ಸಂತರನ್ನು ಬಾಹ್ಯದೃಷ್ಟಿಯಿಂದಲ್ಲ, ಅಂತರ್ಮುಖ ದೃಷ್ಟಿಯಿಂದ ನೋಡಿ !

(ಪೂ.) ಶ್ರೀ. ಸಂದೀಪ ಆಳಶಿ,

‘ಕೆಲವು ಸಾಧಕರು ಬಹಿರ್ಮುಖ ದೃಷ್ಟಿಯನ್ನಿಟ್ಟುಕೊಂಡು ‘ಸಂತರು ಹೇಗೆ ಕಾಣಿಸುತ್ತಾರೆ ? ಅವರು ಹೇಗೆ ನಡೆಯುತ್ತಾರೆ-ಮಾತ ನಾಡುತ್ತಾರೆ ?’ ಈ ವಿಷಯಗಳ ಕಡೆಗೆ ಗಮನ ಕೊಡುತ್ತಾರೆ. ಸಂತರು ಕೆಲವು ಸಾಧಕರಿಗೆ ತಪ್ಪು ಹೇಳಿದರೆ, ಆ ಸಾಧಕರು ‘ಈಗ ಸಂತರಿಗೆ ನಮ್ಮ ಬಗ್ಗೆ ಬೇಸರವಾಗಿದೆ’, ಎಂಬ ಪೂರ್ವಗ್ರಹವನ್ನು ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಸಂತರು ಇಬ್ಬರು ಸಾಧಕರ ಮಾನಸಿಕ ಸ್ತರದ ಅಡಚಣೆಗಳನ್ನು ಬಗೆಹರಿಸಿದಾಗ, ‘ಸಂತರು ನನ್ನ ಸ್ಥಿತಿಯನ್ನು ಅರ್ಥಮಾಡಿ ಕೊಳ್ಳುವುದಿಲ್ಲ’, ಎಂದೂ ಅವರಲ್ಲಿನ ಒಬ್ಬ ಸಾಧಕನಿಗೆ ಅನಿಸುತ್ತದೆ. ಇಂತಹ ಉದಾಹರಣೆಗಳು ಸಂತರ ಕಡೆಗೆ ಬಹಿರ್ಮುಖ ದೃಷ್ಟಿಯಿಂದ ನೋಡುವ ಲಕ್ಷಣಗಳಾಗಿವೆ.

ವಾಸ್ತವದಲ್ಲಿ ಬಹಳ ಭಾಗ್ಯವಿದ್ದರೆ ಮಾತ್ರ ಸಂತರ ಸಹವಾಸ ಲಭಿಸುತ್ತದೆ. ಸಾಧಕರು ಸಂತರ ಕಡೆಗೆ ಅಂತರ್ಮುಖರಾಗಿ ನೋಡಿದರೆ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭವಾಗುತ್ತದೆ. ‘ಸಂತರ ಸಹವಾಸ ಲಭಿಸಿದ ನಂತರ ಅವರಲ್ಲಿನ ಚೈತನ್ಯದ ಲಾಭವಾಗಲು ಪ್ರಾರ್ಥನೆ ಮಾಡುವುದು, ‘ಸಂತರು ಏನೆಲ್ಲ ಹೇಳುವರೋ ಅದು ನಮ್ಮ ಕಲ್ಯಾಣಕ್ಕಾಗಿಯೇ ಇದೆ’ ಎಂದು ತಿಳಿಯುವುದು, ಅವರ ಗುಣಗಳ ಅಧ್ಯಯನ ಮಾಡಿ ಆ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು, ಅವರಿಂದ ಆಧ್ಯಾತ್ಮಿಕ ಸ್ತರದಲ್ಲಿ ಕಲಿಯುವುದು, ಅವರ ಸಹವಾಸದಲ್ಲಿ ಭಾವದ ಸ್ತರದಲ್ಲಿರುವುದು’, ಇವುಗಳಂತಹ ಪ್ರಯತ್ನ ಮಾಡುವುದು ಎಂದರೆ ಸಂತರ ಕಡೆಗೆ ಅಂತರ್ಮುಖ ದೃಷ್ಟಿಯಿಂದ ನೋಡುವುದಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ತಮ್ಮ ಗುರುಗಳ ಮುಂದೆ ಎಂದಿಗೂ ಕುಳಿತುಕೊಳ್ಳುತ್ತಿರಲಿಲ್ಲ’, ಅವರು ಯಾವಾಗಲೂ ಎದ್ದು ನಿಲ್ಲುತ್ತಿದ್ದರು ಮತ್ತು ಗುರುಗಳು ಸಹಜವಾಗಿ ಹೇಳಿದ ಪ್ರತಿಯೊಂದು ವಾಕ್ಯದಿಂದಲೂ ಕಲಿಯುತ್ತಿದ್ದರು ! ಇಷ್ಟು ಭಾವ ಸಾಧಕರಲ್ಲಿ ಇದೆಯೇ ? ಸಂತರ ಸಹವಾಸದಲ್ಲಿರಲು ಅವಕಾಶ ಸಿಗುತ್ತಿದ್ದರೂ ಅವರ ಯೋಗ್ಯ ಲಾಭ ಪಡೆಯದ ಸಾಧಕರ ಸ್ಥಿತಿ ‘ದೀಪದ ಕೆಳಗೆ ಕತ್ತಲು’, ಎಂಬಂತಾಗಿದೆ. ಹೀಗಾಗಬಾರದೆಂದು, ಸಾಧಕರು ಸಾಧನೆಯ ಪ್ರಯತ್ನವನ್ನು ಹೆಚ್ಚಿಸಬೇಕು.’ – (ಪೂ.) ಸಂದೀಪ ಆಳಶಿ (೨೩.೧೦.೨೦೨೩)