‘ಸಾಧನೆ’, ಎಂದರೆ ಈಶ್ವರಪ್ರಾಪ್ತಿಗಾಗಿ ಮಾಡುವ ಪ್ರಯತ್ನ ! ಅನೇಕ ಜನರು ಸಾಧನೆಯೆಂದು ಆ ಬಗೆಗಿನ ಅನೇಕ ಗ್ರಂಥಗಳ ಅಧ್ಯಯನ ಮಾಡುತ್ತಾರೆ. ಇದರಲ್ಲಿ ಕೇವಲ ಬುದ್ಧಿಯನ್ನು ಉಪಯೋಗಿಸಲಾಗುತ್ತದೆ. ಸಾಧನೆಯ ಪ್ರಾರ್ಥಮಿಕ ಹಂತದಲ್ಲಿ ಸಾಧನೆಯ ಮಹತ್ವವನ್ನು ಮನಸ್ಸಿನಲ್ಲಿ ಬಿಂಬಿಸಲು ಬುದ್ಧಿಯು ಆವಶ್ಯಕವಾಗಿರುತ್ತದೆ. ಆದ್ದರಿಂದ ಈ ಹಂತದಲ್ಲಿ ಸಾಧನೆಗಾಗಿ ಬುದ್ಧಿಯ ಮಹತ್ವವು ಶೇ. ೭೦ ರಷ್ಟು ಮತ್ತು ಮನಸ್ಸಿನ ಮಹತ್ವವು ಶೇ. ೩೦ ರಷ್ಟಿರುತ್ತದೆ.
ಸಾಧನೆಯ ಮಹತ್ವವು ತಿಳಿದಾಗ ಮಾತ್ರ ಸಾಧನೆಗಾಗಿ ಮನಸ್ಸಿನ ಸ್ತರದ ಪ್ರಯತ್ನಗಳನ್ನು ಹೆಚ್ಚಿಸುವುದು ಆವಶ್ಯಕವಾಗಿರುತ್ತದೆ, ಉದಾ. ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಮಾಡುವುದು, ಭಾವಜಾಗೃತಿಯ ಪ್ರಯತ್ನ ಮಾಡುವುದು, ಹೆಚ್ಚೆಚ್ಚು ನಾಮಜಪವನ್ನು ಮಾಡುವುದು. ಈ ಹಂತದಲ್ಲಿ ವೇದ, ಉಪನಿಷತ್ತು, ಭಗವದ್ಗೀತೆ ಇಂತಹ ಗ್ರಂಥಗಳ ಅಧ್ಯಯನ ಮಾಡಿದರೆ ಅದರಿಂದ ಕೇವಲ ಶಬ್ದಜನ್ಯ ಮಾಹಿತಿ ಸಿಗುತ್ತದೆ; ಆದರೆ ಪ್ರತ್ಯಕ್ಷ ಸಾಧನೆಗಾಗಿ ಅದರ ಉಪಯೋಗವಾಗುವುದಿಲ್ಲ. ಈ ಹಿಂದೆಯೂ ಅನೇಕ ಸಂತರು ರಾಮಾಯಣ, ಮಹಾಭಾರತ, ಭಗವದ್ಗೀತೆ ಇಂತಹ ಗ್ರಂಥಗಳ ಅಧ್ಯಯನವನ್ನು ಮಾಡದಿದ್ದರೂ ಸಂತಪದವಿ ಯನ್ನು ತಲುಪಿದರು; ಏಕೆಂದರೆ ಅವರು ಮನಸ್ಸಿನ ಸ್ತರದಲ್ಲಿ ಹೆಚ್ಚೆಚ್ಚು ಪ್ರಯತ್ನಿಸಿದ್ದರು. ಆದ್ದರಿಂದ ಸಾಧಕರೇ, ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಬುದ್ಧಿಯ ಸ್ತರದಲ್ಲಿ ಸಿಲುಕದೇ ಮನಸ್ಸಿನ ಸ್ತರದಲ್ಲಿ ಸಾಧನೆಯ ಪ್ರಯತ್ನಗಳನ್ನು ಮಾಡಲು ಹೆಚ್ಚು ಗಮನಕೊಡಿ !’
ದೇವರು ಮಾಡುತ್ತಿರುವ ಸಹಾಯವನ್ನು ಹೇಗೆ ಗುರುತಿಸುವುದು ?
‘ಯಾವುದೋ ಒಂದು ಪ್ರಸಂಗದಲ್ಲಿ ನಮ್ಮಿಂದ ಆಗಿರುವ ತಪ್ಪು ನಮ್ಮ ಗಮನಕ್ಕೆ ಬರುವುದು’, ಇದು ದೇವರ ಸಹಾಯವಾಗಿದೆ. ‘ನಮ್ಮ ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ ಕೆಟ್ಟ ಶಕ್ತಿಗಳಿಂದ ಬರುತ್ತಿದೆ’, ಇದು ನಮಗೆ ತಿಳಿಯುತ್ತದೆ. ಇದುವೂ ದೇವರ ಸಹಾಯವೇ ಆಗಿದೆ ಮತ್ತು ಮುಂದೆ ‘ಈ ವಿಚಾರಗಳ ಮೇಲೆ ಸಕಾರಾತ್ಮಕ ವಿಚಾರಗಳಿಂದ ಜಯಿಸುವುದು’ ಸಹ ದೇವರ ಸಹಾಯವೇ ಆಗಿದೆ.
ಊಟ ಮಾಡುವಾಗ ಇಷ್ಟವಾದ ಆಹಾರ ಸೇವಿಸುವಾಗ ಸ್ವಲ್ಪ ಸಮಯ ಸುಖ ಸಿಗುತ್ತದೆ. ವಾಸನೆಯ ಸುಖವೂ ಸ್ವಲ್ಪ ಗಂಟೆಯಷ್ಟೇ ಉಳಿಯುತ್ತದೆ. ತದ್ವಿರುದ್ದ ಸಾಧನೆ ಮಾಡುವವರಿಗೆ ಜೀವಮಾನವಿಡೀ ಆನಂದ ಸಿಗುತ್ತದೆ.
ಶರೀರಶುದ್ಧಿಯ ಮಹತ್ವ !
‘ಶರೀರ ಮೊದಲ ವಾಸ್ತುವಾಗಿದೆ. ಮೊದಲು ಅದರ ಶುದ್ಧಿಯ ವಿಚಾರ ಮಾಡಿ, ಅನಂತರ ನಿರ್ಮಿಸಿದ ವಾಸ್ತುವಿನ ವಿಚಾರ ಮಾಡಿ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