ಸಾಧಕರ ಮನಸ್ಸಿನ ಸಂದೇಹಗಳನ್ನೆಲ್ಲ ಪೂರ್ಣ ಪರಿಹರಿಸಿ ಅಧ್ಯಾತ್ಮದ ಸಿದ್ಧಾಂತಗಳನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಮಂಡಿಸಿ, ಸಾಧಕರನ್ನು ಸಾಧನೆಯಲ್ಲಿ ಮುಂದೆ ಕರೆದೊಯ್ಯುವ ಅದ್ವಿತೀಯ ಮಹಾನ ಸತ್ಪುರುಷ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ವಾಂದ್ರೆ, ಮುಂಬಯಿಯಲ್ಲಿ ‘ಉತ್ತಮ ಸಾಧಕನಾಗುವುದು ಹೇಗೆ ?’ ಇದಕ್ಕೆ ಸಂಬಂಧಿಸಿದಂತೆ ಅಭ್ಯಾಸವರ್ಗದಲ್ಲಿ ತಾತ್ತ್ವಿಕ ಭಾಗವನ್ನು ಕಲಿಸುತ್ತಿರುವ ಪರಾತ್ಪರ ಗುರು ಡಾ. ಆಠವಲೆಯವರು (ವರ್ಷ ೧೯೯೩)

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ

‘ಪರಾತ್ಪರ ಗುರು ಡಾ. ಆಠವಲೆಯವರು ಜಿಜ್ಞಾಸುಗಳಿಗೆ ‘ಸಾಧನೆ ಯನ್ನು ಏಕೆ ಮಾಡಬೇಕು, ಯಾವುದು ಮಾಡಬೇಕು ಮತ್ತು ಹೇಗೆ ಮಾಡಬೇಕು ?’, ಎಂದು ಹೇಳಿ ಅವುಗಳ ಹಿಂದಿನ ಶಾಸ್ತ್ರ ಸಹ ತಿಳಿಸಿದರು. ಜಿಜ್ಞಾಸುಗಳ ಮನಸ್ಸಿನಲ್ಲಿನ ಸಂದೇಹಗಳೆಲ್ಲ ಸಂಪೂರ್ಣ ಪರಿಹಾರವಾದುದರಿಂದ ಜಿಜ್ಞಾಸುಗಳು ಸಾಧನೆ ಮಾಡಲು ಉದ್ಯುಕ್ತರಾದರು. ಜಿಜ್ಞಾಸುಗಳು ಸಾಧನೆಯನ್ನು ಮಾಡತೊಡಗಿದಾಗ ಅವರಿಗೆ ಅನುಭೂತಿ ಬಂದು ಆನಂದ ಸಿಗತೊಡಗಿತು. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಕಾಲಾನುಸಾರ ‘ವ್ಯಷ್ಟಿ ಸಾಧನೆಯೊಂದಿಗೆ (ವೈಯಕ್ತಿಕ ಸಾಧನೆಯೊಂದಿಗೆ) ಸಮಷ್ಟಿ ಸಾಧನೆಯ (ಸಮಾಜದಲ್ಲಿ ಅಧ್ಯಾತ್ಮಪ್ರಸಾರ ಮಾಡಿ ಸಮಾಜವನ್ನು ಸಾಧನೆ ಮಾಡಲು ಉದ್ಯುಕ್ತಗೊಳಿಸುವುದು) ಮಹತ್ವವನ್ನು ಕಲಿಸಿದರು. ಅವರು ತಮ್ಮ ಕೃತಿಗಳ ಮೂಲಕ ಸಾಧಕರಿಗೆ ಅನೇಕ ಗುಣಗಳನ್ನು ಅಳವಡಿಸಿಕೊಳ್ಳಲು ಕಲಿಸಿದರು. ಅದರೊಂದಿಗೆ ‘ಸ್ವಭಾವದೋಷ ಮತ್ತು ಅಹಂ’ ಇವುಗಳು ಸಾಧನೆಯ ಮುಖ್ಯ ಅಡಚಣೆಯಾಗಿವೆ, ಎಂದು ಅರಿವು ಮಾಡಿಕೊಟ್ಟು ಅವುಗಳನ್ನು ದೂರಗೊಳಿಸುವ ಮಾರ್ಗವನ್ನೂ ತೋರಿಸಿದರು. ಇದರಿಂದ ಸನಾತನದ ಸಾಧಕರು ಬಹಳ ಶೀಘ್ರ ಗತಿಯಲ್ಲಿ ಸಾಧನೆಯಲ್ಲಿ ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಈ ಸಾಧನಾಮಾರ್ಗದಲ್ಲಿ ಮಾರ್ಗ ಕ್ರಮಿಸುತ್ತಿರುವಾಗ ಅನೇಕ ಸಾಧಕರಿಗೆ ಗುರುದೇವರ ದಿವ್ಯತ್ವ ಮತ್ತು ದೇವತ್ವದ ಅನುಭೂತಿಗಳು ಬಂದಿವೆ, ಆದರೂ ಮೊದಲಿನಿಂದಲೇ ಗುರುದೇವರು ಎಂದಿಗೂ ತಮ್ಮ ದೊಡ್ಡಸ್ತಿಕೆಯನ್ನು ಸ್ಥಾಪಿಸಲು ಪ್ರಯತ್ನಿಸಲಿಲ್ಲ. ಎಲ್ಲವನ್ನೂ ತಾವೇ ಮಾಡಿ ಏನೂ ಮಾಡಿಲ್ಲ ಎಂಬಂತೆ ಇರುವ ಗುರುದೇವರು ಎಲ್ಲ ಬಗೆಯಿಂದಲೂ ಏಕಮೇವಾದ್ವಿತೀಯರಾಗಿದ್ದಾರೆ. ‘ಅವರು ನಮಗೆ ಗುರು ಎಂದು ಲಭಿಸಿರುವುದು’, ನಮ್ಮ ಅಹೋಭಾಗ್ಯವಾಗಿದೆ ! ಅವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವಾಗ ಅವರು ನನ್ನನ್ನು ಹೇಗೆ ಸಿದ್ಧಮಾಡಿದರು ಮತ್ತು ನನ್ನ ಪ್ರಗತಿಯನ್ನು ಹೇಗೆ ಮಾಡಿಸಿಕೊಂಡರು ? ಎಂಬುದನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ತಮ್ಮ ಸ್ಥೂಲ ರೂಪದಲ್ಲಿ ಸಿಲುಕಲು ಬಿಡಲಿಲ್ಲ

೧ ಅ. ಪರಾತ್ಪರ ಗುರು ಡಾ. ಆಠವಲೆಯವರ ಸಾರ್ವಜನಿಕ ಸಭೆಯ ಭಿತ್ತಿಪತ್ರಗಳ ಮೇಲೆ ಅವರ ಛಾಯಾಚಿತ್ರ ಇಲ್ಲದಿರುವುದು : ‘ಮೇ ೧೯೯೮ ರಲ್ಲಿ ಠಾಣೆಯಲ್ಲಿ ಪರಾತ್ಪರ ಗುರು ಡಾಕ್ಟರರ ಒಂದು ಸಾರ್ವಜನಿಕ ಸಭೆ ನಡೆಯಲಿತ್ತು. ಅದರ ಭಿತ್ತಿಪತ್ರಗಳನ್ನು ಅನೇಕ ಸ್ಥಳಗಳಲ್ಲಿ ಅಂಟಿಸಲಾಗಿತ್ತು; ಆದರೆ ಒಂದೇ ಒಂದು ಭಿತ್ತಿಪತ್ರದ ಮೇಲೆ ಪ.ಪೂ. ಡಾಕ್ಟರರ ಛಾಯಾಚಿತ್ರವಿರಲಿಲ್ಲ. ಭಿತ್ತಿಪತ್ರದ ಮೇಲೆ ಭಗವಾನ ಪರಶುರಾಮರ ಚಿತ್ರವಿತ್ತು ಮತ್ತು ಭಗವಾನ ಪರಶುರಾಮರನ್ನು ವರ್ಣಿಸುವ ಶ್ಲೋಕವಿತ್ತು. ಅದನ್ನು ನೋಡಿ ನನ್ನ ಮನಸ್ಸಿನಲ್ಲಿ ಬಹಳ ಕುತೂಹಲ ಜಾಗೃತವಾಯಿತು; ಏಕೆಂದರೆ ಬಹುತೇಕ ಸಭೆಗಳ ಭಿತ್ತಿಪತ್ರಗಳ ಮೇಲೆ ಮುಖ್ಯ ವಕ್ತಾರರ ಅಥವಾ ಸಂತರ ಛಾಯಾಚಿತ್ರ ಇದ್ದೇ ಇರುತ್ತದೆ.

೧ ಆ. ಸನಾತನದ ಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರ ಇಲ್ಲದಿರುವುದು : ಅನಂತರ ಒಂದು ಸಲ ಒಂದು ವರ್ತಮಾನ ಪತ್ರಿಕೆಯಲ್ಲಿ ಸನಾತನದ ಸತ್ಸಂಗಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಅದನ್ನು ನೋಡಿ ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಜಾಹೀರ ಸಭೆಯ ಭಿತ್ತಿಪತ್ರಗಳ ನೆನಪಾಯಿತು. ನನ್ನ ಮನಸ್ಸಿನಲ್ಲಿ ಪುನಃ ಅವರ ಬಗ್ಗೆ ಕುತೂಹಲ ಜಾಗೃತವಾಯಿತು ಮತ್ತು ಜೂನ್‌ ೧೯೯೮ ರಿಂದ ನಾನು ಸನಾತನ ಸಂಸ್ಥೆಯ ಸತ್ಸಂಗಗಳಿಗೆ ಹೋಗತೊಡಗಿದೆನು. ಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರ ಇಡುತ್ತಿರಲಿಲ್ಲ ಅಥವಾ ಅವರ ಹೆಸರಿನ ಜಪ ಅಥವಾ ಆರತಿ ಮಾಡಲು ಹೇಳುತ್ತಿರಲಿಲ್ಲ.

೧ ಇ. ಪರಾತ್ಪರ ಗುರು ಡಾ. ಆಠವಲೆಯವರು ಜಿಜ್ಞಾಸು ಗಳನ್ನು ತಮ್ಮಲ್ಲಿ ಸಿಲುಕಿಸದೇ ತತ್ತ್ವನಿಷ್ಠರಾಗಿರಿಸಿ ಸಾಧನೆ ಮಾಡಲು ಕಲಿಸುವುದು : ನಾನು ಸನಾತನ ಸಂಸ್ಥೆಯು ಹೇಳಿದ ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡತೊಡಗಿದಾಗ ಕೆಲವು ವರ್ಷ ಗಳ ನಂತರ ಮೇಲಿನ ಎರಡೂ ಅಂಶಗಳು ನೆನಪಾಗಿ, ‘ಆರಂಭದಿಂದಲೇ ಗುರುದೇವರು ತಮ್ಮ ಆದರ್ಶ ವರ್ತನೆಯಿಂದ ತಮ್ಮ ಮಹತ್ವವನ್ನು ಬೆಳೆಸದೇ ಮತ್ತು ಜಿಜ್ಞಾಸುಗಳನ್ನು ತಮ್ಮಲ್ಲಿ ಸಿಲುಕಲು ಬಿಡದೇ ತತ್ತ್ವನಿಷ್ಠರಾಗಿದ್ದು ಸಾಧನೆಯನ್ನು ಮಾಡಲು ಕಲಿಸಿದರು’, ಎಂಬುದು ನನ್ನ ಗಮನಕ್ಕೆ ಬಂದಿತು. ಇದರಿಂದ ಮುಂದೆ ನನಗೆ ಸಾಧನೆಯಲ್ಲಿ ಬಹಳ ಲಾಭವಾಯಿತು. ಅನೇಕ ಸಂಪ್ರದಾಯಗಳಲ್ಲಿನ ಸಾಧಕರು ತಮ್ಮ ಗುರು ಅಥವಾ ಸಂತರ ಸ್ಥೂಲ ರೂಪದಲ್ಲಿ ಸಿಲುಕುತ್ತಾರೆ. ಆದುದರಿಂದ ಅವರ ಮುಂದಿನ ಪ್ರಗತಿ ವೇಗದಿಂದ ಆಗುವುದಿಲ್ಲ.

೧ ಈ. ಪರಾತ್ಪರ ಗುರು ಡಾ. ಆಠವಲೆಯವರು ಜಿಜ್ಞಾಸುಗಳಿಗೆ ಸತ್ಸಂಗ ತೆಗೆದುಕೊಳ್ಳುವ ಸಾಧಕ ರಲ್ಲಿಯೂ ಸಿಲುಕಲು ಬಿಡದಿರುವುದು : ಸತ್ಸಂಗ ತೆಗೆದುಕೊಳ್ಳುವ ಸಾಧಕರು ಸ್ವಲ್ಪ ಕಾಲಾವಧಿಯ ನಂತರ ಬದಲಾಗುತ್ತಿದ್ದರು. ಹೊಸ ಸಾಧಕರಿಗೆ ಸತ್ಸಂಗ ತೆಗೆದುಕೊಳ್ಳಲು ಅವಕಾಶ ಸಿಗುತ್ತಿತ್ತು. ಯಾವುದೇ ಸಾಧಕ ಸತ್ಸಂಗ ತೆಗೆದುಕೊಳ್ಳುತ್ತಿದ್ದರೂ, ಎಲ್ಲರ ಸತ್ಸಂಗ ತೆಗೆದುಕೊಳ್ಳುವ ಪದ್ಧತಿ ಒಂದೇ ರೀತಿಯದ್ದಾಗಿತ್ತು. ಆದುದರಿಂದ ಯಾರೂ ಸತ್ಸಂಗ ತೆಗೆದುಕೊಳ್ಳುವ ಸಾಧಕರಲ್ಲಿ, ಅಂದರೆ ಯಾವುದೇ ವ್ಯಕ್ತಿಯಲ್ಲಿ ಸಿಲುಕಲಿಲ್ಲ.

೨. ‘ಯೋಗಃ ಕರ್ಮಸು ಕೌಶಲಮ್‌ |’, ಇದಕ್ಕನುಸಾರ ಪ್ರತಿಯೊಂದು ಕೃತಿಯನ್ನು ತಪ್ಪಿಲ್ಲದೇ ಮತ್ತು ಪರಿಪೂರ್ಣ ಮಾಡಲು ಕೃತಿಯ ಮೂಲಕ ಕಲಿಸುವುದು: ಆರಂಭದ ಕಾಲದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಸ್ವತಃ ಜಿಜ್ಞಾಸುಗಳಿಗಾಗಿ ಅಧ್ಯಾತ್ಮದ ಅಭ್ಯಾಸವರ್ಗಗಳನ್ನು ತೆಗೆದುಕೊಳ್ಳುತ್ತಿದ್ದರು.

೨ ಅ. ವ್ಯವಸ್ಥಿತವಾಗಿ ಸತ್ಸಂಗದ ಪೂರ್ವಸಿದ್ಧತೆಯನ್ನು ಮಾಡಲಾಗುತ್ತಿತ್ತು ಮತ್ತು ಸತ್ಸಂಗದ ನಂತರ ಪುನಃ ಎಲ್ಲವನ್ನೂ ಸ್ವಚ್ಛ ಮಾಡಿಡಲಾಗುತ್ತಿತ್ತು : ಸತ್ಸಂಗ ಯಾವಾಗಲೂ ಸರಿಯಾದ ಸಮಯಕ್ಕೆ ಆರಂಭವಾಗುತ್ತಿತ್ತು ಮತ್ತು ಸಮಯಕ್ಕೆ ಸರಿಯಾಗಿ ಮುಗಿಸುವ ಪ್ರಯತ್ನವಾಗುತ್ತಿತ್ತು. ಸತ್ಸಂಗ ತೆಗೆದುಕೊಳ್ಳುವ ಅಥವಾ ಆರಂಭದಿಂದಲೂ ಸತ್ಸಂಗಕ್ಕೆ ಬರುವ ಸಾಧಕರು, ಸತ್ಸಂಗ ಆರಂಭವಾಗುವ ಸ್ವಲ್ಪ ಸಮಯ ಮೊದಲೇ ಬಂದು ಸತ್ಸಂಗ ನಡೆಯುವ ಜಾಗದ ಸ್ವಚ್ಛತೆಯನ್ನು ಮಾಡುತ್ತಿದ್ದರು. ಸತ್ಸಂಗಕ್ಕೆ ಬರುವವರಿಗಾಗಿ ಜಮಖಾನೆಯನ್ನು ಹಾಸಿ ಸತ್ಸಂಗದ ಬಟ್ಟೆಯ ಫಲಕವನ್ನು ಹಾಕುತ್ತಿದ್ದರು ಮತ್ತು ಸತ್ಸಂಗ ಮುಗಿದ ನಂತರ ಎಲ್ಲವನ್ನೂ ಸರಿ ಮಾಡಿ ಹೋಗುತ್ತಿದ್ದರು.

೨ ಆ. ಪ್ರತಿಯೊಂದು ಕೃತಿಯನ್ನು ಪರಿಪೂರ್ಣ ಮಾಡುವುದು : ಸತ್ಸಂಗದ ‘ಬಟ್ಟೆಯ ಫಲಕವನ್ನು ಅಂಕುಡೊಂಕಾಗಿ ಹಚ್ಚಿದರು’, ಹೀಗೆ ಎಂದಿಗೂ ಆಗುತ್ತಿರಲಿಲ್ಲ. ‘ಫಲಕ’ವನ್ನು ಹಾಕುವವರು ಫಲಕವನ್ನು ಹಾಕುವಾಗ ‘ಫಲಕವನ್ನು ಸರಿಯಾಗಿ ಹಾಕಲಾಗಿದೆಯೇ ?’, ಎಂದು ಇತರರಲ್ಲಿ ಕೇಳು ತ್ತಿದ್ದರು. ಜಮಖಾನೆಗಳನ್ನೂ ನೀಟಾಗಿ ಮತ್ತು ವ್ಯವಸ್ಥಿತವಾಗಿ ಹಾಸಲಾಗುತ್ತಿತ್ತು. ಬಂದ ಜಿಜ್ಞಾಸುಗಳನ್ನೂ ಸಾಲಿನಲ್ಲಿ ವ್ಯವಸ್ಥಿತವಾಗಿ ಕುಳ್ಳಿರಿಸಲಾಗುತ್ತಿತ್ತು. ಇದೆಲ್ಲವೂ ‘ಯೋಗಃ ಕರ್ಮಸು ಕೌಶಲಮ್‌ |’ (ಶ್ರೀಮದ್ಭಗವದ್ಗೀತೆ, ಅಧ್ಯಾಯ ೨, ಶ್ಲೋಕ ೫೦), ಅಂದರೆ ‘ಪ್ರತಿಯೊಂದು ಕರ್ಮವನ್ನು ಚೆನ್ನಾಗಿ ಮಾಡುವುದೇ ಯೋಗ’, ಈ ತತ್ತ್ವಕ್ಕನುಸಾರ ಆಗುತ್ತಿತ್ತು.

೨ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕೃತಿಯನ್ನು ಪರಿಪೂರ್ಣ ಮಾಡಲು ಕಲಿಸುವುದು : ಪ.ಪೂ. ಡಾಕ್ಟರರು ಸಾಧನೆಯೆಂದು ಕಲಿಸಿದ ಶಿಸ್ತಿನಿಂದ ಸಾಧಕರ ಮೇಲೆ ಪರೋಕ್ಷವಾಗಿ ಒಳ್ಳೆಯ ಪರಿಣಾಮ ಆಯಿತು. – (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ. ‘ಪ್ರತಿಯೊಂದು ವಿಷಯವನ್ನು ಹೇಗೆ ಪರಿಪೂರ್ಣ ಮಾಡ ಬೇಕು ?’, ಎಂದು ತನ್ನಿಂದತಾನೇ ನನಗೆ ಕಲಿಯಲು ಸಿಕ್ಕಿತು.

