ದೀಪಾವಳಿಯಲ್ಲಿ ಪ್ರಚಂಡ ವ್ಯಾಪಾರ ಮಾಡಿದ ‘ಸನಾತನ ಇಕಾನಮಿ’ (ಅರ್ಥವ್ಯವಸ್ಥೆ) !

ಹಿಂದೂಗಳ ಹಬ್ಬಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚೈತನ್ಯ ಅನುಭವಿಸಲು ಸಿಗುತ್ತದೆ. ಎಲ್ಲರ ಆನಂದ ಉಕ್ಕಿ ಹರಿಯುತ್ತಿರುತ್ತದೆ. ಸ್ತ್ರೀಶಕ್ತಿಯ ಗಡಿಬಿಡಿ ನಡೆಯುತ್ತಿರುತ್ತದೆ. ಮಕ್ಕಳು, ವೃದ್ಧರಲ್ಲಿಯೂ ಉತ್ಸಾಹವಿರುತ್ತದೆ. ಎಲ್ಲರೂ ಪಾರಂಪಾರಿಕ ಪದ್ಧತಿಯಿಂದ ಹಬ್ಬವನ್ನು ಆಚರಿಸುತ್ತಾರೆ. ಅದರಿಂದ ಆನಂದವನ್ನು ಪಡೆಯುತ್ತಾರೆ ಹಾಗೂ ಇತರರಿಗೂ ಆನಂದವನ್ನು ಕೊಡುತ್ತಾರೆ. ಈ ವರ್ಷದ ದೀಪಾವಳಿಯಲ್ಲಿ ಭಾರತೀಯರು ಕೆಲವು ಲಕ್ಷ-ಕೋಟಿ ರೂಪಾಯಿಗಳ ವ್ಯಾಪಾರ ಮಾಡಿದರು. ಇದರಿಂದ ಭಾರತದ ಅರ್ಥವ್ಯವಸ್ಥೆಯಲ್ಲಿ ಹಿಂದೂಗಳ ಹಬ್ಬಗಳ ಯೋಗದಾನ ಎಷ್ಟು ಮಹತ್ತರವಾಗಿದೆ, ಎಂಬುದು ಅದೋರೇಖಿತವಾಗುತ್ತದೆ.

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಚೈತನ್ಯ ಹಾಗೂ ಆನಂದಮಯ ವಾತಾವರಣದಲ್ಲಿ ಆಚರಿಸಲ್ಪಡುವ ಹಿಂದೂಗಳ ಹಬ್ಬಗಳು !

ಹಿಂದೂಗಳ ಹೊಸವರ್ಷ, ಅಂದರೆ ಯುಗಾದಿಯ ಸಮಯದಲ್ಲಿ ವಸಂತ ಋತು ಇರುತ್ತದೆ. ಆಗ ಮರಗಿಡಗಳಿಗೆ ಹೊಸ ಚಿಗುರು ಬರುತ್ತವೆ. ಆದ್ದರಿಂದ ಸೃಷ್ಟಿಯಲ್ಲಿ ಲವಲವಿಕೆ ಮೂಡುತ್ತದೆ. ಈ ದಿನವೇ ಬ್ರಹ್ಮದೇವನು ಪೃಥ್ವಿಯನ್ನು ನಿರ್ಮಿಸಿದ್ದನು. ಹಿಂದೂಗಳಿಗೆ ಇದು ಮೂರುವರೆ ಮುಹೂರ್ತಗಳಲ್ಲಿನ ಒಂದು ಮುಹೂರ್ತವಾಗಿದೆ. ಆಗÀ ಎಲ್ಲೆಡೆ ಉತ್ಸಾಹವಿರುತ್ತದೆ. ಕೆಲವೊಂದು ದಿನಗಳ ನಂತರ ಶ್ರಾವಣ ಮಾಸ ಬರುತ್ತದೆ. ಶ್ರಾವಣದಲ್ಲಿ ವ್ರತವೈಕಲ್ಯಗಳು ಹಾಗೂ ಭಕ್ತಿಯನ್ನು ಮಾಡಲು ಮಹಿಳೆಯರು-ಪುರುಷರು ಆತುರರಾಗಿರುತ್ತಾರೆ. ಯುವಕರು ಶ್ರೀಕೃಷ್ಣ ಜನ್ಮಾಷ್ಟಮಿಯ ಮತ್ತು ಮೊಸರುಕುಡಿಕೆಯ ಆಟದಲ್ಲಿ ಮುಳುಗಿರುತ್ತಾರೆ. ಗಣೇಶಚತುರ್ಥಿಯನ್ನು ಸಾರ್ವಜನಿಕ ಪದ್ಧತಿಯಲ್ಲಿ ಆಚರಿಸಲಾಗುತ್ತದೆ. ಆಮೇಲೆ ಬರುತ್ತದೆ ನವರಾತ್ರಿ ! ನವರಾತ್ರಿಯಲ್ಲಿ ಭಕ್ತಿಯ ಸ್ತರದಲ್ಲಿ ಬೇರೆಯೆ ಅನುಭವವಾಗುತ್ತದೆ. ಬಂಗಾಲದಲ್ಲಿ ಮತ್ತು ಇತರ ರಾಜ್ಯಗಳಲ್ಲಿ ದುರ್ಗಾಪೂಜೆ ಅಥವಾ ಶಕ್ತಿಯ ಆರಾಧನೆಯನ್ನು ಮಾಡಲಾಗುತ್ತದೆ. ವಿಜಯದಶಮಿಯ ಉತ್ಸಾಹಕ್ಕೆ ಮೇರೆಯೆ ಇಲ್ಲ. ಅನೇಕ ದೊಡ್ಡ ನಗರಗಳಲ್ಲಿ ರಾಮಲೀಲೆ ಯನ್ನು ಆಚರಿಸಲಾಗುತ್ತದೆ. ಪ್ರಭು ಶ್ರೀರಾಮನ ರಾವಣನ ಮೇಲಿನ ವಿಜಯ ಹಾಗೂ ಶಕ್ತಿಯು ಮಾಡಿದ ಮಹಿಷಾಸುರನ ವಧೆ ಹೀಗೆ ಈ ಹಬ್ಬಗಳ ಹಿಂದೆ ಅನೇಕ ಕಾರಣಗಳಿವೆ.

ದೀಪಾವಳಿಯ ಬಗ್ಗೆ ಕೇಳುವುದೇ ಬೇಡ ! ಮಹಾರಾಷ್ಟ್ರ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಈ ಹಬ್ಬವನ್ನು ೫ ದಿನಗಳ ವರೆಗೆ ಆಚರಿಸಲಾಗುತ್ತದೆ. ಈ ಹಬ್ಬ ಗೋವತ್ಸ ದ್ವಾದಶಿ, ಧನತ್ರಯೋದಶಿ, ಚತುರ್ದಶಿ, ಲಕ್ಷ್ಮೀಪೂಜೆ, ಪಾಡ್ಯ, ಸಹೋದರ ಬಿದಿಗೆಯಿಂದ ಕಾರ್ತಿಕ ಏಕಾದಶಿಯ ವರೆಗೆ ಬಹಳ ವಿಜೃಂಭಣೆಯಿಂದ ಆಚರಿಸಲಾಗತ್ತದೆ. ಸಂಕ್ರಾಂತಿ, ಹೋಳಿ, ರಂಗಪಂಚಮಿ ಇವುಗಳನ್ನು ಕೂಡ ವೈಶಿಷ್ಟ್ಯಪೂರ್ಣ ರೀತಿಯಲ್ಲಿ ಆಚರಿಸಲಾಗುತ್ತದೆ.

೨. ಹಿಂದೂಗಳ ಹಬ್ಬಗಳ ಸಮಯದಲ್ಲಿ ತಥಾಕಥಿತ ಪ್ರಗತಿಪರರ ಬೊಬ್ಬೆ

ಹಿಂದೂಗಳ ಹಬ್ಬ ಬಂತೆಂದರೆ, ತಥಾಕಥಿತ ಪ್ರಗತಿಪರರು ನೆಟಿಕೆ ಮುರಿಯಲು ಪ್ರಾರಂಭಿಸುತ್ತಾರೆ. ಹಿಂದೂಗಳ ಹಬ್ಬಗಳಿಗೆ ಅಡ್ಡಗಾಲಿಡಲು ವಿವಿಧ ಕಾರಣಗಳನ್ನು ಹುಡುಕಿ ‘ಪರಿಸರ ಹಾಳಾಗುತ್ತದೆ’, ‘ಹಬ್ಬಗಳಲ್ಲಿ ಹಣ ಖರ್ಚು ಮಾಡುವ ಬದಲು ಅದನ್ನು ಬಡವರಿಗೆ ಹಂಚಿರಿ’ ಇತ್ಯಾದಿ ನಿರರ್ಥಕ ಸಲಹೆಗಳು ಇವರಿಂದ ಬರುತ್ತವೆ.

೩. ಸ್ವದೇಶಿ ವಸ್ತುಗಳನ್ನು ಖರೀದಿಸಿ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವಿಗೆ ಭಾರತೀಯರಿಂದ ಪ್ರಚಂಡ ಸ್ಪಂದನ !

ದೀಪಾವಳಿಯ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತೀಯರಿಗೆ ‘ಹಬ್ಬಗಳನ್ನು ಆಚರಿಸು ವಾಗ ‘ಲೋಕಲ್‌ ಫಾರ್‌ ವೋಕಲ್’ ಅಥವಾ ‘ಆತ್ಮನಿರ್ಭರ ಭಾರತ’ದ ಕಡೆಗೆ ಗಮನವಿರಲಿ’, ಎಂದು ಹೇಳಿದ್ದರು. ಭಾರತೀಯ ಉತ್ಪಾದಕರು, ಕಲಾಕಾರರು, ವ್ಯಾಪಾರಿಗಳು ಮತ್ತು ಮಾರಾಟಗಾರರಿಂದಲೇ ವಸ್ತುಗಳನ್ನು ಖರೀದಿಸಿರಿ. ಅದರಿಂದ ಭಾರತೀಯ ಅರ್ಥವ್ಯವಸ್ಥೆ ಬಲಿಷ್ಠವಾಗುವುದು, ಎಂದು ಅವರು ಪ್ರಧಾನಮಂತ್ರಿ ಆದಾಗಿನಿಂದಲೂ ಹೇಳುತ್ತಿದ್ದಾರೆ. ಅದಕ್ಕೆ ಭಾರತೀಯರಿಂದ ತುಂಬಾ ಒಳ್ಳೆಯ ಸ್ಪಂದನ ಸಿಗುತ್ತಿದೆ. ಇದರಲ್ಲಿ ಪ್ರಧಾನಮಂತ್ರಿಗಳ ಪ್ರಾಮಾಣಿಕತನ, ತಳಮಳ ಹಾಗೂ ದೇಶಪ್ರೇಮ ಕಂಡುಬರುತ್ತದೆ, ಅದೇ ರೀತಿ ಅದರ ಹಿಂದೆ ಭಾರತೀಯ ಆರ್ಥಿಕವ್ಯವಸ್ಥೆ ಸುಧಾರಣೆಯಾಗಿ ಭಾರತದ ರೈತರು ಮತ್ತು ಸಾಮಾನ್ಯ ಮಾರಾಟಗಾರರ ಸಬಲೀಕರಣದ ಉದ್ದೇಶವಿದೆ. ಅವರು ದೀಪಾವಳಿಯ ಮೊದಲು ಹೀಗೆ ಕರೆಯನ್ನು ನೀಡಿದ್ದರು. ಈ ದೀಪಾವಳಿಯಲ್ಲಿ ಅದರ ಪರಿಣಾಮ ಕಾಣಿಸಿತು. ಸ್ವದೇಶಿ ಕಲಾಕಾರರು ಹಾಗೂ ವ್ಯಾಪಾರಿಗಳು ಉತ್ಪಾದಿಸಿದ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಭಾರತೀಯರು ಖರೀದಿಸಿದರು, ಚೀನೀ ಮಾರುಕಟ್ಟೆಯನ್ನು ನಿರಾಕರಿಸಿದರು.

೪. ‘ಸನಾತನ ಇಕಾನಮಿ’ಯ ಪ್ರಚಂಡ ಆರ್ಥಿಕ ವ್ಯವಹಾರ

‘ಕಾನ್ಫಿಡರೇಶನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ್‌’ನ ಅಧ್ಯಕ್ಷ ಬಿ.ಸಿ. ಭಾರ್ತಿಯ ಮತ್ತು ಕಾರ್ಯದರ್ಶಿ ಪ್ರವೀಣ ಖಂಡೇಲವಾಲ ಇವರು ದೀಪಾವಳಿಯ ಕಾಲದಲ್ಲಿ ಆಗಿರುವ ಖರೀದಿ-ಮಾರಾಟದ ಸಂದರ್ಭದಲ್ಲಿ ಈ ವರ್ಷ ೩ ಲಕ್ಷ ೭೫ ಸಾವಿರ ಕೋಟಿ ರೂಪಾಯಿಗಳ ವ್ಯವಹಾರ ಆಗಿದೆ ಎಂದಿದ್ದಾರೆ. ಕೆಲವು ವ್ಯಾಪಾರಿಗಳ ಅಭಿಪ್ರಾಯಕ್ಕನುಸಾರ ಈ ಆರ್ಥಿಕ ವ್ಯವಹಾರ ೧ ಲಕ್ಷ ೨೫ ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಇದು ಭಾರತೀಯ ‘ಜಿಡಿಪಿ’ಯ (ಸಂಪೂರ್ಣ ದೇಶಾಂತರ್ಗತ ಉತ್ಪಾದನೆಯ) ಶೇ. ೨೦ ರಿಂದ ಶೇ. ೩೦ ರಷ್ಟಿದ್ದು ೧೦೦ ದೇಶಗಳ ‘ಜಿಡಿಪಿ’ಯಷ್ಟಿದೆ.

ಭಾರತೀಯರು ದೀಪಾವಳಿಯ ಸಮಯದಲ್ಲಿ ಮಾಡಿದ ಖರೀದಿ ಮತ್ತು ಅದರಿಂದಾದ ಆರ್ಥಿಕ ವ್ಯವಹಾರವು ೧೦೦ ದೇಶಗಳ ವಾರ್ಷಿಕ ‘ಜಿಡಿಪಿ’ಯೊಂದಿಗೆ ತುಲನೆ ಮಾಡುತ್ತದೆ’, ಎಂದು ಕೂಡ ಅವರು ನಮೂದಿಸಿದ್ದಾರೆ. ಈ ಹಬ್ಬದ ನಿಮಿತ್ತ ಆಗಿರುವ ವ್ಯವಹಾರದಿಂದ ವ್ಯಾಪಾರಸ್ಥರು ಆನಂದದಲ್ಲಿದ್ದಾರೆ. ಅವರು ಈ ವ್ಯವಹಾರಕ್ಕೆ ‘ಸನಾತನ ಇಕಾನಮಿ’ ಎಂದು ಹೆಸರು ನೀಡಿದ್ದಾರೆ. ಈ ವ್ಯವಹಾರದ ವಿಷಯದಲ್ಲಿ ವ್ಯಾಪಾರಸ್ಥರು ‘ನಿಫ್ಟಿ’ ಹಾಗೂ ‘ಬಾಂಬೆ ಸ್ಟಾಕ್‌ ಎಕ್ಸ್‌ಚೆಂಜ್‌’ನ ಉದಾಹರಣೆ ನೀಡಿ ಏನು ಹೇಳುತ್ತಾರೆ ಎಂದರೆ, ೨೦೨೨ ರ ದೀಪಾವಳಿಯಿಂದ ವರ್ಷ ೨೦೨೩ರ ದೀಪಾವಳಿಯ ವರೆಗೆ ಹೂಡಿಕೆದಾರರ ಉತ್ಪಾದನೆಯಲ್ಲಿ ೬೪ ಲಕ್ಷ ಕೋಟಿ ರೂಪಾಯಿಗಳ ಲಾಭವಾಗಿದೆ.

೫. ಚೀನಾಗೆ ಕನಿಷ್ಟ ೧ ಲಕ್ಷಕೋಟಿ ರೂಪಾಯಿಗಳ ನಷ್ಟ

ಕಳೆದ ೨-೩ ವರ್ಷಗಳಲ್ಲಿ ಹಿಂದೂಗಳು ಚೀನಾದಂತಹ ಮದವೇರಿದ ದೇಶಗಳನ್ನು ಸರಿದಾರಿಗೆ ತಂದರು. ಕೆಲವು ವರ್ಷಗಳ ಹಿಂದೆ ದೀಪಾವಳಿಯ ಸಮಯದಲ್ಲಿ ಶೇ. ೭೦ ರಷ್ಟು ಚೀನೀ ಉತ್ಪಾದಿತ ಸಾಮಗ್ರಿ ಮತ್ತು ವಸ್ತುಗಳನ್ನು ಖರೀದಿಸ ಲಾಗುತ್ತಿತ್ತು. ಪ್ರವೀಣ ಖಂಡೇಲವಾಲಾ ಇವರು ನೀಡಿದ ಮಾಹಿತಿಗನುಸಾರ ಈ ವರ್ಷ ಭಾರತೀಯರು ಭಾರತೀಯ ಉತ್ಪಾದನೆಗಳನ್ನೇ ದೊಡ್ಡ ಪ್ರಮಾಣದಲ್ಲಿ ಖರೀದಿಸಿದರು. ಆದ್ದರಿಂದ ಚೀನಾಗೆ ಕನಿಷ್ಟ ೧ ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಯಿತು. ಕಾರ್ತಿಕ ಮಾಸದ ಹುಣ್ಣಿಮೆಯ ವರೆಗೆ ಈ ಆರ್ಥಿಕ ವ್ಯವಹಾರ ೪ ಲಕ್ಷ ೨೫ ಸಾವಿರ ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ.

ಖಂಡೇಲವಾಲಾ ಮಾತು ಮುಂದುವರಿಸುತ್ತಾ, ಹಿಂದೂಗಳ ದೇವಸ್ಥಾನಗಳು ೧೦ ಲಕ್ಷದಷ್ಟಿವೆ. ಈ ಕಾಲದಲ್ಲಿ ದೇವಸ್ಥಾನಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಅರ್ಪಣೆ ಸಂಗ್ರಹವಾಗುತ್ತದೆ. ಅಷ್ಟು ಮಾತ್ರವಲ್ಲ, ದೇವಸ್ಥಾನಗಳ ಪರಿಸರದಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳಿಗೂ ದೊಡ್ಡ ಪ್ರಮಾಣದಲ್ಲಿ ಲಾಭವಾಗುತ್ತದೆ. ಇದು ಆಗುತ್ತಿರುವಾಗ ‘ಸನಾತನ ಇಕಾನಮಿ’ಯಿಂದ ಹಿಂದೂ ಸಹಿತ ಇತರ ಪಂಥೀಯರಿಗೂ ಲಾಭವಾಗುತ್ತದೆ’, ಎಂದರು. ಅನೇಕ ಜನರ ಹೊಟ್ಟೆಪಾಡು ಹಿಂದೂಗಳ ಹಬ್ಬಗಳನ್ನೇ ಅವಲಂಬಿಸಿರುತ್ತದೆ. ಹೀಗಿದ್ದರೂ ಹಿಂದೂಗಳ ಹಬ್ಬ ಬಂದಾಗ ಪ್ರಗತಿಪರರು ವಿವಿಧ ಪದ್ಧತಿಯಿಂದ ಅವರನ್ನು ವಿರೋಧಿಸುತ್ತಾರೆ. ಅವರು ದೇವರಿಗಾಗಿ ಖರ್ಚು ಮಾಡುವ ಹಣವನ್ನು ಬಡವರಿಗೆ ಹಂಚಲು ಹೇಳುತ್ತಾರೆ. ಈ ರೀತಿ ನಾನಾವಿಧದ ನಿರರ್ಥಕ ಸಲಹೆಗಳನ್ನು ನೀಡುತ್ತಾರೆ. ಇದರ ಜೊತೆಗೆ ಹಿಂದೂಗಳ ಹಬ್ಬಗಳಿಂದ ವಾಯುಮಾಲಿನ್ಯವಾಗುತ್ತದೆ ಎಂದು ಬೊಬ್ಬೆ ಹೊಡೆಯುತ್ತಾರೆ.

೬. ಹಿಂದೂಗಳ ಹಬ್ಬ-ಉತ್ಸವಗಳ ಮೇಲಿನ ಮತಾಂಧರ ಆಕ್ರಮಣಗಳನ್ನು ತಡೆಯಲು ಹಿಂದೂಗಳಲ್ಲಿ ಧರ್ಮಾಭಿಮಾನ ಜಾಗೃತವಾಗುವುದು ಆವಶ್ಯಕ !

ಮತಾಂಧರು ಹಿಂದೂಗಳ ಹಬ್ಬಗಳಿಂದ ಬಹಳಷ್ಟು ಹಣಗಳಿಸುತ್ತಾರೆ; ಆದರೆ ಅವರೇ ಗಣೇಶ ಮೂರ್ತಿ ವಿಸರ್ಜನೆಯ ಸಮಯದಲ್ಲಿ, ದುರ್ಗಾಮಾತೆಯ ವಿಸರ್ಜನೆಯ ಸಮಯದಲ್ಲಿ ಹಾಗೂ ರಾಮನವಮಿಯ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಮಾಡಿ ಆಕ್ರಮಣ ಮಾಡುತ್ತಾರೆ ಹಾಗೂ ಗಲಭೆಗಳನ್ನು ಎಬ್ಬಿಸುತ್ತಾರೆ. ಇದು ಕಳೆದ ೭೫ ವರ್ಷಗಳಿಂದ ನಡೆಯುತ್ತಿದೆ. ಹಿಂದೂಗಳು ಚೀನಾವನ್ನೂ ಸರಿದಾರಿಗೆ ತಂದಿದ್ದಾರೆ. ಆದ್ದರಿಂದ ಸನಾತನಿ ಹಿಂದೂಗಳು ಯಾವುದೇ ಒಂದು ವಿಷಯವನ್ನು ನಿರ್ಧರಿಸಿದರೆ, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ, ಎಂಬುದನ್ನು ಮತಾಂಧರು ಗಮನದಲ್ಲಿಟುಕೊಳ್ಳಬೇಕು. ಅದರ ಪರಿಣಾಮವನ್ನು ಎದುರಿನವರು ಭೋಗಿಸಬೇಕಾಗುವುದು. ಹಿಂದೂಗಳು ನಿರ್ಧರಿಸಿದರೆ, ಅವರು ಇತರ ಪಂಥೀಯರಿಗೂ ಚೀನಾದಂತೆಯೆ ಪಾಠ ಕಲಿಸಬಹುದು. ಕೇವಲ ಅವರಲ್ಲಿನ ಧರ್ಮಾಭಿಮಾನ ಜಾಗೃತವಾಗುವ ಅವಶ್ಯಕತೆಯಿದೆ.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೧೯.೧೦.೨೦೨೩)