ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ ’ ! (ಲೇಖನಮಾಲೆ ೧೫)
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ. ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳ ಮೇಲೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೧೬ ನೇ ಸಂಚಿಕೆಯಲ್ಲಿ ನಾವು ‘ಅತಿಸಾರ/ಭೇದಿ’ ರೋಗಕ್ಕೆ ತೆಗೆದುಕೊಳ್ಳಬೇಕಾದ ಆರೈಕೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳ ಮಾಹಿತಿಯನ್ನು ಓದಿದೆವು. ನೇರವಾಗಿ ಕಾಯಿಲೆಗಳಿಗೆ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ ! ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ. |
ಬೆನ್ನಿನಲ್ಲಿ ಮಂದದಿಂದ ತೀವ್ರ ವೇದನೆಗಳು ಆಗುವುದಕ್ಕೆ ‘ಬೆನ್ನುನೋವು’, ಎಂದು ಹೇಳುತ್ತಾರೆ. ಕೆಲವೊಮ್ಮೆ ಈ ವೇದನೆಗಳು ಕಾಲಿನತ್ತ ಹರಡುತ್ತವೆ. ಈ ವೇದನೆಗಳು ಬಿದ್ದುದರಿಂದ ಆದ ಪೆಟ್ಟು, ಭಾರವಾದ ವಸ್ತುಗಳನ್ನು ಎತ್ತುವುದು, ವಯೋಮಾನಕ್ಕನುಸಾರ ಕಶೇರುಖಂಡಗಳ (ವರಟೆಬ್ರಾ) ಅಥವಾ ಮೃದ್ವಸ್ಥಿ ತಟ್ಟೆಗಳ (ಇಂಟರ್‌ವರ್ಟಿಬ್ರಲ್ ಡಿಸ್ಕ್) ಸವೆತ ಇತ್ಯಾದಿಗಳಿಂದ ಆಗಬಹುದು. ಬೆನ್ನುನೋವು ಇರುವಾಗ ಬಹಳಷ್ಟು ಸಮಯ ಕುಳಿತು ಕೊಳ್ಳುವುದು, ಭಾರವಾದ ವಸ್ತುಗಳನ್ನು ಎತ್ತುವುದನ್ನು ಮಾಡ ಬಾರದು. ಯೋಗಾಸನಗಳು, ವ್ಯಾಯಾಮ, ಶರೀರದ ಭಂಗಿಯನ್ನು (posture) ಸರಿಪಡಿಸುವುದು, ಮಾಲಿಶ ಮಾಡುವುದು ಇವುಗಳಿಂದಲೂ ಲಾಭವಾಗುತ್ತದೆ. ಬೆನ್ನುನೋವಿನ ಲಕ್ಷಣವನ್ನು ಹೊರತುಪಡಿಸಿ ಯಾವ ವೈಶಿಷ್ಟ್ಯಪೂರ್ಣ ಲಕ್ಷಣಗಳಿದ್ದರೆ, ಆ ಔಷಧಿಗಳನ್ನು ತೆಗೆದುಕೊಳ್ಳಬೇಕು, ಎಂಬುದನ್ನು ಔಷಧಿಗಳ ಹೆಸರುಗಳ ಮುಂದೆ ಕೊಡಲಾಗಿದೆ.
೧. ಆರ್ನಿಕಾ ಮೊಂಟಾನಾ (Arnica Monatana)
೧ ಅ. ಪೆಟ್ಟುಬಿದ್ದು ಆಗಿರುವ ಬೆನ್ನು ನೋವು (ಎಲ್ಲಿಯಾದರು ಬೀಳುವುದು, ಅಪಘಾತ ಆಗುವುದು ಇತ್ಯಾದಿ) (traumatic injuries) ಅಥವಾ ಅತಿಯಾದ ಶ್ರಮದಿಂದ ಬೆನ್ನು ನೋಯುವುದು
೧ ಆ. ಬೆನ್ನು ನೋವು, ನಿಃಶಕ್ತಿ, ಗುದ್ದಿದಂತಾಗುವುದು
೧ ಇ. ಯಾವ ಜಾಗದಲ್ಲಿ ಮಲಗಿದರೂ ಆ ಜಾಗ ಅತೀ ಕಠಿಣ (ಗಟ್ಟಿ) ಅನಿಸುವುದು
೧ ಈ. ಪ್ರತಿದಿನ ಬಳಸುವ ಮೃದುವಾದ ಹಾಸಿಗೆ; ಶರೀರಕ್ಕೆ ಸ್ಪರ್ಶವಾದಾಗ ಶರೀರಕ್ಕೆ ಗಟ್ಟಿ ಅನಿಸುವುದು, ಎಲ್ಲಿಯೂ ಆರಾಮ ಅನಿಸದಿರುವುದು. ಯಾವುದಾದರೂ ಮೆತ್ತನೆಯ ಜಾಗ ಸಿಗಬಹುದೆಂದು ಅಸ್ವಸ್ಥತೆಯಿಂದ ಜಾಗವನ್ನು ಬದಲಾಯಿಸುತ್ತಿರುವುದು
೨. ಕಾಲಿ ಕಾರ್ಬೋನಿಕಮ್ (Kali Carbonicum)
೨ ಅ. ಬೆನ್ನಿನಲ್ಲಿ ಚುಚ್ಚಿದಂತೆ ತೀವ್ರ ವೇದನೆಗಳು ಆಗುವುದು
೨. ಆ. ಬೆನ್ನಿನ ಮೂಳೆ ಮುರಿದಂತೆ ಅರಿವಾಗುವುದು
೨ ಇ. ಬೆನ್ನಿನಲ್ಲಿ ಅಶಕ್ತತೆಯ ಅರಿವಾಗುವುದು
೨ ಈ. ಮಲಗಿದ್ದರೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದ ರಿಂದ ನೋವು ಹೆಚ್ಚಾಗುವುದು
೨ ಉ. ಚಲನವಲನದಿಂದ (ನಡೆದಾಡುವುದ ರಿಂದ) ಒಳ್ಳೆಯ ದೆನಿಸುವುದು
೨ ಊ. ಗರ್ಭಿಣಿ ಸ್ತ್ರೀಯರಲ್ಲಿ ಅಥವಾ ಗರ್ಭಪಾತದ ನಂತರ ಬೆನ್ನು ನೋವಾಗುವುದು
೩. ರಸ್ ಟಾಕ್ಸಿಕೊಡೆಂಡ್ರಾನ್ (Rhus Toxicodendron)
೩ ಅ. ಅತಿ ಭಾರದ ವಸ್ತುವನ್ನು ಎತ್ತಿದುದರಿಂದ ಸ್ನಾಯುವಿನ ಆಕುಂಚನದಿಂದ ನೋವು ಬರುವುದು, ಮಳೆಯಲ್ಲಿ ನೆನೆಯುವುದು, ತೇವವುಳ್ಳ ಬಟ್ಟೆಗಳನ್ನು ಧರಿಸುವುದು ಅಥವಾ ತೇವವುಳ್ಳ ಹಾಸಿಗೆಯ ಮೇಲೆ ಮಲಗುವುದು, ಇವುಗಳಿಂದಾಗಿ ಬೆನ್ನು ನೋಯುವುದು
೩ ಆ. ಬೆನ್ನಲ್ಲಿ ಬಿಗಿತ, ಪೆಟ್ಟು ತಾಗಿದಂತೆ ಮತ್ತು ಊರಿ ಬಂದಂತೆ ಅನಿಸುವುದು
೩ ಇ. ಚಲನವಲನ ಮಾಡಿದಾಗ (ನಡೆದಾಡಿದಾಗ) ನೋವು ಕಡಿಮೆಯಾಗುವುದು
೪. ಬ್ರಾಯೋನಿಯಾ ಅಲ್ಬಾ (Bryonia Alba)
೪ ಅ. ಬೆನ್ನಿನಲ್ಲಿ ಚುಚ್ಚಿದಂತೆ ನೋವಾಗುವುದು
೪ ಆ. ಚಲನವಲನ ಮಾಡಿದಾಗ (ನಡೆದಾಡಿದಾಗ) ನೋವು ಹೆಚ್ಚಾಗುವುದು
೪ ಇ. ಒತ್ತಿದಾಗ ಮತ್ತು ಸಂಪೂರ್ಣ ವಿಶ್ರಾಂತಿ ತೆಗೆದುಕೊಂಡ ನಂತರ ನೋವು ಕಡಿಮೆಯಾಗುವುದು
೫. ಬರ್ಬರಿಸ್ ವಲ್ಗ್ಯಾರಿಸ್ (Berberis Vulgaris)
೫ ಅ. ಮೂತ್ರ ಅಥವಾ ಗುದನಾಳದ ತೊಂದರೆಯೊಂದಿಗೆ ಬೆನ್ನುನೋವಿಗೆ ಉಪಯುಕ್ತವಾಗಿದೆ.