(ಹಲಾಲ್ ಎಂದರೆ ಇಸ್ಲಾಂಗನುಸಾರ ಯಾವುದು ಯೋಗ್ಯವೊ ಅದು)
ಇಂದೂರ್ (ಮಧ್ಯಪ್ರದೇಶದಲ್ಲಿ)ನಲ್ಲಿ ಪ್ರಸಾರ ಮಾಡುವಾಗ ಅರಿವಾದ ವಿಷಯವೆಂದರೆ, ‘ಹಲಾಲ ಜಿಹಾದ್’ನ ವಿಷಯದಲ್ಲಿ ಬಹಳಷ್ಟು ಹಿಂದೂಗಳಿಗೆ ಏನೂ ಗೊತ್ತಿಲ್ಲ. ಐಈಸ್ ಲೆಕ್ಕಪರಿಶೋಧಕರು, ವಕೀಲರು, ಆಧುನಿಕ ವೈದ್ಯರಿಗೂ ಇದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿರುವಾಗ ಕಡಿಮೆ ಕಲಿತವರು ಮತ್ತು ಹಳ್ಳಿಯಲ್ಲಿರುವರಿಗೆ ಈ ವಿಷಯ ತಿಳಿದಿರಲು ಸಾಧ್ಯವೇ ಇಲ್ಲ. ಇಲ್ಲಿ ಸಣ್ಣ ಒಂದು ಸಭೆಯಲ್ಲಿ ‘ಹಲಾಲ್ ಜಿಹಾದ್’ ಎಂಬ ವಿಷಯವನ್ನು ಮಂಡಿಸಿದಾಗ ಅನೇಕ ಜನರು ‘ನಮಗೆ ಈ ವಿಷಯ ಮೊಟ್ಟಮೊದಲಿಗೆ ತಿಳಿಯಿತು ಹಾಗೂ ಅದರ ಭೀಕರತೆಯ ಅರಿವಾಯಿತು’, ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಸಾಮಾನ್ಯ ಹಿಂದೂಗಳು ನಿಜವಾಗಿಯೂ ನಿದ್ರೆಯಲ್ಲಿದ್ದಾರೆ. ಇದರಿಂದ ಹಿಂದೂ ಜನಜಾಗೃತಿ ಸಮಿತಿ ‘ಹಲಾಲ್ ಜಿಹಾದ್’ನ ವಿಷಯದಲ್ಲಿ ಮಾಡುತ್ತಿರುವ ಜಾಗೃತಿ ಹಾಗೂ ಸಮಿತಿಯ ಕಾರ್ಯಕ್ಕೆ ಇರುವ ಈಶ್ವರಕೃಪೆಯ ಮಹತ್ವ ಅರಿವಾಗುತ್ತದೆ.
– ಶ್ರೀ. ಶ್ರೀರಾಮ ಕಾಣೆ, ಇಂದೂರ್, ಮಧ್ಯಪ್ರದೇಶ (೨೧.೭.೨೦೨೩)