ಹಿಂದೂಗಳೇ, ನಿಮಗೂ ಇಂತಹ ಪ್ರಮೇಯ ಬರಬಹುದು, ಎಚ್ಚರವಹಿಸಿ !

೧. ಮತಾಂಧರಿಂದ ಸಾಯಿಬಾಬಾರ ಛಾಯಾಚಿತ್ರ ಮತ್ತು ೫ ರೂಪಾಯಿ ನಾಣ್ಯದ ಮೂಲಕ ವಶೀಕರಣ : ‘ನನ್ನ ಸಹೋದರ ವಕೀಲನಾಗಿದ್ದು ಅವನು ಸಾಧನೆ ಯನ್ನು ಮಾಡುವುದಿಲ್ಲ. ೩.೨.೨೦೨೨ ರಂದು ಅವನು ನ್ಯಾಯಾಲಯಕ್ಕೆ ಹೋಗಿದ್ದನು. ನ್ಯಾಯಾಲಯದಿಂದ ಹೊರಗೆ ಬರುತ್ತಿರುವಾಗ ಅವನಿಗೆ ಇಬ್ಬರು ಫಕೀರರು ಭೇಟಿಯಾದರು. ಅವನು ಆ ಫಕೀರರಿಗೆ ಹಣ ನೀಡಿದನು. ಅವರು ಸಹೋದರನ ತಲೆಗೆ ನವಿಲುಗರಿಯನ್ನು ತಾಗಿಸಿದರು ಮತ್ತು ಅವನಿಗೆ ಸಾಯೀಬಾಬಾರ ಛಾಯಾಚಿತ್ರ ಮತ್ತು ೫ ರೂಪಾಯಿಯ ನಾಣ್ಯವನ್ನು ನೀಡಿದರು. ಅವರು ಅವನಿಗೆ, ”ಈ ಛಾಯಾಚಿತ್ರ ಮತ್ತು ನಾಣ್ಯವನ್ನು ನಿನ್ನ ಬಳಿಯೇ ಇಟ್ಟುಕೋ”, ಎಂದು ಹೇಳಿದರು. ಅವರು ಹೊರಟು ಹೋದ ನಂತರ ನನ್ನ ಸಹೋದರನ ತಲೆ ನೋಯತೊಡಗಿತು. ಮನೆಗೆ ಬರುವ ಮೊದಲು ಸಹೋದರನು ಆ ನಾಣ್ಯ ಮತ್ತು ಛಾಯಾಚಿತ್ರವನ್ನು ಒಂದು ದೇವಸ್ಥಾನಕ್ಕೆ ನೀಡಿದನು.

೨. ಕರ್ಪೂರದಿಂದ ಸಹೋದರನ ದೃಷ್ಟಿ ತೆಗೆದ ನಂತರ ಅವನ ತಲೆನೋವು ಕಡಿಮೆಯಾಗುವುದು, ಸಹೋದರನ ದೃಷ್ಟಿ ತೆಗೆದ ನಂತರ ಅವಳಿಗೂ ತಲೆ ನೋವು ಆರಂಭವಾಗುವುದು ಮತ್ತು ಅವಳು ಸ್ವತಃ ಮಾನಸ ದೃಷ್ಟಿಯನ್ನು ತೆಗೆದ ನಂತರ ತಲೆನೋವು ಕಡಿಮೆಯಾಗುವುದು : ನಾನು ಕರ್ಪೂರದಿಂದ ಸಹೋದರನ ದೃಷ್ಟಿಯನ್ನು ತೆಗೆದೆನು. ನಂತರ ನಾನು ಅವನಿಗೆ ಸ್ನಾನ ಮಾಡಲು ಹೇಳಿದೆನು. ಆಗ ಅವನಿಗೆ ತಕ್ಷಣ ಒಳ್ಳೆಯದೆನಿಸಿತು. ಬೆಳಗ್ಗೆಯಿಂದ ಇದ್ದ ಅವನ ತಲೆನೋವು ಕಡಿಮೆಯಾಯಿತು; ಆದರೆ ನಾನು ಅವನ ದೃಷ್ಟಿಯನ್ನು ತೆಗೆದುದರಿಂದ ನನ್ನ ತಲೆ ನೋಯ ತೊಡಗಿತು ಮತ್ತು ನನಗೆ ಅಸ್ವಸ್ಥತೆ ಅನಿಸತೊಡಗಿತು. ‘ದೃಷ್ಟಿ ತೆಗೆದುದರ ಇದು ಲಕ್ಷಣವಾಗಿದೆ’, ಎಂದು ನನ್ನ ಗಮನಕ್ಕೆ ಬಂದಿತು. ಆದುದರಿಂದ ನಾನು ನನ್ನ ಮಾನಸದೃಷ್ಟಿಯನ್ನು ತೆಗೆದೆನು. ಅನಂತರ ನನ್ನ ತಲೆನೋವು ಕಡಿಮೆಯಾಯಿತು.

೩. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಭಕ್ತಿಸತ್ಸಂಗವನ್ನು ಕೇಳಿದುದರಿಂದ ತೊಂದರೆ ಸಂಪೂರ್ಣವಾಗಿ ಕಡಿಮೆಯಾಗುವುದು ಮತ್ತು ಗುರುಕೃಪೆಯಿಂದ ಈ ತೊಂದರೆಯಿಂದ ಹೊರಗೆ ಬರಲು ಸಾಧ್ಯವಾಗುವುದು : ಗುರುವಾರ ಇದ್ದುದರಿಂದ ರಾತ್ರಿಯ ಸಮಯದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ತೆಗೆದುಕೊಳ್ಳುತ್ತಿರುವ ಭಕ್ತಿಸತ್ಸಂಗವಿತ್ತು. ಅದನ್ನು ಕೇಳುವಾಗ ‘ಏನಾದರೂ ತೊಂದರೆ ಇದ್ದರೆ, ಅದು ಕಡಿಮೆಯಾಗಲಿ’, ಎಂದು ನಾನು ಪ್ರಾರ್ಥಿಸಿದೆನು. ಇದರಿಂದ ನನಗಾಗುವ ತೊಂದರೆ ಒಂದು ಗಂಟೆಯಲ್ಲಿಯೇ ಪೂರ್ಣ ಕಡಿಮೆಯಾಯಿತು. ಇದು ಪರಾತ್ಪರ ಗುರು ಡಾ. ಆಠವಲೆಯವರ ನಮ್ಮ ಮೇಲಿನ ಕೃಪೆಯಾಗಿತ್ತು; ಹಾಗಾಗಿ ಉಪಾಯಯೋಜನೆ ತೆಗೆದು ನಾವು ಆ ತೊಂದರೆಯಿಂದ ಪಾರಾದೆವು. ಗುರುದೇವರೇ ನನ್ನ ಸಹೋದರನಿಗೆ ಆ ನಾಣ್ಯ ಮತ್ತು ಛಾಯಾಚಿತ್ರವನ್ನು ಹೊರಗೇ ಅರ್ಪಿಸಿ ಮನೆಗೆ ಬರುವ ಒಳ್ಳೆಯ ಬುದ್ಧಿಯನ್ನು ನೀಡಿದನು, ಇಲ್ಲದಿದ್ದರೆ ಅನಾಹುತವಾಗಬಹುದಿತ್ತು. ಸಹೋದರನು ಅದೆಲ್ಲವನ್ನು ಮನೆಗೆ ತಂದಿದ್ದರೆ, ಮನೆಯಲ್ಲಿ ಎಲ್ಲರಿಗೂ ತೊಂದರೆ ಆಗಬಹುದಿತ್ತು. ‘ಆ ತೊಂದರೆ ಯಾವ ಕಾರಣದಿಂದ ಆಗುತ್ತಿದೆ ?’, ಎಂದು ನಮ್ಮ ಗಮನಕ್ಕೆ ಬರುತ್ತಿರಲಿಲ್ಲ.

೪. ನಮ್ಮ ಹಿಂದೂ ಧರ್ಮವನ್ನು ರಕ್ಷಿಸಲು ನಾವು ಪ್ರತಿಯೊಬ್ಬರೂ ಪ್ರಯತ್ನಿಸಬೇಕು !

‘ಪ್ರತಿಯೊಂದು ಮನೆಯಲ್ಲಿ ನಮ್ಮ ಕುಟುಂಬದವರೊಂದಿಗೆ ಏನು ಘಟಿಸುತ್ತದೆ ?’, ಎಂದು ಮನೆಯ ಮುಖ್ಯಸ್ಥರಿಗೆ ಗೊತ್ತಿರಬೇಕು. ಮನೆಯ ವ್ಯಕ್ತಿಗಳೂ ಇಂತಹ ಘಟನೆಗಳನ್ನು ಕುಟುಂಬದ ಮುಖ್ಯಸ್ಥರಿಗೆ ಹೇಳಬೇಕು. ಇದರಿಂದಲೇ ನಾವು ತಕ್ಷಣ ಪರಿಹಾರ ಕಂಡು ಹಿಡಿದು ಇಂತಹ ಪ್ರಸಂಗಗಳಿಂದ ತಕ್ಷಣ ಹೊರಗೆ ಬರಬಹುದು. ಇಂತಹ ಪ್ರಸಂಗಗಳಿಂದ ‘ಜನರು ಹೇಗೆ ಜಾಲದಲ್ಲಿ ಸಿಲುಕುತ್ತಾರೆ ಮತ್ತು ತಪ್ಪು ಕೃತಿ ಮಾಡುತ್ತಾರೆ’, ಎಂದು ನಮಗೆ ಕಲಿಯಲು ಸಿಗುತ್ತದೆ. ಈ ಜನರು ಇದೇ ರೀತಿ ವಶೀಕರಣ ಮಾಡುತ್ತಿರಬಹುದು. ಅದರಿಂದ ‘ನಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಿ ಹಿಂದೂ ಧರ್ಮವನ್ನು ಕೊನೆಗಾಣಿಸುವ ಕೆಲಸವನ್ನು ಆ ಜನರು ಮಾಡುತ್ತಿದ್ದಾರೆ. ಆದುದರಿಂದ ಪ್ರತಿಯೊಬ್ಬರು ಸಾಧನೆ ಮಾಡುವುದು ಮತ್ತು ಇಂತಹ ಜನರಿಂದ ಎಚ್ಚರಿಕೆಯಿಂದಿರುವುದು ಆವಶ್ಯಕವಾಗಿದೆ. ನಮ್ಮ ಹಿಂದೂ ಧರ್ಮವನ್ನು ರಕ್ಷಿಸಲು ನಾವು ಪ್ರತಿಯೊಬ್ಬರು ಪ್ರಯತ್ನಿಸಬೇಕು. ‘ನಾವು ತಿಳಿದೂ ತಿಳಿಯದೇ ಹೇಗೆ ಸಿಕ್ಕಿಕೊಳ್ಳುತ್ತೇವೆ ?’, ಎಂದು ನಮಗೆ ತಿಳಿಯುವುದೇ ಇಲ್ಲ. ಆದುದರಿಂದ ‘ಭಗವಂತನ ನಾಮವು ಬಾಯಿಯಲ್ಲಿ ಇರುವುದು ಎಷ್ಟು ಮಹತ್ವದ್ದಾಗಿದೆ !’, ಎಂದು ನಮ್ಮ ಗಮನಕ್ಕೆ ಬರುತ್ತದೆ.

ಇದರಿಂದ ‘ನಾವು ಜಾಗರೂಕರಾಗಿರಬೇಕು ! ನಾವಷ್ಟೇ ಅಲ್ಲ, ಆದರೆ ಎಲ್ಲ ಹಿಂದೂ ಬಾಂಧವರೂ ಜಾಗರೂಕರಾಗಿರ ಬೇಕು !’ ಎಂದು ನಮ್ಮ ಗಮನಕ್ಕೆ ಬರುತ್ತದೆ. ಪ್ರತಿಯೊಂದು ಕುಟುಂಬದಲ್ಲಿ ಹೀಗೇ ನಡೆಯುತ್ತಿದ್ದರೆ, ಅವರಿಗಾಗುವ ತೊಂದರೆ ಅವರ ಗಮನಕ್ಕೆ ಬರುವುದೂ ಇಲ್ಲ. ನಮ್ಮ ಮೇಲೆ ಗುರುಗಳ (ಪರಾತ್ಪರ ಗುರು ಡಾ. ಆಠವಲೆಯವರ) ಕೃಪೆ ಇದ್ದುದರಿಂದ ಅದು ನಮ್ಮ ಗಮನಕ್ಕೆ ಬಂದಿತು ಮತ್ತು ನಾವೂ ಆ ಕೃಪೆಯಿಂದಲೇ ರಕ್ಷಿಸಲ್ಪಟ್ಟೆವು. ಅದಕ್ಕಾಗಿ ನಾವೆಲ್ಲರೂ ಗುರುಚರಣಗಳಲ್ಲಿ ಕೋಟಿಶಃ ಕೃತಜ್ಞರಾಗಿದ್ದೇವೆ.’

– ಕು. ಆರತಿ ಸುತಾರ, ಮಾಪಸಾ, ಗೋವಾ. (೬.೨.೨೦೨೨)