ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಇವರ ಹತ್ಯೆಯ ತನಿಖೆಯನ್ನು ಸಿಬಿಐಗೆ ಏಕೆ ಮಾಡಬಾರದು ? – ಒಡಿಶಾ ಉಚ್ಚ ನ್ಯಾಯಾಲಯ

ಒಡಿಶಾ ಉಚ್ಚ ನ್ಯಾಯಾಲಯದಿಂದ ಒಡಿಶಾ ಸರಕಾರಕ್ಕೆ ನೋಟಿಸ್ ಜಾರಿ !

ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ

ಭುವನೇಶ್ವರ (ಒಡಿಶಾ) – ಒಡಿಶಾದ ಕಂಧಮಾಲ್‌ನಲ್ಲಿ ಆಗಸ್ಟ್ 23, 2008 ರಂದು ಮಾವೋವಾದಿಗಳು ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಮತ್ತು ಅವರ 4 ಶಿಷ್ಯರನ್ನು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಇದೀಗ ಒಡಿಶಾ ಹೈಕೋರ್ಟ್ ಈ ಹತ್ಯೆಯ ತನಿಖೆಯನ್ನು ಸಿಬಿಐಗೆ ಏಕೆ ನೀಡಬಾರದು ಎಂದು ಸರಕಾರವನ್ನು ಕೇಳಿದೆ ? ಇದಕ್ಕಾಗಿ ಮಾರ್ಚ್ 5, 2024ರ ಗಡುವು ನೀಡಲಾಗಿದೆ. ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರು ಕಂಧಮಾಲ್‌ನಲ್ಲಿ ಮತಾಂತರಗೊಂಡಿದ್ದ ಹಿಂದೂಗಳನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು ಸೇರಿದಂತೆ ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು.

ಸಂಪಾದಕರ ನಿಲುವು

* 2008ರಲ್ಲಿ ನಡೆದ ಕೊಲೆಯ ತನಿಖೆ 15 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಒಡಿಶಾದ ಬಿಜು ಜನತಾದಳ ಸರಕಾರಕ್ಕೆ ನಾಚಿಕೆಗೇಡು !