‘ಭಾರತದಿಂದ ಕೈಕೊಳ್ಳಲಾಗುವ ತನಿಖೆಯ ತೀರ್ಪನ್ನು ಎದುರು ನೋಡೋಣ !'(ಅಂತೆ) – ಅಮೇರಿಕಾ

ಅಮೇರಿಕಾದ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಹತ್ಯೆಯ ತಥಾಕಥಿತ ಸಂಚಿನಲ್ಲಿ ಭಾರತ ಸರಕಾರ ಭಾಗಿಯಾಗಿರುವ ಆರೋಪದ ಪ್ರಕರಣ

ವಾಷಿಂಗ್ಟನ್ (ಅಮೇರಿಕ) – ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನುವಿನ ಹತ್ಯೆಯ ತಥಾಕಥಿತ ಸಂಚಿನ ಹಿಂದೆ ಭಾರತ ಸರಕಾರದ ಕೈವಾಡವಿದೆ ಎಂದು ಅಮೆರಿಕಾ ಆರೋಪಿಸಿತ್ತು. ಅದಕ್ಕೆ ಭಾರತವು `ನಾವು ಈ ಪ್ರಕರಣದ ತನಿಖೆಯನ್ನು ನಡೆಸುತ್ತೇವೆ’, ಎಂದು ಸ್ಪಷ್ಟ ಪಡಿಸಿತ್ತು. ಈಗ ಅಮೇರಿಕಾ ಪುನಃ ಅದೇ ವಿಷಯದ ಕುರಿತು ಹೇಳಿಕೆ ನೀಡಿದೆ. ಅಮೇರಿಕಾದ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ ಇವರು, ನಾವು ಈ ಪ್ರಕರಣದಲ್ಲಿ ಭಾರತದ ತನಿಖೆಯ ತೀರ್ಪಿಗಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ.

ಮ್ಯಾಥ್ಯೂ ಮಿಲ್ಲರ ತಮ್ಮ ಮಾತನ್ನು ಮುಂದುವರಿಸಿ, ನಮ್ಮ ವಿದೇಶಾಂಗ ಸಚಿವರಾದ ಆಂಟನಿ ಬ್ಲಿಂಕನ್ ಇವರು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ ಇವರೊಂದಿಗೆ ಈ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ. ಅದಕ್ಕೆ ಡಾ. ಜೈಶಂಕರ ಇವರು ಈ ಪ್ರಕರಣದ ತನಿಖೆಯನ್ನು ನಡೆಸುವುದಾಗಿ ಭರವಸೆ ನೀಡಿದ್ದಾರೆ. ನಾವು ಅವರ ತನಿಖೆ ಪೂರ್ಣಗೊಳ್ಳುವ ಮತ್ತು ತೀರ್ಪಿಗಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಮಿಲ್ಲರ ಅವರು, ನಾವು ಯಾವುದೇ ರೀತಿಯ ಅಂತಾರಾಷ್ಟ್ರೀಯ ಪೀಡಿಸುವಿಕೆಯನ್ನು ಸಹಿಸುವುದಿಲ್ಲ. ಭಾರತವು ಕೆನಡಾದ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಹತ್ಯೆಯ ತನಿಖೆಯಲ್ಲಿಯೂ ಸಹಕರಿಸಬೇಕು ಎಂದು ಹೇಳಿದ್ದರು. (ಭಾರತ ಕೆನಡಾದ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ?, ಎನ್ನುವುದನ್ನು ಅಮೇರಿಕಾ ಹೇಳುವ ಆವಶ್ಯಕತೆಯಿಲ್ಲ ಎಂದು ಭಾರತವು ಕಟುವಾದ ಶಬ್ದಗಳಲ್ಲಿ ಹೇಳಬೇಕು – ಸಂಪಾದಕರು)

ಸಂಪಾದಕರ ನಿಲುವು

* ಪನ್ನು ಭಾರತದ ಅಖಂಡತೆಗೆ ಸುರಂಗ ಕೊರೆಯಲು ಯಾವ ರೀತಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾನೆ ? ಎನ್ನುವ ಬಗ್ಗೆ ಭಾರತದ ಬಳಿ ದಾಖಲೆಗಳಿವೆ. ಅದನ್ನು ಜಗತ್ತಿನೆದುರಿಗೆ ಬಹಿರಂಗಪಡಿಸಿ, ಭಾರತವೂ ರಾಜಕೀಯ ಚಾಣಾಕ್ಷತೆಯನ್ನು ಮೆರೆದು, ಅಮೇರಿಕಾವೇ ಪನ್ನೂ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಬೇಕು !