ಪ್ರಧಾನಮಂತ್ರಿ ಮೋದಿಯವರ ಮುತ್ಸದ್ದಿತನದ ಯುಕ್ತಿ ಮತ್ತು ವಿರೋಧಿಗಳಿಗೆ ಆತಂಕ !

ಪ್ರಧಾನಿ ನರೇಂದ್ರ ಮೋದಿ

‘ಫತಾಹ’ ಇದು ‘ಹರಕತ ಅಲ್‌-ತಾಹೀರ ಅಲ್- ಫಿಲಿಸ್ಟೀನಿಯಾ’ ಎಂಬ ಅವರ ಹೆಸರಿನ ‘ಶಾರ್ಟ್ ಫಾರ್ಮ್‌’ಅನ್ನು ಉಲ್ಟಾ ಮಾಡಿದಾಗ ಬಂದಿರುವ ಹೆಸರು. ಅನೇಕ ಜನರು ಸೇರಿ ‘ಫತಾಹ’ವನ್ನು ಸ್ಥಾಪಿಸಿದ್ದರು. ವಿಶೇಷವಾಗಿ ಪ್ಯಾಲೆಸ್ಟೀನ್‌ ಅಥಾರಿಟಿಯ ದಿವಂಗತ ಅಧ್ಯಕ್ಷ ಯಾಸರ ಅರಾಫತ, ಖಲೀಲ ಅಲ್‌-ವಜೀರ, ಸಲಾಹ ಖಲಫ ಹಾಗೂ ಮಹಮೂದ ಅಬ್ಬಾಸ ಇವರು ಪ್ರಸ್ತುತ ಪ್ಯಾಲೆಸ್ಟೀನಿ ಅಥಾರಿಟಿಯ ಅಧ್ಯಕ್ಷರಾಗಿದ್ದಾರೆ. ೨೦೦೫ ರ ಸ್ಥಳೀಯ ಚುನಾವಣೆಯಲ್ಲಿ ಭಾಗವಹಿಸಿದ ಹಮಾಸ ಪ್ಯಾಲೆಸ್ಟಿನೀ ರಾಜಕಾರಣದಲ್ಲಿ ರಾಜಕೀಯ ಪಕ್ಷವೆಂದು ಪ್ರವೇಶಿಸಿತು ಹಾಗೂ ೨೦೦೬ ರಲ್ಲಿ ಸಂಸತ್ತಿನ ಚುನಾವಣೆಯಲ್ಲಿ ಅಧಿಕಾರವನ್ನು ಗಳಿಸಿತು. ಅನಂತರ ಹಮಾಸ ಯಾವತ್ತೂ ಚುನಾವಣೆ ನಡೆಸಿಲ್ಲ ! ಆದ್ದರಿಂದ ಜಗತ್ತಿನಾದ್ಯಂತ ಅನೇಕ ದೇಶಗಳು ಹಾಗೂ ಪ್ಯಾಲೆಸ್ಟಿನೀ ಅಥಾರಿಟಿ ಇವೆಲ್ಲ ಸದ್ಯದ ಹಮಾಸ ಸರಕಾರವನ್ನು ಪ್ಯಾಲೆಸ್ಟಿನಿಯರ ‘ಅಧಿಕೃತ ಸರಕಾರ’ವೆಂದು ಒಪ್ಪಿಕೊಳ್ಳುವುದಿಲ್ಲ. ಪ್ಯಾಲೆಸ್ಟಿನೀ ಅಥಾರಿಟಿಗೆ ಇಸ್ರೈಲ್‌-ಪ್ಯಾಲೆಸ್ಟಾಯಿನ್‌ ವಿವಾದದ ಬಗ್ಗೆ ರಾಜತಾಂತ್ರಿಕ ಪರಿಹಾರಗಳ ಬಗ್ಗೆ ಮತ್ತು ಹಮಾಸ್‌ನ ಭಯೋತ್ಪಾದನೆಯನ್ನು ಹಾಗೂ ಇಸ್ರೈಲ್‌ನ ಅಸ್ತಿತ್ವವನ್ನೇ ನಾಶಗೊಳಿಸುವುದರ ಬಗ್ಗೆ ವಿಶ್ವಾಸವಿದೆ.

ಪ್ರಧಾನಮಂತ್ರಿ ಮೋದಿಯವರು ಮಾಡಿದ ಟ್ವೀಟ್, ಅದರ ಅರ್ಥ ಹಾಗೂ ತತ್ತ್ವನಿಷ್ಠ ನಿಲುವು !

ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿಯವರು ಮಾಡಿದ ‘ಟ್ವೀಟ್’ ನೋಡಿ: ಪ್ಯಾಲೆಸ್ಟಿನೀ ಅಥಾರಿಟಿಯ ಅಧ್ಯಕ್ಷ ಮಹಮೂದ ಅಬ್ಬಾಸ್‌ ಇವರೊಂದಿಗೆ ಮಾತನಾಡಿದೆ. ಗಾಝಾದಲ್ಲಿನ ಆಸ್ಪತ್ರೆಯಲ್ಲಿ ನಾಗರಿಕರ ಪ್ರಾಣಹಾನಿಯ ವಿಷಯದಲ್ಲಿ ಶೋಕ ವ್ಯಕ್ತಪಡಿಸಿದೆ, ನಾವು ‘ಪ್ಯಾಲೆಸ್ಟಿನೀ ಜನರಿಗಾಗಿ’ ಮಾನವೀಯ ಸಹಾಯ ಕಳಿಸುತ್ತಾ ಇರುವೆವು. ಈ ಪ್ರದೇಶದಲ್ಲಿನ ‘ಭಯೋತ್ಪಾದನೆ’, ಹಿಂಸಾಚಾರ ಹಾಗೂ ಕುಸಿಯುತ್ತಿರುವ ಸುರಕ್ಷಾ ವ್ಯವಸ್ಥೆಯ ಮೇಲೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿತು. ಭಾರತದ ಈ ದೀರ್ಘಕಾಲದ ‘ತತ್ತ್ವನಿಷ್ಠೆ’ಯ ನಿಲುವನ್ನು ಪುನರುಚ್ಚರಿಸಿತು !’

೧. ಮೋದಿಯವರು ಯಾರೊಂದಿಗೆ ಮಾತನಾಡಿದರು ? : ಪ್ಯಾಲೆಸ್ಟಿನೀ ಅಥಾರಿಟಿ’ ಎಂಬ ರಾಜಕೀಯ ಪಕ್ಷದೊಂದಿಗೆ
೨. ಮಾನವತಾವಾದವನ್ನು ಯಾರಿಗೆ ತೋರಿಸುವೆವು ಎಂದು ಹೇಳಿದರು ? : ಪ್ಯಾಲೆಸ್ಟಿನೀಯರಿಗಾಗಿ, ಅಲ್ಲಿನ ಕಾನೂನುಬಾಹಿರ ಹಾಗೂ ಭಯೋತ್ಪಾದಕ ಸರಕಾರಕ್ಕಲ್ಲ.
೩. ಯಾವುದರ ಬಗ್ಗೆ ಚಿಂತೆ ವ್ಯಕ್ತಪಡಿಸಿದರು ? : ಭಯೋತ್ಪಾದನೆ ಹಾಗೂ ಹಿಂಸಾಚಾರದ ಬಗ್ಗೆ (ಹಮಾಸ ಮಾಡುತ್ತಿರುವ)
೪. ಇಸ್ರೈಲ್‌ಗೆ ಮೋದಿ ಏನಾದರೂ ಹೇಳಿದರೆ ? ಒಂದು ಶಬ್ದವೂ ಇಲ್ಲ.
೫. ಪ್ರಧಾನಮಂತ್ರಿ ಮೋದಿಯವರು ಭಾರತದ ದೀರ್ಘಕಾಲದ ತತ್ತ್ವನಿಷ್ಠ ನಿಲುವನ್ನು ಬದಲಾಯಿಸಿದರೆ ? :
ಖಂಡಿತವಾಗಿಯೂ ಇಲ್ಲ ! ಭಾರತ ಭಯೋತ್ಪಾದನೆಯ ವಿರುದ್ಧ ಇತ್ತು ಹಾಗೂ ಇದೆ. ಭಾರತ ಪ್ಯಾಲೆಸ್ಟಾಯಿನ್‌ನ ಜನರ ಪರವಾಗಿತ್ತು ಹಾಗೂ ಇಂದು ಕೂಡ ಇದೆ.

‘ಗಾಜಾ ಉಳಿಸಿ’ ಎಂದು ಮೋದಿಯವರು ಹೇಳಿದ್ದಾರೆ ಎಂದು ಅನಿಸುತ್ತಿರುವ ಜನರಿಗೆ ಮೋದಿಯವರ ಒಂದೇ ಒಂದು ಟ್ವೀಟ್‌ ಅನ್ನು ಅರ್ಥ ಮಾಡಿಕೊಳ್ಳಲು ಒಂದು ದಿನ ತೆಗೆದುಕೊಂಡರೆ, ಮೋದಿ ಏನೆಂದು ತಿಳಿಯಬೇಕು ?

ಪಾಕಿಸ್ತಾನ, ತುರ್ಕೀಯೇದಂತಹ ೧-೨ ದೇಶಗಳ ಹೊರತು ಇತರ ಎಲ್ಲ ಇಸ್ಲಾಮಿಕ್‌ ದೇಶಗಳು ಮತ್ತು ಇಸ್ರೈಲ್‌ (ಆಲ್‌ ವೆದರ್‌ ಫ್ರೆಂಡ್) ಭಾರತದ ನಿಲುವಿನ ಬಗ್ಗೆ ಖುಶಿಯಾಗಿರುವವು. ಹಮಾಸ್‌ಗೆ ಬೆಂಬಲ ಕೊಡಲಿಲ್ಲವೆಂದು ವಿರೋಧಿಗಳಿಗೆ ಮತ್ತೊಮ್ಮೆ ಸೂತಕ ಬರಲಿದೆ.

– ವೇದ ಕುಮಾರ (ಆಧಾರ : ಫೇಸ್‌ಬುಕ್)