಿಪೂಜೆಯಾಗುವುದು. ಆಗ ನಾನು ಖಂಡಿತವಾಗಿಯೂ ಬರುವೆನು ಮತ್ತು ಮಂದಿರ ಕಟ್ಟಿದ್ದನ್ನು ಸ್ವತಃ ನೋಡುವೆನು’ ಎಂದು ಹೇಳಿದ್ದರು. ಪ್ರತ್ಯಕ್ಷದಲ್ಲಿಯೂ ಅದೇ ರೀತಿಯಾಯಿತು.

೩. ರಾಮಮಂದಿರದ ನೀಲನಕ್ಷೆ ಶ್ರೀ. ಚಂದ್ರಕಾಂತ ಸೋಮಪುರಾ ಇವರ ಬಳಿಗೆ ಬಂದುದರ ಹಿಂದಿನ ಪ್ರಸಂಗ

ಶ್ರೀ. ಚಂದ್ರಕಾಂತ ಸೋಮಪುರಾ ಇವರು ಗುಜರಾತನ ಅಕ್ಷರಧಾಮ, ಮುಂಬೈಯ ಸ್ವಾಮಿ ನಾರಾಯಣ ಮಂದಿರ ಮತ್ತು ಕೊಲಕಾತಾದಲ್ಲಿರುವ ಬಿರ್ಲಾ ಮಂದಿರಗಳನ್ನು ಕಟ್ಟಿದ್ದಾರೆ. ವಿಹಿಂಪದ ನಾಯಕ ಅಶೋಕ ಸಿಂಘಲ್ ಇವರೂ ಕೊಲಕಾತಾದ ಬಿರ್ಲಾ ಮಂದಿರವನ್ನು ನೋಡಿದ ನಂತರ ಅವರು ಬಿರ್ಲಾಜಿಯವರ ಬಳಿ, ‘ಮಂದಿರದ ವಾಸ್ತುಶಿಲ್ಪಿ ಯಾರು?’ ಎಂದು ಕೇಳಿದ್ದರು ಹಾಗೂ ‘ಉದ್ದೇಶಿತ ರಾಮಮಂದಿರಕ್ಕಾಗಿ ಶ್ರೀ.ಸೋಮಪುರಾ ಇವರು ಎಷ್ಟರ ಮಟ್ಟಿಗೆ ಸಹಕರಿಸಬಲ್ಲರು ?’ ಎಂದೂ ವಿಚಾರಿಸಿದ್ದರು. ಅನಂತರ ಇಬ್ಬರ ಭೇಟಿಯಾಯಿತು. ಆ ಸಮಯದಲ್ಲಿ ಶ್ರೀ. ಸೋಮಪುರಾ ಇವರು ರಾಮಜನ್ಮಭೂಮಿಯ ಪ್ರಸ್ತಾವಿತ ಕಟ್ಟಡಕಾಮಗಾರಿಯನ್ನು ಮಾಡಲು ಆನಂದದಿಂದ ಸಮ್ಮತಿಸಿದ್ದರು.

೪. ರಾಮಮಂದಿರ ಮತ್ತು ಅದರ ಕಟ್ಟಡಕಾಮಗಾರಿ ಹೇಗಿದೆ ?

