ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ಮೇಲೆ ಕ್ರಮ ಕೈಗೊಳ್ಳಿ ! – ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ರುಚಿರ ಕಂಬೋಜ್

ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ರುಚಿರ ಕಂಬೋಜ್ ಇವರ ಬೇಡಿಕೆ

ಜಿನೇವಾ – ಗಡಿ ಆಚೆಗಿನ ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಭಾರತದಲ್ಲಿ ಬಹಳಷ್ಟು ಹಾನಿಯಾಗಿದೆ, ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಸ್ಥಾಯಿ ಪ್ರತಿನಿಧಿ ರುಚಿರಾ ಕಂಬೋಜ್ ಇವರು ಹೇಳಿದರು. ಅವರು ಪಾಕಿಸ್ತಾನ ಮತ್ತು ಚೀನಾದ ಹೆಸರು ಹೇಳದೆ ಟೀಕಿಸಿದರು. (ವಿಶ್ವ ಸಂಸ್ಥೆಯ ಸಭೆಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಹೆಸರು ಹೇಳುವಲ್ಲಿ ಏನು ಅಡಚಣೆ ಇದೆ ? ಇದು ಭಾರತೀಯರಿಗೆ ತಿಳಿಯಬೇಕು ! – ಸಂಪಾದಕರು) ಗಡಿಯಾಚೆಯಿಂದ ಕಾನೂನ ಬಾಹೀರವಾಗಿ ಶಸ್ತ್ರಾಸ್ತ್ರದ ಕಳ್ಳ ಸಾಗಾಣಿಕೆ ನಡೆಸಿ ಭಯೋತ್ಪಾದಕ ಸಂಘಟನೆಯ ಮಾಧ್ಯಮದಿಂದ ದೇಶದಲ್ಲಿ ಭಯೋತ್ಪಾದನೆ ಪಸರಿಸಲಾಗುತ್ತದೆ. ಭಯೋತ್ಪಾದಕರಿಗೆ ಆಶ್ರಯ ನೀಡುವ ಇಂತಹ ದೇಶಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕಂಬೋಜ್ ಇವರು ಕರೆ ನೀಡಿದರು.

ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳ ಪೂರೈಕೆ

ಕಂಬೋಜ್ ತಮ್ಮ ಮಾತನ್ನು ಮುಂದುವರೆಸುತ್ತಾ, ಭಯೋತ್ಪಾದಕ ಸಂಘಟನೆಗಳಿಂದ ವಶಪಡಿಸಿಕೊಳ್ಳಲಾಗಿರುವ ಶಸ್ತ್ರಾಸ್ತ್ರಗಳಿಂದ ಅವರಿಗೆ ಯಾರೋ ಸಹಾಯ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಇದು ಯಾವುದೇ ದೇಶದ ಸಹಾಯವಿಲ್ಲದೆ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಸಂಗ್ರಹಿಸಲು ಸಾಧ್ಯವಿಲ್ಲ. ಕೆಲವು ದೇಶ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡುತ್ತದೆ. ಈ ಜನರು ಕೇವಲ ಗಂಭೀರ ಅಪರಾಧ ಮಾಡುವುದು ಅಷ್ಟೇ ಅಲ್ಲದೆ, ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುವುದಕ್ಕಾಗಿ ನಕಲಿ ರಾಷ್ಟ್ರ ವಿರೋಧಿ ಕರೆನ್ಸಿ ಮತ್ತು ಶಸ್ತ್ರಾಸ್ತ್ರ ಪೂರೈಸುತ್ತದೆ ಎಂದು ಹೇಳಿದರು.

ಸಂಪಾದಕರ ನಿಲುವು

* ವಿಶ್ವ ಸಂಸ್ಥೆಯಲ್ಲಿ ಈ ರೀತಿ ಒತ್ತಾಯಿಸಿ ಯಾವುದೇ ಪರಿಣಾಮವಾಗುವುದಿಲ್ಲ. ಭಾರತವು ಸ್ವತಃ ಆಕ್ರಮಣಕಾರಿ ನೀತಿ ಅವಲಂಬಿಸಿ ಇಂತಹವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕ !