SANATAN PRABHAT EXCLUSIVE : ಶ್ರೀ ವಿಠಲ-ರುಕ್ಮಿಣಿ ದೇವಸ್ಥಾನ ಸಮಿತಿಯ ಅವ್ಯವಸ್ಥೆಯ ಆಡಳಿತದ ಕುರಿತು ಕಾರ್ಯಕಾರಿ ಅಧಿಕಾರಿಗಳಿಂದ ಸ್ವೀಕೃತಿ !

  • ದೈನಿಕ ಸನಾತನ ಪ್ರಭಾತದಲ್ಲಿನ ವಾರ್ತೆಯ ಪರಿಣಾಮ !

  • ಪತ್ರಕರ್ತರ ಸಭೆಯಲ್ಲಿ ಅಪೂರ್ಣ ಮಾಹಿತಿ ನೀಡಿ ಪತ್ರಕರ್ತರ ದಾರಿ ತಪ್ಪಿಸಿದರು !

  • ಟ್ರಸ್ಟಿಗಳ ಜೊತೆ ಸಭೆ ನಡೆಸಿ ತಪ್ಪನ್ನು ತಿದ್ದಿಕೊಳ್ಳುವ ತಿಳುವಳಿಕೆ !

ಪಂಡರಪುರ – ಶ್ರೀ ವಿಠಲ-ರುಕ್ಮಿಣಿ ದೇವಸ್ಥಾನದ ಉಂಡೆ ಪ್ರಸಾದದಲ್ಲಿ ಹಗರಣ ನಡೆಸುವವರನ್ನು ರಕ್ಷಿಸುವುದು, ಭಕ್ತರಿಗಾಗಿ ಶೌಚಾಲಯ ಕಟ್ಟಲು ಆಗಿರುವ ವಿಳಂಬ ಮತ್ತು ಬಾಡಿಗೆಗಾಗಿ ದೇವಸ್ಥಾನದ ಲಕ್ಷಾಂತರ ರೂಪಾಯಿ ದುರುಪಯೋಗ ಹಾಗೂ ದೇವರ ಆಭರಣಗಳ ಲೆಕ್ಕಪತ್ರದಲ್ಲಿ ನೋಂದಣಿ ಮಾಡದೇ ಇರುವ ಅನುಮಾನಾಸ್ಪದ ಘಟನೆ, ಇದೆಲ್ಲವೂ ‘ದೈನಿಕ ಸನಾತನ ಪ್ರಭಾತ’ದಲ್ಲಿ ಬಹಿರಂಗಪಡಿಸಿದ ನಂತರ ಶ್ರೀವಿಠಲ ರುಕ್ಮಿಣಿ ಮಂದಿರ ಸಮಿತಿಯ ಕಾರ್ಯಕಾರಿ ಅಧಿಕಾರಿ ರಾಜೇಂದ್ರ ಶೇಳೆಕೆ ಇವರು ಪತ್ರಕರ್ತರ ಸಭೆಯಲ್ಲಿ ಅವ್ಯವಸ್ಥೆಯ ಆಡಳಿತವನ್ನು ಒಪ್ಪಿಕೊಂಡರು. ಎಲ್ಲಾ ವ್ಯವಹಾರಗಳಲ್ಲಿ ಸುಧಾರಣೆ ತರುವುದಕ್ಕಾಗಿ ಕಾರ್ಯಾಚರಣೆ ನಡೆಯುತ್ತಿರುವುದರ ಬಗ್ಗೆ ಶೇಳಕೆ ಇವರು ಪತ್ರಕರ್ತರ ಸಭೆಯಲ್ಲಿ ಹೇಳಿದರು.

ಆಭರಣಗಳನ್ನು ನೋಂದಣಿಯ ಬಗ್ಗೆ ಅಪೂರ್ಣ ಮಾಹಿತಿ ನೀಡಿ ಪತ್ರಕರ್ತರ ದಾರಿ ತಪ್ಪಿಸಿದರು !

ಈ ಸಮಯದಲ್ಲಿ ಕಾರ್ಯಕಾರಿ ಅಧಿಕಾರಿ ರಾಜೇಂದ್ರ ಶೇಳಕೆ ಇವರು, ‘ಯಾವುದೇ ಆಭರಣಗಳು ಕಾಣೆಆಗಿಲ್ಲ, ಅದರ ನೊಂದಣಿ ಇದೆ, ಆದರೆ ಲೆಕ್ಕಪತ್ರದಲ್ಲಿ ನೋಂದಣಿ ಆಗಿಲ್ಲ. ಅದಕ್ಕಾಗಿ ಮೌಲ್ಯಮಾಪನ ಮಾಡುವುದು ಅವಶ್ಯಕವಾಗಿದೆ. ಮೌಲ್ಯಮಾಪನಕ್ಕಾಗಿ ೨ ವರ್ಷಗಳ ಹಿಂದೆಯೇ ಪತ್ರ ನೀಡಲಾಗಿದೆ. ಕಳೆದ ವಾರದಲ್ಲಿ ಕೂಡ ಈ ವಿಷಯದ ಪತ್ರ ಸರಕಾರಕ್ಕೆ ಕಳುಹಿಸಲಾಗಿದೆ ಅದರ ಎಲ್ಲಾ ನೋಂದಣಿ ಕೂಡ ಇದೆ’, ಎಂದು ಅಪೂರ್ಣ ಮಾಹಿತಿ ನೀಡಿ ಪತ್ರಕರ್ತರ ದಾರಿತಪ್ಪಿಸಿದ್ದಾರೆ.
ಪ್ರತ್ಯಕ್ಷದಲ್ಲಿ ಆಯವ್ಯಯ ಪಟ್ಟಿ ತಯಾರಿಸುವುದಕ್ಕಾಗಿ ಮಂದಿರ ಸಮಿತಿಯಿಂದ ಕಳೆದ ೩೮ ವರ್ಷದಲ್ಲಿ ಸರಕಾರದ ಜೊತೆಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗಿಲ್ಲ. ೨೦೨೧-೨೨ ಲೇಖಪರಿಶೀಲನೆ ವರದಿ ಪ್ರಸ್ತುತಪಡಿಸಿದ ನಂತರ ತಮ್ಮ ತಪ್ಪನ್ನು ಮರೆಮಾಚುವುದಕ್ಕಾಗಿ ಮಂದಿರ ಸಮಿತಿಯು ಈ ಆಭರಣಗಳ ಮೌಲ್ಯಮಾಪನದ ಸಂದರ್ಭದಲ್ಲಿ ಸರಕಾರದ ಜೊತೆಗೆ ಪತ್ರ ವ್ಯವಹಾರ ಮಾಡಬೇಕಾಯಿತು; ಆದರೆ ಈ ಭಾಗ ಶೇಳಕೆ ಇವರು ಮರೆ ಮಾಚಿದರು.

ಕಾರಿಡಾರ್ ಕಾರ್ಯದಿಂದ ಶೌಚಾಲಯದ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಿದೆ ಎಂದು ಸುಳ್ಳು ಮಾಹಿತಿ !

