ಇಸ್ಲಾಮಾಬಾದ್ ಕಡೆಗೆ ಪ್ರತಿಭಟನಾಕಾರರ ಚಲನೆ
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಬಲೂಚ್ ನಾಗರಿಕರ ಹತ್ಯಾಕಾಂಡ ಮತ್ತು ನಾಪತ್ತೆಗಳ ವಿರುದ್ಧ ಸಾವಿರಾರು ಬಲೂಚ್ ನಾಗರಿಕರು ಬೀದಿಗಿಳಿದಿದ್ದಾರೆ.
ಕಳೆದ ಕೆಲ ದಿನಗಳಿಂದ ಈ ಆಂದೋಲನ ನಡೆಯುತ್ತಿದ್ದು, ಇದೀಗ ಆಂದೋಲನ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಸಾಗುತ್ತಿದೆ. ಬಲೂಚಿಸ್ತಾನ್ ಪ್ರಾಂತ್ಯದ ಟರ್ಬತ್‌ನಿಂದ ಆರಂಭವಾದ ಮೆರವಣಿಗೆಯು ಇಸ್ಲಾಮಾಬಾದ್ ಬಳಿಯ ತೌನ್ಸಾ ಪಟ್ಟಣವನ್ನು ತಲುಪಿತು. ಇದಕ್ಕೂ ಮೊದಲು, ಮೆರವಣಿಗೆಯು ಡೇರಾ ಘಾಜಿ ಖಾನ್ ನಗರವನ್ನು ತಲುಪಿದಾಗ, 20 ಬಲೂಚಿ ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು.
ತೌನ್ಸಾದಲ್ಲಿ ನಡೆದ ರ್ಯಾಲಿಯಲ್ಲಿ, ಪಖ್ತೂನ್ ರಾಷ್ಟ್ರೀಯವಾದಿ ನಾಯಕ ಅಲಿ ವಜೀರ್ ಇವರು ಬಲೂಚ್ ಏಕತೆಗೆ ಕರೆ ನೀಡಿದರು. ಇಸ್ಲಾಮಾಬಾದ್ ತಲುಪಿದ ಕೂಡಲೇ ಮುಂದಿನ ಕ್ರಿಯಾ ಯೋಜನೆಯನ್ನು ಪ್ರಕಟಿಸಲಾಗುವುದು ಎಂದು ಬಲೂಚಿಸ್ತಾನ್ ಯಕ್ಜೆಹ್ತಿ ಸಮಿತಿ ತಿಳಿಸಿದೆ. ರಾಜಕೀಯ ನಾಯಕ ಮೆಹ್ರಾಂಗ್ ಬಲೂಚ್ ಮಾತನಾಡಿ, ಈ ಚಳವಳಿಯು ಸರಕಾರದ ವಿರುದ್ಧದ ಏಕತೆಯ ಧ್ವನಿಯಾಗಿದೆ. ‘ಬಲೂಚಿಸ್ತಾನ ಪ್ರಾಂತ್ಯದ ಡೇರಾ ಬುಗ್ತಿ ಮತ್ತು ಕೆಚ್ ಜಿಲ್ಲೆಗಳಿಂದ ಪಾಕಿಸ್ತಾನದ ಏಜೆನ್ಸಿಗಳು ಇನ್ನೂ 8 ಬಲೂಚ್ ಜನರನ್ನು ಅಪಹರಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿವೆ’ ಎಂದು ಆರೋಪಿಸಲಾಗಿದೆ.
(ಸೌಜನ್ಯ: South Asia Newsline)