ಪಾಕಿಸ್ತಾನಕ್ಕೆ ಭೇಟಿ ನೀಡಿದ ಹಾಮಾಸ್ ನ ಮುಖ್ಯಸ್ಥ !
ತೆಲ್ ಅವಿವ್ (ಇಸ್ರೇಲ್) – ಇಸ್ರೈಲ್ ಜೊತೆಗಿನ ತನ್ನ ಯುದ್ಧವನ್ನು ಕೊನೆಗೊಳಿಸಲು ಹಮಾಸ್ ಪಾಕಿಸ್ತಾನದ ಸಹಾಯವನ್ನು ಕೋರಿದೆ. ಇಸ್ಲಾಮಾಬಾದ್ ತಲುಪಿದ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿ ಇವರು, ಪಾಕಿಸ್ತಾನ ಒಂದು ಶೌರ್ಯ ದೇಶವಾಗಿದೆ. ಇದು ಮುಜಾಹಿದೀನ್‌ಗಳ (ಇಸ್ಲಾಂ ಧರ್ಮಕ್ಕಾಗಿ ಹೋರಾಡುತ್ತಿರುವವರ) ಭೂಮಿಯಾಗಿದೆ. ಪಾಕಿಸ್ತಾನ ಬಯಸಿದರೆ ಇಸ್ರೈಲ್ ದಾಳಿಯನ್ನು ನಿಲ್ಲಿಸಬಹುದು. ಅದು ನಮಗೆ ಆಧಾರ ನೀಡಬಹುದು ಎಂದು ಹೇಳಿದರು.
ಗಾಜಾದಲ್ಲಿನ ಶಾಲೆಗಳು ಮತ್ತು ಆಸ್ಪತ್ರೆಗಳಲ್ಲಿ ಶಸ್ತ್ರಾಸ್ತ್ರಗಳು ಪತ್ತೆ ! – ಇಸ್ರೈಲ್
ಮತ್ತೊಂದೆಡೆ, ಗಾಜಾದ ಶಾಲೆಗಳು ಮತ್ತು ಆಸ್ಪತ್ರೆಗಳಿಂದ ಸೈನಿಕರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಸ್ರೈಲ್ ಮಿಲಿಟರಿ ಹೇಳಿದೆ. ಇದರ ವಿಡಿಯೋ ಕೂಡ ಹರಿದಾಡಿದೆ. ವೀಡಿಯೊದಲ್ಲಿ, ಸೈನಿಕರು ಶಾಲೆಯಿಂದ ಕ್ಷಿಪಣಿಗಳು, ಗ್ರೆನೇಡ್‌ಗಳು ಮತ್ತು ಬಂದೂಕುಗಳನ್ನು ತೆಗೆದುಹಾಕುತ್ತಿರುವುದನ್ನು ಕಾಣಬಹುದು.
ಗಾಜಾದ ಆರೋಗ್ಯ ವ್ಯವಸ್ಥೆ ಕುಸಿದಿದೆ ! – ವಿಶ್ವ ಆರೋಗ್ಯ ಸಂಸ್ಥೆ
ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧದ ಪುನರಾರಂಭದ ನಂತರ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಘೆಬ್ರೆಯೆಸಸ್ ಇವರು, ಗಾಜಾ ಪಟ್ಟಿಯಲ್ಲಿರುವ ಆರೋಗ್ಯ ವ್ಯವಸ್ಥೆಯು ಕುಸಿದಿದೆ ಮತ್ತು ಶೀಘ್ರದಲ್ಲೇ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಹೇಳಿದರು. ಇಲ್ಲಿನ 36 ಆಸ್ಪತ್ರೆಗಳಲ್ಲಿ 14 ಮಾತ್ರ ಜನರಿಗೆ ಚಿಕಿತ್ಸೆ ನೀಡುತ್ತಿವೆ. ಉಳಿದ ಆಸ್ಪತ್ರೆಗಳು ನಾಶವಾಗಿವೆ. ಗಾಜಾದಲ್ಲಿ ತಕ್ಷಣದ ಕದನ ವಿರಾಮದ ಅಗತ್ಯವಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಯೋತ್ಪಾದಕರ ಕಾರ್ಖಾನೆಯಾಗಿರುವ ಪಾಕಿಸ್ತಾನಕ್ಕೆ ಭಯೋತ್ಪಾದಕ ಸಂಘಟನೆ ಹಮಾಸ್ ನಿಕಟವಾಗಿಯೇ ಇರುತ್ತದೆ. ಜಗತ್ತಿನೆಲ್ಲೆಡೆ ಭಯೋತ್ಪಾದಕರ ತವರೂರು ಎನಿಸಿಕೊಂಡಿರುವ ಪಾಕಿಸ್ತಾನವನ್ನು ಧ್ವಂಸ ಮಾಡುವುದೇ ಜಗತ್ತಿಗೆ ಒಳಿತು ! |