ತೈವಾನ್ ಶೀರ್ಘದಲ್ಲೇ ಚೀನಾದ ಜೊತೆ ವಿಲೀನವಾಗುವುದು ! – ಶೀ ಜಿನಪಿಂಗ

ಶೀ ಜಿನಪಿಂಗ

ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕಾ) – ಮುಂಬರುವ ಕೆಲವು ಸಮಯದಲ್ಲಿ ತೈವಾನ್ ಚೀನಾದ ಮುಖ್ಯ ಭೂ ಪ್ರದೇಶದ ಜೊತೆಗೆ ಜೋಡಿಸಲಾಗುವುದು. ಶಾಂತಿಯ ಮಾರ್ಗದಿಂದ ತೈವಾನವನ್ನು ಚೀನಾದಲ್ಲಿ ವಿಲೀನಗೊಳಿಸುವ ಪ್ರಯತ್ನ ನಮ್ಮದಾಗಿದೆ. ನಾವು ಯಾವುದೇ ರೀತಿಯ ಬಲವಂತ ಮಾಡುವುದಿಲ್ಲ ಎಂದು ಚೀನಾದ ರಾಷ್ಟ್ರಾಧ್ಯಕ್ಷ ಶೀ ಜಿನಪಿಂಗ್ ಇವರು ಹೇಳಿಕೆ ನೀಡಿದರು. ಅವರು ಇಲ್ಲಿ ನಡೆದಿರುವ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದರು. ಈ ಶೃಂಗಸಭೆಯಲ್ಲಿ ಅಮೆರಿಕಾ ಮತ್ತು ಚೀನಾ ಇವರ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು. ಇಸ್ರೈಲ್-ಹಮಾಸ್ ಯುದ್ಧ ಮತ್ತು ತೈವಾನ್ ಈ ಎರಡು ವಿಷಯಗಳ ಬಗ್ಗೆ ಎರಡು ನಾಯಕರಲ್ಲಿ ಚರ್ಚೆ ನಡೆದಿರುವ ಸಾಧ್ಯತೆ ಇದೆ.

೧. ಅಮೇರಿಕಾವು ತೈವಾನ್ ಗೆ ಇತ್ತೀಚಿಗೆ ಸೈನ್ಯ ಸಹಾಯ ನೀಡಿತ್ತು. ಆದ್ದರಿಂದ ಅಮೆರಿಕಾ ಮತ್ತು ಚೀನಾದ ಸಂಬಂಧದಲ್ಲಿ ಬಿರುಕು ಮೂಡಿದೆ.

೨. ಇಂತಹದರಲ್ಲಿ ಅಮೆರಿಕಾದಿಂದ ‘ಚೀನಾ ೨೦೨೫ ಅಥವಾ ೨೦೨೭ ರ ವರೆಗೆ ತೈವಾನಿನ ಮೇಲೆ ಹಿಡಿದ ಸಾಧಿಸುವುದು’ ಎಂದು ಹೇಳಿತ್ತು. ಇದರಿಂದ ಚೀನಾದಿಂದ ಅಮೆರಿಕಾದ ಕಿವಿ ಹಿಂಡಿದೆ. ಅಮೇರಿಕಾದಿಂದ ಘೋಷಿಸಲಾದ ದಿನಾಂಕ ತಪ್ಪಾಗಿದ್ದು ತೈವಾನಿನ ಮೇಲೆ ಹಿಡಿತ ಪಡೆಯುವ ಸಂದರ್ಭದಲ್ಲಿ ಇಲ್ಲಿಯವರೆಗೆ ಸಮಯ ನಿಶ್ಚಿತವಾಗಿಲ್ಲ ಎಂದು ಜಿನಪಿಂಗ ಸ್ಪಷ್ಟಪಡಿಸಿದರು, ಎಂದು ಕೆಲವು ಅಧಿಕಾರಿಗಳು ಮಾಹಿತಿ ನೀಡಿದರು.

೩. ಇನ್ನೊಂದು ಕಡೆ ‘ತೈವಾನಿನ ಜೊತೆಗೆ ಶಾಂತಿಯುತವಾಗಿ ವಿಲೀನವಾಗುವ ಚೀನಾದ ಉದ್ದೇಶಕ್ಕೆ ಅಮೆರಿಕಾ ಬೆಂಬಲಿಸಿದೆ’, ಎಂದು ಕೂಡ ಚೀನಾದ ಅಧಿಕಾರಿಗಳು ಹೇಳಿದರು. ಆದರೆ ಈ ವಾರ್ತೆಯನ್ನು ವೈಟ್ ಹೌಸ್ ತಿರಸ್ಕರಿಸಿದೆ.

ಸಂಪಾದಕರ ನಿಲುವು

* ವಿಸ್ತರಣಾವಾದಿ ಚೀನಾಗೆ ಪಾಠ ಕಲಿಸುವುದಕ್ಕಾಗಿ ಈಗ ಭಾರತವೇ ಚೀನಾ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಅದರ ನೇತೃತ್ವ ವಹಿಸಬೇಕು, ಇದು ಪರೋಕ್ಷವಾಗಿ ಭಾರತದ ಹಿತದಲ್ಲಿಯೇ ಇರುವುದು !