೧. ಸಮಾಜದ ಅನೇಕ ಆಸ್ತಿಕ ಶ್ರದ್ಧಾವಂತ ಗುಂಪು ದೇವಸ್ಥಾನಕ್ಕೆ ಹೋಗುವಾಗ ಮೊದಲು ಅಕ್ಕಪಕ್ಕ ನೋಡುತ್ತಾರೆ, ‘ತಮ್ಮನ್ನು ಯಾರೂ ನೋಡುತ್ತಿಲ್ಲವಲ್ಲ ?’ ,ಎಂದು ದೃಢಪಡಿಸಿಕೊಂಡು ನಂತರ ದೇವಸ್ಥಾನಕ್ಕೆ ಹೋಗುತ್ತಾರೆ.
೨. ಅನೇಕ ಜನರು ಪೂಜೆ ಮಾಡುವಾಗ ಹಣೆಗೆ ಗಂಧ ಅಥವಾ ಕುಂಕುಮ ತಿಲಕ ಅಥವಾ ಭಸ್ಮವನ್ನು ಹಚ್ಚಿಕೊಳ್ಳುತ್ತಾರೆ ಮತ್ತು ಅವರು ಹೊರಗೆ ಹೋಗುವಾಗ ಅದನ್ನು ಸರಿಯಾಗಿ ಒರೆಸಿಕೊಂಡು ಹೊರಗೆ ಬೀಳುತ್ತಾರೆ.
೩. ಯಾವುದಾದರೂ ಅನುಷ್ಠಾನ, ಪೂಜೆ, ಜಪ, ಯಜ್ಞಯಾಗಗಳನ್ನು ಮಾಡುತ್ತಾರೆ; ಆದರೆ ಅದು ಬಹಿರಂಗವಾಗದಂತೆ ಪೂರ್ಣ ಕಾಳಜಿಯನ್ನು ವಹಿಸುತ್ತಾರೆ.
೪. ಯಾವುದೇ ಕರ್ಮವನ್ನು ಮಾಡುವ ಮೊದಲು ಜನಿವಾರವನ್ನು (ಯಜ್ಞೋಪವೀತ) ಹಾಕಿಕೊಳ್ಳುತ್ತಾರೆ ಮತ್ತು ಕರ್ಮ ಮುಗಿದ ಕೂಡಲೇ ಆ ಜನಿವಾರವನ್ನು ಮರೆಯದೇ ತೆಗೆದು ಬಿಡುತ್ತಾರೆ ಮತ್ತು ನಂತರ ಕೆಲಸಕ್ಕೆ ಹೋಗುತ್ತಾರೆ.
೫. ಮನೆಯಲ್ಲಿ ಶ್ರದ್ಧಾವಂತನಾಗಿರುವ, ಧರ್ಮಕಾರ್ಯಗಳನ್ನು ಮಾಡುವವನು ಹೊರಗೆ ಮಾತ್ರ ಸ್ನೇಹಿತರಲ್ಲಿ ‘ತಾನೇನು ಬಹಳ ದೇವರುದಿಂಡರು ಮಾಡುವುದಿಲ್ಲ. ಕೆಲಸವೇ ತನ್ನ ದೇವರು’, ಎಂದು ಹಸಿ ಸುಳ್ಳು ಹೇಳುತ್ತಾನೆ.
೬. ಯಾವುದೇ ಆಸ್ತಿಕ ಶ್ರದ್ಧೆಯುಳ್ಳ ಮನುಷ್ಯನು ಮನೆಯಲ್ಲಿ ಮಾಡುತ್ತಿರುವ ಪೂಜೆ, ಯಜ್ಞ, ಕುಲಾಚಾರ ಇತ್ಯಾದಿಗಳ ಚಿತ್ರಗಳನ್ನು ‘ಸೋಶಿಯಲ್ ಮೀಡಿಯಾ’ದಲ್ಲಿ (ಸಾಮಾಜಿಕ ಮಾಧ್ಯಮದಲ್ಲಿ) ಪ್ರಸಾರ ಮಾಡಿದರೆ, ‘ದೇವರು ಧರ್ಮಕಾರ್ಯಗಳನ್ನು ತನ್ನ ಮಟ್ಟಿಗೆ ಮಾಡಬೇಕು, ಜಗತ್ತಿಗೇಕೆ ತೋರಿಸಬೇಕು ?’, ‘ನಮಗೆ ಈ ದೊಡ್ಡಸ್ತಿಕೆ ಒಪ್ಪಿಗೆಯಿಲ್ಲ. ಇಂತಹುದನ್ನು ಪ್ರದರ್ಶನ ಮಾಡುವುದಕ್ಕಿಂತ ದೇವರು ಧರ್ಮವನ್ನು ಮಾಡದೇ ಇರುವುದೇ ಒಳ್ಳೆಯದು’, ಎನ್ನುವ ತತ್ತ್ವಜ್ಞಾನವನ್ನು ಮಂಡಿಸುತ್ತಾರೆ.
ಆಸ್ತಿಕರು ತಮ್ಮ ಆಸ್ತಿಕತೆಯನ್ನು ತೋರಿಸಿದರೆ ತಪ್ಪೇನು ?
ನಮ್ಮ ಸುತ್ತಲೂ ಇಂತಹ ಅನೇಕ ಆಸ್ತಿಕ ಶ್ರದ್ಧಾವಂತರು ಮಾನಸಿಕ ಒತ್ತಡದಲ್ಲಿರುತ್ತಾರೆ. ಈ ಒತ್ತಡ ಅಥವಾ ಕೀಳರಿಮೆ ಅವರ ಮೇಲೆ ಬಾಲ್ಯದಿಂದಲೂ ತಥಾಕಥಿತ ಸುಳ್ಳು ಸುಧಾರಣಾವಾದಿಗಳು ಪರೋಕ್ಷವಾಗಿ ನಾಸ್ತಿಕರು ಬಿಂಬಿಸಿರುತ್ತಾರೆ. ಒಂದು ವೇಳೆ ನಾಸ್ತಿಕರು ಬಹಿರಂಗವಾಗಿ ತಮ್ಮ ನಾಸ್ತಿಕತೆಯನ್ನು ಸಾರ್ವಜನಿಕ ವೇದಿಕೆ, ವಿವಿಧ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಡಂಗುರ ಸಾರುವಂತೆಯೇ, ಆಸ್ತಿಕರು ತಮ್ಮ ಭಕ್ತಿಯನ್ನು ತೋರಿಸಿದರೆ ತಪ್ಪೇನು ?
ಛತ್ರಪತಿ ಶಿವಾಜಿ ಮಹಾರಾಜರು ಬಹಿರಂಗವಾಗಿ ಪಟ್ಟಾಭಿಶೇಕ ಸಮಾರಂಭವನ್ನು ಧಾರ್ಮಿಕ ಪದ್ಧತಿಯಿಂದ ನೆರವೇರಿಸಿದ್ದರು, ಹೀಗಿರುವಾಗ ನಾವು ನಮ್ಮ ಆಸ್ತಿಕತೆಯನ್ನು ಏಕೆ ಮರೆಮಾಚಬೇಕು ? ಛತ್ರಪತಿ ಶಿವಾಜಿ ಮಹಾರಾಜರ ಬಳಿ ಸ್ವಂತ ಸೈನ್ಯ, ನೌಕಾದಳ, ಕೋಟೆ ಮತ್ತು ಎಲ್ಲಾ ವೈಭವಗಳು ಇದ್ದವು. ಎಲ್ಲರೂ ಅವರನ್ನು ರಾಜನೆಂದು ಒಪ್ಪಿಕೊಂಡಿದ್ದರು. ಆದಾಗ್ಯೂ ಛತ್ರಪತಿಗಳು ತಮ್ಮ ಭವ್ಯ ದಿವ್ಯ ರಾಜ್ಯಾಭಿಶೇಕ ಸಮಾರಂಭವನ್ನು ಧಾರ್ಮಿಕ ಪದ್ಧತಿಯಿಂದ ಉತ್ಸಾಹದಿಂದ ಆಚರಿಸಿದರು. ದೇಶ ವಿದೇಶಗಳ ಪ್ರತಿನಿಧಿಗಳನ್ನು ಕರೆಸಿ ಮಾಡಿದರು. ಇದರ ಕಾರಣವೆಂದರೆ ಅವರಿಗೆ ತೋರಿಕೆ ಮಾಡುವುದು ಇರಲಿಲ್ಲ, ಅವರಿಗೆ ಅಕ್ಕಪಕ್ಕದ ಎಲ್ಲಾ ಯವನ ಸಾಮ್ರಾಜ್ಯಗಳಿಗೆ ಇದು ‘ಹಿಂದವೀ ಸ್ವರಾಜ್ಯ’ ಆಗಿದೆಯೆಂದು ದೃಢವಾಗಿ ತೋರಿಸಲು ಬಯಸಿದ್ದರು. ‘ನೀವು ದೇವಸ್ಥಾನಗಳನ್ನು ಧ್ವಂಸಗೊಳಿಸಿರುವ ಮೂರ್ತಿ ವಿಧ್ವಂಸಕರ ಬಿರುದುಗಳನ್ನು ಹೆಮ್ಮೆಯಿಂದ ಮರೆಯುತ್ತೀರಿ, ಆದರೆ ಆಸ್ತಿಕ ಶ್ರದ್ಧಾವಂತ ಹಿಂದೂಗಳನ್ನು ರಕ್ಷಿಸಲು ತತ್ಪರರಾಗಿರುವ ಹೆಮ್ಮೆಯ ಪ್ರತಾಪ ಪುರಂದರ ರಾಜಾ ಶಿವಛತ್ರಪತಿಯಾಗಿದ್ದಾರೆ ಎನ್ನುವ ಭಯವನ್ನು ಮೂಡಿಸುವುದು ಆವಶ್ಯಕವಾಗಿತ್ತು’ ಅದಕ್ಕಾಗಿಯೇ ಈ ಎಲ್ಲ ಸಮಾರಂಭವನ್ನು ಏರ್ಪಡಿಸಿದ್ದರು.
ಜನಿವಾರ ಅಂಗಿಯೊಳಗೆ ಇರುತ್ತದೆ, ಅದರಿಂದ ಹೊರಗಿನ ಇತರ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೂ ‘ಅವರು ಏನು ಹೇಳುತ್ತಾರೆ ?’ ಎಂದು ಅಂದುಕೊಂಡು ನಾನು ನನ್ನ ಜನಿವಾರವನ್ನು ಏಕೆ ತೆಗೆದು ಎಸೆಯಬೇಕು?’ ‘ನನ್ನ ಆಸ್ತಿಕತೆಯಿಂದ ಬೇರೆಯವರಿಗೆ ಕೆಟ್ಟದ್ದು ಅನಿಸುವುದು, ಅವರು ನನ್ನನ್ನು ಗೇಲಿ ಮಾಡುತ್ತಾರೆ’, ಎಂದು ಏಕೆ ಹೆದರಬೇಕು ? ನಾವು ಅವರಿಗೆ ಧೈರ್ಯವಾಗಿ ‘ಇದು ನನ್ನ ನಂಬಿಕೆಯ ಭಾಗವಾಗಿದೆ. ಇದನ್ನು ನೀವು ಗೇಲಿ ಮಾಡಿದರೆ ನನಗೆ ಹಿಡಿಸುವುದಿಲ್ಲ’, ಎಂದು ನಾವು ಅವರಿಗೆ ದೃಢವಾಗಿ ಹೇಳಬೇಕು. ಒಂದು ವೇಳೆ ನಾಸ್ತಿಕರು ಬಹಿರಂಗವಾಗಿ ಅಪಹಾಸ್ಯ ಮಾಡುತ್ತಿರುವಾಗ, ಆಸ್ತಿಕರೂ ತಮ್ಮ ಸ್ವಂತ ಅಸ್ತಿತ್ವವನ್ನು ಧೈರ್ಯವಾಗಿ ತೋರಿಸಲೇ ಬೇಕು. ಆದುದರಿಂದ ನಾವು ನಮ್ಮ ಮನಸ್ಸಿನಲ್ಲಿರುವ ಕೀಳರಿಮೆಯನ್ನು ದೂರಗೊಳಿಸಬೇಕಾಗಿದೆ !
– ವೇದಮೂರ್ತಿ ಭೂಷಣ ದಿಗಂಬರ ಜೋಶಿ, ವೆಂಗುರ್ಲಾ, ಸಿಂಧುದುರ್ಗ ಜಿಲ್ಲೆ.