ಶಬರಿಮಲೆ ದೇವಸ್ಥಾನದಲ್ಲಿ ಭಕ್ತಜನರ ಜನಸಂದಣಿ ನಿರ್ವಹಣೆಗೆ ಮಾರ್ಗಸೂಚಿ !

ಕೇರಳ ಉಚ್ಚ ನ್ಯಾಯಾಲಯವು ತಾನೇ ಸ್ವತಃ ದೂರು ದಾಖಲಿಸಿ ಗಣನೆಗೆ ತೆಗೆದುಕೊಂಡಿದೆ.

ತಿರುವನಂತಪುರಂ – ಕೇರಳ ಉಚ್ಚ ನ್ಯಾಯಾಲಯವು ಮಂಡಲ-ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಶಬರಿಮಲೆ ದೇವಸ್ಥಾನದಲ್ಲಿ ಯಾತ್ರಿಕರ ಜನಸಂದಣಿಯನ್ನು ನಿರ್ವಹಿಸಲು ಮಾರ್ಗಸೂಚಿಗಳನ್ನು ರೂಪಿಸಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಜಿ. ಗಿರೀಶ್ ಅವರ ಪೀಠ ಈ ಕುರಿತು ನಿರ್ದೇಶನ ನೀಡಿದೆ. ಈ ಉತ್ಸವದ ಸಮಯದಲ್ಲಿ ಆಗುವ ಜನಸಂದಣಿ ಮತ್ತು ಅದರ ನಿರ್ವಹಣೆಯನ್ನು ಸ್ವತಃ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿದೆ.

ನ್ಯಾಯಾಲಯದ ಕೆಲವು ಮಾರ್ಗಸೂಚಿಗಳು! 

1. ಮುಖ್ಯ ಪೊಲೀಸ್ ಸಮನ್ವಯಕರು ಯಾತ್ರಿಕರ ಸುರಕ್ಷತೆಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೇ ಪಥಿನೆತ್ತಮಪಾಡಿ ಮೂಲಕ ಬರುವ ಯಾತ್ರಾರ್ಥಿಗಳ ಚಲನವಲನಗಳನ್ನು ನಿಯಂತ್ರಿಸುವರು ಮತ್ತು ಪಥನೆತ್ತಮಪಾಡಿ ಮೂಲಕ ಅಧಿಕಾಧಿಕ ಭಕ್ತರ ದರ್ಶನವನ್ನು ಪಡೆಯಲು ಖಚಿತಪಡಿಸುವರು.

2. ಮಹಿಳೆಯರು, ಅಪ್ರಾಪ್ತರು ಮತ್ತು ವಿಶೇಷಚೇತನರ ಸುರಕ್ಷತೆಗಾಗಿ ವಿಶೇಷ ಸರತಿ ಸಾಲುಗಳನ್ನು ಯೋಜಿಸಲಾಗುವುದು.

3. ತ್ರಾವಣಕೋರ ದೇವಸ್ವಂ ಬೋರ್ಡ್‌ನ 72 ನೌಕರರನ್ನು ನಿಯೋಜಿಸಿ ಸರತಿ ಸಾಲಿನ ಪ್ರದೇಶ ಮತ್ತು ಯಾತ್ರಿಕರ ನಿವಾಸದ ಸ್ವಚ್ಛತೆಯನ್ನು ನಿರ್ವಹಿಸಲಾಗುವುದು. ಕಾರ್ಯನಿರ್ವಾಹಕ ದಂಡಾಧಿಕಾರಿ(ಜಿಲ್ಲಾಧಿಕಾರಿ) ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಸರತಿ ಸಾಲಿನ ಪ್ರದೇಶ ಮತ್ತು ಯಾತ್ರಿಕರ ನಿವಾಸವನ್ನು ಪರಿಶೀಲಿಸುವರು.

4. ತ್ರಾವಣಕೋರ ದೇವಸ್ವಂ ಮಂಡಳಿಯು ವಾಹನಗಳನ್ನು ಸರಿಯಾಗಿ ವ್ಯವಸ್ಥಿತವಾಗಿ ನಿಲ್ಲಿಸಲು ವಾಹನ ನಿಲ್ದಾಣದ ಪ್ರದೇಶದಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಸಂಪಾದಕೀಯ ನಿಲುವು

ಹಿಂದೂ ದೇವಾಲಯಗಳ ಪದ್ಧತಿ-ಪರಂಪರೆಯನ್ನು ಹಾಳುಮಾಡಲು, ಅಲ್ಲಿನ ಕಾಣಿಕೆಗಳನ್ನು ದೋಚಲು ಮುಂಚೂಣಿಯಲ್ಲಿರುವ ಕೇರಳದ ಕಮ್ಯುನಿಸ್ಟ್ ಸರ್ಕಾರವು ಹಿಂದೂ ದೇವಸ್ಥಾನಗಳ ಜನಸಂದಣಿಯ ನಿರ್ವಹಣೆಯನ್ನು ನಿರ್ಲಕ್ಷಿಸುತ್ತದೆ ಎಂದು ತಿಳಿಯಿರಿ! ನ್ಯಾಯಾಲಯಕ್ಕೆ ಈ ವಿಷಯದ ಬಗ್ಗೆ ನಿರ್ದೇಶನ ನೀಡಬೇಕಾಗಿರುವುದು ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ!