೧. ದೇಶದ ಎಲ್ಲಾ ಸೆರೆಮನೆಗಳಲ್ಲಿ ಹೀಗೆ ಮಾಡಿ !
ಉತ್ತರಪ್ರದೇಶದ ಸೆರೆಮನೆಗಳಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲೀಸಾವನ್ನು ಪಠಿಸಲು ಆರಂಭಿಸಿದ್ದಾರೆ. ಕೈದಿಗಳ ವ್ಯಕ್ತಿತ್ವದ ಸುಧಾರಣೆಗಾಗಿ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯದ ಕಾರಾಗೃಹಸಚಿವ ಧರ್ಮವೀರ ಪ್ರಜಾಪತಿ ಇವರು ಮಾಹಿತಿ ನೀಡಿದ್ದಾರೆ.
೨. ಜಾತ್ಯತೀತ ದೇಶದಲ್ಲಿ ಧರ್ಮದ ಪ್ರಕಾರ ಬೇರೆ ಬೇರೆ ರಜೆಗಳು ಏತಕ್ಕಾಗಿ ?
ಬಿಹಾರದ ಶಿಕ್ಷಣ ಇಲಾಖೆಯು, ಶಾಲೆಯಲ್ಲಿನ ರಜೆಯ ಸಂದರ್ಭದಲ್ಲಿ ಎರಡು ಪಟ್ಟಿ ಪ್ರಕಟಿಸಿದ್ದು ಒಂದು ಮುಸಲ್ಮಾನರಿಗಾಗಿ ಇನ್ನೊಂದು ಮುಸಲ್ಮಾನೇತರರಿಗಾಗಿ ಇದೆ.
೩. ದೇಶಾದ್ಯಂತ ಇದನ್ನು ಮಾಡಬೇಕು !
ಉತ್ತರಪ್ರದೇಶ ಪೊಲೀಸರು ರಾಜ್ಯದಲ್ಲಿ ನಿಯಮ ಗಳನ್ನು ಉಲ್ಲಂಘಿಸುವ ಧಾರ್ಮಿಕ ಸ್ಥಳಗಳಲ್ಲಿ ಭೋಂಗಾ ಗಳ ವಿರುದ್ಧ ಕ್ರಮ ಕೈಗೊಳ್ಳಲು ನವೆಂಬರ್ ೨೩ ರಿಂದ ಅಭಿಯಾನವನ್ನು ನಡೆಸುತ್ತಿದ್ದಾರೆ. ಇದುವರೆಗೆ ೩ ಸಾವಿರಕ್ಕೂ ಹೆಚ್ಚು ಭೋಂಗಾಗಳನ್ನು ಕೆಳಗಿಳಿಸಿದ್ದರೆ, ೭ ಸಾವಿರ ಭೋಂಗಾಗಳ ಧ್ವನಿ ಕಡಿಮೆ ಮಾಡಲಾಗಿದೆ. ಇದರಲ್ಲಿ ಮಸೀದಿಗಳ ಸಂಖ್ಯೆ ಅತ್ಯಧಿಕವಿದೆ.
೪. ಅಮೇರಿಕದ ಸುಳ್ಳುತನವನ್ನು ಗುರುತಿಸಿ !
ಅಮೇರಿಕದಲ್ಲಿ ನೆಲೆಸಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಭಾರತೀಯ ನಾಗರಿಕ ನಿಖಿಲ ಗುಪ್ತಾ ಎಂಬವನನ್ನು ಅಮೇರಿಕದ ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಅಧಿಕಾರಿಯೊಬ್ಬರು ಸುಪಾರಿ ನೀಡಿದ ಆರೋಪ ಗುಪ್ತಾ ಇವನ ಮೇಲಿದೆ.
೫. ಹಿಂದೂಗಳೇ, ಈ ಅಪಾಯವನ್ನು ತಿಳಿಯಿರಿ !
ಬೆಂಗಳೂರಿನ ೧೫ ಖಾಸಗಿ ಶಾಲೆಗಳಿಗೆ ಬಾಂಬ್ ದಾಳಿ ಮಾಡುವುದಾಗಿ ಇ-ಮೇಲ್ ಮೂಲಕ ಬೆದರಿಕೆ ನೀಡುತ್ತಾ, ‘ನಮ್ಮ ಗುಲಾಮರಾಗಿ ಅಥವಾ ಅಲ್ಲಾಹನ ನಿಜವಾದ ಧರ್ಮವನ್ನು ಸ್ವೀಕರಿಸುವ ಪರ್ಯಾಯ ನಿಮ್ಮ ಬಳಿ ಇದೆ. ಇಸ್ಲಾಂ ಅನ್ನು ಸ್ವೀಕರಿಸಿ ಇಲ್ಲವೇ ಇಸ್ಲಾಂನ ಕತ್ತಿಯಿಂದ ಕುತ್ತಿಗೆ ಕತ್ತರಿಸಿಕೊಳ್ಳಿ’ ಎಂದು ಹೇಳಲಾಗಿದೆ.
೬. ಜಾರ್ಖಂಡ್ ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿ ?
ಶೇಖ್ಪುರಾದಲ್ಲಿ (ಬಿಹಾರ) ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಸತ್ಯೇಂದ್ರ ಚೌಧರಿ ಅವರು ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಬುರ್ಖಾ ಮತ್ತು ಹಿಜಾಬ್ ಬದಲಿಗೆ ಶಾಲಾ ಸಮವಸ್ತ್ರವನ್ನು ಧರಿಸುವಂತೆ ಹೇಳಿದಾಗ ಹೆಚ್ಚಿನ ಸಂಖ್ಯೆಯ ಮುಸಲ್ಮಾನರು ಶಾಲೆಗೆ ನುಗ್ಗಿ ಚೌಧರಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.
೭. ಕಾಂಗ್ರೆಸ್ ಈಗಲಾದರೂ ಪಾಠ ಕಲಿಯುವುದೇ ?
ಸನಾತನ ಧರ್ಮವನ್ನು ವಿರೋಧಿಸುವುದೇ ಕಾಂಗ್ರೆಸ್ ಪಕ್ಷದ ಪತನಕ್ಕೆ ಕಾರಣವಾಯಿತು. ಧರ್ಮವನ್ನು ವಿರೋಧಿಸಿ ದ್ದರಿಂದ ಸೋತೆವು, ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣಂ ಅವರು ೩ ರಾಜ್ಯಗಳ ಸೋಲಿನ ನಂತರ ಪಕ್ಷಕ್ಕೆ ಚಪರಾಕಿ ನೀಡಿದ್ದಾರೆ.