ರಾಮಜನ್ಮದ ಪ್ರಯೋಜನ

೨೨ ಜನವರಿ ೨೦೨೪ ರಂದು ಶ್ರೀರಾಮ ಮಂದಿರದ ಲೋಕಾರ್ಪಣೆ ಆಗುತ್ತಿದೆ, ಆ ನಿಮಿತ್ತ …

೨೨ ಜನವರಿ ೨೦೨೪ ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಆಗುವುದಿದೆ, ಆದುದರಿಂದ ಇಡೀ ದೇಶದಲ್ಲಿ ಆನಂದದ ವಾತಾವರಣವಿದೆ. ಇಡೀ ದೇಶವೇ ಎದುರು ನೋಡುತ್ತಿರುವ ಈ ಸಮಾರಂಭಕ್ಕೆ ಕೇವಲ ಕೆಲವೇ ದಿನಗಳು ಉಳಿದಿವೆ. ಯಾವ ಶ್ರೀರಾಮನು ನಮ್ಮನ್ನು ಇಷ್ಟೊಂದು ಮೋಹಕ್ಕೆ ಒಳಪಡಿಸಿದ್ದಾನೆಯೋ ಆ ಶ್ರೀರಾಮನ ಓರ್ವ ರಾಜಕುಮಾರನಿಂದ ಹಿಡಿದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ತನಕದ ಈ ಪ್ರವಾಸವನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು.

೧. ರಾಮನ ಜನ್ಮ ಕೇವಲ ರಾವಣನ ವಧೆಗಾಗಿ ಮಾತ್ರ ಇತ್ತೇ ?

ಪ್ರಭು ಶ್ರೀರಾಮನ ಬಗ್ಗೆ ‘ರಾಮನ ಜನ್ಮ ಕೇವಲ ರಾವಣನನ್ನು ಕೊಲ್ಲಲು ಆಗಿತ್ತು’, ಎಂದು ಯಾವಾಗಲೂ ಹೇಳಲಾಗುತ್ತದೆ. ಕೆಲವು ರಾವಣಪ್ರೇಮಿಗಳು ಹೀಗೂ ಹೇಳುತ್ತಾರೆ, ‘ರಾವಣ ಎಷ್ಟು ದೊಡ್ಡವನಾಗಿದ್ದನೆಂದರೆ, ಅವನನ್ನು ಕೊಲ್ಲಲು ಸಾಕ್ಷಾತ್‌ ದೇವರು ಅವತಾರವನ್ನು ಧರಿಸಿ ಕಾಡಿನಲ್ಲಿ ಬರಿಗಾಲಿನಲ್ಲಿ ತಿರುಗಾಡಬೇಕಾಯಿತು.’ ಹಾಗಾದರೆ ವಾಸ್ತವದಲ್ಲಿ ರಾಮನ ಜನ್ಮ ಕೇವಲ ರಾವಣನ ವಧೆಗಾಗಿ ಮಾತ್ರ ಆಗಿತ್ತೇ ? ರಾವಣನನ್ನು ಕೊಲ್ಲುವುದಕ್ಕಾಗಿಯೇ ದೇವರು ಜನ್ಮ ತಳೆದನೆಂದರೆ ರಾವಣನು ಅಷ್ಟು ದೊಡ್ಡವನಾಗಿದ್ದನೇ ? ಅಥವಾ ಇನ್ನೂ ಬೇರೆ ಏನಾದರೂ ಕಾರಣಗಳು ಅಥವಾ ಕಾರ್ಯಗಳಿದ್ದವೇ ? ಯಾವುದಕ್ಕಾಗಿ ಭಗವಾನ ವಿಷ್ಣು ಅವತಾರ ತಾಳಿ ಪೃಥ್ವಿಯ ಮೇಲೆ ಬಂದನು. ಈ ಎಲ್ಲ ಪ್ರಶ್ನೆಗಳ ಉತ್ತರ ಪಡೆಯಲು ನಮಗೆ ರಾಮನ ಸಂಪೂರ್ಣ ಜೀವನದ ಅಧ್ಯಯನ ಮಾಡಬೇಕಾಗುವುದು.

೨. ಅಸಂಖ್ಯ ಯಜ್ಞಗಳ ರಕ್ಷಣೆಗಾಗಿ ಶ್ರೀರಾಮನ ಜನ್ಮ !

ಅಯೋಧ್ಯೆಯ ರಾಜಕುಮಾರನೆಂದೇ ಪ್ರಭು ಶ್ರೀರಾಮನ ಜನ್ಮವಾಯಿತು. ಮಹಾನ ‘ಇಷ್ವಾಕು’ ವಂಶದ ಅಯೋಧ್ಯಾಪತಿ ದಶರಥ ಮತ್ತು ಮಹಾರಾಣಿ ಕೌಸಲ್ಯೆ ಇವರ ಪುತ್ರ ಶ್ರೀರಾಮ. ಬಾಲ್ಯದಲ್ಲಿ ರಾಮನಿಗೆ ವಿದ್ಯಾಭ್ಯಾಸಕ್ಕಾಗಿ ಮಹರ್ಷಿ ವಸಿಷ್ಠರ ಆಶ್ರಮಕ್ಕೆ ಹೋಗಬೇಕಾಯಿತು. ರಾಜಪುತ್ರನೆಂದು ಅಲ್ಲಿ ಅವನಿಗೆ ಯಾರೂ ಮುದ್ದು ಮಾಡಲಿಲ್ಲ. ಅವನಿಗೆ ಇತರ ಸಾಮಾನ್ಯ ಮಕ್ಕಳಂತೆ ಶಿಕ್ಷಣ ಪಡೆಯಬೇಕಾಯಿತು. ಬಾಲ್ಯಾವಸ್ಥೆಯ ನಂತರ ಅವನ ನಿಜವಾದ ಜೀವನ ಆರಂಭ ವಾಗುತ್ತದೆ ಮತ್ತು ಇಲ್ಲಿಂದಲೇ ಆರಂಭವಾಗುತ್ತದೆ ರಾಮನ, ಪ್ರಭು ಶ್ರೀರಾಮನಾಗುವ ಪ್ರವಾಸ !

ಆಶ್ರಮದಿಂದ ಮನೆಗೆ ಹಿಂದಿರುಗಿದ ನಂತರ ರಾಮನಿಗೆ ಮಹರ್ಷಿ ವಿಶ್ವಾಮಿತ್ರರ ಜೊತೆಗೆ ಹೋಗಬೇಕಾಯಿತು. ಯಜ್ಞವನ್ನು ಆರಂಭಿಸಿದ ನಂತರ ಅನೇಕ ರಾಕ್ಷಸರು ಬಂದು ಆ ಯಜ್ಞಗಳನ್ನು ನಾಶ ಮಾಡುತ್ತಿದ್ದರು. ಇಂತಹ ಸಮಯದಲ್ಲಿ ಆ ರಾಕ್ಷಸರನ್ನು ಕೊಲ್ಲಲು ಮಹರ್ಷಿ ವಿಶ್ವಾಮಿತ್ರರು ರಾಮನನ್ನು ಕರೆದೊಯ್ಯಲು ಬಯಸಿದ್ದರು. ಅವರು ಹೇಳುತ್ತಾರೆ, ”ನಿನ್ನ ಹಿರಿಯ ಪುತ್ರನನ್ನು ನನಗೆ ನೀಡು ದಶರಥಾ, ಯಜ್ಞ-ರಕ್ಷಣೆಗಾಗಿ ಅವನೇ ಎಲ್ಲ ರೀತಿಯಿಂದಲೂ
ಯೋಗ್ಯನಾಗಿರುವನು.” ರಾಮನು ನಗುಮುಖದಿಂದಲೇ ಮಹರ್ಷಿ ವಿಶ್ವಾಮಿತ್ರರ ಜೊತೆಗೆ ಹೋಗಲು ಸಿದ್ಧನಾಗುತ್ತಾನೆ. ರಾಜಕುಮಾರನಾಗಿದ್ದರೂ ಸಿದ್ಧಾಶ್ರಮಕ್ಕೆ ಹೋಗಲು ಅವನು ಮಹರ್ಷಿ ವಿಶ್ವಾಮಿತ್ರರ ಜೊತೆಗೆ ಕಾಲ್ನಡಿಗೆಯಲ್ಲಿ ಹೊರಡುತ್ತಾನೆ. ಐಶ್ವರ್ಯದಲ್ಲಿರುವ ಓರ್ವ ರಾಜಕುಮಾರ ಕಾಲ್ನಡಿಗೆಯಿಂದ ಮುಳ್ಳು-ಕಂಟಿಗಳಲ್ಲಿ ನಡೆಯುತ್ತಾನೆ; ಏಕೆಂದರೆ ಅವನಿಗೆ ತನ್ನ ಕಾರ್ಯದ ಅರಿವಿರುತ್ತದೆ. ನಾನು ಐಶ್ವರ್ಯದಲ್ಲಿ ಮುಳುಗಲು ಬಂದಿಲ್ಲ, ನಾನು ಧರ್ಮರಕ್ಷಣೆಗಾಗಿ ಜನ್ಮವನ್ನು ಪಡೆದಿದ್ದೇನೆ, ಎಂದು ಅವನಿಗೆ ಗೊತ್ತಿತ್ತು. ಈ ರೀತಿ ಅನೇಕ ಯಜ್ಞಗಳು ಶಾಶ್ವತವಾಗಿ ಭಯಮುಕ್ತವಾಗಬೇಕೆಂದು ತ್ರಾಟಿಕಾ ವಧೆ, ಮಾರಿಚ ಮತ್ತು ಸುಬಾಹು ಇವರನ್ನು ರಾಮನು ಸೋಲಿಸಿದನು. ಅಸಂಖ್ಯಾತ ಯಜ್ಞಗಳ ರಕ್ಷಣೆಗಾಗಿ ಶ್ರೀರಾಮನ ಜನ್ಮವಾಗಿತ್ತು.

೩. ಅಹಲ್ಯೆಯ ಉದ್ಧಾರ !

ಅನಂತರ ವಿಶ್ವಾಮಿತ್ರರು ರಾಮ-ಲಕ್ಷ್ಮಣರನ್ನು ಕರೆದುಕೊಂಡು ಮಿಥಿಲೆಗೆ ಹೊರಟರು. ದಾರಿಯಲ್ಲಿ ಅವರು ಅಹಲ್ಯೆಗೆ ವಂದಿಸಿದರು. ಮಾತಾ ಅಹಲ್ಯೆಯು ರಾಮನ ದಾರಿಯನ್ನು ಕಾಯುತ್ತಿದ್ದಳು. ಸಮರ್ಥ ರಾಮದಾಸ ಸ್ವಾಮಿಗಳು ಹೇಳುತ್ತಾರೆ, ‘ಶಿಲೆಯಂತಾದ ಅಹಲ್ಯೆ ರಾಮನ ಚರಣಸ್ಪರ್ಶದಿಂದ ಮುಕ್ತಳಾದಳು. ಈ ಶಿಲೆಯಂತಾದ ಮಹಾತಪಸ್ವಿನಿ ಅಹಲ್ಯೆಯ ಉದ್ಧಾರಕ್ಕಾಗಿ ರಾಮನ ಜನ್ಮವಾಗಿತ್ತು’.

೪. ‘ಭಾವನೆಗಿಂತ ಕರ್ತವ್ಯ ದೊಡ್ಡದಾಗಿರುತ್ತದೆ’, ಎಂಬುದನ್ನು ತೋರಿಸಿದ ಶ್ರೀರಾಮ !

ಸೀತಾಮಾತೆಯೊಂದಿಗೆ ವಿವಾಹ ಮಾಡಿಕೊಂಡು ರಾಮನು ಅಯೋಧ್ಯೆಗೆ ಹಿಂದಿರುಗಿದನು. ಕೆಲವು ವರ್ಷಗಳು ಕಳೆದ ನಂತರ ಪುನಃ ಅವನ ಜೀವನದಲ್ಲಿ ಒಂದು ಹೊಸ ಬಿರುಗಾಳಿ ಎದ್ದಿತು. ದಶರಥನು ರಾಮನ ರಾಜ್ಯಾಭಿಷೇಕ ಮಾಡಬೇಕೆಂದು ನಿಶ್ಚಯಿಸಿದನು. ಎಲ್ಲ ಕಡೆಗೆ ಆನಂದವೇ ಆನಂದ ಹರಡಿತು; ಆದರೆ ರಾಣಿ ಕೈಕೆಯಿಯ ದಾಸಿ ಮಂಥರಾ ಕೈಕೆಯಿಯ ಕಿವಿ ತುಂಬಿದಳು ಮತ್ತು ಅವಳು ರಾಮನನ್ನು ವನವಾಸಕ್ಕೆ ಕಳುಹಿಸಬೇಕೆಂದು ದಶರಥನಿಗೆ ಒತ್ತಾಯಿಸಿದಳು. ಅದು ರಾಮನಿಗಾಗಿ ಎಷ್ಟು ದೊಡ್ಡ ಆಘಾತವಿರಬಹುದು ! ನಿನ್ನೆಯತನಕ ತನ್ನ ರಾಜ್ಯಾಭಿಷೇಕದ ಸಿದ್ಧತೆ ನಡೆದಿರುವಾಗ ಇದ್ದಕ್ಕಿದ್ದಂತೆಯೇ ಕಾಡಿಗೆ ಹೋಗಬೇಕು, ಅದೂ ೧೪ ವರ್ಷಗಳಿಗಾಗಿ; ಆದರೆ ರಾಮನು ಕಾಡಿಗೆ ಹೋಗಲು ಸಿದ್ಧನಾದನು; ಏಕೆಂದರೆ ಅವನಿಗೆ ತನ್ನ ರಾಜ್ಯಾಭಿಷೇಕಕ್ಕಿಂತ ಕರ್ತವ್ಯ ಮಹತ್ವದ್ದಾಗಿತ್ತು. ಕಾಡಿಗೆ ಹೋಗಿ ಸಾವಿರಾರು ರಾಕ್ಷಸರನ್ನು ಕೊಂದು ಜನರಿಗೆ ಸುಖ-ಸಮಾಧಾನ ನೀಡುವುದಿತ್ತು. ಅನೇಕ ಋಷಿಗಳನ್ನು ಭೇಟಿಯಾಗಿ ಅವರಿಗೆ ಮುಕ್ತಿ ಕೊಡುವುದಿತ್ತು. ಇದಕ್ಕಾಗಿ ರಾಮನ ಜನ್ಮವಾಗಿತ್ತು. ಅದಕ್ಕಾಗಿಯೇ ಪ್ರಾಯಶಃ ರಾಮವನವಾಸ ಪೂರ್ವ ನಿಯೋಜಿತವಾಗಿತ್ತು. ಇದಲ್ಲದೇ ‘ಎಷ್ಟೇ ಕಷ್ಟ ಬಂದರೂ ತಾಯಿತಂದೆಯರ ಆಜ್ಞೆಯನ್ನು ಪಾಲಿಸಬೇಕು’, ಎಂಬ ಆದರ್ಶವನ್ನೂ ರಾಮನಿಗೆ ಹಾಕಿಕೊಡುವುದಿತ್ತು; ಆದುದರಿಂದ ರಾಮನು ವನವಾಸಕ್ಕೆ ಹೋದನು. ಚಿತ್ರಕೂಟ ಪರ್ವತದ ಮೇಲೆ ಭರತನ ಭೇಟಿಯಾಯಿತು. ಭರತನಿಗೆ ರಾಮನು ತಿಳಿಸಿ ಹೇಳಿ ಹಿಂದಿರುಗಲು ಹೇಳಿದನು. ‘ಭಾವನೆಗಿಂತ ಕರ್ತವ್ಯ ದೊಡ್ಡದಾಗಿರುತ್ತದೆ’, ಎಂದು ತೋರಿಸಲು ರಾಮನ ಜನ್ಮವಾಗಿತ್ತು.

೫. ರಾಮಜನ್ಮದ ವಿವಿಧ ಕಾರಣಗಳು !

ಸೀತಾಹರಣವಾದ ನಂತರ ದಾರಿಯಲ್ಲಿ ಮಾತಾ ಶಬರಿಗೆ ರಾಮನ ಭೇಟಿಯಾಯಿತು. ಮಾತಾ ಶಬರಿಯೂ ಕಣ್ಣುಗಳಲ್ಲಿ ಪ್ರಾಣವನ್ನಿಟ್ಟುಕೊಂಡು ರಾಮನ ಭೇಟಿಗಾಗಿ ಕಾದು ಕುಳಿತಿದ್ದಳು. ಈ ಶಬರಿಯ ಭೇಟಿಗಾಗಿ ರಾಮನ ಜನ್ಮವಾಗಿತ್ತು. ಸುಗ್ರೀವನ ಭೇಟಿಯಾಯಿತು. ಹನುಮಂತನು ಲಂಕೆಗೆ ಹೋದನು. ಲಂಕಾದಹನ ಮಾಡಿ ಮಾತಾ ಸೀತೆಯನ್ನು ಭೇಟಿ ಮಾಡಿ ಹಿಂದಿರುಗಿದನು. ಬರುವಾಗ ರಾವಣನಿಗೆ ತನ್ನ ಇತಿಮಿತಿಗಳ ಅರಿವು ಮೂಡಿಸಿ ಹಿಂದಿರುಗಿ ಬಂದನು. ವಿಭೀಷಣನು ರಾಮನನ್ನು ಭೇಟಿಯಾದನು. ವಿಭೀಷಣನ ಭಕ್ತಿಗಾಗಿ ರಾಮಜನ್ಮವಾಗಿತ್ತು. ಭವ್ಯ ಸೇತುವೆಯನ್ನು ನಿರ್ಮಿಸಿ ರಾಮನು ಲಂಕೆಗೆ ಹೋದನು ಮತ್ತು ಭೀಕರ ಯುದ್ಧ ಮಾಡಿ ರಾವಣನನ್ನು ಕೊಂದನು. ಮಾತಾ ಸೀತೆ ಪುನಃ ಹಿಂದಿರುಗಿದಳು.

ರಾಮನು ರಾವಣನ ಸೆರೆಯಲ್ಲಿದ್ದ ದೇವತೆಗಳನ್ನು ಮುಕ್ತ ಮಾಡಿದನು. ಈ ದೇವತೆಗಳ ಮುಕ್ತಿಗಾಗಿ ರಾಮನ ಜನ್ಮವಾಗಿತ್ತು. ರಾಮನು ನಿರ್ಧರಿಸಿದ್ದರೆ ರಾವಣನನ್ನು ಕೊಲ್ಲಲು ಅಯೋಧ್ಯೆಯ ಸಹಾಯ ಪಡೆಯಬಹುದಿತ್ತು. ಬೇರೆ ಯಾವ ರಾಜನಾದರೂ ಸಹಾಯಕ್ಕೆ ಬರಬಹುದಿತ್ತು; ಆದರೆ ರಾಮನು ಯಾರ ಸಹಾಯ ಪಡೆಯದೇ, ವಾಲಿಯು ಸುಗ್ರೀವನಿಂದ ರಾಜ್ಯವನ್ನು ಕಿತ್ತುಕೊಂಡ ಆ ನಿಸ್ಸಹಾಯಕ ಸುಗ್ರೀವನ ಸಹಾಯ ಪಡೆದನು. ಅವನಿಗೆ ಅವನ ರಾಜ್ಯವನ್ನು ದೊರಕಿಸಿಕೊಟ್ಟನು ಮತ್ತು ನಂತರ ಅಸಾಧ್ಯವೆನಿಸಿದ ಕಾರ್ಯವನ್ನು ಅವನಿಂದ ಮಾಡಿಸಿಕೊಂಡನು. ಇದರಲ್ಲಿ ರಾಮನು ಸುಗ್ರೀವ, ಅಂಗದ, ಹನುಮಂತÀರಂತಹ ಅನೇಕ ನಾಯಕರನ್ನು ಸಿದ್ಧ ಮಾಡಿದನು. ಇದಕ್ಕಾಗಿ ರಾಮಜನ್ಮವಾಗಿತ್ತು. ಎಷ್ಟೇ ದೊಡ್ಡ ಸಂಕಟ ಬಂದರೂ ವಿಚಲಿತಗೊಳ್ಳದೇ ಆ ಪರಿಸ್ಥಿತಿಯಿಂದ ಹೊರಗೆ ಬರುವ ಮಾರ್ಗವನ್ನು ಕಂಡುಕೊಳ್ಳುವ ಆದರ್ಶಕ್ಕಾಗಿ ರಾಮಜನ್ಮವಾಗಿತ್ತು.

೬. ರಾಮರಾಜ್ಯ

ರಾಮರಾಜ್ಯ ಈ ಉಲ್ಲೇಖವನ್ನು ನಾವು ಸತತವಾಗಿ ಕೇಳುತ್ತೇವೆ. ಅದು ನಿಜವಾಗಿಯೂ ಹೇಗಿತ್ತು ? ಅಲ್ಲಿ ಜನರಿಗೆ ದೇವರ ಮೇಲೆ ಶ್ರದ್ಧೆ ಇತ್ತು. ಜನರು ತಮ್ಮ ಕೆಲಸದ ಬಗ್ಗೆ ಪ್ರಾಮಾಣಿಕರಾಗಿದ್ದರು. – ಕು. ಅನ್ನದಾ ವಿನಾಯಕ ಮರಾಠೆ ಅವರು ತಮ್ಮ ರಾಜ್ಯವನ್ನು ಪ್ರೀತಿಸುತ್ತಿದ್ದರು. ರಾಜ್ಯಕ್ಕಾಗಿ ಕ್ಷಮತೆ ಮೀರಿ ಪರಿಶ್ರಮ ಪಡುವ ಮತ್ತು ದೊಡ್ಡ ಬಲಿದಾನ ನೀಡುವ ಅವರ ಸಿದ್ಧತೆ ಇತ್ತು. ಇಂತಹ ರಾಜ್ಯವೆಂದರೆ ರಾಮರಾಜ್ಯ ! ಇದನ್ನು ನಿರ್ಮಿಸಲು ರಾಮನ ಜನ್ಮವಾಗಿತ್ತು. ರಾಮಾವತಾರದ ಹಿಂದೆ ಇಂತಹ ಅನೇಕ ಕಾರಣಗಳಿವೆ.

