ಎರಡು ವರ್ಷದೊಳಗೆ ಸರಕಾರೀಕರಣಗೊಂಡ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಿ ! – ನ್ಯಾಯವಾದಿ ಕಿರಣ ಬೆಟ್ಟದಪುರ
ದೇವಸ್ಥಾನದಲ್ಲಿ ಅವ್ಯವಹಾರ ಅಥವಾ ಜಗಳ ನಡೆದಾಗ ಅಂತಹ ದೇವಸ್ಥಾನವನ್ನು ಸರ್ಕಾರ ಸರ್ಕಾರಿಕರಣಗಳಿಸಬಹುದು. ಆದರೆ ಎರಡು ವರ್ಷದೊಳಗೆ ಸಮಸ್ಯೆಗಳನ್ನೆಲ್ಲವನ್ನು ಪರಿಹರಿಸಿ ಆ ದೇವಸ್ಥಾನವನ್ನು ಮರಳಿ ಭಕ್ತರಿಗೆ ಒಪ್ಪಿಸಬೇಕೆಂಬ ಕಾನೂನು ಇದೆ. ಕರ್ನಾಟಕದಲ್ಲಿ ಸುಮಾರು ೩೫ ಸಾವಿರ ದೇವಸ್ಥಾನಗಳು ಸರ್ಕಾರಿಕರಣಗೊಂಡಿವೆ. ದೇವಸ್ಥಾನಗಳ ಲೂಟಿ ಮಾಡುವುದು ಸರ್ಕಾರೀಕರಣದ ಮೂಲ ಉದ್ದೇಶ. ಅಂದರೆ ಸರ್ಕಾರೀಕರಣಗೊಂಡ ಎಲ್ಲಾ ದೇವಸ್ಥಾನಗಳಲ್ಲಿ ಭ್ರಷ್ಟಾಚಾರ ಅಥವಾ ಅವ್ಯವಹಾರ ನಡೆದಿದೆ ಎಂದು ಅರ್ಥವಾಗುತ್ತದೆ.
ಹಿಂದೂಗಳ ನಾಶಕ್ಕೆ ಸಂಚು – ಶ್ರೀ. ಚೇತನ ರಾಜಹಂಸ, ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ
ನಗರ ನಕ್ಸಲರು ಸೇರಿಕೊಂಡು ಹಿಂದೂ ಧರ್ಮವನ್ನು ಭಯೋತ್ಪಾದನೆಗೆ ಹೋಲಿಸುವ ಷಡ್ಯಂತ್ರ ಮಾಡುವುದರೊಂದಿಗೆ ಸನಾತನ ಧರ್ಮದ ನಾಶ ಮಾಡಬೇಕೆಂಬ ಹೇಳಿಕೆಗಳನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ. ಸನಾತನ ಧರ್ಮವನ್ನು ನಾಶ ಮಾಡುವುದೆಂದರೆ ೧೦೦ ಕೋಟಿ ಹಿಂದೂಗಳನ್ನು ನಾಶ ಮಾಡುವುದು ಅವರ ಉದ್ದೇಶವಾಗಿದೆ.
ದೇವಸ್ಥಾನಗಳಲ್ಲೂ ಭ್ರಷ್ಟಾಚಾರ ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
ಹಿಂದೂ ಜನಜಾಗೃತಿ ಸಮಿತಿ ಹಾಗೂ ಅನೇಕ ಧಾರ್ಮಿಕ ಸಂಸ್ಥೆಗಳು ಸೇರಿ ಹೋರಾಟ ಮಾಡಿದ್ದರ ಪರಿಣಾಮವಾಗಿ ಸರಕಾರೀಕರಣಗೊಂಡ ಕೊಲ್ಲೂರು ಮೂಕಾಂಬಿಕೆ, ಪಂಢರಾಪುರ, ತುಳಜಾ ಭವಾನಿ, ಶಿರ್ಡಿ ಸಾಯಿ ಬಾಬಾ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿನ ಭ್ರಷ್ಟಾಚಾರ ಬಹಿರಂಗ ಮಾಡಿದ್ದೇವೆ. ಅಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ.
ಪರಿಷತ್ತಿನಲ್ಲಿ ಸಂತರ ಮಾರ್ಗದರ್ಶನ
ಶ್ರೀ ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ (ವಿಡಿಯೋ ಮೂಲಕ ಸಂದೇಶ)
ಪ್ರಾಚೀನ ಕಾಲದಿಂದ ಅನೇಕ ಸಂಪ್ರದಾಯ, ಆಚಾರ, ಉತ್ಸವಗಳು ದೇವಸ್ಥಾನ ಗಳಲ್ಲಿ ನಡೆಯುತ್ತಿವೆ, ಇದನ್ನು ದೇವಾಲಯಕ್ಕೆ ಬರುವ ಭಕ್ತರು ಅದನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು, ಜೊತೆಗೆ ದೇವಸ್ಥಾನಕ್ಕೆ ಲಭಿಸಿದ ನಿಧಿಯನ್ನು ಉತ್ತಮ ರೀತಿಯಲ್ಲಿ ವಿನಿಯೋಗ ಮಾಡಬೇಕು. ಹಿಂದೂಗಳಲ್ಲಿ ಧರ್ಮಶಿಕ್ಷಣವಿಲ್ಲದ ಕಾರಣ ನಮ್ಮ ಧರ್ಮದ ಮೇಲೆ ಸಂಶಯ ಪಡುತ್ತಾರೆ, ಆದ್ದರಿಂದ ಪ್ರತಿ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ನೀಡುವಂತಾಗಬೇಕು.
ಮಹರ್ಷಿ ಆನಂದ ಗುರೂಜಿ (ಆನ್‌ಲೈನ್ ಮೂಲಕ ಮಾರ್ಗದರ್ಶನ)
ದೇವಾಲಯದ ಸಂರಕ್ಷಣೆ ಗಾಗಿ ಮಾಡುತ್ತಿರುವ ಈ ಕಾರ್ಯಕ್ರಮ ಅತ್ಯುತ್ತಮ ವಾಗಿದೆ. ನಾನು ಈ ಕಾರ್ಯದಲ್ಲಿ ಯಾವತ್ತಿಗೂ ತಮ್ಮೊಂದಿಗೆ ಇದ್ದೇನೆ, ಇದು ನಮ್ಮ ಧರ್ಮವೇ ಆಗಿದೆ.
ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಎಲ್ಲ ದೇವಾಲಯಗಳ ಲ್ಲಿಯೂ ಗ್ರಂಥಾಲಯ, ಮಕ್ಕಳಿ ಗಾಗಿ ಬಾಲಸಂಸ್ಕಾರ ವರ್ಗ, ಯುವಕರಿಗಾಗಿ ಸಂಸ್ಕೃತ ವರ್ಗ ಮತ್ತು ಧರ್ಮಶಿಕ್ಷಣ ನೀಡುವ ಫಲಕಗಳನ್ನು ಅಳವಡಿಸಿ ಧರ್ಮಪ್ರಸಾರದ ಕಾರ್ಯ ಮಾಡಬಹುದಾಗಿದೆ. ಜನ್ಮಹಿಂದೂಗಳನ್ನು ಕರ್ಮಹಿಂದೂಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯ ದೇವಸ್ಥಾನಗಳ ಮೂಲಕವೇ ಸಾಧ್ಯವಾಗಲಿಕ್ಕಿದೆ.
ಪರಿಷತ್ತಿನ ಮೂಲಕ ಇಡಲಾದ ಬೇಡಿಕೆಗಳು !
ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ಎಲ್ಲ ದೇವಸ್ಥಾನಗಳನ್ನು ಮಾನ್ಯ ಸರ್ವೋಚ್ಚ ನ್ಯಾಯಲಯದ ಆದೇಶದಂತೆ ಭಕ್ತರಿಗೆ ಒಪ್ಪಿಸಬೇಕು. ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಭಕ್ತರು ಅರ್ಪಣೆ ಮಾಡಿದ ಹಣವು ತೆರಿಗೆಯಲ್ಲ. ಈ ಹಣದ ಮೇಲೆ ಸರಕಾರದ ಯಾವುದೇ ಅಧಿಕಾರ ಇಲ್ಲ. ಅದಕ್ಕಾಗಿ ಭಕ್ತರು ಅರ್ಪಿಸಿದ ಈ ಹಣವನ್ನು ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು. ಪ್ರಾಚೀನ ಹಾಗೂ ಪುರಾತತ್ವ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳ ಜೀರ್ಣೋದ್ದಾರವನ್ನು ಮಾಡಲು ರಾಜ್ಯ ಸರಕಾರವು ಬಜೆಟ್‌ನಲ್ಲಿ ಹಣವನ್ನು ಮೀಸಲಿಡಬೇಕು. ಹಿಂದೂ ಧಾರ್ಮಿಕ ಕ್ಷೇತ್ರದ ಮೇಲಿನ ಅನ್ಯಮತೀಯರ ಅನಧಿಕೃತ ಅತಿಕ್ರಮಣವನ್ನು ತೆರವು ಮಾಡಬೇಕು ಮತ್ತು ದೇವಸ್ಥಾನಗಳ ಸಮಸ್ಯೆ ಪರಿಹರಿಸಲು ತ್ವರಿತಗತಿ ನ್ಯಾಯಾಲಯ ಸ್ಥಾಪಿಸಬೇಕು. ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಿಂದ ಸಂಗ್ರಹ ಮಾಡುವ ‘ಕಾಮನ್ ಪೂಲ್ ಫಂಡ್ ಹಣವನ್ನು ಕೇವಲ ಹಿಂದೂ ಧರ್ಮದ ಉದ್ದೇಶಕ್ಕೆ ಬಳಸಬೇಕು.
ದೇವಸ್ಥಾನಗಳ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು