…ಹಾಗಾದರೆ ಕೃಷ್ಣನೀತಿಯೇ ಶ್ರೇಯಸ್ಕರ !

ಜಗತ್ತಿನ ಇತಿಹಾಸದಲ್ಲಿ ಧರ್ಮಯುದ್ಧವು ಕೇವಲ ಒಂದು ಸಲ ಮಾತ್ರ ಆಗಿದೆ ಮತ್ತು ಅದು ಕೂಡ ಈ ಜಂಬೂದ್ವೀಪದಲ್ಲಿಯೇ ಆಗಿದೆ. ಇಂದು ಜಗತ್ತು ಆ ಧರ್ಮಯುದ್ಧದ ಇತಿಹಾಸವನ್ನು ‘ಮಹಾಭಾರತ’ ಎಂದು ಗುರುತಿಸುತ್ತದೆ. ಈ ವಿಶ್ವದಲ್ಲಿ ಮಾನವನ ಕಲ್ಯಾಣಕ್ಕಾಗಿ ಕೆಲವು ಮೂಲಭೂತ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳು ಸನಾತನವಾಗಿವೆ ಅಂದರೆ, ಅವು ಅಕ್ಷಯ ಮತ್ತು ತ್ರಿಕಾಲಬಾಧಿತವಾಗಿವೆ. ಸಾವಿರಾರು ವರ್ಷಗಳ ಹಿಂದೆ ಈ ನಿಯಮಗಳನ್ನು ಮಾನವನ ಕಲ್ಯಾಣಕ್ಕಾಗಿ ಸಿದ್ಧಪಡಿಸಲಾಯಿತು. ಅವು ಇಂದಿಗೂ ಮೊದಲು ಹೇಗಿದ್ದವೋ ಅಷ್ಟೇ ಪರಿಣಾಮಕಾರಿ ಯಾಗಿವೆ. ಯಾವಾಗ ಈ ನಿಯಮಗಳನ್ನು ಮುರಿದು ಕೇವಲ ತಮ್ಮ ಮತ್ತು ತಮ್ಮ ಮಕ್ಕಳ ಹಟಮಾರಿತನದ ಸ್ವಾರ್ಥವನ್ನು ಸಾಧಿಸುವ ಕುರುಡು ಆಟವನ್ನು ಸತತವಾಗಿ ಆಡಲು ಆರಂಭವಾಯಿತೋ, ಅಧರ್ಮವನ್ನು ಮಾಡಲು ಪ್ರಾರಂಭವಾಯಿತೋ, ಆಗ ಭಗವಂತನು ತನ್ನ ಕಣ್ಣುಗಳ ಮುಂದೆ ನಡೆಸಿದ ಯುದ್ಧವೆಂದರೆ ಧರ್ಮಯುದ್ಧ, ಅದೇ ‘ಮಹಾಭಾರತ ಯುದ್ಧ’. ಈ ಯುದ್ಧದಲ್ಲಿಯೂ ಸಾಧನಗಳ ಒಡೆತನ ಮತ್ತು ಭೂಮಿಯ ಒಡೆತನ ಸಂವೇದನಾಶೀಲ ವಿಷಯವಾಗಿತ್ತು; ಆದರೆ ಒಡೆತನದ ಹಕ್ಕನ್ನು ಹೇಗೆ ಪಡೆಯಬೇಕು, ಎಂಬುದೂ ತಾತ್ತ್ವಿಕ ಮತ್ತು ಹೆಚ್ಚು ಮಹತ್ವದ ವಿಷಯವಾಗಿತ್ತು, ಎಂದು ಹೇಳಬಹುದು. ಈ ಎಲ್ಲ ಇತಿಹಾಸದಲ್ಲಿ ಯಾರೆಲ್ಲ ಅಧರ್ಮ ಮಾಡಿದರೋ, ಯಾರು ಶಾಶ್ವತ ನಿಯಮಗಳ ಪಾಲನೆ ಮಾಡಲಿಲ್ಲವೋ, ಅವರೆಲ್ಲರಿಗೂ ಭಗವಂತನು ಶಿಕ್ಷೆಯನ್ನು ನೀಡಿದನು, ಅದು ಕೂಡ ಅವರವರ ಪಾಪಕರ್ಮಕ್ಕನುಸಾರ.

೧. ಭಾರತದಲ್ಲಿ ಹೆಚ್ಚುತ್ತಿರುವ ಇಸ್ಲಾಮ್‌ ಪ್ರೇಮ !

ಈ ಯುದ್ಧದಲ್ಲಿ (ಮಹಾಭಾರತ ಯುದ್ಧ) ಭಗವಂತನು ಸಾಪೇಕ್ಷನೀತಿಯನ್ನು ಹೇಗೆ ಉಪಯೋಗಿಸಬೇಕು ? ಎಂಬುದನ್ನು ಹಿಂದೂ ಸಮಾಜಕ್ಕೆ ಕಲಿಸಿದನು; ಆದರೆ ದುರದೃಷ್ಟದಿಂದ ಈ ಸಾಪೇಕ್ಷನೀತಿಯ ಪಾಠವನ್ನು ನಮ್ಮ ಹಿಂದೂ ಸಮಾಜ ಸಂಪೂರ್ಣವಾಗಿ ಮರೆತಿದೆ, ಎಂದೇ ಹೇಳಬೇಕಾಗುತ್ತದೆ. ಈ ಭೂಮಿಯ ಮೇಲಿನ ಅನೇಕ ಘಟನೆ ಗಳನ್ನು ಹಿಂದೂ ಸಮಾಜ ಗಮನದಲ್ಲಿಡಬೇಕು.

ಮಹಮ್ಮದ ರಿಝ್ವಾನ ಎಂಬ ಪಾಕಿಸ್ತಾನಿ ಕ್ರಿಕೆಟ್‌ಪಟು ಭಾರತದಲ್ಲಿ ನಡೆಯುತ್ತಿದ್ದ ವಿಶ್ವಕಪ್‌ ಕ್ರಿಕೆಟ್‌ ಸ್ಪರ್ಧೆಯಲ್ಲಿ ಶ್ರೀಲಂಕಾದ ವಿರುದ್ಧ ಭಾಗ್ಯನಗರ (ಹೈದ್ರಾಬಾದ) ದಲ್ಲಿ ಪಡೆದ ಶತಕವನ್ನು ಹಮಾಸ್‌ಗೆ ಸಮರ್ಪಣೆ ಮಾಡುತ್ತಾನೆ. ಯಾವುದೋ ಒಂದು ಸ್ಪರ್ಧೆಯಲ್ಲಿ ಒಬ್ಬ ಕ್ರಿಕೆಟ್‌ಪಟು ಮೈದಾನದಲ್ಲಿಯೇ ನಮಾಜು ಮಾಡುತ್ತಾನೆ. ಇದೇ ಭಾಗ್ಯನಗರದಲ್ಲಿನ ಸ್ಪರ್ಧೆಯ ಸಮಯದಲ್ಲಿ ‘ಪಾಕಿಸ್ತಾನ ಜೀತೆಗಾ’ ಎಂಬ ಘೋಷಣೆಗಳನ್ನು ನೀಡಲಾಗುತ್ತದೆ. ಆಗ ಯಾವುದೋ ಒಬ್ಬ ಮಾಜಿ ಕ್ರಿಕೆಟ್‌ಪಟು ಪಾಕಿಸ್ತಾನದಲ್ಲಿ ಕುಳಿತು ‘ಭಾಗ್ಯನಗರ ಮಹತ್ವದ ‘ಇಸ್ಲಾಮೀ ಕೇಂದ್ರವಾಗಿದೆ’, ಆದ್ದರಿಂದ ಅಲ್ಲಿನ ಮುಸಲ್ಮಾನರು ಪಾಕಿಸ್ತಾನಕ್ಕೆ ಬೆಂಬಲ ನೀಡುವರು’, ಎಂದು ಹೇಳುತ್ತಾನೆ. ನಮ್ಮ ದೇಶದಲ್ಲಿನ ಯಾರೋ ಸ್ವರಾ ಭಾಸ್ಕರ್‌ ಹೆಸರಿನ ನಟಿ (ಇವಳು ಹೆಸರಿಗೆ ಮಾತ್ರ ನಟಿ) ‘ಜ್ಯೂ ಜನರು ಪ್ಯಾಲೆಸ್ಟೈನ್‌ನ ಮೇಲೆ ಎಷ್ಟು ಅತ್ಯಾಚಾರ ಮಾಡಿದರು’, ಎಂದು ಭಾರತದಲ್ಲಿ ಬೊಬ್ಬೆ ಹೊಡೆಯುತ್ತಾಳೆ. ಕೇವಲ ೮-೯ ವರ್ಷಗಳ ಹಿಂದೆ ಈ ದೇಶದಲ್ಲಿ ಆಡಳಿತ ನಡೆಸುತ್ತಿದ್ದ ತಥಾಕಥಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ದೇಶದ ಪ್ರಧಾನಮಂತ್ರಿಗಳು ಜಾಗತಿಕ ಮತ್ತು ರಾಷ್ಟ್ರೀಯ ವ್ಯೂಹರಚನೆಯ ವಿಚಾರ ಮಾಡಿ ಇಸ್ರೈಲ್‌ಗೆ ಮೊದಲು ಬೆಂಬಲ ನೀಡಿರುವಾಗಲೂ ‘ಹಮಾಸ’ ಈ ಪ್ಯಾಲೆಸ್ಟೈನ್‌ ಭಯೋತ್ಪಾದಕ ಸಂಘಟನೆಗೆ ಬೆಂಬಲ ನೀಡುವ ಠರಾವ್‌ ಮಾಡುತ್ತಾರೆ. ಇಷ್ಟೆಲ್ಲ ಆದರೂ ನಮ್ಮಲ್ಲಿನ ಕೆಲವರು ಇಸ್ರೈಲ್‌-ಪ್ಯಾಲೆಸ್ಟೈನ್‌ ಯುದ್ಧದ ಹಿಂದೆ ರಾಜನೈತಿಕತೆ ಕಡಿಮೆ, ಆದರೆ ಧಾರ್ಮಿಕದ್ವೇಷ ಮತ್ತು ಅಹಂಭಾವ ಹೆಚ್ಚಾಗಿದೆ ಎಂಬುದನ್ನು ತಿಳಿದುಕೊಳ್ಳುವುದರಲ್ಲಿ ಕಡಿಮೆ ಬೀಳುತ್ತಾರೆ.

೨. ಇಸ್ಲಾಮ್, ಜ್ಯೂ ಮತ್ತು ಕ್ರೈಸ್ತರಲ್ಲಿನ ಅಸುರಕ್ಷಿತ ಭಾವನೆಯ ಹಿಂದಿನ ಕಾರಣ ಮತ್ತು ಅವರ ಮಾನಸಿಕತೆ

‘ಅಲ್‌ ಅಕ್ಸಾ ಮಸೀದಿ’ ಇಸ್ಲಾಂಗೆ ಅತ್ಯಂತ ಮಹತ್ವದ್ದಾಗಿದೆ. ಮಕ್ಕಾ-ಮದಿನಾದ ನಂತರ ಇದು ಅವರ ಮಹತ್ವದ ಸ್ಥಾನವಾಗಿದೆ. ವಾಸ್ತವದಲ್ಲಿ ಈ ಪ್ರದೇಶದಿಂದಲೇ ಇಸ್ಲಾಮ್, ಯಹೂದಿ (ಜ್ಯೂ) ಮತ್ತು ಕ್ರೈಸ್ತ ಈ ಮೂರೂ ಅಬ್ರಾಹಮಿಕ ಧರ್ಮಗಳ ಸ್ಥಾಪನೆಯಾಗಿದೆ ಮತ್ತು ಇದರಿಂದಲೇ ಈ ಮೂರೂ ಧರ್ಮಗಳಲ್ಲಿ ಪರಸ್ಪರ ವಿಪರೀತ ದ್ವೇಷವಿದೆ. ಇದರ ಹಿಂದೆ ಮೂರೂ ಧರ್ಮೀಯರ ಅಂತಃಕರಣದಲ್ಲಿ ಅಸುರಕ್ಷಿತತೆಯ ಭಾವನೆಯಿದೆ. ತಮ್ಮ ಧರ್ಮ ಜೀವನಪದ್ಧತಿ ಮತ್ತು ಸಶಕ್ತ ತತ್ತ್ವಜ್ಞಾನವೆಂದು ಚಿರಂತನ ಅಸ್ತಿತ್ವವನ್ನು ಕಾಪಾಡಲು ಸಾಧ್ಯವಿಲ್ಲ, ಎಂಬುದು ಇದರ ಹಿಂದಿನ ನಿಜವಾದ ಕಾರಣವಾಗಿದೆ. ಆದ್ದರಿಂದ ಬಹಳಷ್ಟು ಭಿನ್ನತೆ ಇದ್ದರೂ ಈ ಮೂರೂ ಧರ್ಮಗಳು ಇತಿಹಾಸಕಾಲದಿಂದಲೂ ಪರಸ್ಪರರನ್ನು ದ್ವೇಷಿಸುತ್ತವೆ. ಇದರಿಂದಲೇ ‘ತಮ್ಮ ಧರ್ಮವನ್ನು ಇತರರ ಮೇಲೆ ಹೇರುವ ಕೆಟ್ಟ ಪ್ರವೃತ್ತಿ’ಯನ್ನು ಇವರಲ್ಲಿನ ಎರಡು ಧರ್ಮಗಳು ಕಾಪಾಡಿಕೊಂಡಿವೆ. ಆದರೆ ಮೂರನೇ ಧರ್ಮವಾದ ಯಹೂದಿ ಧರ್ಮ, ಮಾತ್ರ ತಮ್ಮ ವಂಶವನ್ನು ದೇವರು ನಿರ್ಮಾಣ ಮಾಡಿದ್ದಾರೆ ಎಂದು ತಿಳಿದು ಅವರು ಸುಮ್ಮನೆ ಅನಾವಶ್ಯಕ ಗಲಾಟೆ ಅಥವಾ ಗೊಂದಲ ಮಾಡುವುದಿಲ್ಲ. ಆದ್ದರಿಂದ ಜ್ಯೂ ಅಥವಾ ಯಹೂದಿ ಜನರು ಧರ್ಮಪ್ರಸಾರ ಮಾಡುವುದಿಲ್ಲ. ಅಷ್ಟು ಮಾತ್ರವಲ್ಲ, ಬೇರೆ ಧರ್ಮದಲ್ಲಿ (ವಂಶದಲ್ಲಿ)ಹುಟ್ಟಿದವರನ್ನು ಯಹೂದಿಗಳು ತಮ್ಮ ಧರ್ಮಕ್ಕೆ ಸೇರಿಸುವುದಿಲ್ಲ. ಅವರಿಗೆ ಅವರ ವಂಶವೇ ಅವರ ಧರ್ಮವಾಗಿದೆ. ಇದರಿಂದ ಯಹೂದಿಗಳ ಜನಸಂಖ್ಯೆ ಸೀಮಿತವಾಗಿಯೇ ಉಳಿದಿದೆ. ಅದರ ಇನ್ನೊಂದು ಪರಿಣಾಮವೆಂದರೆ, ಅವರು ತಮ್ಮನ್ನು ಅತ್ಯಂತ ಉನ್ನತ ವಂಶಧರ್ಮದವರು ಎಂದು ನಂಬಿದ್ದರಿಂದ ಅವರು ಸದಾ ಇತರರೊಂದಿಗೆ ನಿರ್ದಾಕ್ಷಿಣ್ಯದಿಂದ ವರ್ತಿಸುವುದು ಕಾಣಿಸುತ್ತದೆ. ಆದ್ದರಿಂದ ಅವರು ಎಲ್ಲ ವ್ಯವಹಾರಗಳನ್ನು ಸಾಧ್ಯವಿದ್ದಷ್ಟು ತಮ್ಮ ಧರ್ಮದವರೊಂದಿಗೇ ಮಾಡಲು ಪ್ರಯತ್ನಿಸುತ್ತಿರುತ್ತಾರೆ ಮತ್ತು ಇತರ ಧರ್ಮೀಯರೊಂದಿಗೆ ಅತ್ಯಂತ ನಿಷ್ಠುರವಾಗಿ, ಕಪಟದಿಂದ, ಹೀನವಾಗಿ ಮತ್ತು ಅಪಮಾನಾಸ್ಪದವಾಗಿ ವರ್ತಿಸುವುದು ಕಾಣಿಸುತ್ತದೆ. ಇವೆಲ್ಲ ಹಿನ್ನೆಲೆಯಲ್ಲಿ ಹಿಟ್ಲರ್‌ನನ್ನು ಜರ್ಮನಿಯಲ್ಲಿನ ಜ್ಯೂಗಳ ಹತ್ಯಾಕಾಂಡದ ಹೊಣೆಗಾರನೆಂದು ಪರಿಗಣಿಸಿದರೂ ಮೂಲತಃ ಅದು ಕ್ರೈಸ್ತರು ಮಾಡಿದ ಜ್ಯೂಗಳ ಹತ್ಯಾಕಾಂಡವೇ ಆಗಿತ್ತು, ಎಂಬುದನ್ನು ಗಮನದಲ್ಲಿಡಬೇಕು. ಈ ಮೂರೂ ಧರ್ಮಗಳಲ್ಲಿ ಪರಸ್ಪರ ದ್ವೇಷ ಮತ್ತು ವೈರತ್ವ ಇದೆ. ಇಷ್ಟು ಮಾತ್ರವಲ್ಲ, ಅವರು ಜಗತ್ತಿನಲ್ಲಿರುವ ಇತರ ಧರ್ಮಗಳನ್ನೂ ದ್ವೇಷಿಸುತ್ತಾರೆ ಧಾರ್ಮಿಕದ್ವೇಷ ಇದೊಂದು ಕಾರಣ ವಾಯಿತು. ಇನ್ನೊಂದು ಕಾರಣವೆಂದರೆ, ಇವೆರಡೂ ಧರ್ಮಗಳಿಗೆ ಈ ಪೃಥ್ವಿಯ ಮೇಲಿನ ಹೆಚ್ಚೆಚ್ಚು ಭೂಮಿ
ಯನ್ನು ತಮ್ಮ ಅಧೀನದಲ್ಲಿಟ್ಟುಕೊಳ್ಳಲಿಕ್ಕಿದೆ. ಯಹೂದಿಗಳು ತಮ್ಮನ್ನು ಉಚ್ಚಮಟ್ಟದವರೆಂದು ತಿಳಿದು ಇತರ ಧರ್ಮದವರನ್ನು ಗೌರವಿಸುವುದಿಲ್ಲ. ಇವರಲ್ಲಿ ಎರಡು ಧರ್ಮ ದವರಿಗೆ ಈ ಭೂಮಿಯ ಮೇಲೆ ‘ಕೇವಲ ತಮ್ಮವರೇ ಇರಬೇಕೆಂದು ಅನಿಸುತ್ತದೆ. ಇತರ ಧರ್ಮದವರು ಒಂದೋ ಇವರ ಧರ್ಮವನ್ನು ಸ್ವೀಕರಿಸಬೇಕು ಅಥವಾ ಪಲಾಯನ ಮಾಡಬೇಕು ಅಥವಾ ಸಾಯಬೇಕು’, ಇದೇ ಈ ಧರ್ಮಗಳ ಬೋಧನೆಯಾಗಿದೆ. ಇತರ ಧರ್ಮ ದವರಿಗೆ ಜೀವಿಸುವ ಅಧಿಕಾರವಿಲ್ಲ’, ಎನ್ನುವುದೇ ಇವರ ವಿಚಾರಶೈಲಿಯಾಗಿದೆ. ‘ಈ ಪೃಥ್ವಿ ಎಲ್ಲ ಪ್ರಾಣಿಮಾತ್ರರಿಗಾಗಿ ಇದೆ. ನಾವೆಲ್ಲರೂ ಇಲ್ಲಿ ಅನ್ಯೋನ್ಯ ವಾಗಿರಬೇಕು’, ಎನ್ನುವ ವಿಚಾರ ಅಬ್ರಾಹಮಿಕ ಧರ್ಮದಲ್ಲಿಲ್ಲ. ಆದ್ದರಿಂದ ಇಡೀ ಜಗತ್ತನ್ನು ತಮ್ಮ ಗುಲಾಮರನ್ನಾಗಿಸುವ ಮಾನಸಿಕತೆ ಇವರಲ್ಲಿದೆ ಎಂದು ಅನಿಸುತ್ತದೆ.

೩. ಹಿಂದೂ ಸಮಾಜವು ಇಡುವ ದೃಷ್ಟಿಕೋನ

‘ನಾವು ನಿಮ್ಮ ಕಲ್ಯಾಣ ಮಾಡಲು ಇಲ್ಲಿಗೆ ಬಂದಿದ್ದೇವೆ. ನಿಮಗೆ ಕಲಿಸಲು ಬಂದಿದ್ದೇವೆ’, ಈ ಧರ್ಮದವರು ಈ ರೀತಿಯ ಅಪ್ಪಟ ಸುಳ್ಳನ್ನೇ ಪ್ರಾರಂಭದಿಂದಲೂ ಹೇಳುತ್ತಾ ಬಂದಿರುವುದು ಕಾಣಿಸುತ್ತದೆ. ಈ ಮೂರೂ ಧರ್ಮಗಳ ಅಹಂಕಾರ ಅಥವಾ ಮತಾಂಧತೆ ಈ ಮೇಲಿನ ವಿವೇಚನೆಯಿಂದ ಗಮನಕ್ಕೆ ಬರುತ್ತದೆ. ಆದ್ದರಿಂದ ಹಿಂದೂ ಸಮಾಜವು ಯಾವ ದಿಶೆಯನ್ನು ಇಟ್ಟುಕೊಂಡು ಮುನ್ನಡೆಯಬೇಕು, ಎಂಬ ಬಗ್ಗೆ ವಿಚಾರಮಂಥನ ಮಾಡಬೇಕಿದೆ. ಒಂದು ವೇಳೆ ಇದು ಮಧ್ಯಪೂರ್ವದಲ್ಲಿನ ಧಾರ್ಮಿಕ ಮೂಲಭೂತವಾದವನ್ನು ನಿಯಂತ್ರಿಸುವ ಅಥವಾ ಇಸ್ಲಾಮೀ ಕಟ್ಟರಪಂಥಿಯರನ್ನು ಮುಗಿಸುವ ಪ್ರಯತ್ನವಾಗಿದ್ದರೆ, ಗಾಝಾ ಪಟ್ಟಿ ತೆರವುಗೊಳಿಸಿ ಹಮಾಸನ್ನು ಗಾಝಾದಲ್ಲೇ ಮುಗಿಸುವ ಪ್ರಯತ್ನವಾಗಿರುವುದು. ಅದೇ ವೇಳೆಗೆ ‘ತಾಲಿಬಾನ್‌’, ‘ಐಸಿಸ್‌’, ‘ಅಲ್‌-ಕಾಯದಾ’ ಇವರ ಸೊಂಟ ಮುರಿಯಲು ಜಾಗತಿಕ ಶಕ್ತಿಗಳು ಪ್ರಯತ್ನಿಸಬಹುದು, ಏಕೆಂದರೆ ಅವರೇ ಸಿದ್ಧ ಪಡಿಸಿದ ಭಯೋತ್ಪಾದಕ ಸಂಘಟನೆಗಳ ಭಸ್ಮಾಸುರ ಈಗ ಯುರೋಪಿಯನ್‌ ದೇಶ ಮತ್ತು ಅಮೇರಿಕಾಗೆ ನುಂಗಲಾರದ ತುತ್ತಾಗಿದೆ. ಈ ಸ್ಥಿತಿಯಲ್ಲಿ ಭಾರತ ದೇಶ ತನ್ನ ತಲೆನೋವನ್ನು ಕಡಿಮೆಗೊಳಿಸಲು ಏನು ಮಾಡಬೇಕು, ಎಂಬುದರ ವಿಚಾರ ಮಾಡಬೇಕು. ಇವೆಲ್ಲ ಹೇಗೆ ಘಟಿಸುವುದೆಂದು ಕಾದು ನೋಡಬೇಕಿದೆ. ಬಹುಶಃ ನಾವೆಲ್ಲರೂ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿದಾರರಾಗಬಹುದು. ಆದರೆ ಹಿಂದೂ ಸಮಾಜವೆಂದು ನಮಗೆ ಇವೆಲ್ಲ ಚಟುವಟಿಕೆಗಳನ್ನು ಬೇರೆಯೆ ದೃಷ್ಟಿಕೋನದಿಂದ ನೋಡಬೇಕಾಗುವುದು. ಭಾರತ ದೇಶ ಮತ್ತು ಹಿಂದೂ ಸಮಾಜಕ್ಕೆ ಇಂದಿಗೂ ಹೊರಗಿನ ಭಯೋತ್ಪಾದನೆ ಅಥವಾ ಸೈನಿಕ ಅಪಾಯ ಕಾಣಿಸುವುದಿಲ್ಲ.

೪. ಭಾರತಕ್ಕೆ ದೇಶದ ಹೊರಗಿನಿಂದ ಅಲ್ಲ, ದೇಶದ ಒಳಗಿನಿಂದಲೇ ಅಪಾಯವಿದೆ !

ಇವೆಲ್ಲ ಪರಿಸ್ಥಿತಿಯಲ್ಲಿ ಒಂದು ವೇಳೆ ಜಾಗತಿಕ ಮಹಾಯುದ್ಧವಾದರೆ, ಅದರ ಕೇಂದ್ರಬಿಂದು ಏಶಿಯಾ ಖಂಡವಲ್ಲ, ಅದು ಆಫ್ರಿಕಾ ಖಂಡದಲ್ಲಿ ಅಥವಾ ಮಧ್ಯ ಪೂರ್ವದಲ್ಲಿ ಆಗುವ ಸಾಧ್ಯತೆ ಇದೆ. ಆದ್ದರಿಂದ ಈ ಪರಿಸ್ಥಿತಿಯಲ್ಲಿ ನಮ್ಮ ದೇಶಕ್ಕೆ ಈ ರೀತಿಯ ಯುದ್ಧದ ಬಿಸಿ ತಟ್ಟಬಾರದೆಂದು ಮತ್ತು ತಟ್ಟಿದರೂ ಅದು ಸೌಮ್ಯವಾಗಿರಬೇಕು, ಎಂಬುದರ ಕಾಳಜಿಯನ್ನು ಇಂದು ಕೇಂದ್ರದಲ್ಲಿರುವ ಮೋದಿ ಸರಕಾರ ಖಂಡಿತ ತೆಗೆದುಕೊಳ್ಳುವುದು; ಆದರೆ ಈ ದೇಶಕ್ಕೆ ಅಥವಾ ಹಿಂದೂ ಸಮಾಜಕ್ಕೆ ನಿಜವಾದ ಅಪಾಯ ಈ ದೇಶದ ಹೊರಗಿನಿಂದಲ್ಲ, ಅದು ನಮ್ಮ ದೇಶದಲ್ಲಿಯೇ ಇದೆ. ಸ್ವಲ್ಪ ದಿನಗಳ ಹಿಂದೆ ಭಾರತದ ಕೆಲವು ತಥಾಕಥಿತ ಪ್ರತಿಷ್ಠಿತ ಪ್ರಗತಿಪರರು, (ಜನಸಮೂಹದ ಮೇಲೆ ಅವರ ಯಾವುದೇ ರೀತಿಯ ನಿಯಂತ್ರಣವಿಲ್ಲ) ದೆಹಲಿಯಲ್ಲಿನ ಪ್ಯಾಲೆಸ್ಟೈನ್‌ ರಾಯಭಾರಿ ಕಚೇರಿಯ ಮುಂದೆ ‘ಪ್ಯಾಲೆಸ್ಟೈನ್‌ಗೆ ಅಂದರೆ ಹಮಾಸ್‌ಗೆ ನಮ್ಮ ಬೆಂಬಲವಿದೆ’, ಎಂದು ತೋರಿಸಲು ಹೋಗಿದ್ದರು. ‘ಭಾರತ-ಪಾಕಿಸ್ತಾನ ಸ್ಪರ್ಧೆಯಲ್ಲಿ ‘ಜಯ ಶ್ರೀರಾಮ’ ಘೋಷಣೆಯನ್ನು ನೀಡುವುದು, ಎಂದರೆ ಮತಾಂಧತೆ’, ಎಂದು ಹೇಳುವ ದುಷ್ಕರ್ಮಿಗಳೂ ಈ ದೇಶದಲ್ಲಿ ಸಚಿವರಾಗಿರುತ್ತಾರೆ. ಟಿಪ್ಪು ಸುಲ್ತಾನನ ದೊಡ್ಡ ಫಲಕವನ್ನು ಹಚ್ಚಿ ಅದನ್ನು ವೈಭವೀಕರಿಸುವವರು ಭಾರತ ದೇಶದಲ್ಲಿ, ಅದರಲ್ಲಿಯೂ ಕರ್ನಾಟಕದಲ್ಲಿ ಇದ್ದಾರೆ. ಈ ಭಾರತದ ಮಣ್ಣಿನಲ್ಲಿಯೇ ನಮ್ಮ ಪೂರ್ವಜರೇ ಮಣ್ಣುಮುಕ್ಕಿಸಿದ ಔರಂಗಜೇಬನನ್ನು ಇಂದು ಕೆಲವರು ‘ಸುಫೀ ಸಂತ’ನೆಂದು ಹೇಳಿಕೊಳ್ಳುತ್ತಾರೆ. ಆದ್ದರಿಂದ ‘ನಮಗೆ ಅಪಾಯ ದೇಶದ ಹೊರಗಿನಿಂದಲ್ಲ, ಅದು ದೇಶದ ಒಳಗೇ ಇದೆ’, ಎಂಬುದನ್ನು ಹಿಂದೂಗಳು ದೃಢಪಡಿಸಿಕೊಳ್ಳಬೇಕು.

೫. ದೇಶಾಂತರ್ಗತದ ಭದ್ರತೆಗಾಗಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರನ್ನು ಭಾರತದಿಂದ ಹೊರಗೆ ದಬ್ಬುವುದು ಆವಶ್ಯಕ !

ಈ ದೇಶದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರರ್ಥಕ ವಾಗಿ ಸ್ತುತಿಸುತ್ತಾ ಇಸ್ಲಾಮೀ ಭಯೋತ್ಪಾದಕರನ್ನು (ಹಮಾಸ್‌ಗೆ) ಬೆಂಬಲಿಸುವವರಿಗೆ ಈಗ ಸ್ಪಷ್ಟವಾಗಿ ಗದರಿಸುವ ಆವಶ್ಯಕತೆಯಿದೆ. ಇಲ್ಲಿಯವರೆಗೆ ನಮ್ಮ ದೇಶದಲ್ಲಿ ಅನಧಿಕೃತವಾಗಿ ಆಶ್ರಯಕ್ಕಾಗಿ ಬಂದಿರುವ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಹೊರಗೆ ಹಾಕುವ ಪ್ರಯತ್ನವಾಗಿಲ್ಲ. ಮೊತ್ತಮೊದಲು ಈ ಬಾಂಗ್ಲಾದೇಶಿಗಳನ್ನು ಮತ್ತು ರೋಹಿಂಗ್ಯಾಗಳನ್ನು ದೇಶದಿಂದ ಹೊರದಬ್ಬಬೇಕು. ನಾವು ಈ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾಗಳನ್ನು ಸಹಜವಾಗಿ ಗುರುತಿಸಬಹುದು. ಹಿಂದೂ ಸಮಾಜ ಮೊತ್ತ ಮೊದಲು ಅವರಿಗೆÉ ಬಹಿಷ್ಕಾರ ಹಾಕಬೇಕು. ಅವರಿಗೆ ಇಲ್ಲಿ ಹೊಟ್ಟೆಗೆ ಅನ್ನ ಸಿಗದಿದ್ದರೆ ಮಾತ್ರ ಅವರು ಈ ದೇಶದಿಂದ ಹೊರಗೆ ಹೋಗುವರು. ಅವರನ್ನು ವಿವಿಧ ಪ್ರಕಾರದಿಂದ ದೇಶದಿಂದ ಹೊರಗೆ ಹಾಕಬೇಕಾಗಿದೆ; ಏಕೆಂದರೆ, ನಾಳೆ ಈ ದೇಶದಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾದರೆ ಹಿಂದೂ ಸಮಾಜ ಮತ್ತು ಭಾರತೀಯ ಆಡಳಿತದ ವಿರುದ್ಧ ವಿದ್ರೋಹ ಮಾಡುವ ಮೊದಲ ಜನ ಸಮೂಹ ಇದಾಗಿದೆ. ಈಗ ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಕೆಲವು ಮುಸಲ್ಮಾನಪ್ರೇಮಿ ಕಾನೂನುಗಳನ್ನು ರದ್ದುಪಡಿಸುವುದೂ ಅಷ್ಟೇ ಮಹತ್ವದ್ದಾಗಿದೆ.

೬. ಕೇಂದ್ರ ಸರಕಾರ ಧರ್ಮನಿರಪೇಕ್ಷತೆಗೆ ಬಾಧೆಯನ್ನುಂಟು ಮಾಡುವ ಕಾನೂನುಗಳನ್ನು ರದ್ದುಪಡಿಸುವುದು ಮಹತ್ವದ್ದಾಗಿದೆ !

‘ಪ್ಲೇಸೆಸ್‌ ಆಫ್‌ ವರ್ಶಿಪ್‌ ಎಕ್ಟ್‌’ (ಧಾರ್ಮಿಕ ಸ್ಥಳಗಳ ಕಾನೂನು), ‘ವಕ್ಫ್ ಎಕ್ಟ್‌’ ಮತ್ತು ‘ಮುಸ್ಲಿಮ್‌ ಪರ್ಸನಲ್‌ ಲಾ ಬೋರ್ಡ್‌’, ‘ಮೈನಾರಿಟೀಸ್‌ ಕಮಿಶನ್’ (ಅಲ್ಪಸಂಖ್ಯಾತ ಆಯೋಗ) ಮುಂತಾದ ಕಾನೂನುಗಳು ರದ್ದಾಗುವುದು ಅತ್ಯಂತ ಆವಶ್ಯಕವಾಗಿದೆ. ಇದಕ್ಕೆ ಸಾಕಷ್ಟು ಸಾಮಾಜಿಕ ಒತ್ತಡ ನಿರ್ಮಾಣವಾಗುವುದು ಕಾಣಿಸುವುದಿಲ್ಲ. ಕೇಂದ್ರ ಸರಕಾರ ಈ ಕಾನೂನುಗಳನ್ನು ರದ್ದುಪಡಿಸಿದರೂ ಆಗುತ್ತದೆ, ಏಕೆಂದರೆ ಈ ಕಾನೂನುಗಳ ಆವಶ್ಯಕತೆಯಿಲ್ಲ. ‘ಈ ಕಾನೂನುಗಳು ಧರ್ಮನಿರಪೇಕ್ಷತೆಯ ತತ್ತ್ವಕ್ಕೆ ಬಾಧೆಯನ್ನುಂಟು ಮಾಡು ವಂತಹದ್ದಾಗಿವೆ’, ಎಂಬುದು ಸರ್ವೋಚ್ಚ ನ್ಯಾಯಾಲಯಕ್ಕೆ ಅರಿವಾಗಬೇಕಾದರೆ ಈ ವಿಷಯದಲ್ಲಿ ಸತತವಾಗಿ ಸಾಮಾಜಿಕ ಆಂದೋಲನಗಳಾಗಬೇಕು. ಇದಕ್ಕಾಗಿ ಒತ್ತಡ ಹೇರುವ ಆವಶ್ಯಕತೆಯಿದೆ. ಜಗತ್ತಿನಲ್ಲಿ ಅಸ್ಥಿರ ಪರಿಸ್ಥಿತಿ ಇರುವಾಗ ಮತ್ತು ಮೊದಲೇ ಅಪಕೀರ್ತಿ ಹೊಂದಿರುವ ಜಾಗತಿಕ ಇಸ್ಲಾಮ್‌ ಯಹೂದಿಗಳೊಂದಿಗೆ ಹೋರಾಡುವುದರಲ್ಲಿ ಮಗ್ನವಾಗಿರುವಾಗಲೇ ನಮ್ಮ ಇಷ್ಟಾರ್ಥವನ್ನು ಸಿದ್ಧಿಗೊಳಿಸುವುದು ಎಂದರೆ ಭಗವಂತನು ನಮಗೆ ಮಹಾಭಾರತ ಯುದ್ಧದಲ್ಲಿ ಕಲಿಸಿದ ಪಾಠವನ್ನು ಅನುಸರಿಸುವುದಾಗಿದೆ ?

– ಡಾ. ವಿವೇಕ ರಾಜೆ (೨೫.೧೦.೨೦೨೩)
(ಆಧಾರ : ದೈನಿಕ ‘ನಾಗಪುರ ತರುಣ ಭಾರತ’ದ ಜಾಲತಾಣ)