ಸಾಧನೆಯನ್ನು ಮಾಡಿ ಉನ್ನತಿಯನ್ನು ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುವುದನ್ನು ತೋರಿಸುವ ಪ್ರಯೋಗ

‘ಸಾಧಕರ ಅಥವಾ ಜಿಜ್ಞಾಸುಗಳ ಸತ್ಸಂಗದಲ್ಲಿ ‘ಸಾಧನೆಯನ್ನು ಮಾಡಿ ಉನ್ನತಿ ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಹೇಗೆ ಪ್ರಕ್ಷೇಪಿಸುತ್ತದೆ ?’, ಇದರ ಪ್ರಯೋಗವನ್ನು ತೋರಿಸಲಾಗುತ್ತದೆ’ ಇದರಲ್ಲಿ ಮುಂದಿನ ೩ ಪ್ರಯೋಗಗಳನ್ನು ತೋರಿಸಲಾಗುತ್ತದೆ.

೧. ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದಾಗ ನೀರಿಗೆ ಗುಲಾಬಿ ಬಣ್ಣ ಬರುವುದು

(ಸದ್ಗುರು) ಡಾ. ಮುಕುಲ ಗಾಡಗೀಳ

೧ ಅ. ಪ್ರಯೋಗದ ತಯಾರಿ : ಈ ಪ್ರಯೋಗಕ್ಕಾಗಿ ಬಿಳಿ ಬಣ್ಣದ ಪ್ಲಾಸ್ಟಿಕಿನ ೫೦೦ ಮಿ.ಲೀ. ನ (೧೨ ಸೆಂ.ಮೀ. ವ್ಯಾಸ ಮತ್ತು ೬.೫ ಸೆಂ.ಮೀ. ಎತ್ತರವಿರುವ) ಪಾತ್ರೆಯಲ್ಲಿ ೪೦೦ ಮಿ.ಲೀ. ನೀರನ್ನು ತೆಗೆದುಕೊಳ್ಳಲಾಯಿತು. ಮೇಜಿನ ಮೇಲೆ ಬಿಳಿ ಬಣ್ಣದ ಬಟ್ಟೆಯನ್ನು ಹಾಕಲಾಯಿತು. ಆ ಮೇಜಿನ ಮೇಲೆ ನೀರಿರುವ ಬಿಳಿ ಬಣ್ಣದ ಪ್ಲಾಸ್ಟಿಕ್ ಪಾತ್ರೆಯನ್ನು ಇಡಲಾಯಿತು. ಒಂದು ಸಮಯಕ್ಕೆ ಪ್ರಯೋಗವನ್ನು ನೋಡಲು ೮-೧೦ ಸಾಧಕರನ್ನು (ಅಥವಾ ಜಿಜ್ಞಾಸುಗಳನ್ನು) ಮೇಜಿನ ಸುತ್ತಲೂ ನಿಲ್ಲಲು ಹೇಳಲಾಯಿತು. ಅವರ ನೆರಳು ಪ್ಲಾಸ್ಟಿಕ್‌ನ ಪಾತ್ರೆಯ ಮೇಲೆ ಬೀಳದಂತೆ ಕಾಳಜಿಯನ್ನು ವಹಿಸಲಾಯಿತು.

೧ ಆ. ಪ್ರತ್ಯಕ್ಷ ಪ್ರಯೋಗ : ಪ್ರಯೋಗವನ್ನು ನೋಡುವವರಿಗೆ ಪ್ಲಾಸ್ಟಿಕಿನ ಪಾತ್ರೆಯಲ್ಲಿನ ನೀರಿನ ಕಡೆಗೆ ನೋಡಲು ಹೇಳಲಾಯಿತು. ನೀರಿನಲ್ಲಿ ಮೊದಲು ತರ್ಜನಿ (ಹೆಬ್ಬೆರಳಿನ ಪಕ್ಕದ ಬೆರಳು)ಯನ್ನು ಮುಳುಗಿಸಲಾಯಿತು ಮತ್ತು ಆ ಸಮಯದಲ್ಲಿ ‘ನೀರಿನ ಬಣ್ಣ ಬದಲಾಯಿತೇ ?’, ಎಂದು ನೋಡಲು ಹೇಳಲಾಯಿತು. ಆ ಪ್ರಯೋಗವನ್ನು ನೋಡುವವರು ನೀರಿನ ಬಣ್ಣ ತಿಳಿ ಗುಲಾಬಿ ಆಗಿದೆ ಎಂದು ಹೇಳಿದರು. ಅನಂತರ ತರ್ಜನಿ ಮತ್ತು ಅದರ ಪಕ್ಕದ ಮಧ್ಯದ ಬೆರಳು ಇವೆರಡನ್ನೂ ನೀರಿನಲ್ಲಿ ಮುಳುಗಿಸಲಾಯಿತು. ಆ ಸಮಯದಲ್ಲಿ ಪ್ರಯೋಗವನ್ನು ನೋಡುವವರು ‘ನೀರಿನ ತಿಳಿ ಗುಲಾಬಿ ಬಣ್ಣ ಮೊದಲಿಗಿಂತ ಹೆಚ್ಚಾಯಿತು ಎಂದು ಹೇಳಿದರು. ಅನಂತರ ತರ್ಜನಿ, ಮಧ್ಯದ ಬೆರಳು ಮತ್ತು ಅನಾಮಿಕಾ (ಉಂಗುರ ಬೆರಳು) ಈ ಮೂರೂ ಬೆರಳುಗಳನ್ನು ನೀರಿನಲ್ಲಿ ಮುಳುಗಿಸಲಾಯಿತು. ಆ ಸಮಯದಲ್ಲಿಯೂ ನೀರಿನ ಬಣ್ಣದ ನಿರೀಕ್ಷಣೆ ಮಾಡಲು ಹೇಳಲಾಯಿತು. ಕೊನೆಗೆ ಕಿರುಬೆರಳಿನೊಂದಿಗೆ ಎಲ್ಲ ೪ ಬೆರಳುಗಳನ್ನು ಮುಳುಗಿಸಲಾಯಿತು. ಆ ಎರಡೂ ಸಮಯದಲ್ಲಿ ನೀರಿನ ಬಣ್ಣ ಇನ್ನಷ್ಟು ಹೆಚ್ಚು ಗುಲಾಬಿ ಬಣ್ಣಕ್ಕೆ ತಿರುಗಿತು ಎಂದು ಪ್ರಯೋಗವನ್ನು ನೋಡುವವರು ಹೇಳಿದರು.

೧ ಇ. ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದಾಗ ನೀರಿಗೆ ಗುಲಾಬಿ ಬಣ್ಣ ಬರುವುದರ ಹಿಂದಿನ ಶಾಸ್ತ್ರ

೧ ಇ ೧. ಮನುಷ್ಯನ ದೇಹವು ಪಂಚತತ್ತ್ವಗಳಿಂದ ತಯಾರಾಗಿದೆ ಮತ್ತು ಅವನಿಗೆ ಸ್ಥೂಲ ಪಂಚತತ್ತ್ವಗಳ ಅರಿವು ಅವನ ಪಂಚಜ್ಞಾನೇಂದ್ರಿಯಗಳ ಮೂಲಕ ಬರುತ್ತದೆ : ಜಗತ್ತಿನಲ್ಲಿನ ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಸ್ತುಗಳು ಪಂಚಮಹಾಭೂತಗಳಿಂದ (ಪಂಚತತ್ತ್ವಗಳಿಂದ) ತಯಾರಾಗಿವೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಆ ಪಂಚತತ್ತ್ವಗಳಾಗಿವೆ. ಮನುಷ್ಯನ ದೇಹವೂ ಪಂಚತತ್ತ್ವಗಳಿಂದಲೇ ತಯಾರಾಗಿದೆ. ಅವನಿಗೆ ಸ್ಥೂಲದಲ್ಲಿನ ಪಂಚತತ್ತ್ವಗಳ ಅರಿವು ಅವನ ಪಂಚಜ್ಞಾನೇಂದ್ರಿಯಗಳ ಮೂಲಕ ಬರುತ್ತದೆ. ಇಲ್ಲಿ ‘ಪಂಚತತ್ತ್ವಗಳು’ ಪಂಚತತ್ತ್ವ ಗಳಿಂದ ಬರುವ ಲಕ್ಷಣಗಳು ಮತ್ತು ಪಂಚತತ್ತ್ವಗಳ ಅರಿವಾಗುವ ಪಂಚಜ್ಞಾನೇಂದ್ರಿಯಗಳು’ ಇವುಗಳ ಕೋಷ್ಟಕಗಳನ್ನು ಕೊಡಲಾಗಿದೆ.

೧ ಇ ೨. ದೇಹದಲ್ಲಿನ ಪಂಚತತ್ತ್ವಗಳು ಚೈತನ್ಯದ ಸ್ತರದಲ್ಲಿ ಪ್ರಕ್ಷೇಪಿಸತೊಡಗಿದಾಗ ಆಯಾ ಪಂಚತತ್ತ್ವಗಳಿಂದಾಗಿ ಬರುವ ಅನುಭೂತಿಗಳು : ಸಾಧನೆಯನ್ನು ಮಾಡದಿರುವ ಸಾಮಾನ್ಯ ವ್ಯಕ್ತಿಯಲ್ಲಿ ದೋಷ ಮತ್ತು ಅಹಂನ ಪ್ರಮಾಣ ಬಹಳಷ್ಟು ಇರುವುದರಿಂದ ರಜ-ತಮ ಹೆಚ್ಚಿರುತ್ತದೆ. ಇಂತಹ ವ್ಯಕ್ತಿಯಲ್ಲಿ ಪಂಚತತ್ತ್ವಗಳ ಪೈಕಿ ಪೃಥ್ವಿ ಮತ್ತು ಆಪ ಈ ತತ್ತ್ವಗಳ ಪ್ರಮಾಣ ಹೆಚ್ಚಿರುತ್ತದೆ. ಇಂತಹ ವ್ಯಕ್ತಿ ಗುರುಗಳ ಮಾರ್ಗದರ್ಶನದಲ್ಲಿ ಸತತವಾಗಿ ಸಾಧನೆಯನ್ನು ಮಾಡತೊಡಗಿದರೆ ಅವನಲ್ಲಿನ ರಜ-ತಮದ ಪ್ರಮಾಣ ಕಡಿಮೆಯಾಗುತ್ತಾ ಹೋಗಿ ಸತ್ತ್ವಗುಣದ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ. ಸತ್ತ್ವಗುಣವು ಹೆಚ್ಚಾದರೆ, ವ್ಯಕ್ತಿಯಲ್ಲಿ ಚೈತನ್ಯ ಬರುತ್ತದೆ ಮತ್ತು ಆ ವ್ಯಕ್ತಿ ತೇಜಸ್ವಿಯಾಗಿ ಕಾಣಿಸುತ್ತಾನೆ. ಆ ಸಮಯದಲ್ಲಿ ಆ ವ್ಯಕ್ತಿಯಲ್ಲಿನ ತೇಜತತ್ತ್ವ ಹೆಚ್ಚಾಗಿರುತ್ತದೆ. ಸಾಧನೆಯನ್ನು ಮಾಡಿ ಇನ್ನಷ್ಟು ಆಧ್ಯಾತ್ಮಿಕ ಉನ್ನತಿಯಾದರೆ ಅವನಲ್ಲಿನ ವಾಯುತತ್ತ್ವವು ಹೆಚ್ಚಾಗುತ್ತದೆ ಮತ್ತು ಇನ್ನೂ ಮುಂದೆ ಆಕಾಶತತ್ತ್ವವೂ ಹೆಚ್ಚಾಗುತ್ತದೆ. ಈ ರೀತಿ ಸಾಧನೆಯನ್ನು ಮಾಡುವುದರಿಂದ ವ್ಯಕ್ತಿಯಲ್ಲಿನ ಪೃಥ್ವಿ ಮತ್ತು ಆಪ ಈ ತತ್ತ್ವಗಳು ಕಡಿಮೆಯಾಗುತ್ತಾ ಹೋಗಿ ತೇಜ, ವಾಯು ಮತ್ತು ಆಕಾಶ ಈ ತತ್ತ್ವಗಳು ಹೆಚ್ಚಾಗುತ್ತಾ ಹೋಗುತ್ತವೆ. ದೇಹದಲ್ಲಿನ ಪಂಚತತ್ತ್ವಗಳು ಚೈತನ್ಯದ ಸ್ತರದಲ್ಲಿ ಪ್ರಕ್ಷೇಪಿಸತೊಡಗಿದಾಗ ಯಾವ ಪಂಚತತ್ತ್ವಗಳಿಂದಾಗಿ ಯಾವ ಅನುಭೂತಿಗಳು ಬರುತ್ತವೆ ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಸಾಧನೆಯನ್ನು ಮಾಡುವುದರಿಂದ ದೇಹದಿಂದ ಪ್ರಕ್ಷೇಪಿಸುವ ಪಂಚತತ್ತ್ವಗಳು ಸೂಕ್ಷ್ಮ ಸ್ತರದ್ದಾಗಿರುತ್ತವೆ; ಆದುದರಿಂದ ಅವುಗಳಿಗೆ ಸಂಬಂಧಿಸಿದ ಅನುಭೂತಿ ಗಳು ಪಂಚಜ್ಞಾನೇಂದ್ರಿಯಗಳಿಗೆ ಬರದೇ ಪಂಚಸೂಕ್ಷ್ಮ ಜ್ಞಾನೇಂದ್ರಿಯಗಳಿಗೆ ಬರುತ್ತವೆ; ಆದುದರಿಂದ ಅವು ಸೂಕ್ಷ್ಮದಲ್ಲಿನ ಅನುಭೂತಿಗಳು ಆಗಿರುತ್ತವೆ. ಸೂಕ್ಷ್ಮದಲ್ಲಿನ ಅನುಭೂತಿಗಳು ಸಾಧನೆ ಮಾಡುವವರಿಗೆ ಮಾತ್ರ ಬರುತ್ತವೆ.

೧ ಇ ೩. ಬೆರಳುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವದಿಂದಾಗಿ ನೀರಿಗೆ ತಿಳಿ ಗುಲಾಬಿ ಬಣ್ಣ ಬರುವುದು : ಸಾಧನೆಯನ್ನು ಮಾಡುವುದರಿಂದ ದೇಹದಲ್ಲಿ ಬದಲಾವಣೆಯಾಗುತ್ತದೆ ಮತ್ತು ದೇಹ ದಿಂದ ಪಂಚತತ್ತ್ವಗಳ ಪ್ರಕ್ಷೇಪಣೆಯಾಗತೊಡಗುತ್ತದೆ. ಸಾಧನೆಯಿಂದಾಗಿ ಸಂಪೂರ್ಣ ದೇಹದಿಂದ ತೇಜತತ್ತ್ವ ಪ್ರಕ್ಷೇಪಿಸುತ್ತದೆ. ಆದುದರಿಂದ ಅದು ಬೆರಳುಗಳಿಂದಲೂ ಪ್ರಕ್ಷೇಪಿಸುತ್ತದೆ. ಬೆರಳನ್ನು ನೀರಿನಲ್ಲಿ ಮುಳುಗಿಸುವುದರಿಂದ ಬೆರಳಿನಿಂದ ನೀರಿನಲ್ಲಿ ತೇಜತತ್ತ್ವ ಪ್ರಕ್ಷೇಪಿಸಿತು, ಅದರಿಂದ ನೀರಿಗೆ ತಿಳಿ ಗುಲಾಬಿ ಬಣ್ಣ ಬಂದಿತು ಮತ್ತು ಅದು ನಮಗೆ ಸ್ಥೂಲದಿಂದ ಕಣ್ಣುಗಳಿಗೆ ಕಾಣಿಸಿತು; ಏಕೆಂದರೆ ಕಣ್ಣುಗಳಿಗೆ ಸ್ಥೂಲದಲ್ಲಿನ ತೇಜತತ್ತ್ವದ ಅಂದರೆ ರೂಪ, ಬಣ್ಣ ಅಥವಾ ಪ್ರಕಾಶದ ಅರಿವಾಗುತ್ತದೆ.

೧ ಇ ೪. ಒಂದಕ್ಕಿಂತ ಹೆಚ್ಚು ಬೆರಳುಗಳನ್ನು ಮುಳುಗಿಸುತ್ತಾ ಹೋದಂತೆ ನೀರಿನ ಗುಲಾಬಿ ಬಣ್ಣ ಹೆಚ್ಚಾಗುತ್ತಾ ಹೋಗುವುದರ ಕಾರಣ : ಎಲ್ಲ ಕೈಬೆರಳುಗಳು ಒಂದೇ ರೀತಿ ಇರುವುದಿಲ್ಲ. ಆದುದರಿಂದ ಪ್ರತಿಯೊಂದು ಬೆರಳಿನಿಂದ ಪಂಚತತ್ತ್ವಗಳ ಪೈಕಿ ವಿಶಿಷ್ಟ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗು ತ್ತಿರುತ್ತದೆ, ಉದಾ. ಕಿರುಬೆರಳಿನಿಂದ ಪೃಥ್ವಿತತ್ತ್ವ ಅನಾಮಿಕದಿಂದ (ಉಂಗುರ ಬೆರಳು) ಆಪತತ್ತ್ವ, ಮಧ್ಯದ ಬೆರಳಿನಿಂದ ತೇಜತತ್ತ್ವ – (ಸದ್ಗುರು) ಡಾ. ಮುಕುಲ ಗಾಡಗೀಳ

ತರ್ಜನಿಯಿಂದ ವಾಯುತತ್ತ್ವ ಮತ್ತು ಹೆಬ್ಬೆರಳಿನಿಂದ ಆಕಾಶತತ್ತ್ವ, ಹೀಗಿದ್ದರೂ ಯಾವ ರೀತಿ ದೇಹದಿಂದ ಐದೂ ತತ್ತ್ವಗಳ ಪ್ರಕ್ಷೇಪಣೆಯಾಗುತ್ತದೆಯೋ ಅದೇ ರೀತಿ ಅವು ಕೈಯ ಪ್ರತಿಯೊಂದು ಬೆರಳಿನಿಂದಲೂ ಪ್ರಕ್ಷೇಪಿಸುತ್ತದೆ. ಆದುದರಿಂದ ಯಾವಾಗ ನೀರಿನಲ್ಲಿ ಮೊದಲು ತರ್ಜನಿ (ಹೆಬ್ಬೆರಳಿನ ಪಕ್ಕದ ಬೆರಳು) ಮುಳುಗಿಸಿದೆವೋ, ಅದರಿಂದ ಪ್ರಕ್ಷೇಪಿಸಲಾದ ತೇಜತತ್ತ್ವವು ಕಣ್ಣುಗಳಿಗೆ ಬಣ್ಣದ ಮಾಧ್ಯಮದಿಂದ ಕಾಣಿಸಿತು. ಅನಂತರ ಯಾವಾಗ ತರ್ಜನಿಯ ಜೊತೆಗೆ ಮಧ್ಯಮ ಬೆರಳನ್ನೂ ನೀರಿನಲ್ಲಿ ಮುಳುಗಿಸಿದೆವೋ, ಆಗ ಆ ಎರಡೂ ಬೆರಳುಗಳಲ್ಲಿನ ತೇಜತತ್ತ್ವವು ನೀರಿನಲ್ಲಿ ಪ್ರಕ್ಷೇಪಿತವಾಯಿತು. ಆದುದರಿಂದ ನೀರಿನ ಗುಲಾಬಿ ಬಣ್ಣ ಮೊದಲಿಗಿಂತ ಹೆಚ್ಚಾಯಿತು. ಅದರಂತೆ ಕ್ರಮವಾಗಿ ೩ ಮತ್ತು ೪ ನೇ ಬೆರಳುಗಳನ್ನು ನೀರಿನಲ್ಲಿ ಮುಳುಗಿಸಿದಾಗ ನೀರಿನ ಗುಲಾಬಿ ಬಣ್ಣವು ಇನ್ನಷ್ಟು ಹೆಚ್ಚಾಯಿತು; ಏಕೆಂದರೆ ಬೆರಳುಗಳ ಸಂಖ್ಯೆ ಹೆಚ್ಚಾದುದರಿಂದ ತೇಜತತ್ತ್ವವು ಇನ್ನೂ ಹೆಚ್ಚು ಪ್ರಮಾಣದಲ್ಲಿ ನೀರಿನಲ್ಲಿ ಪ್ರಕ್ಷೇಪಿಸಿತು.

೧ ಇ ೫. ನೀರಿನಲ್ಲಿ ಬೆರಳು ಅಥವಾ ಬೆರಳುಗಳನ್ನು ಮುಳುಗಿಸಿ ದಾಗ ನೀರಿಗೆ ಬಂದ ಗುಲಾಬಿ ಬಣ್ಣ ನೀರಿನಿಂದ ಬೆರಳು ಅಥವಾ ಬೆರಳುಗಳನ್ನು ಹೊರಗೆ ತೆಗೆದಾಗ ಇಲ್ಲವಾಗುವುದು; ಆದರೆ ಆ ನೀರಿನಲ್ಲಿ ಪಕ್ಷೇಪಿಸಲಾದ ತೇಜತತ್ತ್ವದ ಸೂಕ್ಷ್ಮ ಅನುಭೂತಿ ಯನ್ನು ಪಡೆಯಲು ಸಾಧ್ಯವಿರುವುದು : ಎಲ್ಲಿಯವರೆಗೆ ನೀರಿನಲ್ಲಿ ಬೆರಳು ಅಥವಾ ಬೆರಳುಗಳನ್ನು ಮುಳುಗಿಸಲಾಗುತ್ತವೆಯೋ, ಅಲ್ಲಿಯವರೆಗೆ ನೀರಿನಲ್ಲಿ ಗುಲಾಬಿ ಬಣ್ಣ ಕಾಣಿಸುತ್ತದೆ ಮತ್ತು ಬೆರಳು ಅಥವಾ ಬೆರಳುಗಳನ್ನು ನೀರಿನಿಂದ ಹೊರಗೆ ತೆಗೆದಾಗ ನೀರಿನ ಗುಲಾಬಿ ಬಣ್ಣವು ಕಣ್ಮರೆಯಾಗಿ ನೀರು ಸಾಮಾನ್ಯ ಸ್ಥಿತಿಗೆ ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಬೆರಳುಗಳಿಂದ ಪ್ರಕ್ಷೇಪಿಸಲಾದ ತೇಜತತ್ತ್ವ ವನ್ನು ನೋಡಲು ನೀರು ಒಂದು ಮಾಧ್ಯಮವಾಗಿದೆ. ಎಲ್ಲಿಯವರೆಗೆ ನೀರಿನಲ್ಲಿ ಬೆರಳು ಅಥವಾ ಬೆರಳುಗಳು ಮುಳುಗಿರುತ್ತವೆಯೋ, ಅಲ್ಲಿಯವರೆಗೆ ನೀರಿನಲ್ಲಿ ತೇಜತತ್ತ್ವದ ಪ್ರಕ್ಷೇಪಣೆಯಾಗುತ್ತಿರುತ್ತದೆ ಮತ್ತು ಅದು ಕಣ್ಣುಗಳಿಗೆ ಗುಲಾಬಿ ಬಣ್ಣದ ಮಾಧ್ಯಮದಿಂದ ಕಾಣಿಸುತ್ತದೆ. ಗುಲಾಬಿ ಬಣ್ಣವು ತೇಜತತ್ತ್ವ ಕಾಣಿಸುವುದರ ಸ್ಥೂಲ ಲಕ್ಷಣವಾಗಿದೆ; ಆದುದರಿಂದ ಬೆರಳುಗಳಿಂದ ನೀರಿನಲ್ಲಿ ಪ್ರಕ್ಷೇಪಿಸಲಾದ ತೇಜತತ್ತ್ವದ ಸೂಕ್ಷ್ಮದಲ್ಲಿನ ಅನುಭೂತಿಯನ್ನೂ ನಾವು ಪಡೆಯಬಹುದು. ಬೆರಳುಗಳನ್ನು ಮುಳುಗಿಸಿದ ಆ ನೀರು ಬೆರಳು ಗಳನ್ನು ಮುಳುಗಿಸದ ಸಾದಾ ನೀರಿಗಿಂತ ಸೂಕ್ಷ್ಮದಿಂದ ಚೈತನ್ಯಮಯ ಮತ್ತು ಹೆಚ್ಚು ಪಾರದರ್ಶಕ ಕಾಣಿಸುತ್ತದೆ.

೧ ಇ ೬. ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿರುವಾಗ ನೀರಿಗೆ ಗುಲಾಬಿ ಬಣ್ಣವನ್ನು ಹೊರತುಪಡಿಸಿ ಬರಬಹುದಾದ ಇತರ ಬಣ್ಣಗಳು : ಸಾಧನೆಯನ್ನು ಮಾಡುವ ಉನ್ನತ ವ್ಯಕ್ತಿಯು ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿರುವಾಗ ನೀರಿಗೆ ಬರುವ ಗುಲಾಬಿ ಬಣ್ಣ ಆ ವ್ಯಕ್ತಿಯಲ್ಲಿನ ಪ್ರೀತಿಯ ಬಣ್ಣವಾಗಿರುತ್ತದೆ. ಸೂಕ್ಷ್ಮದಲ್ಲಿನ ಪ್ರೀತಿಯ ಬಣ್ಣವು ಗುಲಾಬಿಯಾಗಿದೆ. ಯಾವ ವ್ಯಕ್ತಿಯಲ್ಲಿ ಇತರರ ಬಗ್ಗೆ ‘ಪ್ರೀತಿ ಈ ಗುಣವಿರುತ್ತದೆಯೋ ಆ ವ್ಯಕ್ತಿಯ ಚರ್ಮ ತಿಳಿ ಗುಲಾಬಿ ಆಗಿರುವುದು ಕಾಣಿಸುತ್ತದೆ. ಭಕ್ತಿಯ ಸೂಕ್ಷ್ಮದಲ್ಲಿನ ಬಣ್ಣ ತಿಳಿ ನೀಲಿಯಾಗಿದೆ. ಭಕ್ತಿರಸ ದಲ್ಲಿ ಮುಳುಗಿದ ವ್ಯಕ್ತಿಯ ಕಣ್ಣುಗಳು ತಿಳಿನೀಲಿಯಾಗಿ ಕಾಣಿಸುತ್ತವೆ. ಇಂತಹ ವ್ಯಕ್ತಿಯು ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದರೆ ನೀರು ತಿಳಿ ನೀಲಿ ಕಾಣಿಸುತ್ತದೆ. ಚೈತನ್ಯದ ಸ್ತರದಲ್ಲಿ ಕಾಣಿಸುವ ವ್ಯಕ್ತಿಯ ಚರ್ಮ ತಿಳಿಹಳದಿ ಕಾಣಿಸುತ್ತದೆ. ಒಂದು ವೇಳೆ ಅವರು ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದರೆ ನೀರಿಗೆ ತಿಳಿಹಳದಿ ಬಣ್ಣ ಬರುತ್ತದೆ. ಯಾವ ವ್ಯಕ್ತಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದೆಯೋ, ಅಂತಹ ವ್ಯಕ್ತಿಯು ನೀರಿನಲ್ಲಿ ಬೆರಳುಗಳನ್ನು ಮುಳುಗಿಸಿದರೆ ನೀರಿಗೆ ತಿಳಿಕಪ್ಪು ಬಣ್ಣ ಬರುತ್ತದೆ.

೨. ಬೆರಳುಗಳಿಂದ ಹೊಗೆ ಪ್ರಕ್ಷೇಪಣೆಯಾಗುವುದು ಕಾಣಿಸುವುದು

೨ ಅ. ಪ್ರಯೋಗದ ತಯಾರಿ : ಪ್ರಯೋಗಕ್ಕಾಗಿ ಕುಳಿತ ವ್ಯಕ್ತಿಗಳ ಮೊದಲ ಸಾಲಿನಿಂದ ಸುಮಾರು ೩ ಮೀಟರ್ ದೂರದಲ್ಲಿ ಕಪ್ಪು ಬಣ್ಣದ ಪರದೆಯನ್ನು ಇರಿಸಲಾಯಿತು. ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯು ಆ ಕಪ್ಪು ಪರದೆಯಿಂದ ಅರ್ಧದಿಂದ ೧ ಮೀಟರ್ ದೂರದಲ್ಲಿ ಕುರ್ಚಿಯಲ್ಲಿ ಕುಳಿತರು. ಅವರು ಬಲಗೈ ಮೇಲೆತ್ತಿ ಆ ಕೈಯ ಐದೂ ಬೆರಳುಗಳನ್ನು ನೇರಗೊಳಿಸಿ ಸ್ವಲ್ಪ ದೂರ ದೂರ ಇಟ್ಟರು. ಪ್ರಯೋಗವನ್ನು ನೋಡುವವರಿಗೆ ‘ಆ ಕೈಯ ಬೆರಳುಗಳ ಹಿಂದೆ ಕಪ್ಪು ಪರದೆ ಕಾಣಿಸುತ್ತದೆಯಲ್ಲ ?, ಎಂಬುದನ್ನು ಖಚಿತಪಡಿಸಿ ಕೊಳ್ಳಲಾಯಿತು ಮತ್ತು ಕಾಣಿಸದಿದ್ದರೆ, ಅದು ಕಾಣುವಂತೆ ಕುಳಿತುಕೊಳ್ಳಲು ಹೇಳಲಾಯಿತು. ಕೋಣೆಯಲ್ಲಿ ಮಂದ ಪ್ರಕಾಶವನ್ನು ಇಡಲಾಯಿತು.

೨ ಆ. ಪ್ರತ್ಯಕ್ಷ ಪ್ರಯೋಗ : ಪ್ರಯೋಗವನ್ನು ನೋಡುವವರಿಗೆ ಪ್ರಯೋಗವನ್ನು ತೋರಿಸುವ ಉನ್ನತ ವ್ಯಕ್ತಿಯ ಮೇಲೆತ್ತಿದ ಕೈಯ ಬೆರಳುಗಳ ತುದಿಗಳ ಕಡೆಗೆ ಏಕಾಗ್ರತೆಯಿಂದ ನೋಡಲು ಹೇಳಲಾಯಿತು. ‘ಬೆರಳುಗಳ ತುದಿಗಳಿಂದ ಉರಿಯುತ್ತಿರುವ ಊದುಬತ್ತಿಯಿಂದ ಹೊರಬರುವಂತಹ ಹೊಗೆ ಬರುವುದು ಕಾಣಿಸುತ್ತಿದೆಯೇ ?, ಎಂದು ಕೇಳ ಲಾಯಿತು. ಇದಕ್ಕೆ ಪ್ರಯೋಗ ನೋಡುವವರು ‘ಹೌದು ಎಂದು ಹೇಳಿದರು. ಅವರಲ್ಲಿನ ಕೆಲವರು ಮಧ್ಯದ ಬೆರಳು ಮತ್ತು ಕಿರುಬೆರಳಿನಿಂದ ಹೆಚ್ಚು ಪ್ರಮಾಣದಲ್ಲಿ ಹೊಗೆ ಹೊರಬರುತ್ತಿದೆ ಎಂದು ಹೇಳಿದರು.

೨ ಇ. ಬೆರಳುಗಳ ತುದಿಗಳಿಂದ ಉರಿಯುತ್ತಿರುವ ಊದುಬತ್ತಿ ಯಿಂದ ಹೊರಬರುವಂತಹ ಹೊಗೆ ಹೊರಬರುವುದರ ಹಿಂದಿನ ಶಾಸ್ತ್ರ : ಕೈಯ ಪ್ರತಿಯೊಂದು ಬೆರಳಿನಿಂದ ಪೃಥ್ವಿತತ್ತ್ವ ಮತ್ತು ತೇಜತತ್ತ್ವ ಪ್ರಕ್ಷೇಪಣೆಯಾಗುತ್ತಿರುತ್ತದೆ. ಅವುಗಳ ಸಂಯೋಗದಿಂದ ಹೊಗೆ ಪ್ರಕ್ಷೇಪಿಸುವುದು ಕಾಣಿಸುತ್ತದೆ. ಈ ಹೊಗೆ ಬೆರಳುಗಳಿಂದ ಪ್ರಕ್ಷೇಪಣೆಯಾಗುವ ವಾಯುತತ್ತ್ವದಿಂದ ಮೇಲೆ ಹೋಗುತ್ತದೆ ಮತ್ತು ವಿರಳ ವಾಗುತ್ತದೆ. ನೀರು ಬಿಸಿಯಾದಾಗ ನೀರಿನಿಂದ ಹಬೆ ಉತ್ಪನ್ನವಾಗುತ್ತದೆ ಮತ್ತು ನಮಗೆ ಅದು ಕಾಣಿಸುತ್ತದೆ ಇದು ಅದೇ ರೀತಿ ಆಗಿದೆ.

೨ ಇ ೧. ಕಿರುಬೆರಳು ಮತ್ತು ಮಧ್ಯದ ಬೆರಳಿನಿಂದ ಹೆಚ್ಚು ಪ್ರಮಾಣದಲ್ಲಿ ಹೊಗೆ ಪ್ರಕ್ಷೇಪಿಸುವುದರ ಕಾರಣ : ಕಿರುಬೆರಳಿ ನಲ್ಲಿ ಪೃಥ್ವಿತತ್ತ್ವವು ಪ್ರಮುಖವಾಗಿ ಇರುತ್ತದೆ ಮತ್ತು ಮಧ್ಯದ ಬೆರಳಿನಲ್ಲಿ ತೇಜತತ್ತ್ವವು ಪ್ರಧಾನವಾಗಿ ಇರುತ್ತದೆ. ಪೃಥ್ವಿತತ್ತ್ವ ಮತ್ತು ತೇಜತತ್ತ್ವದ ಸಂಯೋಗದಿಂದ ಹೊಗೆ ತಯಾರಾಗುತ್ತದೆ. ಆದುದರಿಂದ ಕಿರುಬೆರಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿಸುವ ಪೃಥ್ವಿತತ್ತ್ವ, ಹಾಗೆಯೇ ಅದರಿಂದ ಸ್ವಲ್ಪ ಪ್ರಮಾಣದಲ್ಲಿ ಪ್ರಕ್ಷೇಪಿಸುವ ತೇಜತತ್ತ್ವದ ಸಂಯೋಗದಿಂದ ಅದರಿಂದ ಹೊಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿಸುತ್ತದೆ. ಅದರಂತೆಯೇ ಮಧ್ಯದ ಬೆರಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಕ್ಷೇಪಿಸುವ ತೇಜತತ್ತ್ವ, ಹಾಗೆಯೇ ಅದರಿಂದ ಸ್ವಲ್ಪ ಪ್ರಮಾಣದಲ್ಲಿ ಪ್ರಕ್ಷೇಪಿಸುವ ಪೃಥ್ವಿತತ್ತ್ವದ ಸಂಯೋಗದಿಂದ ಅದರಿಂದ ಹೊಗೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗುವುದು ಕಾಣಿಸುತ್ತದೆ. ಉಳಿದ ಬೆರಳುಗಳಿಂದ ಪೃಥ್ವಿತತ್ತ್ವ ಮತ್ತು ತೇಜತತ್ತ್ವ ಇವೆರಡೂ ಕಡಿಮೆ ಪ್ರಮಾಣದಲ್ಲಿ ಪ್ರಕ್ಷೇಪಣೆ ಯಾಗುತ್ತವೆ. ಆದುದರಿಂದ ಆ ಬೆರಳುಗಳಿಂದ ಹೊಗೆ ಕಡಿಮೆ ಪ್ರಮಾಣದಲ್ಲಿ ಪ್ರಕ್ಷೇಪಣೆಯಾಗುವುದು ಕಾಣಿಸುತ್ತದೆ. – (ಸದ್ಗುರು) ಡಾ. ಮುಕುಲ ಗಾಡಗೀಳ ಪಿಎಚ್.ಡಿ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ಗೋವಾ. (೬.೧೨.೨೦೨೨)

ತಜ್ಞರು, ಅಧ್ಯಯನಕಾರರು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !

‘ಸಂತರ ದೇಹದಲ್ಲಿನ ಬುದ್ಧಿಗೆ ಮೀರಿದ ಬದಲಾವಣೆಗಳ ಬಗ್ಗೆ ಸಂಶೋಧನೆಯನ್ನು ಮಾಡಿ ಅವುಗಳ ಕಾರ್ಯಕಾರಣಭಾವವನ್ನು ಕಂಡು ಹಿಡಿಯಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಸಾಧನೆಯಲ್ಲಿ ಉನ್ನತಿ ಮಾಡಿಕೊಂಡವರ ಕೈ ಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುವುದರ ಹಿಂದಿನ ಕಾರಣವೇನು ? ಇದಕ್ಕೆ ಸಂಬಂಧಿಸಿದಂತೆ ತಜ್ಞರು, ಅಧ್ಯಯನಕಾರರು, ಈ ವಿಷಯದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರ ಸಹಾಯ ನಮಗೆ ಲಭಿಸಿದರೆ ನಾವು ಕೃತಜ್ಞರಾಗಿರುವೆವು.

ಸಂಪರ್ಕ : ಶ್ರೀ. ಆಶಿಷ ಸಾವಂತ ವಿ-ಅಂಚೆ : [email protected]