ಉತ್ತರಾಖಂಡದಲ್ಲಿ ‘ಲ್ಯಾಂಡ್‌ ಜಿಹಾದ್’ ಮೂಲಕ ಕಬಳಿಸಿದ್ದ ೫ ಸಾವಿರ ಎಕರೆ ಭೂಮಿ ಮುಕ್ತ !

ಭಾಜಪ ಸರಕಾರದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರಿಂದ ಮಾಹಿತಿ

ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ

ನವ ದೆಹಲಿ – ಉತ್ತರಾಖಂಡದಲ್ಲಿನ ೫ ಸಾವಿರ ಎಕರೆಗಿಂತಲೂ ಹೆಚ್ಚಿನ ಭೂಮಿಯನ್ನು ‘ಲ್ಯಾಂಡ್‌ ಜಿಹಾದ್’ ಮೂಲಕ ಕಬಳಿಸಲಾಗಿತ್ತು. ಈ ಎಲ್ಲಾ ಭೂಮಿಗಳನ್ನು ಸರಕಾರ ಮುಕ್ತಗೊಳಿಸಿದೆ. ಈಗಲೂ ಕೂಡ ಇದರ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ, ಎಂದು ಉತ್ತರಾಖಂಡದಲ್ಲಿನ ಭಾಜಪ ಸರಕಾರದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಇಲ್ಲಿ ಆಯೋಜಿಸಲಾದ ಒಂದು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಧಾಮಿ ಇವರು ಮಾತು ಮುಂದುವರೆಸಿ, ದೇವ ಭೂಮಿ ಉತ್ತರಾಖಂಡದಲ್ಲಿ ನಾವು ಅನೇಕ ಸವಾಲಾಗಿರುವಂತಹ ಕಾರ್ಯ ಗಳನ್ನು ಶ್ರೀ ರಾಮನ ಕೃಪೆಯಿಂದ ಪ್ರಯತ್ನ ಮಾಡುತ್ತಿದ್ದೇವೆ. ನಾವು ಕಠಿಣ ನಿರ್ಣಯ ತೆಗೆದುಕೊಂಡು ಅತಿಕ್ರಮಣವನ್ನು ತೆರವುಗೊಳಿಸಿದ್ದೇವೆ. ಇದರ ಮೂಲಕ ದೇವಭೂಮಿಯ ಮೂಲ ಸ್ವರೂಪ ಶಾಶ್ವತವಾಗಿ ಇಡುವುದಕ್ಕಾಗಿ ನಾವು ಎಲ್ಲಾ ರೀತಿಯಿಂದ ಪ್ರಯತ್ನಿಸುತ್ತಿದ್ದೇವೆ. ಮೇ ೨೦೨೩ ವರೆಗೆ ರಾಜ್ಯದಲ್ಲಿ ಲ್ಯಾಂಡ್‌ ಜಿಹಾದ್‌ ಮೂಲಕ ೩ ಸಾವಿರದ ೭೯೩ ಸ್ಥಳಗಳಲ್ಲಿ ಅತಿಕ್ರಮಣ ಮಾಡಲಾಗಿರುವ ಮಾಹಿತಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಮುಸಲ್ಮಾನರ ಕಾನೂನುಬಾಹಿರ ಗೋರಿಗಳ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿತ್ತು.

ಸಂಪಾದಕೀಯ ನಿಲುವು

ಉತ್ತರಾಖಂಡ ಸರಕಾರ ಹೀಗೆ ಮಾಡಬಹುದಾದರೆ ದೇಶದ ಇತರ ಸರಕಾರಗಳು ಏಕೆ ಮಾಡಲು ಸಾಧ್ಯವಿಲ್ಲ ? ದೇಶಾದ್ಯಂತ ಕೇಂದ್ರ ಸರಕಾರದ ಭೂಮಿಗಳ ಮೇಲೆ ಕೂಡ ಅತಿಕ್ರಮಣವಾಗಿದೆ, ಅವರು ಕೂಡ ಅದನ್ನು ಮುಕ್ತಗೊಳಿಸುವುದು ಆವಶ್ಯಕವಾಗಿದೆ !