ಶ್ರೀ. ಚಂದ್ರಕಾಂತ ಸೋಮಪುರಾ ಇವರು ಅಶೋಕ ಸಿಂಘಲ್ ಇವರೊಂದಿಗೆ ತೆಗೆದುಕೊಂಡ ಆ ಅಳತೆಗನುಸಾರ ಮಂದಿರದ, ಮಂದಿರ ಪರಿಸರದ ರೇಖಾಂಕನ ಮಾಡಿದರು, ರಾಜಸ್ಥಾನದಿಂದ ಕಲ್ಲುಗಳನ್ನು ತರಿಸಿ ಅದರ ಮೇಲಿನ ಕೆತ್ತನೆ ಮತ್ತು ನಕ್ಷೆಗಳ ಕೆಲಸವನ್ನು ಪ್ರಾರಂಭಿಸಿದರು. ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ನಂತರ ಮಂದಿರದ ಹೊಸ ನೀಲನಕ್ಷೆಯನ್ನು ಸಿದ್ಧಪಡಿಸಿ ಅದಕ್ಕಾಗಿ ಕ್ರಮಬದ್ಧವಾಗಿ ಅನುಮತಿ ಪಡೆದುಕೊಳ್ಳಲಾಯಿತು. ಆಶ್ಚರ್ಯ ಅಂದರೆ ಇಂದು ಇಷ್ಟು ವರ್ಷಗಳ ನಂತರವೂ ಅದೇ ಅಳತೆಯನ್ನು ಪರಿಗಣಿಸಿ ಮಂದಿರದ ಕಟ್ಟಡಕಾಮಗಾರಿಯನ್ನು ಪ್ರಾರಂಭಿಸಿ ಅದು ಪೂರ್ಣಗೊಂಡಿದೆ. ಕಳೆದ ೩೦ ವರ್ಷಗಳಲ್ಲಿ ಮಾಡಿದ ಕೆತ್ತನೆ, ನಕ್ಷೆಗಳಲ್ಲಿನ ಒಂದೇ ಒಂದು ಕಂಬವೂ ವ್ಯರ್ಥವಾಗಬಾರದು ಎಂಬ ಕಾಳಜಿ ವಹಿಸಿ ಈ ಹೊಸ ನೀಲನಕ್ಷೆಯನ್ನು ತಯಾರಿಸಲಾಯಿತು. ೨೦೦ ಅಡಿ ಆಳವಾದ ಭೂಮಿಯಲ್ಲಿ ಹೂತ ೧೨೦೦ ಕಂಬಗಳ ಮೇಲೆ ಈ ಮಂದಿರವನ್ನು ಕಟ್ಟಲಾಗಿದೆ. ಪ್ರತಿಯೊಂದು ಕಂಬವು ೧ ಮೀಟರ್ ವ್ಯಾಸವನ್ನು ಹೊಂದಿದೆ. ಭೂಮಿಪೂಜೆಯ ನಂತರ ಕೆಲವು ವಾರಗಳಲ್ಲಿ ಸುಮಾರು ೨೦೦ ಕಂಬಗಳನ್ನು ಹೂತು ಅದರ ಮೇಲೆ ಬಹಳ ಭಾರ ಹಾಕಿ ಅವುಗಳ ಸಹನಶಕ್ತಿಯನ್ನು ಪರಿಶೀಲಿಸಲಾಯಿತು. ರಾಮಮಂದಿರದ ಸಂಪೂರ್ಣ ಕಾಮಗಾರಿಯಲ್ಲಿ ಎಲ್ಲಿಯೂ ಸ್ಟೀಲ್ ಅನ್ನು ಉಪಯೋಗಿಸಿಲ್ಲ. ಒಂದರ ಮೇಲೆ ಇನ್ನೊಂದನ್ನು ಇರಿಸಿ ಮೇಲ್-ಫಿಮೇಲ್ ಪದ್ಧತಿಯಿಂದ ಪರಸ್ಪರರನ್ನು ಜೋಡಿಸುವ ಕಲ್ಲುಗಳನ್ನು ಉಪಯೋಗಿಸಿಯೇ ಮಂದಿರದ ಕಾಮಗಾರಿಯನ್ನು ಮಾಡಲಾಗಿದೆ.

ಈ ಮಂದಿರವನ್ನು ನಾಗರಶೈಲಿಯಲ್ಲಿ ಕಟ್ಟಲಾಗಿದ್ದು ಅದು ೩ ಅಂತಸ್ತಿನದ್ದಾಗಿದೆ. ಅದರ ಎತ್ತರ ೧೬೧ ಅಡಿಯಷ್ಟಿದೆ. ಅದಕ್ಕೆ ೫ ಗುಮ್ಮಟಾಕೃತಿಯ ಮಂಟಪಗಳು, ೧ ಶಿಖರವಿದ್ದು ಅವೆಲ್ಲವನ್ನೂ ವಾಸ್ತುಶಾಸ್ತ್ರಕ್ಕನುಸಾರವಾಗಿಯೇ ಕಟ್ಟಲಾಗಿದೆ. ರಾಮಮಂದಿರಕ್ಕೆ ಒಪ್ಪಿಸಲಾದ ಜಾಗವು ೭೦ ಎಕರೆಯಷ್ಟಿದೆ ಮತ್ತು ಅದರಲ್ಲಿ ೨.೭೭ ಎಕರೆ ಜಾಗದಲ್ಲಿ ಮಂದಿರದ ಕಾಮಗಾರಿಯನ್ನು ಮಾಡಲಾಗಿದೆ. ಮಂದಿರದ ಗರ್ಭಗುಡಿ ಅಷ್ಟಕೋನಾಕೃತಿಯದ್ದಾಗಿದೆ. ಮಂದಿರದಲ್ಲಿ ಒಂದು ಪ್ರಾರ್ಥನಾ ಕೊಠಡಿ, ಒಂದು ರಾಮಕಥಾ ಕುಂಜ (ವ್ಯಾಖ್ಯಾನ ಸ್ಥಳ), ವೈದಿಕ ಪಾಠಶಾಲೆ, ಸಂತ ನಿವಾಸ, ಯತಿ ನಿವಾಸ (ಅತಿಥಿಗಳಿಗಾಗಿ ನಿವಾಸ), ಸಂಗ್ರಹಾಲಯ, ಉಪಾಹಾರಗೃಹ ಮುಂತಾದ ಸೌಲಭ್ಯಗಳಿವೆ. ಭೂಕಂಪ, ಬಿರುಗಾಳಿ ಅಥವಾ ತತ್ಸಮಾನ ನೈಸರ್ಗಿಕ ವಿಪತ್ತುಗಳಿಂದ ಮಂದಿರಕ್ಕೆ ಯಾವುದೇ ಹಾನಿಯಾಗದಂತೆ ಬಹಳ ಕಾಳಜಿಯನ್ನು ಮಂದಿರ ಕಟ್ಟುವಾಗಲೇ ತೆಗೆದುಕೊಳ್ಳಲಾಗಿದೆ.

೫. ರಾಮಮಂದಿರ ಸಂಪೂರ್ಣ ಕಾಮಗಾರಿಯನ್ನು ‘ಲಾರ್ಸನ್ ಆಂಡ್ ಟಬ್ರೊ’ ಕಂಪನಿಯು ಮಾಡುವುದರ ಹಿಂದಿನ ಘಟನೆ

ರಾಮಮಂದಿರದ ಸಂಪೂರ್ಣ ಕಾಮಗಾರಿಯನ್ನು ಕಾಮಗಾರಿಯಲ್ಲಿ ಹೆಸರುವಾಸಿಯಾದ ‘ಲಾರ್ಸನ್ ಆಂಡ್ ಟಬ್ರೋ’ ಕಂಪನಿಯು ಮಾಡಿದೆ. ೧೯೯೦ ರಲ್ಲಿ ಅಶೋಕ ಸಿಂಘಲ್ ಇವರು ‘ಲಾರ್ಸನ್ ಆಂಡ್ ಟಬ್ರೋ’ದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಸಿಂಘಲ್ ಇವರು ಅಂದಿನ ಅಧಿಕಾರಿಗಳ ಬಳಿ ನೀವು ರಾಮಮಂದಿರದ ಕಟ್ಟಡಕಾಮಗಾರಿಯಲ್ಲಿ ಸಹಕರಿಸಬಹುದೇನು ? ಎಂದು ವಿಚಾರಿಸಿದ್ದರು. ಆಗ ಕಂಪನಿಯು ಒಪ್ಪಿತ್ತು. ೩೦ ವರ್ಷಗಳ ನಂತರ ಮಂದಿರ ಕಾಮಗಾರಿಯ ವಿಷಯದಲ್ಲಿ ಮತ್ತೊಮ್ಮೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮಹಾಕಾರ್ಯದರ್ಶಿ ಶ್ರೀ. ಚಂಪತ ರಾಯ ಇವರು ಪುನಃ ಒಮ್ಮೆ ‘ಲಾರ್ಸನ್ ಆಂಡ್ ಟಬ್ರೋ’ದ ಹಿರಿಯರನ್ನು ಭೇಟಿಯಾದರು ಮತ್ತು ಮೊದಲಿನ ಆಶ್ವಾಸನೆಯ ಬಗ್ಗೆ ವಿಚಾರಿಸಿದರು. ಕಂಪನಿಯು ಒಪ್ಪಿಕೊಳ್ಳುವಾಗ ಈ ಸಂಪೂರ್ಣ ಕಾಮಗಾರಿಯನ್ನು ನಾವು ಉಚಿತವಾಗಿ ಮತ್ತು ಸೇವಾಭಾವದಿಂದ ಮಾಡುವೆವು ಎಂದು ಸ್ಪಷ್ಟವಾಗಿ ಹೇಳಿತು. ರಾಮಮಂದಿರದ ಯೋಜನೆಗಾಗಿ ಕಂಪನಿಯು ಸೀನಿಯರ್ ಡಿಸೈನರ್ ಶ್ರೀ. ಆರ್.ಎಮ್. ವೀರಪ್ಪನ್ ಇವರನ್ನು ನೇಮಿಸಿದೆ.

ಈ ರೀತಿ ರಾಮಮಂದಿರದ ಕಾಮಗಾರಿಯು ಪೂರ್ಣವಾಗಿದ್ದು ಶ್ರೀ. ಚಂದ್ರಕಾಂತ ಸೋಮಪುರಾ ಇವರ ಮನೆತನದಿಂದ ಇತಿಹಾಸವು ಸುವರ್ಣಾಕ್ಷರಗಳಲ್ಲಿ ನೊಂದಾಯಿಸಲ್ಪಡುವಂತಹ ಅದ್ವಿತೀಯ ಕಾರ್ಯ ಪೂರ್ಣತ್ವಕ್ಕೆ ತಲುಪಿದೆ.

ನೂತನ ರಾಮಮಂದಿರದ ವಿಷಯದಲ್ಲಿ ಶ್ರೀ. ಚಂದ್ರಕಾಂತ ಸೋಮಪುರಾ ಇವರ ಅಭಿಪ್ರಾಯ

ಇಡೀ ಜಗತ್ತಿಗೆ ಯಾವ ಮಂದಿರದ ಸ್ಥಾಪನೆಯ ಉತ್ಸುಕತೆಯಿತ್ತೋ ಆ ಮಂದಿರದ ಸ್ಥಾಪನೆಗಾಗಿ ಸ್ವತಂತ್ರ ಭಾರತದಲ್ಲಿಯೂ ಹಿಂದೂಸ್ಥಾನದ ಹಿಂದೂಗಳು ೩ ದಶಕಗಳ ಕಾಲ ಸಂಘರ್ಷ ಮಾಡಬೇಕಾಯಿತು. ಇಂತಹ ಮಂದಿರದ ವಾಸ್ತುಶಿಲ್ಪವನ್ನು ತಯಾರಿಸುವ ಭಾಗ್ಯ ನಮ್ಮ ಕುಟುಂಬಕ್ಕೆ ದೊರಕಿದ ಬಗ್ಗೆ ನನಗೆ ಅಭಿಮಾನವಿದೆ.

ಅಯೋಧ್ಯೆಯಲ್ಲಿ ಕೆಲಸ ಪ್ರಾರಂಭವಾದ ನಂತರ ಉಜ್ವಲವಾದ ‘ಲಾಸರ್ನ ಆಂಡ್ ಟಬ್ರೋ’ ಕಂಪನಿಯ ಭವಿಷ್ಯ!
ಅಯೋಧ್ಯೆಯಲ್ಲಿ ಕಾಮಗಾರಿ ಆರಂಭವಾದ ನಂತರ ‘ಲಾಸರ್ನ ಆಂಡ್ ಟಬ್ರೋ’ ಕಂಪನಿಯ ಭವಿಷ್ಯ ಬೆಳಗಿತು. ಈ ಸಂಸ್ಥೆಗೆ ಬಾಂಗ್ಲಾದೇಶ, ನೇಪಾಳ, ಸೌದಿ ಅರೇಬಿಯಾ ಮುಂತಾದ ಕಡೆಗಳಲ್ಲಿ ಹೊಸ ಕೆಲಸಗಳು ದೊರಕಿದವು. ತಮಿಳುನಾಡಿನ ೫೦ ಮೆಗಾವಾಟ್ ಫೋಟೋಹೊಲ್ಟಾಯಿಕ್ ಪ್ಲಾಟ್ ನ ಕೆಲಸವೂ ಲಾರ್ಸನ್ ಆಂಡ್ ಟಬ್ರೋ ಕಂಪನಿಗೆ ಸಿಕ್ಕಿದೆ. ಬದಲಾಗತೊಡಗಿದ ಈ ಆರ್ಥಿಕ ವಾತಾವರಣವೂ ರಾಮಮಂದಿರದ ಕಾಮಗಾರಿಯ ಕಾಲ್ಗುಣವಲ್ಲವೇ ?

(ಆಧಾರ : ವಿವಿಧ ಜಾಲತಾಣಗಳು)