ಕೆನಡಾದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ಕುಖ್ಯಾತ ರೌಡಿ ಲಖಬಿರ ಸಿಂಹ ಲಾಂಡಾನನ್ನು ಭಯೋತ್ಪಾದಕನೆಂದು ಘೋಷಣೆ !

ನವ ದೆಹಲಿ – ಭಾರತ ಸರಕಾರರು ಕುಖ್ಯಾತ ರೌಡಿ ಲಖಮೀರ ಸಿಂಹ ಲಾಂಡಾನನ್ನು ‘ಭಯೋತ್ಪಾದಕ’ನೆಂದು ಘೋಷಿಸಿದೆ. ಪಂಜಾಬದ ಮೋಹಾಲಿ ಇಲ್ಲಿಯ ಪೊಲೀಸರ ಗುಪ್ತಚರ ಇಲಾಖೆಯ ಕಾರ್ಯಾಲಯದ ಮೇಲೆ ನಡೆದಿರುವ ದಾಳಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಲಾಂಡಾ ಈಗ ಕೆನಡಾದಲ್ಲಿ ವಾಸಿಸುತ್ತಿದ್ದು ಅಲ್ಲಿಂದ ಭಾರತದ ವಿರುದ್ಧ ಚಟುವಟಿಕೆ ನಡೆಸುತ್ತಿದ್ದಾನೆ. ಅವನು ‘ಬಬ್ಬರ ಖಾಲಸಾ’ ಈ ನಿಷೇಧಿತ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದಾನೆ. ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.) ಅವನ ವಿರುದ್ಧ ಅನೇಕ ದೂರುಗಳು ದಾಖಲಿಸಿವೆ. ಭಾರತ ಸರಕಾರ ಈಗ ಅವನನ್ನು ಕೆನಡಾದಿಂದ ಭಾರತಕ್ಕೆ ತರುವ ಪ್ರಯತ್ನ ಮಾಡುತ್ತಿದೆ.

ಲಾಂಡಾ ವಿರುದ್ಧ ಪಂಜಾಬದಲ್ಲಿನ ಭಯೋತ್ಪಾದಕ ಚಟುವಟಿಕೆ ನಡೆಸುವುದಕ್ಕಾಗಿ ಗಡಿಯಾಚೆಯಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳನ್ನು ಪೂರೈಸಿರುವ ಆರೋಪವಿದೆ. ಇದರ ಜೊತೆಗೆ ಹಣ ವಸೂಲಿ, ಹತ್ಯೆ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮುಂತಾದ ಅಪರಾಧಗಳಲ್ಲಿ ಕೂಡ ಅವನು ಸಹಭಾಗಿದ್ದಾನೆ.

ಸಂಪಾದಕೀಯ ನಿಲುವು

ಕೆನಡಾದಲ್ಲಿಯೇ ಖಲಿಸ್ತಾನಿ ಭಯೋತ್ಪಾದಕರು ವಾಸಿಸುತ್ತಾರೆ ಮತ್ತು ಕೆನಡಾ ಅವರಿಗೆ ರಕ್ಷಣೆ ನೀಡುತ್ತದೆ, ಇದನ್ನು ನೋಡಿದರೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಮಂಡಿಸಿ ಕೆನಡಾದ ಮೇಲೆ ಒತ್ತಡ ಹೇರಬೇಕು !