ತೆಲ್ ಅವಿವ್ (ಇಸ್ರೇಲ್) – ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ 80 ದಿನಗಳು ಕಳೆದರೂ ಹಮಾಸ್ನ ಉಗ್ರರು ಇನ್ನೂ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಅವರ ಕುಟುಂಬ ಇಸ್ರೇಲ್ ಸಂಸತ್ತಿನಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾಷಣದ ವೇಳೆ ಗಲಭೆ ಆರಂಭಿಸಿತು. ಈ ಸಮಯದಲ್ಲಿ, ನೆತನ್ಯಾಹು ಅವರು “ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಎಲ್ಲಾರೀತಿಯಲ್ಲೂ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.
ಸಂಸತ್ತಿನಲ್ಲಿ ಮಾತನಾಡಿದ ನೆತನ್ಯಾಹು, ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕಾರ್ಯಾಚರಣೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆ ವೇಳೆ ಸಂಸತ್ತಿನಲ್ಲಿದ್ದ ಅವರ ಸಂಬಂಧಿಕರು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಇಸ್ರೇಲ್ ಪ್ರಜೆಗಳು ಯುದ್ಧ ಆರಂಭವಾಗಿ 80 ದಿನಗಳಾಗಿವೆ ಎಂದು ಹೇಳಿದ್ದಾರೆ. ಪ್ರತಿಯೊಂದು ಕ್ಷಣವೂ ನಮಗೆ ನರಕವಾಗಿದೆ. ಸರಕಾರಿ ನಾಯಕರ ಮಕ್ಕಳ ಅಪಹರಣ ಆಗುತ್ತಿದ್ದರೆ ಇಷ್ಟು ದಿನ ಹಿಡಿಯುತ್ತಿತ್ತಾ ? ಎಂದು ಕೇಳಿದಾಗ ಪ್ರಧಾನಿಯು, ಒತ್ತೆಯಾಳುಗಳ ಬಿಡುಗಡೆಯಾಗುವ ತನಕ ನಿಟ್ಟುಸಿರು ಬಿಡಿವಿದಿಲ್ಲ ಎಂದು ಹೇಳಿದರು !
ಒಟ್ಟು 129 ಒತ್ತೆಯಾಳುಗಳಲ್ಲಿ 22 ಮಂದಿ ಹತ್ಯೆ !
ಅಕ್ಟೋಬರ್ 7, 2023 ರಂದು, ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ ಗಾಜಾದಲ್ಲಿ ಹಮಾಸ್ ಭಯೋತ್ಪಾದಕರು ಅನೇಕ ಜನರನ್ನು ಅಪಹರಿಸಿದ್ದರು. ಈ ಪೈಕಿ 129 ಮಂದಿ ಇನ್ನೂ ಅವರ ನಿಯಂತ್ರಣದಲ್ಲಿದ್ದು, 22 ಮಂದಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಉಳಿದ 107 ಮಂದಿ ಬಿಡುಗಡೆಗೆ ಕಾಯುತ್ತಿದ್ದಾರೆ.