ಆಹಾರವನ್ನು ಸೇವಿಸುವಾಗ ಚಮಚವನ್ನು ಉಪಯೋಗಿಸುವ ಬದಲು ಕೈಯಿಂದ ಸೇವಿಸುವುದು ಒಳ್ಳೆಯದು ! – ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನೆ

ಆಹಾರವು ಮಾನವನ ಮೂಲಭೂತ ಆವಶ್ಯಕತೆಯಾಗಿದೆ. ನಾವು ಎಂತಹ ಮತ್ತು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆ ? ಇದರಿಂದ ನಮ್ಮ ಶರೀರ, ಮನಸ್ಸು ಮತ್ತು ಬುದ್ಧಿಯ ಮೇಲೆ ಪರಿಣಾಮವಾಗುತ್ತದೆ. ಹಿಂದೂ ಧರ್ಮದಲ್ಲಿ ಆಹಾರವನ್ನು ಸೇವಿಸುವುದಕ್ಕೆ ‘ಯಜ್ಞ ಕರ್ಮ’ ಎಂದು ಹೇಳಲಾಗಿದೆ. ಯಜ್ಞ ಮಾಡುವಾಗ ಯಾವ ರೀತಿ ಕೈಯಿಂದ ಆಹುತಿಯನ್ನು ನೀಡಲಾಗುತ್ತದೆಯೋ, ಅದೇ ರೀತಿ ಆಹಾರವನ್ನು ಸೇವಿಸುವಾಗ ಅದನ್ನು ಕೈಯಿಂದ ಸೇವನೆ ಮಾಡುವ ಪದ್ಧತಿ ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ; ಆದರೆ ಈಗ ಚಮಚದಿಂದ ಊಟ ಮಾಡುವ ಮಾನಸಿಕತೆ ಎಲ್ಲೆಡೆ ಕಾಣಿಸುತ್ತಿದೆ. ಕೈಯಿಂದ ಆಹಾರವನ್ನು ಸೇವಿಸುವುದಕ್ಕೆ ಸಾತ್ವಿಕತೆಯ ದೃಷ್ಟಿಯಿಂದಲೂ ಮಹತ್ವವಿದೆ. ನಾವು ಮಾಡುತ್ತಿರುವ ವಿವಿಧ ಕೃತಿಗಳು ನಮ್ಮ ಸೂಕ್ಷ್ಮ ಊರ್ಜೆಯ (ಶಕ್ತಿಯ) ಮೇಲೆ ಪರಿಣಾಮವನ್ನು ಬೀರುತ್ತವೆ.

ಚಮಚ ಅಥವಾ ಕೈಯಿಂದ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ (ಔರಾದ ಮೇಲೆ) ಮೇಲೆ ಏನು ಪರಿಣಾಮವಾಗುತ್ತದೆ? ಎನ್ನುವುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗೆ ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ (ಯು.ಎ.ಎಸ್) ಸಾಧನವನ್ನು ಉಪಯೋಗಿಸಲಾಯಿತು.

೧. ಪರೀಕ್ಷಣೆಯ ನಿರೀಕ್ಷಣೆಗಳು

ಈ ಪರೀಕ್ಷಣೆಯಲ್ಲಿ, ಇಬ್ಬರು ವ್ಯಕ್ತಿಗಳಿಗೆ (ಒಬ್ಬರು ತೀವ್ರ ಆಧ್ಯಾತ್ಮಿಕ ತೊಂದರೆ ಇದ್ದವರು ಮತ್ತು ಇನ್ನೊಬ್ಬರು ಆಧ್ಯಾತ್ಮಿಕ ತೊಂದರೆ ಇಲ್ಲದವರು) ಒಂದೇ ರೀತಿಯ ಆಹಾರವನ್ನು ಮೊದಲನೇ ದಿನ ಚಮಚದಿಂದ ಮತ್ತು ಎರಡನೇ ದಿನ ಕೈಯಿಂದ ಸೇವಿಸಲು ಹೇಳಲಾಯಿತು. ಎರಡೂ ದಿನ ಆಹಾರವನ್ನು ಸೇವಿಸುವ ಮೊದಲು ಮತ್ತು ಆಹಾರವನ್ನು ಸೇವಿಸಿದ ೨೦ ನಿಮಿಷಗಳ ನಂತರ ಇಬ್ಬರನ್ನೂ ಪರೀಕ್ಷಿಸಲಾಯಿತು. ಈ ಪರೀಕ್ಷಣೆಗಳ ನಿರೀಕ್ಷಣೆಯ ವಿವರಣೆಯನ್ನು ಮುಂದೆ ನೀಡಲಾಗಿದೆ.

ಟಿಪ್ಪಣಿ – ಸದ್ಯದ ಕಾಲ ಅತ್ಯಂತ ರಜ-ತಮಪ್ರಧಾನ ಆಗಿದೆÀ, ವ್ಯಕ್ತಿಯ ಮನಸ್ಸು, ಬುದ್ಧಿ ಮತ್ತು ದೇಹದ ಮೇಲೆ ರಜ-ತಮಾತ್ಮಕ ಸ್ಪಂದನಗಳ ಆವರಣ ಬರುತ್ತದೆ. ಇದರಿಂದ ಪರೀಕ್ಷಣೆಯಲ್ಲಿ ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ವ್ಯಕ್ತಿಯಲ್ಲಿಯೂ ತೊಂದರೆದಾಯಕ ಸ್ಪಂದನ ಗಳು ಕಂಡುಬಂದವು. ಈ ತೊಂದರೆದಾಯಕ ಸ್ಪಂದನ ಗಳಿಂದ ರಕ್ಷಣೆಯಾಗಲು ಪ್ರತಿಯೊಬ್ಬರೂ ಪ್ರತಿದಿನ ತಮ್ಮ ಮೇಲಿನ ಆವರಣವನ್ನು ಆಗಾಗ ತೆಗೆಯುವುದು ಆವಶ್ಯಕ ವಾಗಿದೆ. ಆವರಣವನ್ನು ತೆಗೆಯಲು ವಿವಿಧ ಪದ್ಧತಿ ಗಳನ್ನು ಉಪಯೋಗಿಸಬಹುದು, ಉದಾ. ವಿಭೂತಿಯನ್ನು ಹಚ್ಚುವುದು, ಗೋಮೂತ್ರವನ್ನು ಸಿಂಪಡಿಸುವುದು, ಸ್ತೋತ್ರ ಗಳನ್ನು ಹೇಳುವುದು ಅಥವಾ ಕೇಳುವುದು, ನಾಮಜಪ ಮಾಡುವುದು ಇತ್ಯಾದಿ.

೧ ಅ. ಚಮಚದಿಂದ ಆಹಾರವನ್ನು ಸೇವಿಸಿದ್ದರಿಂದ ವ್ಯಕ್ತಿಯಲ್ಲಿರುವ ಸಕಾರಾತ್ಮಕ ಊರ್ಜೆ ಇಲ್ಲವಾಗಿ ಆ ವ್ಯಕ್ತಿಯಲ್ಲಿ ನಕಾರಾತ್ಮಕ ಊರ್ಜೆ ಬಹಳ ಹೆಚ್ಚಾಗುವುದು : ಮೇಲಿನ ನಿರೀಕ್ಷಣೆಯಿಂದ ಗಮನಕ್ಕೆ ಬರುವುದೇನೆಂದರೆ, ಆಹಾರವನ್ನು ಚಮಚದಿಂದ ಸೇವಿಸಿದ ಬಳಿಕ ತೀವ್ರ ಆಧ್ಯಾತ್ಮಿಕ ತೊಂದರೆ ಯಿರುವ ಮತ್ತು ಆಧ್ಮಾತ್ಮಿಕ ತೊಂದರೆ ಇಲ್ಲದಿರುವ ವ್ಯಕ್ತಿಯಲ್ಲಿ ನಕಾರಾತ್ಮಕ ಊರ್ಜೆ ಗಮನಾರ್ಹವಾಗಿ ಹೆಚ್ಚಾಯಿತು. ಹಾಗೆಯೇ ಆಧ್ಯಾತ್ಮಿಕ ತೊಂದರೆಯಿಲ್ಲದಿರುವ ವ್ಯಕ್ತಿಯಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು

೧ ಆ. ಕೈಯಿಂದ ಆಹಾರವನ್ನು ಸೇವಿಸಿದ್ದರಿಂದ ವ್ಯಕ್ತಿಯಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು ಅಥವಾ ಅದರಲ್ಲಿ ಹೆಚ್ಚಳವಾಗುವುದು :
ಮೇಲಿನ ನಿರೀಕ್ಷಣೆಯಿಂದ ಗಮನಕ್ಕೆ ಬರುವುದೇನೆಂದರೆ, ಕೈಯಿಂದ ಆಹಾರವನ್ನು ಸೇವಿಸಿದ ನಂತರ, ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಮತ್ತು ಇಲ್ಲದಿರುವ ವ್ಯಕ್ತಿಯಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಯಿತು, ಹಾಗೆಯೇ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ವ್ಯಕ್ತಿಯಲ್ಲಿ ಸಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ವ್ಯಕ್ತಿಯ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

೨. ಪರೀಕ್ಷಣೆಯ ನಿಷ್ಕರ್ಷ

ಚಮಚದಿಂದ ಆಹಾರವನ್ನು ಸೇವಿಸುವುದರಿಂದ ಇಬ್ಬರೂ ವ್ಯಕ್ತಿಗಳ ಸೂಕ್ಷ್ಮ-ಊರ್ಜೆಯ ಮೇಲೆ ನಕಾರಾತ್ಮಕ ಪರಿಣಾಮವಾಯಿತು. ತದ್ವಿರುದ್ಧ, ವ್ಯಕ್ತಿಯು ಕೈಯಿಂದ ಆಹಾರ ಸೇವಿಸಿದಾಗ, ವ್ಯಕ್ತಿಯ ಸೂಕ್ಷ್ಮ- ಊರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಯಿತು. ಇದರಿಂದ ಚಮಚದಿಂದ ಆಹಾರವನ್ನು ಸೇವನೆ ಹಾನಿಕರ ಮತ್ತು ಕೈಯಿಂದ ಸೇವಿಸಿದ ಆಹಾರ ಲಾಭದಾಯಕ ಎಂದು ಸಿದ್ಧವಾಯಿತು.

೩. ಪರೀಕ್ಷಣೆಯ ನಿರೀಕ್ಷಣೆಯ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಕೈಯಿಂದ (ಬೆರಳುಗಳಿಂದ) ಆಹಾರವನ್ನು ಸೇವಿಸುವುದರ ಮಹತ್ವ : ‘ಚಮಚದಿಂದ ಆಹಾರವನ್ನು ಬಾಯಿಗೆ ಹಾಕುವಾಗ ಆ ಚಮಚದ ಮೇಲೆ ತೊಂದರೆದಾಯಕ ಶಕ್ತಿಯ ಆವರಣ ಬರುತ್ತದೆ. ಆದರೆ ಬೆರಳುಗಳಿಂದ ಆಹಾರವನ್ನು ಸೇವಿಸುವಾಗ, ಬೆರಳುಗಳಲ್ಲಿ ಕಾರ್ಯನಿರತವಾಗಿರುವ ಈಶ್ವರೀ ಶಕ್ತಿಯು ಆಹಾರದ ಮೂಲಕ ಹೊಟ್ಟೆಯಲ್ಲಿ ಹೋಗುತ್ತದೆ. ಅಂಗೈ ಯಿಂದ ಬೆರಳುಗಳಲ್ಲಿ ಯಾವಾಗಲೂ ಈಶ್ವರೀ ಶಕ್ತಿಯ ಪ್ರವಾಹ ಪ್ರಕ್ಷೇಪಣೆಯಾಗುತ್ತಿರುತ್ತದೆ. ಕೈಯಿಂದÀ ಆಹಾರವನ್ನು ತಿನ್ನುವಾಗ, ಬೆರಳುಗಳು ಮತ್ತೆಮತ್ತೆ ಬಾಯಿಯನ್ನು ಸ್ಪರ್ಶಿಸುತ್ತವೆ. ಆಗ ಬಾಯಿಯನ್ನು ಸ್ಪರ್ಶಿಸುವ ಬೆರಳುಗಳ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವು ಅಂಗೈಯಲ್ಲಿರುವ ಈಶ್ವರೀ ಶಕ್ತಿಯಿಂದ ನಷ್ಟವಾಗುತ್ತದೆ, ಹಾಗೆಯೇ ಜೀವಕ್ಕೆ ಈಶ್ವರೀ ಶಕ್ತಿಯ ಲಾಭವಾಗುತ್ತದೆ ಮತ್ತು ಕೈಗಳ ಬೆರಳುಗಳೂ ಈಶ್ವರೀ ಶಕ್ತಿಯಿಂದ ತುಂಬುತ್ತವೆ. (ಆಧಾರ: ಸನಾತನ ಗ್ರಂಥ ‘ಭೋಜನದ ಸಮಯದ ಮತ್ತು ನಂತರದ ಆಚಾರ)

೩ ಆ. ಕೈಯಿಂದ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗಿ, ಸಕಾರಾತ್ಮಕ ಊರ್ಜೆ ಹೆಚ್ಚಾಗುವುದರ ಹಿಂದಿನ ಕಾರಣ : ಯೋಗ ಶಾಸ್ತ್ರದ ಪ್ರಕಾರ ಮಾನವನ ಕೈಯ ೫ ಬೆರಳುಗಳು, ಅಂದರೆ ಹೆಬ್ಬೆರಳು, ತೋರುಬೆರಳು, ಮಧ್ಯದ ಬೆರಳು, ಉಂಗುರ ಬೆರಳು ಮತ್ತು ಕಿರುಬೆರಳು ಈ ಬೆರಳುಗಳು ಅನುಕ್ರಮವಾಗಿ ಆಕಾಶ, ವಾಯು, ತೇಜ, ಆಪ ಮತ್ತು ಪೃಥ್ವಿ ಈ ಪಂಚತತ್ತ್ವಗಳನ್ನು ಪ್ರತಿನಿಧಿಸುತ್ತವೆ. ನಾವು ನಮ್ಮ ಕೈಗಳಿಂದ ಆಹಾರವನ್ನು ಸೇವಿಸುವಾಗ, ನಾವು ಕೈಯ ಎಲ್ಲಾ ಐದು ಬೆರಳುಗಳನ್ನು ಸೇರಿಸಿ ಆಹಾರವನ್ನು ಬಾಯಿಗೆ ಹಾಕಿಕೊಳ್ಳುತ್ತೇವೆ, ಆಗ ಬೆರಳುಗಳ ಮಾಧ್ಯಮದಿಂದ ಪಂಚತತ್ತ್ವಗಳ ಶಕ್ತಿ (ಚೈತನ್ಯ) ಸಿಗುತ್ತದೆ. ಪರೀಕ್ಷಣೆಗೆ ಒಳಪಟ್ಟಿರುವ ವ್ಯಕ್ತಿಗಳಿಗೆ ಕೈಯಿಂದ ಆಹಾರವನ್ನು ಸೇವಿಸುವಾಗ ಚೈತನ್ಯ ಸಿಕ್ಕಿದ್ದರಿಂದ ಅವರಲ್ಲಿರುವ ನಕಾರಾತ್ಮಕ ಊರ್ಜೆ ಕಡಿಮೆಯಾಗಿ, ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

೩ ಇ. ಚಮಚದಿಂದ ಆಹಾರವನ್ನು ಸೇವಿಸಿದ್ದರಿಂದ ವ್ಯಕ್ತಿಯ ನಕಾರಾತ್ಮಕ ಊರ್ಜೆ ಹೆಚ್ಚಾದುದರ ಹಿಂದಿನ ಕಾರಣ : ಕೈಯಿಂದ ಆಹಾರವನ್ನು ಸೇವಿಸಿದಾಗ ಮನಸ್ಸಿಗೆ ತೃಪ್ತಿ ಯಾಗಿ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ತದ್ವಿರುದ್ಧ ಚಮಚದಿಂದ ಆಹಾರವನ್ನು ಸೇವಿಸಿದರೆ ಮನಸ್ಸಿಗೆ ತೃಪ್ತಿಯಾಗುವುದಿಲ್ಲ. ಕೈಗಳಿಂದ ಆಹಾರವನ್ನು ಸೇವಿಸುವುದರಿಂದ ಆಧ್ಯಾತ್ಮಿಕ ಲಾಭಗಳಾಗುತ್ತವೆ, ಹಾಗೆ ಚಮಚದಿಂದ ಆಹಾರ ಸೇವಿಸಿದಾಗ ಆಗುವುದಿಲ್ಲ. ಪರೀಕ್ಷೆಗೆ ಒಳಪಟ್ಟ ಇಬ್ಬರೂ ವ್ಯಕ್ತಿಗಳ ಮೇಲೆ ಚಮಚದಿಂದ ಆಹಾರ ಸೇವಿಸಿದಾಗ ತೊಂದರೆದಾಯಕ ಸ್ಪಂದನಗಳ ಆವರಣ ಹೆಚ್ಚಾಗಿ ಅವರಲ್ಲಿರುವ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗಿರುವುದು ಪರೀಕ್ಷಣೆಯಿಂದ ಕಂಡುಬಂತು. – ಸೌ. ಮಧುರಾ ಕರ್ವೆ ಮತ್ತು ಶ್ರೀ. ಗಿರೀಶ ಪಾಟೀಲ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. ಇ-ಮೇಲ್‌ : [email protected]

ಓದುಗರಲ್ಲಿ ಮನವಿ

ಆಹಾರವನ್ನು ಸೇವಿಸುವಾಗ ಚಮಚವನ್ನು ಬಳಸದೇ ಕೈಗಳಿಂದ ಆಹಾರ ಸೇವಿಸಿ !

‘ಚಮಚದಿಂದ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ತೊಂದರೆದಾಯಕ ಸ್ಪಂದನಗಳಲ್ಲಿ ತುಂಬಾ ಹೆಚ್ಚಳವಾಗುತ್ತದೆ ಮತ್ತು ಸಕಾರಾತ್ಮಕ ಊರ್ಜೆ ಕಡಿಮೆ ಅಥವಾ ಇಲ್ಲವಾಗುತ್ತದೆ. ಇದರ ನಕಾರಾತ್ಮಕ ಪರಿಣಾಮ ಕಾಲಾಂತರದಲ್ಲಿ ವ್ಯಕ್ತಿಯ ಆರೋಗ್ಯದ ಮೇಲಾಗುತ್ತದೆ. ಪರೀಕ್ಷಣೆಯಲ್ಲಿ ಇಬ್ಬರೂ ವ್ಯಕ್ತಿಗಳ ಮೇಲೆ ಕೇವಲ ಒಮ್ಮೆ ಚಮಚದಿಂದ ಆಹಾರ ಸೇವಿಸಿದ್ದರಿಂದ ಅವರ ಮೇಲೆ ಎಷ್ಟು ನಕಾರಾತ್ಮಕ ಪರಿಣಾಮವಾಯಿತು ಎನ್ನುವ ವಿಷಯವನ್ನು ನಾವು ಓದಿದೆವು. ಆದರೆ ಪ್ರತಿದಿನ ಚಮಚದಿಂದ ಆಹಾರವನ್ನು ಸೇವಿಸುವ ಜನರ ಮೇಲೆ ಎಷ್ಟು ನಕಾರಾತ್ಮಕ ಪರಿಣಾಮವಾಗುತ್ತಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಆಹಾರವನ್ನು ಸೇವಿಸುವಾಗ ಚಮಚವನ್ನು ಬಳಸುವ ಬದಲು, ಕೈಯಿಂದಲೇ ಆಹಾರ ಸೇವಿಸುವುದು ಒಳ್ಳೆಯದು ! ಕಾರಣಾಂತರದಿಂದ ಆಪತ್ಕಾಲೀನ ಸ್ಥಿತಿಯಲ್ಲಿ ಚಮಚದಿಂದ ಆಹಾರವನ್ನು ಸೇವಿಸುವುದು ಅನಿವಾರ್ಯವಾದಾಗ, ಇಷ್ಟದೇವತೆಯಲ್ಲಿ ಭಾವಪೂರ್ಣವಾಗಿ ಪ್ರಾರ್ಥಿಸಿ, ನಾಮಜಪಿಸತ್ತಾ ಆಹಾರ ಸೇವಿಸಬೇಕು. ಇನ್ನಿತರ ಸಂದರ್ಭದಲ್ಲಿಯೂ ಕೈಯಿಂದ ಆಹಾರವನ್ನು ಸೇವಿಸುವಾಗ ಪ್ರಾರ್ಥನೆ ಮಾಡಿ ನಾಮಜಪಿಸುತ್ತಾ, ಆಹಾರವನ್ನು ಸೇವಿಸಬೇಕು. ಇದರಿಂದ ಆಧ್ಯಾತ್ಮಿಕ ಲಾಭಗಳು ಹೆಚ್ಚಾಗುತ್ತವೆ.’