ಕಾರಿಡಾರ್ ಕಾರ್ಯದಿಂದ ಭಕ್ತರಿಗಾಗಿ ಶೌಚಾಲಯ ನಿರ್ಮಾಣದ ಕಾರ್ಯ ವಿಳಂಬವಾಗಿದೆ ಎಂದು ರಾಜೇಂದ್ರ ಶೇಳೆಕೆ ಇವರು ಪತ್ರಕರ್ತರ ಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದರು. ೨೦೧೭ ರಲ್ಲಿ ಮಂದಿರ ಸಮಿತಿಯಿಂದ ರೈಲ್ವೆ ಇಲಾಖೆಯ ಜಾಗದಲ್ಲಿ ಭಕ್ತರಿಗಾಗಿ ಶೌಚಾಲಯ ಕಟ್ಟಿಸುವ ಒಪ್ಪಂದ ಮಾಡಿತ್ತು ಮತ್ತು ಮಂದಿರದ ಕಾರಿಡಾರ್ ವಿಷಯ ೨೦೧೯ – ೨೦೨೦ ರಲ್ಲಿ ಬಂದಿದೆ. ಶೌಚಾಲಯದ ಒಪ್ಪಂದ ೩೫ ವರ್ಷಗಳಿಗಾಗಿ ಮಾಡಲಾಗಿತ್ತು ಮತ್ತು ಅದಕ್ಕಾಗಿ ಮಂದಿರ ಸಮಿತಿಯಿಂದ ರೈಲ್ವೆ ಖಾತೆಗೆ ಒಂದು ಕೋಟಿ ೫೪ ಲಕ್ಷ ೪೬ ಸಾವಿರದ ೪೧ ರೂಪಾಯಿ ನೀಡುವುದಾಗಿ ನಿಶ್ಚಯಿಸಿತು. ಇದನ್ನು ಪ್ರತಿ ತಿಂಗಳಿಗೆ ೪ ಲಕ್ಷ ೪೧ ಸಾವಿರದ ೩೧೫ ರೂಪಾಯಿ ಮಂದಿರ ಸಮಿತಿ ರೈಲ್ವೆ ಖಾತೆಗೆ ನೀಡುತ್ತಿದೆ; ಆದರೆ ಒಪ್ಪಂದ ಮಾಡಿ ೪ ವರ್ಷಗಳಲ್ಲಿ ಶೌಚಾಲಯ ಕಟ್ಟದೇ ಇರುವುದರಿಂದ ರೈಲ್ವೆ ಖಾತೆಗೆ ಉಚಿತ ಹಣ ನೀಡಬೇಕಾಯಿತು. ಶೌಚಾಲಯ ಕಟ್ಟುವುದಕ್ಕಾಗಿ ಒಪ್ಪಂದ ಮಾಡಿದ ನಂತರ ಪ್ರತ್ಯಕ್ಷದಲ್ಲಿ ಶೌಚಾಲಯ ಕಟ್ಟಲು ಮೂರರಿಂದ ನಾಲ್ಕು ವರ್ಷ ವಿಳಂಬವಾಗಿರುವುದರಿಂದ ಮತ್ತು ಅದರ ಬಾಡಿಗೆ ನೀಡಬೇಕಾಗಿರುವುದು ರಾಜೇಂದ್ರ ಶೇಳಕೆ ಇವರು ಪತ್ರಕರ್ತರ ಸಭೆಯಲ್ಲಿ ಒಪ್ಪಿಕೊಂಡರು; ಆದರೆ ದೇವಸ್ಥಾನದ ಲಕ್ಷಾಂತರ ರೂಪಾಯಿ ನಷ್ಟ ಆಗಿರುವುದರ ಬಗ್ಗೆ ಏನು? ಈ ವಿಷಯದ ಬಗ್ಗೆ ಶೇಳಕೆ ಇವರು ಏನನ್ನು ಹೇಳಲಿಲ್ಲ.

‘ಉಂಡೆಯ ಗುಣಮಟ್ಟ ಕಾಪಾಡದೇ ಇರುವುದರ ಬಗ್ಗೆ ದೂರು ಏಕೆ ನೀಡಲಿಲ್ಲ ?’ ಇದರ ಉತ್ತರ ನೀಡಲೇ ಇಲ್ಲ !

ಪ್ರಸಾದಕ್ಕಾಗಿ ಮಾಡಲಾಗುವ ಉಂಡೆಯ ಗುಣಮಟ್ಟ ಕಾಪಾಡದೇ ಇರುವುದರ ಬಗ್ಗೆ ಕಾರ್ಯಕಾರಿ ಅಧಿಕಾರಿ ರಾಜೇಂದ್ರ ಶೇಳಕೆ ಇವರು ಪತ್ರಕರ್ತರ ಸಭೆಯಲ್ಲಿ ಒಪ್ಪಿಕೊಂಡರು. ಇದರ ಬಗ್ಗೆ ಉಪಾಯಯೋಜನೆ ಎಂದು ಈಗ ಉಂಡೆಗಳ ಗುಣಮಟ್ಟ ಪರಿಶೀಲಿಸಿ ಮಾಡಲಾಗುತ್ತಿದೆ ಎಂದು ಶೇಳಕೆ ಇವರು ತೋರಿಕೆಯ ಉತ್ತರ ನೀಡಿದರು. ಪ್ರತ್ಯಕ್ಷದಲ್ಲಿ ಯಾರಿಗೆ ಉಂಡೆಯ ಗುತ್ತಿಗೆ ನೀಡಲಾಗಿತ್ತು ಅವರು ಪ್ಯಾಕೆಟ್ ಮೇಲೆ ಕಡ್ಲೆ ಕಾಯಿ ಎಣ್ಣೆ ಇರುವುದಾಗಿ ಹೇಳಿ ‘ಹತ್ತಿ ಬೀಜದ ಎಣ್ಣೆ’ ಉಪಯೋಗಿಸಿದ್ದರು. ಅದರ ಜೊತೆಗೆ ಡ್ರೈ ಫ್ರೂಟ್ಸ್ ಇರುವುದಾಗಿ ಕವರ್ ಮೇಲೆ ನಮೂದಿಸಿ ಪ್ರತ್ಯಕ್ಷದಲ್ಲಿ ಅದನ್ನು ಉಂಡೆಯಲ್ಲಿ ಉಪಯೋಗಿಸಲಿಲ್ಲ. ಈ ಎಲ್ಲಾ ಘಟನೆಗಳು ಮಂದಿರ ಸಮಿತಿಯ ಅಕ್ಷಮ್ಯ ನಿರ್ಲಕ್ಷದಿಂದ ನಡೆದಿದೆ. ಉಂಡೆಯಲ್ಲಿ ಈ ರೀತಿ ಹಗರಣ ನಡೆಸಿರುವವರ ಮೇಲೆ ದೇವಸ್ಥಾನ ಸಮಿತಿ ಡಿಪಾಸಿಟ್ ವಶಪಡಿಸಿಕೊಳ್ಳುವ ತೋರಿಕೆಯ ಕ್ರಮ ಕೈಗೊಂಡಿದೆ; ಆದರೆ ಭಕ್ತರಿಗೆ ವಂಚನೆ ಮಾಡಿರುವವರ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿಲ್ಲ.

‘೨ – ೩ ದಿನದಲ್ಲಿ ಮುಂಬಯಿಗೆ ಹೋಗಿ ಸಚಿವರನ್ನು ಭೇಟಿ ಮಾಡುವರು ! (ಅಂತೆ)

ನಾವು ಬರುವ ಎರಡು ಮೂರು ದಿನಲ್ಲಿ ಮುಂಬಯಿಗೆ ಹೋಗಿ ನ್ಯಾಯ ವಿಭಾಗದ ಸಚಿವರನ್ನು ಭೇಟಿ ಮಾಡಿ ಲೇಕ್ಕ ಪರಿಶೀಲನೆಯಲ್ಲಿನ ಅಂಶಗಳ ಪ್ರಕಾರ ಕ್ರಮ ಕೈಗೊಳ್ಳುವೆವು. ೨೦೨೨-೨೩ ರ ಲೇಕ್ಕಪರಿಶೀಲನೆ ನಡೆಯುತ್ತಿದ್ದು ಅದರಲ್ಲಿ ಒಳ್ಳೆಯ ರೀತಿಯಲ್ಲಿ ಸುಧಾರಣೆ ಮಾಡುವೆವು ಎಂದು ಶೇಳಕೆ ಇವರು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಸ್ವೀಕೃತಿ ಬೇಡ ಬದಲಾಗಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಕ್ತರ ಬೇಡಿಕೆಯಾಗಿದೆ !

ಪತ್ರಕರ್ತರ ದಾರಿ ತಪ್ಪಿಸುವ ಅಧಿಕಾರಿಗಳು ಸಾಮಾನ್ಯ ಜನರ ಜೊತೆಗೆ ಹೇಗೆ ವರ್ತಿಸಬಹುದು ? ಇದರ ಯೋಚನೆ ಮಾಡದೆ ಇರುವುದೆ ಒಳಿತು ! ಇಂತಹವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು !