ಚೀನಾ ನಾಪತ್ತೆಯಾಗಿರುವ ತನ್ನ ಮಾಜಿ ವಿದೇಶಾಂಗ ಮತ್ತು ರಕ್ಷಣಾ ಸಚಿವರನ್ನು ಹತ್ಯೆ ಮಾಡಿದೆ !

ಬ್ರಿಟನ್ನಿನ ಪ್ರಸಾರ ಮಾಧ್ಯಮಗಳ ದಾವೆ

ಚೀನಾದ ಮಾಜಿ ರಕ್ಷಣಾ ಸಚಿವ ಲಿ ಶಾಂಗಫೂ ಮತ್ತು ಮಾಜಿ ವಿದೇಶಾಂಗ ಸಚಿವ ಕಿನ್ ಗಾಂಗ್

ಬೀಜಿಂಗ (ಚೀನಾ) – ಚೀನಾದ ಮಾಜಿ ವಿದೇಶಾಂಗ ಸಚಿವ ಕಿನ್ ಗಾಂಗ್ ಮತ್ತು ಮಾಜಿ ರಕ್ಷಣಾ ಸಚಿವ ಲಿ ಶಾಂಗಫೂ ಅವರು ಸಚಿವರಾಗಿದ್ದಾಗಲೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಇನ್ನೂವರೆಗೆ ಅವರ ಪತ್ತೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇವರಿಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಬ್ರಿಟನ್ ಪ್ರಸಾರ ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ಮಂತ್ರಿಗಳು ಮಾತ್ರವಲ್ಲ, ಹಲವು ಉನ್ನತ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಮತ್ತು ಅವರನ್ನು ಕೂಡ ಹತ್ಯೆ ಮಾಡಲಾಗಿದೆಯೆಂದು ಹೇಳಲಾಗುತ್ತಿದೆ. ಇದರ ಹಿಂದೆ ಚೀನಾ ರಾಷ್ಟ್ರಾಧ್ಯಕ್ಷ ಶಿ ಜಿನಪಿಂಗ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಪ್ರಕರಣದ ಬಗ್ಗೆ ಚೀನಾದಿಂದ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಲಾಗಿಲ್ಲ.

ಬ್ರಿಟನ್ನಿನ ದಿನ ಪತ್ರಿಕೆ ‘ದಿ ಸನ್’ ಸುದ್ದಿಯನುಸಾರ ಕಿನ್ ಗಾಂಗ್ ಮತ್ತು ಲಿ ಶಾಂಗಫು ಇವರೊಂದಿಗೆ ಅನೇಕ ಜನರು ಸಾವನ್ನಪ್ಪಿದ್ದಾರೆ. ಚೀನಾ ಈಗ ಸದ್ಯಕ್ಕೆ ಭದ್ರತೆಯ ವಿಷಯದಲ್ಲಿ ಹಿಂದೆಂದಿಗಿಂತಲೂ ಕಠೋರವಾಗಿದೆ. ಆದ್ದರಿಂದ, ಚೀನಾದಲ್ಲಿ ನಿಖರವಾಗಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಠಿಣವಾಗಿದೆ. ಈ ಸಮಯದಲ್ಲಿ, ಚೀನಿ ಅಧಿಕಾರಿಗಳ ಹಠಾತ್ ನಾಪತ್ತೆಯ ಪ್ರಮಾಣ ಹೆಚ್ಚಾಗಿದೆ. ಇದಕ್ಕಾಗಿ ರಾಷ್ಟ್ರಪತಿ ಶಿ ಜಿನಪಿಂಗ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಕೆಲವರು ಶಿ ಜಿನಪಿಂಗ್ ಅವರನ್ನು ರಷ್ಯಾದ ಅಧ್ಯಕ್ಷ ಪುಟಿನ್ ರಂತೆ ನೋಡುತ್ತಿದ್ದಾರೆ. ‘ಪುಟಿನ್ ಕೂಡ ತನ್ನೆಲ್ಲ ವಿರೋಧಿಗಳನ್ನೂ ಹತ್ಯೆ ಮಾಡುತ್ತಾರೆ’ ಎಂದು ಆರೋಪಿಸಲಾಗಿದೆ.

ಸಂಪಾದಕರ ನಿಲುವು

* ಚೀನಾದ ಕ್ರೌರ್ಯ ಮತ್ತು ಜನರೊಂದಿಗೆ ಮಾಡುತ್ತಿರುವ ಕ್ರೂರ ವರ್ತನೆಯು ಪ್ರಪಂಚಕ್ಕೆ ತಿಳಿದಿರುವ ವಿಷಯವಾಗಿದೆ. ಇಂತಹ ಚೀನಾದ ಬಗ್ಗೆ ಭಾರತ ಸದಾ ಎಚ್ಚರದಿಂದ ಇರಬೇಕಾದ ಆವಶ್ಯಕತೆಯಿದೆ !