12 ರಾಜ್ಯಗಳಲ್ಲಿ ವಿಶೇಷ ಆಯೋಗಗಳ ಸ್ಥಾಪನೆ
ಲಂಡನ್ – ಅಮೇರಿಕಾ ಭಾರತೀಯರ ವಿರುದ್ಧದ ದ್ವೇಷಪೂರ್ಣ ಅಪರಾಧಗಳ (ಹೇಟ ಕ್ರೈಮ್) ತನಿಖೆ ನಡೆಸಲಿದೆ. ಅಮೇರಿಕೆಯ 12 ರಾಜ್ಯಗಳಲ್ಲಿ ಭಾರತೀಯರಿಗಾಗಿ ವಿಶೇಷ ಆಯೋಗಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಭಾರತೀಯರ ವಿರುದ್ಧದ ದ್ವೇಷದ ಅಪರಾಧಗಳ ವಿಶೇಷ ವಿಚಾರಣೆ ನಡೆಯಲಿದೆ. ಮೊದಲ ಹಂತದಲ್ಲಿ ಆಯೋಗಕ್ಕೆ 20 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ. ನ್ಯೂಯಾರ್ಕ್ ಜೊತೆಗೆ ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ಮತ್ತು ಮಿಚಿಗನ್ ರಾಜ್ಯಗಳಲ್ಲಿ ಸ್ಥಾಪಿಸಲಾದ ವಿಶೇಷ ಆಯೋಗಗಳಿಗೆ ನ್ಯಾಯಾಂಗ ಅಧಿಕಾರವನ್ನು ಸಹ ನೀಡಲಾಗಿದೆ. ಆಯೋಗವು ಭಾರತೀಯರ ಭದ್ರತಾ ಸಮಸ್ಯೆಗಳ ಜೊತೆಗೆ ಸಾಂಸ್ಕೃತಿಕ ಹಿತಾಸಕ್ತಿಗಳ ಕಾಳಜಿಯನ್ನು ವಹಿಸಲಿದೆ.
ಕರೋನಾ ನಂತರ ದ್ವೇಷಪೂರ್ಣ ಅಪರಾಧಗಳಲ್ಲಿ ಹೆಚ್ಚಳ!
ಕರೋನಾ ಅವಧಿಯ ನಂತರ, ಅಮೇರಿಕದಲ್ಲಿ ಭಾರತೀಯರ ವಿರುದ್ಧ ದ್ವೇಷಪೂರ್ಣ ಅಪರಾಧಗಳ ಘಟನೆಗಳು ಹಲವಾರು ಪಟ್ಟು ಹೆಚ್ಚಾಗಿದೆ. ಕೆಲಸದ ಸ್ಥಳದಲ್ಲಿ ಭಾರತೀಯರ ವಿರುದ್ಧ ತಾರತಮ್ಯದ ಪ್ರಕರಣಗಳು ವರದಿಯಾಗಿವೆ. `ಪ್ಯೂ ರಿಸರ್ಚ್’ ಸಂಸ್ಥೆಯ ಅಭಿಪ್ರಾಯದಂತೆ ಕಳೆದ ಎರಡು ವರ್ಷಗಳಲ್ಲಿ ಪೊಲೀಸ್ ಭದ್ರತಾ ತಪಾಸಣೆಯ ಹೆಸರಿನಲ್ಲಿ ಭಾರತೀಯರ ವಿರುದ್ಧ ಜಾತಿ ತಾರತಮ್ಯದ ಘಟನೆಗಳು ಶೇಕಡಾ 25 ಕ್ಕಿಂತ ಅಧಿಕ ಹೆಚ್ಚಾಗಿದೆ.
ಆರ್ಥಿಕತೆಯಲ್ಲಿ ಭಾರತೀಯರ ಪ್ರಮುಖ ಪಾತ್ರ!
ಅಮೇರಿಕೆಯಲ್ಲಿ ನೆಲೆಸಿರುವ ಭಾರತೀಯರನ್ನು ‘ಆದರ್ಶ ಪ್ರವಾಸಿಗರು’ ಎಂದು ಹೇಳಲಾಗುತ್ತದೆ. ಅರ್ಥವ್ಯವಸ್ಥೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ನ್ಯೂಯಾರ್ಕ್ ಸ್ಟೇಟ್ ವಿಧಾನಸಭೆಯ ಸದಸ್ಯೆ ಜೆನ್ನಿಫರ್ ರಾಜ್‌ಕುಮಾರ ಅವರು `ಭಾರತೀಯರಿಗಾಗಿ ವಿಶೇಷ ಆಯೋಗವನ್ನು ರಚಿಸುವುದು, ಅಮೇರಿಕೆಯ ಒಂದು ಐತಿಹಾಸಿಕ ಹೆಜ್ಜೆ’ ಆಗಿದೆ ಎಂದು ಜೆನ್ನಿಫರ್ ಹೇಳಿದ್ದಾರೆ.