೭. ‘ಮನುಷ್ಯನು ಹೇಗೆ ಬದುಕಬೇಕು ?’, ಎಂಬುದನ್ನು ಹೇಳಲು ರಾಮನ ಜನ್ಮವಾಗಿತ್ತು !

ರಾವಣನು ಅಜೇಯನಾಗಿರಲಿಲ್ಲ. ಇದಕ್ಕೂ ಮೊದಲು ವಾಲಿ, ಸಹಸ್ರಾರ್ಜುನರು ಅವನನ್ನು ಸೋಲಿಸಿದ್ದರು. ಆದುದರಿಂದ ಕೇವಲ ರಾವಣನನ್ನು ವಧಿಸಲು ಶ್ರೀರಾಮನ ಜನ್ಮವಾಯಿತು ಎಂದು ಹೇಳುವುದು ತಪ್ಪಾಗುತ್ತದೆ. ಇತರ ಅನೇಕ ಮಹಾನ ಕಾರ್ಯಗಳನ್ನು ಅವನು ಈ ಅವತಾರದಲ್ಲಿ ಮಾಡಿದನು. ರಾಮನ ಸಂಪೂರ್ಣ ಜೀವನ ಆದರ್ಶವನ್ನು ಹಾಕಿಕೊಡುವುದಾಗಿತ್ತು. ಓರ್ವ ಆದರ್ಶ ಪುತ್ರ, ಪತಿ, ಸಹೋದರ, ರಾಜ, ಮಿತ್ರ ಹೀಗೆ ಜೀವನದಲ್ಲಿ ಪ್ರತಿಯೊಂದು ಸಂಬಂಧದ ಬಗೆಗಿನ ಆದರ್ಶವನ್ನು ರಾಮನು ಹಾಕಿಕೊಟ್ಟಿದ್ದಾನೆ. ಈ ಎಲ್ಲ ಪ್ರವಾಸವನ್ನು ಮನುಷ್ಯಜನ್ಮದ ಮಿತಿಯನ್ನು ಪಾಲಿಸಿ ಮಾಡಿದ್ದಾನೆ. ಓರ್ವ ಸಾಮಾನ್ಯ ರಾಜಪುತ್ರನಿಂದ ಮರ್ಯಾದಾಪುರುಷೋತ್ತಮನ ಈ ಪ್ರವಾಸ ತಿಳಿದುಕೊಂಡಷ್ಟು ಸುಲಭವಲ್ಲ. ಇದರಲ್ಲಿ ಅನೇಕ ಸಂಕಟಗಳು ಬಂದವು, ಅನೇಕ ಬಾರಿ ಭಾವನೆಗಿಂತ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಬೇಕಾಯಿತು. ಶ್ರೀರಾಮನು ಅದೆಲ್ಲವನ್ನೂ ಮಾಡಿದನು; ಏಕೆಂದರೆ ಮನುಷ್ಯನು ಹೇಗೆ ಬದುಕಬೇಕು ? ಎಂಬ ಆದರ್ಶವನ್ನು ಅವನಿಗೆ ಹಾಕಿ ಕೊಡುವುದಿತ್ತು ? ಇದನ್ನು ಅವನಿಗೆ ಹೇಳಬೇಕಿತ್ತು. ಬಹುಶಃ ಇದನ್ನು ಹೇಳಲೆಂದೇ ರಾಮನ ಜನ್ಮವಾಗಿತ್ತು.

– ಕು. ಅನ್ನದಾ ವಿನಾಯಕ ಮರಾಠೆ, ಚಿಪಳುಣ, ರತ್ನಾಗಿರಿ ಜಿಲ್ಲೆ. (೧೫.೧೨.೨೦೨೩)