೩. ಸತ್ಸಂಗಕ್ಕೆ ಬರುವ ಜಿಜ್ಞಾಸುಗಳಿಗೆ ‘ಯಾವ ಮಾರ್ಗದಿಂದ ಸಾಧನೆಯನ್ನು ಮಾಡಿದರೆ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ ?’, ಎಂದು ತಿಳಿಸಿ ಹೇಳಿದುದರಿಂದ ಮನಸ್ಸಿನ ಸಂಘರ್ಷವಿಲ್ಲದೇ ಅವರು ಗುರುಕೃಪಾಯೋಗಾನುಸಾರ ಸಾಧನೆಯನ್ನು ಆರಂಭಿಸುವುದು : ಸತ್ಸಂಗಕ್ಕೆ ಬರುವ ಮೊದಲು ಜಿಜ್ಞಾಸುಗಳು ಏನಾದರೊಂದು ಉಪಾಸನೆಯನ್ನು ಮಾಡುತ್ತಿದ್ದರು, ಉದಾ. ವಿವಿಧ ಸಂಪ್ರದಾಯಗಳಿಗನುಸಾರ ಸಾಧನೆ ಮಾಡುವುದು, ಧ್ಯಾನ ಮಾಡುವುದು, ಕರ್ಮಕಾಂಡಕ್ಕನುಸಾರ ಪೂಜೆ-ಅರ್ಚನೆ ಮುಂತಾದವುಗಳನ್ನು ಮಾಡುವುದು ಇತ್ಯಾದಿ. ಸತ್ಸಂಗದಲ್ಲಿ ಸನಾತನ ಸಂಸ್ಥೆಯು ಹೇಳಿದ ಗುರುಕೃಪಾಯೋಗಾನುಸಾರ ಸಾಧನೆಯನ್ನು ಹೇಳಿದ ನಂತರ ಜಿಜ್ಞಾಸುಗಳ ಮನಸ್ಸಿನಲ್ಲಿ ‘ಈಗ ನಾವು ಮೊದಲು ಮಾಡುತ್ತಿದ್ದ ಸಾಧನೆಯನ್ನು ಬಿಟ್ಟು ಸನಾತನವು ಹೇಳಿದ ಸಾಧನೆಯನ್ನು ಆರಂಭಿಸಿದರೆ ‘ಅದು ಯೋಗ್ಯವಾಗಬಹುದೇ ?’, ಎಂಬ ಪ್ರಶ್ನೆ ಮೂಡುತ್ತಿತ್ತು. ಆಗ ಸತ್ಸಂಗಸೇವಕರು ಜಿಜ್ಞಾಸುಗಳಿಗೆ ವಿವಿಧ ಸಾಧನಾಮಾರ್ಗಗಳ ತುಲನಾತ್ಮಕ ಅಭ್ಯಾಸವನ್ನು ಹೇಳುತ್ತಿದ್ದರು, ಹಾಗೆಯೇ ಕರ್ಮಕಾಂಡ ಮತ್ತು ಉಪಾಸನಾಕಾಂಡಗಳಲ್ಲಿನ ವ್ಯತ್ಯಾಸವನ್ನು ತಿಳಿಸಿ ಹೇಳುತ್ತಿದ್ದರು. ಅವರು ‘ಯಾವ ಮಾರ್ಗದಿಂದ ಸಾಧನೆ ಮಾಡಿದರೆ ನಾವು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಬಹುದು ?’, ಎಂಬುದರ ಅಭ್ಯಾಸಪೂರ್ಣ ವಿಮರ್ಶೆಯನ್ನು ಮಾಡುತ್ತಿದ್ದರು. ಇದರಿಂದ ಜಿಜ್ಞಾಸುಗಳ ಸಂದೇಹಗಳ ನಿವಾರಣೆಯಾಗಿ ಯಾವುದೇ ಸಂಘರ್ಷ ವಾಗದೇ ಅವರಿಂದ ಗುರುಕೃಪಾಯೋಗಾನುಸಾರ ಸಾಧನೆಯು ಆರಂಭವಾಗುತ್ತಿತ್ತು. ಪರಾತ್ಪರ ಗುರು ಡಾ. ಆಠವಲೆಯವರು ಈ ವಿಷಯವನ್ನು ಸಾಧಕರಿಗೆ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಈ ಗ್ರಂಥದಲ್ಲಿ ಲಭ್ಯ ಮಾಡಿಕೊಟ್ಟಿದ್ದಾರೆ.’

– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೬.೧೨.೨೦೨೨)

(ಮುಂದುವರಿಯುವುದು)