ಅಮೇರಿಕದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಮಹೋತ್ಸವದ ಆಚರಣೆ !

ಹಿಂದೂಗಳಿಂದ ವಾರವಿಡೀ ವಿವಿಧ ಕಾರ್ಯಕ್ರಮಗಳ ಆಯೋಜನೆ

ವಾಷಿಂಗ್ಟನ್ – ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭವನ್ನು ಅಮೆರಿಕದ ಹಿಂದೂ ಸಮುದಾಯವು ತುಂಬಾ ಎದುರು ನೋಡುತ್ತಿದೆ. ಇಲ್ಲಿನ ಹಿಂದೂ ಅಮೆರಿಕನ್ ಪ್ರಜೆಗಳು ಈ ಹಬ್ಬವನ್ನು ಆಚರಿಸಲು ಹಲವು ಯೋಜನೆಗಳನ್ನು ಮಾಡಿದ್ದಾರೆ. ಈ ಐತಿಹಾಸಿಕ ಘಟನೆಯನ್ನು ಅಮೆರಿಕದಾದ್ಯಂತ ಒಂದು ವಾರದವರೆಗೆ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ಇತ್ತೀಚಿಗೆ, ರಾಮ ಮಂದಿರದ ಉದ್ಘಾಟನೆಯನ್ನು ಆಚರಿಸಲು ಹಿಂದೂ ಸಮುದಾಯವು ಡಿಸೆಂಬರ್ 16 ರಂದು ವಾಷಿಂಗ್ಟನ್ ಡಿಸಿಯ ಉಪನಗರಗಳಲ್ಲಿ ವಾಹನ ಜಾಥಾವನ್ನು ಕೈಗೊಂಡಿತು. ವಿಶ್ವ ಹಿಂದೂ ಪರಿಷತ್ತಿನ ಅಮೇರಿಕಾದ ಶಾಖೆಯು ಸಮಾರಂಭದ ನೇತೃತ್ವ ವಹಿಸುತ್ತಿದೆ.

1. ‘ಹಿಂದೂ ಟೆಂಪಲ್ ಎಂಪಾವರಮೆಂಟ್ ಕೌನ್ಸಿಲ್’ನ ತೇಜಲ ಶಾ ಇವರು ಮಾತನಾಡಿ, “ನಾವು ಈ ಐತಿಹಾಸಿಕ ಘಟನೆಯ ಭಾಗವಾಗಿದ್ದೇವೆ, ಇದು ನಮ್ಮ ಭಾಗ್ಯ ಮತ್ತು ಶ್ರೀರಾಮನ ಆಶೀರ್ವಾದವಾಗಿದೆ. ಶತಮಾನಗಳಿದ ಕಾಯುತ್ತಿದ್ದ ಮತ್ತು ಹೋರಾಟದ ನಂತರ ನಮ್ಮ ಕನಸು ನನಸಾಗುತ್ತಿದೆ. ಅಮೆರಿಕ ಮತ್ತು ಕೆನಡಾದಲ್ಲಿರುವ ಪ್ರತಿಯೊಬ್ಬ ಹಿಂದುವೂ ಭಾವಪರವಶರಾಗಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಗೌರವದ ಭಾವನೆಗಳು ಇದೆ ಮತ್ತು ಭಗವಾನ್ ಶ್ರೀ ರಾಮಲಾಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭವನ್ನು ಎದುರು ನೋಡುತ್ತಿದ್ದಾರೆ. ಎಂದು ಹೇಳಿದರು.

2. ‘ಹಿಂದೂ ಟೆಂಪಲ್ ಎಂಪವರ್‌ಮೆಂಟ್ ಕೌನ್ಸಿಲ್’ ಇದು ಅಮೆರಿಕದ 1 ಸಾವಿರದ 100 ಹಿಂದೂ ದೇವಾಲಯಗಳ ಉನ್ನತ ಸಂಸ್ಥೆಯಾಗಿದೆ. ಭಾರತದಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಮಹೋತ್ಸವ ನಡೆಯುತ್ತಿರುವಾಗ, ಅಮೆರಿಕದ ಕಾಲಮಾನದ ಪ್ರಕಾರ ಜನವರಿ 21ರಂದು ರಾತ್ರಿ 11 ಗಂಟೆಗೆ ಆನ್‌ಲೈನ್‌ನಲ್ಲಿ ಈ ಸಮಾರಂಭದಲ್ಲಿ ಭಾಗವಹಿಸಲಿದ್ದೇವೆ ಎಂದು ಶಾ ಹೇಳಿದರು.