ಇಂದು ಬೆಳಗ್ಗಿನಿಂದಲೇ ನನಗೆ ಶ್ರೀ ದತ್ತಗುರುಗಳ ನೆನಪಾಗಿ ಅವರ ಭಜನೆಗಳು ನೆನಪಾಗುತ್ತಿದ್ದವು. ಬೆಳಗ್ಗೆ ಸೇವೆ ಮುಗಿದ ನಂತರ ನಾನು ರಾಮನಾಥಿ ಆಶ್ರಮದ ಧ್ಯಾನಮಂದಿರದಲ್ಲಿ ನಾಮಜಪಕ್ಕೆ ಕುಳಿತುಕೊಂಡೆ. ಆಗ ಧ್ಯಾನಮಂದಿರದಲ್ಲಿದ್ದ ಅಷ್ಟ ದೇವತೆಗಳಲ್ಲಿನ ದತ್ತನ ಚಿತ್ರವನ್ನು ನೋಡಿ, ‘ಶ್ರೀ ಗುರುದೇವ ದತ್ತ’ ಈ ನಾಮಜಪ ಮಾಡೋಣ’, ಎಂದು ನನ್ನ ಮನಸ್ಸಿಗೆ ಅನಿಸಿ ನಾನು ಕಣ್ಣುಗಳನ್ನು ಮುಚ್ಚಿ ‘ಶ್ರೀ ಗುರುದೇವ ದತ್ತ’ ನಾಮಜಪವನ್ನು ಏಕಾಗ್ರತೆಯಿಂದ ಮಾಡತೊಡಗಿದೆ. ನಾಮಜಪಿಸುವಾಗ ಒಂದೆರಡು ನಿಮಿಷಗಳ ಬಳಿಕ ‘ಶ್ರೀ ಗುರುದೇವ ದತ್ತ’ ಈ ನಾಮಜಪದ ಬಗ್ಗೆ ನನ್ನ ಮನಸ್ಸಿನಲ್ಲಿ ತಾನಾಗಿಯೇ ಕೆಲವು ವಿಚಾರಗಳು ಬರತೊಡಗಿದವು ಮತ್ತು ಗುರುಕೃಪೆಯಿಂದ ನನಗೆ ಅವುಗಳನ್ನು ತಕ್ಷಣವೇ ಬರೆದಿಡಲು ಸಾಧ್ಯವಾಯಿತು. ಆ ಸಮಯದಲ್ಲಿ ‘ಧ್ಯಾನಮಂದಿರದಲ್ಲಿ ಗುರುತತ್ತ್ವ ಪೂರ್ಣ ಜಾಗೃತವಾಗಿದೆ’ ಎಂದು ನನಗೆ ಅರಿವಾಗುತ್ತಿತ್ತು. ಆಗ ‘ಶ್ರೀ ಗುರುದೇವ ದತ್ತ’ ಈ ನಾಮಜಪವೆಂದರೆ ನಮ್ಮ ಮೂವರು ಗುರುಗಳ (ಟಿಪ್ಪಣಿ) ಸ್ಮರಣೆಯೇ ಆಗಿದೆ ಎಂದು ಗುರುದೇವರೇ ನನಗೆ ಹೇಳುತ್ತಿದ್ದಾರೆ ಎಂದು ಅನಿಸಿತು. (ಟಿಪ್ಪಣಿ : ಮೂವರು ಗುರುಗಳೆಂದರೆ ಪರಾತ್ಪರ ಗುರು ಡಾ. ಜಯಂತ ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ)
೧. ‘ಶ್ರೀ ಗುರುದೇವ ದತ್ತ |’ ಈ ನಾಮಜಪದಲ್ಲಿನ ‘ಶ್ರೀ’ ಎಂದರೆ ಶ್ರೀ ಮಹಾಲಕ್ಷ್ಮಿಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ !
‘ಶ್ರೀ ಗುರುದೇವ ದತ್ತ’ ಈ ನಾಮಜಪದಲ್ಲಿರುವ ‘ಶ್ರೀ’ ಎಂದರೆ ಶ್ರೀ ಮಹಾಲಕ್ಷ್ಮಿ ಸ್ವರೂಪ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ. ಅವರು ಜ್ಞಾನಶಕ್ತಿಯ ಮೂಲಕ, ಜಗತ್ತಿನಾದ್ಯಂತವಿರುವ ಸಾಧಕರಿಗೆ ಸಾಧನೆಯ ಮಾರ್ಗದರ್ಶನ ಮಾಡಿ ಅವರನ್ನು ಸಾಧನೆಗಾಗಿ ಪ್ರೋತ್ಸಾಹಿಸುತ್ತಾರೆ. ಸನಾತನದ ‘ಬಿಂದುಚಾ ಸಿಂಧು’ ಆಗಲು (ಸನಾತನ ಕಾರ್ಯದ ವಿಸ್ತಾರಕ್ಕಾಗಿ) ಅವರು ಮಾತೃಭಾವದಿಂದ ಅವಿರತವಾಗಿ ಕಾರ್ಯವನ್ನು ಮಾಡುತ್ತಿದ್ದಾರೆ. ಗುರುದೇವರ ಪ್ರೀತಿ ಮತ್ತು ಭಕ್ತಿಯ ಬೋಧಾಮೃತವನ್ನು ಸಾಧಕರಿಗೆ ಕುಡಿಸುವ ಕಾರ್ಯವನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ. ಇದರಿಂದ ‘ಅಷ್ಟಮಹಾಸಿದ್ಧಿಗಳು’ ಅವರಿಗೆ ಪ್ರಸನ್ನವಾಗಿರುವುದರಿಂದ ಅವರು ‘ಶ್ರೀ ಆಗಿದ್ದಾರೆ’, ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಬಂದಿತು. ೨. ‘ಶ್ರೀ ಗುರುದೇವ ದತ್ತ |’ ಈ ನಾಮಜಪದಲ್ಲಿನ ‘ಗುರುದೇವ’ ಎಂದರೆ ಪರಾತ್ಪರ ಗುರು ಡಾ. ಆಠವಲೆ !
ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ‘ಗುರುದೇವ’ರಾಗಿದ್ದಾರೆ. ಅವರು ಸಾಕ್ಷಾತ್ ಶ್ರೀಮಹಾವಿಷ್ಣುವೇ ಆಗಿದ್ದು, ಎಲ್ಲವೂ ಅವರ ಇಚ್ಛೆಯಂತೆಯೇ ನಡೆಯುತ್ತದೆ. ಶಿμಯ್Àಭಾವ ಹೇಗಿರಬೇಕು ? ಎಂದು ತಮ್ಮ ನಡವಳಿಕೆಯಿಂದ ಕಲಿಸುವ ಅವರು ನಡೆದಾಡುವ ಗುರುಕುಲವೇ ಆಗಿದ್ದಾರೆ. ಸಗುಣರೂಪದಲ್ಲಿ ರಾಮನಾಥಿ ಆಶ್ರಮದಲ್ಲಿ, ಹಾಗೆಯೇ ನಿರ್ಗುಣರೂಪದಲ್ಲಿ ಎಲ್ಲ ಸಾಧಕರ ಅಂತರ್ಯದಲ್ಲಿದ್ದು ಅವರಿಗೆ ಕಲಿಸುವ ‘ಗುರುದೇವರು’ ಪರಾತ್ಪರ ಗುರು ಡಾ. ಆಠವಲೆಯವರೇ ಆಗಿದ್ದಾರೆ.
೩. ‘ಶ್ರೀ ಗುರುದೇವ ದತ್ತ’ ಈ ನಾಮಜಪದಲ್ಲಿನ ‘ದತ್ತ’ ಎಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !
‘ದತ್ತ’ ಎಂದರೆ ಅಖಂಡ ಭ್ರಮಣ ! ಭಕ್ತರ ಉದ್ಧಾರಕ್ಕಾಗಿ ಮತ್ತು ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಕಾರ್ಯದ ಭಕ್ತಿಮಹಿಮೆಯನ್ನು ಹೇಳಲು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ದೇಶ-ವಿದೇಶಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಸನಾತನದ ಕಾರ್ಯದ ವಟವೃಕ್ಷ ಮಾಡುವುದು ಮತ್ತು ಗುರುದೇವರ ಛಾಯಾಛತ್ರದಲ್ಲಿ ಅನೇಕ ಜೀವಗಳನ್ನು ತರುವ ಸೇವೆಯನ್ನು ನಿರಂತರವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಕಾಕು ಇವರು ‘ದತ್ತಗುರುಗಳೇ’ ಆಗಿದ್ದಾರೆ.
ಆದ್ದರಿಂದ ‘ಈ ಮೂವರೂ ಗುರುಗಳು ‘ಶ್ರೀ ಗುರುದೇವ ದತ್ತ’ ಈ ನಾಮಜಪದಲ್ಲಿದ್ದಾರೆ’ ಎಂದು ನನಗೆ ಅನಿಸುತ್ತದೆ. ಇದೆಲ್ಲವೂ ಅರಿವಾಗುವ ಮೊದಲು ನನಗೆ ಓರ್ವ ಸಾಧಕಿ (ಶ್ರೀಮತಿ ಭಾಗ್ಯಶ್ರೀ ಆಣೇಕರ ಇವರು) ಶ್ರೀ ಮಹಾಲಕ್ಷ್ಮಿದೇವಿಯ ಚರಣಗಳ ಕುಂಕುಮವನ್ನು ‘ಪ್ರಸಾದ’ ಎಂದು ಕೊಟ್ಟಿದ್ದರು. ಆ ಕುಂಕುಮವನ್ನು ಹಣೆಗೆ ಹಚ್ಚಿ ನಾನು ಧ್ಯಾನಮಂದಿರದಲ್ಲಿ ಜಪಕ್ಕೆ ಹೋದಾಗ ನನಗೆ ಇದೆಲ್ಲವೂ ಅರಿವಾಯಿತು. ಈ ಕುರಿತು ಶ್ರೀಮಹಾಲಕ್ಷ್ಮಿದೇವಿ ಮತ್ತು ಶ್ರೀ ಗುರುದೇವರ ಚರಣಗಳಲ್ಲಿ ಕೋಟಿಶಃ ಕೃತಜ್ಞತೆ !
– ಸೌ. ನಿವೇದಿತಾ ಜೋಶಿ (ಆಧ್ಯಾತ್ಮಿಕ ಮಟ್ಟ ಶೇ. ೬೧), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೩.೨೦೨೨)