ಹಿಂದುಗಳಿಂದ ಸರೇ ನಗರದಲ್ಲಿ ಪ್ರತಿಭಟನೆ !
ಓಟಾವಾ (ಕೆನಡಾ) – ಕೆನಡಾದಲ್ಲಿನ ಸರೆ ನಗರದಲ್ಲಿ ಹಿಂದೂ ಸಮಜಾವು ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಪ್ರತಿಭಟನೆ ನಡೆಸಿದರು. ಇಲ್ಲಿಯ ಹಿಂದುಗಳಿಗೆ ಸುಲಿಗೆಗಾಗಿ ಜೀವ ಬೆದರಿಕೆ ನೀಡುವುದರ ಕುರಿತು ಪ್ರತಿಭಟನೆ ನಡೆಸಲಾಯಿತು. ಇದರ ನಿಯೋಚನೆ ‘ವೈದಿಕ ಹಿಂದೂ ಕಲ್ಚರಲ್ ಸೊಸೈಟಿ’ ಇಂದ ಮಾಡಲಾಗಿತ್ತು .
೧. ಇಲ್ಲಿಯ ಲಕ್ಷ್ಮಿ ನಾರಾಯಣ ದೇವಸ್ಥಾನ ಸಮಿತಿಯ ಅಧ್ಯಕ್ಷ ಸತೀಶ ಕುಮಾರ ಇವರು, ಸುಲಿಗೆಗಾಗಿ ನೀಡುತ್ತಿರುವ ಬೆದರಿಕೆಯಿಂದ ಹಿಂದುಗಳಲ್ಲಿ ಭಯದ ವಾತಾವರಣ ಇದೆ. ಅನೇಕರಿಗೆ ಬೆದರಿಕೆ ಬಂದಿದೆ. ಕೆಲವು ಜನರಿಗೆ ಬೆದರಿಕೆ ನೀಡಿದ ನಂತರ ಅವರು ಹಣ ನೀಡಿದ್ದಾರೆ ಎಂದು ಹೇಳಿದರು.
೨. ಕೆಲವು ದಿನಗಳ ಹಿಂದೆ ಸತೀಶ ಕುಮಾರ ಇವರ ಮಗನ ಮನೆಯ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ ನಡೆಸಿದ್ದರು. ಹಾಗೂ ಕೆಲವು ವಾರಗಳ ಹಿಂದೆ ಲಕ್ಷ್ಮೀನಾರಾಯಣ ದೇವಸ್ಥಾನದ ಗೋಡೆಯ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿ ಭಾರತ ವಿರೋಧಿ ಘೋಷಣೆಗಳು ಬರೆದಿದ್ದರು.
೩. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕೆನಡಾದ ಪೊಲೀಸರು ಸುಲುಗೆಯ ಪ್ರಕರಣದಲ್ಲಿ ಕೆಲವರನ್ನು ಬಂಧಿಸಿದ್ದರು; ಆದರೆ ಇಷ್ಟು ಕ್ರಮ ಸಾಕಾಗುವುದಿಲ್ಲ’, ಎಂದು ಹಿಂದೂಗಳ ಹೇಳಿಕೆ ಆಗಿದೆ. ‘ಈ ಬೆದರಿಕೆಯ ಹಿಂದೆ ಭಾರತೀಯ ತಂಡವಿದೆ’, ಎಂದು ಪೊಲೀಸರ ಅಭಿಪ್ರಾಯವಿದೆ.
‘Community very shaken’: Extortion threats prompt Hindu community leaders to hold public forum in Canada
Read @ANI | https://t.co/Th9jhDR5s3#Canada #extortion #Hindus pic.twitter.com/LTwZRnuB8N
— ANI Digital (@ani_digital) January 6, 2024
ಸಂಪಾದಕರ ನಿಲುವು* ‘ಕೆನಡಾ ಎಂದರೆ ಹಿಂದುಗಳಿಗಾಗಿ ಅಸುರಕ್ಷಿತ ದೇಶ, ಎಂದು ಭಾರತವು ಈಗ ಘೋಷಿಸಬೇಕು ಮತ್ತು ಭಾರತೀಯರಿಗೆ ಅಲ್ಲಿ ಹೋಗಲು ನಿಷೇಧಿಸಬೇಕು ! |