ಸದ್ಯ ಸಂಸತ್ತಿನಿಂದ ಬ್ರಿಟಿಷ ಕಾಲದ ನಿಯಮಗಳನ್ನು ಬದಲಾಯಿಸುವ ಪ್ರಕ್ರಿಯೆ ನಡೆದಿದೆ. ಅದಕ್ಕಾಗಿ ಸಂಸತ್ತು ಆರಿಸಿರುವ ಸಮಿತಿಗೆ ‘ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೀನಲ್ ಕೋಡ್, ಐ.ಪಿ.ಸಿ.)’, ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್) ಮತ್ತು ‘ಭಾರತೀಯ ಸಾಕ್ಷಿಪುರಾವೆ ಅಧಿನಿಯಮ (‘ಇಂಡಿಯನ್ ಎವಿಡನ್ಸ್ ಎಕ್ಟ್)’ ಈ ಕಾನೂನುಗಳ ಬಗೆಗಿನ ೩ ಮಸೂದೆಗಳ ಅಧ್ಯಯನ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ. ಈ ಸಮಿತಿಯು ಈ ಮೂರೂ ಕಾನೂನುಗಳ ಅಧ್ಯಯನ ಮಾಡಿ ಅವುಗಳ ವಿಷಯದಲ್ಲಿ ಒಳಿತು-ಕೆಡುಕುಗಳ ಬಗ್ಗೆ ವಿಚಾರ ಮಾಡಿ ಸೂಚನೆಗಳನ್ನು ನೀಡಬೇಕು. ಈ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸುವಾಗ ಗೃಹಮಂತ್ರಿಗಳು ರಾಜದ್ರೋಹಕ್ಕೆ ಸಂಬಂಧಿಸಿದ ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ‘ಅದನ್ನು ಹೊಸ ಸ್ವರೂಪದಲ್ಲಿ ತರಬೇಕು’ ಎಂದು ಹೇಳಿದ್ದರು; ಆದರೆ ಮಾನವತೆ ಹಾಗೂ ಮೂಲಭೂತ ಹಕ್ಕಿನ ವಿಷಯದಲ್ಲಿ ಸ್ವಯಂಘೋಷಿತ ವಿಜೇತರೆನಿಸಿಕೊಳ್ಳುವ ತಜ್ಞರಿಗೆ ಸಮಿತಿಯ ವರದಿ ಬರುವ ವರೆಗೆ ತಾಳ್ಮೆ ಇರಲಿಲ್ಲ. ಅವರು ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ‘ಹೊಸ ಸಮಿತಿ ರಾಜದ್ರೋಹದ ಕಾನೂನಿನಲ್ಲಿ ಸೂಚಿಸಿದ ಬದಲಾವಣೆಯ ದುರುಪಯೋಗವಾಗಬಹುದು’, ಎಂದು ಚಿಂತೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ವೋಚ್ಚ ನ್ಯಾಯಾಲಯ ಸರಕಾರಕ್ಕೆ ‘ರಾಜದ್ರೋಹದ ಅಪರಾಧಗಳಿಗೆ ಸಂಬಂಧಿಸಿ ಸರಕಾರದ ನಿಲುವನ್ನು ಸ್ಪಷ್ಟಪಡಿಸಬೇಕು’, ಎಂದು ಹೇಳಿದೆ.
ಹೊಸ ಕಾನೂನಿನ ವಿಷಯದಲ್ಲಿ ರಾಷ್ಟ್ರವಿರೋಧಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಯಾಚಿಕೆಯನ್ನು (ಅರ್ಜಿ) ಸಲ್ಲಿಸುವುದು
ಸಾಮಾನ್ಯವಾಗಿ ನಮ್ಮ ದೇಶದಲ್ಲಿನ ನ್ಯಾಯಾಲಯಗಳು ಇಂತಹ ಯಾಚಿಕೆಗಳು (ಅರ್ಜಿಗಳು) ಬಂದರೆ ಅವುಗಳನ್ನು ‘ಅಪರಿಪಕ್ವ ಅಥವಾ ತಪ್ಪು ತಿಳುವಳಿಕೆಯನ್ನುಂಟು ಮಾಡುವ’, ಎಂದು ಹೇಳಿ ರದ್ದುಪಡಿಸುತ್ತವೆ. ಆದರೆ ಸರ್ವೋಚ್ಚ ನ್ಯಾಯಾಲಯ ಎಲ್ಲಕ್ಕಿಂತ ಶ್ರೇಷ್ಠವಾಗಿದೆ, ಆದ್ದರಿಂದ ಅದರಲ್ಲಿ ಯಾವುದೇ ತಪ್ಪನ್ನು ತೋರಿಸಲು ಸಾಧ್ಯವಿಲ್ಲ. ಈಗ ಪ್ರಶ್ನೆ ಹೇಗಿದೆ ಎಂದರೆ, ರಾಜದ್ರೋಹದ ಕಾನೂನಿನಲ್ಲಿ ಕೆಲವು ಏರ್ಪಾಡುಗಳನ್ನು ಮಾಡಿದರೆ ಕೆಲವು ಜನರಿಗೆ ಮಾತ್ರ ಚಿಂತೆ ಏಕೆ ? ಈ ವಿಷಯದಲ್ಲಿ ಸ್ವಲ್ಪ ವಿಚಾರ ಮಾಡಿದರೆ, ಒಂದಲ್ಲ ಒಂದು ಮಾರ್ಗದಿಂದ ದೇಶವನ್ನು ತುಂಡು ಮಾಡಲು ಆತುರರಾಗಿರುವ ರಾಷ್ಟ್ರವಿರೋಧಿಗಳ ಮನಸ್ಸಿನಲ್ಲಿ ಭಯ ಹುಟ್ಟಿದೆ. ಅವರಿಗೆ ಭಾರತದ ಐಕ್ಯತೆ, ಸಾರ್ವಭೌಮತ್ವ ಹಾಗೂ ಸಮಗ್ರತೆ ಇವುಗಳ ಬಗ್ಗೆ ಯಾವುದೇ ಸಂಬಂಧವಿಲ್ಲ. ‘ಸದ್ಯ ಕಾನೂನುಪ್ರಕಾರ ಆರಿಸಿ ಬಂದಿರುವ ಸರಕಾರವನ್ನು ಬುಡಮೇಲು ಮಾಡುವುದೇ ಅವರ ದುಷ್ಟ ಯೋಜನೆಯಾಗಿದ್ದು, ಅದರಲ್ಲಿ ಅವರಿಗೆ ಸ್ವಲ್ಪ ಕಡಿಮೆ ಶಿಕ್ಷೆ ಅಥವಾ ಶಿಕ್ಷೆ ಆಗಬಾರದೆಂಬುದು ಅವರ ಅಪೇಕ್ಷೆಯಾಗಿದೆ. ಅದಕ್ಕೆ ಎಲ್ಲಕ್ಕಿಂತ ಒಳ್ಳೆಯ ಉಪಾಯವೆಂದರೆ, ಸರ್ವೋಚ್ಚ ನ್ಯಾಯಾಲಯವು ತನ್ನ ಅಧಿಕಾರವನ್ನು ಉಪಯೋಗಿಸುವುದು. ಆದರೆ ಸರಕಾರವು ಸದ್ಯ ಎಂತಹ ನಿಲುವನ್ನು ತೆಗೆದು ಕೊಂಡಿದೆ ಎಂದರೆ, ‘ಹೊಸ ಕಾನೂನು ಈಗ ಅತೀ ಪ್ರಾಥಮಿಕ ಅವಸ್ಥೆಯಲ್ಲಿದೆ, ಈ ಸ್ಥಿತಿಯಲ್ಲಿ ಈ ಕಾನೂನಿನ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ನೀಡಲು ಸಾಧ್ಯವಿಲ್ಲ. ಈ ಕಾನೂನು ಕಾರ್ಯನಿರತವಾದ ನಂತರ ಸರ್ವೋಚ್ಚ ನ್ಯಾಯಾಲಯಕ್ಕೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಧಿಕಾರವಿದೆ’.
ಸ್ವಾರ್ಥಕ್ಕಾಗಿ ನ್ಯಾಯವ್ಯವಸ್ಥೆಯನ್ನು ಉಪಯೋಗಿಸುವವರನ್ನು ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳೇ ನಿಯಂತ್ರಿಸುವುದು ಆವಶ್ಯಕ !
ದೇಶದ ಪ್ರಜಾಪ್ರಭುತ್ವ ಅಥವಾ ಸಾರ್ವಭೌಮತ್ವದ ಬಗ್ಗೆ ಯಾವುದೇ ಚಿಂತೆಯಿಲ್ಲದ ಕೆಲವು ನೀಚ ಜನರು ಬಹಳಷ್ಟು ಅಪರಾಧಗಳನ್ನು ಮಾಡಿ ಅದರಿಂದ ತಪ್ಪಿಸಿಕೊಳ್ಳಲು ನ್ಯಾಯಾಂಗ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುವವರನ್ನು ಕೇವಲ ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಗಳೇ ನಿಯಂತ್ರಿಸಲು ಸಾಧ್ಯವಿದೆ. – ನ್ಯಾಯವಾದಿ ಡಾ. ಎಚ್. ಸಿ. ಉಪಾಧ್ಯಾಯ, ಭಾಗ್ಯ ನಗರ ತೆಲಂಗಾಣ.