ಯುವಕರೇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚೈತನ್ಯದಾಯಕ ಗ್ರಂಥಕಾರ್ಯದ ಪತಾಕೆ ಹಾರಾಡಿಸಲು ಗ್ರಂಥರಚನೆಯ ಸೇವೆಯಲ್ಲಿ ಪಾಲ್ಗೊಳ್ಳಿ !

ಯುವ ಪೀಳಿಗೆ ಮತ್ತು ಪಾಲಕರಲ್ಲಿ ಸವಿನಯ ವಿನಂತಿ !

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಯವರ ಮಾರ್ಗದರ್ಶನಕ್ಕನುಸಾರ ಕೆಲವು ಸಾಧಕರು ಕಳೆದ ೨೦-೨೫ ವರ್ಷಗಳಿಂದ ಗ್ರಂಥರಚನೆಯ ಸೇವೆ ಯನ್ನು ಮಾಡುತ್ತಿದ್ದಾರೆ. ಈ ಸಾಧಕರು ಈಗ ಹೆಚ್ಚಿನಂಶ ಸ್ವಾವಲಂಬಿಯಾಗಿ ಗ್ರಂಥಗಳನ್ನು ರಚಿಸುತ್ತಿದ್ದಾರೆ. ಸನಾತನದ ಸುಮಾರು ೫ ಸಾವಿರಗಳಿಗಿಂತ ಹೆಚ್ಚು ಗ್ರಂಥ ಗಳನ್ನು ಇನ್ನೂ ರಚಿಸಬೇಕಾಗಿದೆ. ಸದ್ಯ ಸೇವೆಯನ್ನು ಮಾಡುತ್ತಿರುವ ಸಾಧಕರು ಇನ್ನೂ ೨೦-೨೫ ವರ್ಷಗಳ ಕಾಲ ಸೇವೆಯನ್ನು ಮಾಡಬಲ್ಲರು. ಅನಂತರ ಈ ಗ್ರಂಥಕಾರ್ಯವನ್ನು ನಿರ್ವಹಿಸಲು ಮುಂದಿನ ಪೀಳಿಗೆಯು ಈಗಿನಿಂದಲೇ ಗ್ರಂಥಸೇವೆಯ ಎಲ್ಲ ಸೂಕ್ಷ್ಮ ವಿಷಯಗಳನ್ನು, ದೃಷ್ಟಿಕೋನ, ಸಾತ್ತ್ವಿಕತೆಯ ದೃಷ್ಟಿಯಿಂದ ಮುಖಪುಟಗಳು ಮತ್ತು ಚಿತ್ರಗಳನ್ನು ತಯಾರಿಸುವುದು ಇತ್ಯಾದಿ ಆಳವಾಗಿ ಕಲಿತುಕೊಳ್ಳುವುದು ಆವಶ್ಯಕವಾಗಿದೆ. ಯುವ ಸಾಧಕರು ಇಂದಿನಿಂದಲೇ ಈ ಸೇವೆಯನ್ನು ಕಲಿಯಲು ಆರಂಭಿಸಿದರೆ ಮುಂದೆ ೧೦-೨೦ ವರ್ಷಗಳಲ್ಲಿ ಅವರು ಸ್ವಾವಲಂಬಿಯಾಗಬಹುದು.

(ಪೂ.) ಸಂದೀಪ ಆಳಶಿ

ಸನಾತನದ ಚೈತನ್ಯದಾಯಕ ಗ್ರಂಥಕಾರ್ಯದ ಪತಾಕೆ ಯನ್ನು ಹಾರಾಡಿಸುವ ಜವಾಬ್ದಾರಿ ಈಗ ಸಂಪೂರ್ಣ ಯುವ ಪೀಳಿಗೆಯ ಮೇಲಿದೆ. ಗ್ರಂಥಸೇವೆಯು ಶ್ರೇಷ್ಠವಾದ ಜ್ಞಾನಶಕ್ತಿಯ ಸ್ತರದ ಸೇವೆಯಾಗಿರುವುದರಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನೂ ಮಾಡಿಸಿಕೊಡುತ್ತದೆ. ಹಾಗಾಗಿ ಯುವಕರೇ, ತಮ್ಮ ಅಭಿರುಚಿ ಮತ್ತು ಕ್ಷಮತೆಗನುಸಾರ ಗ್ರಂಥ ರಚನೆಯ ಸೇವೆಯಲ್ಲಿ ಪಾಲ್ಗೊಂಡು ಈ ಸುವರ್ಣಾವಕಾಶದ ಲಾಭ ವನ್ನು ಪಡೆದುಕೊಳ್ಳಿ !

ಪಾಲಕರೇ, ನೀವು ಸಹ ನಿಮ್ಮ ಮಕ್ಕಳ ಮತ್ತು ಸಂಬಂಧಿಕರಲ್ಲಿರುವ ಗುಣಗಳನ್ನು ಗುರುತಿಸಿ ಅವರಿಗೆ ಈ ನಾವೀನ್ಯಪೂರ್ಣ ಸಾಧನಾ-ಕ್ಷೇತ್ರದ ಕಡೆಗೆ ಹೊರಳಲು ಪ್ರೋತ್ಸಾಹ ನೀಡಿ !

ಗ್ರಂಥಸೇವೆಯ ಅಂತರ್ಗತ ಸಂಕಲನ, ಭಾಷಾಂತರ, ಸಂರಚನೆ, ಮುಖಪುಟ-ರಚನೆ ಇತ್ಯಾದಿ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ತಮ್ಮ ಮಾಹಿತಿಯನ್ನು ಸನಾತನದ ಜಿಲ್ಲಾಸೇವಕರ ಮಾಧ್ಯಮದಿಂದ ಕಳುಹಿಸಬೇಕು.

ಸಂಪರ್ಕ : ಸೌ. ಭಾಗ್ಯಶ್ರೀ ಸಾವಂತ,
ವಿ-ಅಂಚೆ : ಸ್ಚಿಟಿಞಚಿಟಚಿಞ.ಗೊಚಿ@ಗ್ಮ್ಚೀಟ.ಛಿಒಮ್
ಅಂಚೆ ವಿಳಾಸ : ಛಿ/ಒ ‘ಸನಾತನ ಆಶ್ರಮ’, ರಾಮನಾಥಿ, ಫೋಂಡಾ, ಗೋವಾ ೪೦೩೪೦೧.’

– ಪೂ. ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು (೧೯.೭.೨೦೨೩)