ವಿವಾಹ ಸಮಾರಂಭಗಳಲ್ಲಿ ಇತರರಿಗೆ ಸನಾತನದ ಗ್ರಂಥ, ಕಿರುಗ್ರಂಥ ಅಥವಾ ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆ ನೀಡಿರಿ

ಓದುಗರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ನಮ್ರ ವಿನಂತಿ

ಸದ್ಯ ವಿವಾಹ ಸಮಾರಂಭಗಳು ಪ್ರಾರಂಭವಾಗಿದೆ. ವಿವಾಹ ಸಮಾರಂಭದಲ್ಲಿ ಪರಸ್ಪರ ಉಡುಗೊರೆ ನೀಡುವ ಪದ್ಧತಿಯಿರುತ್ತದೆ. ಸಂಬಂಧಿಕರಿಗೆ ವಿವಾಹ ಸಮಾರಂಭಕ್ಕೆ ಹೋದಾಗ ಅವರಿಗೆ ಬಟ್ಟೆ, ಪಾತ್ರೆ ಮುಂತಾದ ವಸ್ತುಗಳನ್ನು ಉಡುಗೊರೆಯ ಸ್ವರೂಪದಲ್ಲಿ ನೀಡಿದಾಗ ಕೆಲವೊಮ್ಮೆ ಅವರೂ ಪುನಃ ಉಡುಗೊರೆ (‘ರಿಟರ್ನ ಗಿಫ್ಟ’) ನೀಡುತ್ತಾರೆ.

೧. ಇತರರಿಗೆ ಉಡುಗೊರೆ ನೀಡುವ ಸರ್ವೋತ್ತಮ ಪರ್ಯಾಯವೆಂದರೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳು !

ಸನಾತನವು ಅಧ್ಯಾತ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥಸಂಪತ್ತನ್ನು ಪ್ರಕಟಿಸಿದೆ. ಆ ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಿದರೆ ಸಾಧ್ಯವಾದಷ್ಟು ಅಧಿಕ ಜನರ ವರೆಗೆ ಅಮೂಲ್ಯ ಜ್ಞಾನ ತಲುಪುವುದು.
ವಿವಾಹ ಸಮಾರಂಭದಲ್ಲಿ ಉಡುಗೊರೆ ನೀಡಲು ಉಪಯುಕ್ತವಾಗಿರುವ ವಿವಿಧ ಗ್ರಂಥ ಮತ್ತು ಕಿರುಗ್ರಂಥಗಳ ಹೆಸರುಗಳನ್ನು ಮುಂದೆ ಕೋಷ್ಟಕದಲ್ಲಿ ನೀಡಲಾಗಿದೆ. ‘ಯಾವ ಯಾವ ಭಾಷೆಯಲ್ಲಿ ಆ ಗ್ರಂಥಗಳು ಲಭ್ಯವಿದೆ ?’ ಎನ್ನುವುದನ್ನು ಅದರ ಮುಂದಿನ ಚೌಕೋನದಲ್ಲಿ ಎಂದು ಗುರುತು ಮಾಡಲಾಗಿದೆ.

ಇತರರಿಗೆ ಉಡುಗೊರೆಯೆಂದು ನೀಡಲು ೫೦೦ ದೊಡ್ಡ ಗ್ರಂಥಗಳು ಅಥವಾ ೧ ಸಾವಿರ ಕಿರುಗ್ರಂಥಗಳು ಬೇಕಾಗಿದ್ದರೆ, ಆ ಎಲ್ಲ ಗ್ರಂಥಗಳ ಮೊದಲ ಪುಟದಲ್ಲಿ ‘ಇವರಿಂದ ಪ್ರೀತಿಯ ಉಡುಗೊರೆ’ ಎನ್ನುವ ವಿಷಯವನ್ನು ಮುದ್ರಿಸಿ ಕೊಡಬಹುದು.

೧ ಇ. ಮೇಲಿನ ಗ್ರಂಥ ಮತ್ತು ಕಿರುಗ್ರಂಥಗಳನ್ನು ಓದುವುದರಿಂದ ಸಂಬಂಧಿಕರಿಗೆ ಹಿಂದೂ ಧರ್ಮದಲ್ಲಿ ಹೇಳಿರುವ ವಿವಾಹದ ಶಾಸ್ತ್ರ, ಹಾಗೆಯೇ ಅಲಂಕಾರ, ಮೆಹಂದಿ, ರಂಗೋಲಿ, ಆಚಾರಧರ್ಮ ಈ ಸಂದರ್ಭದಲ್ಲಿ ಮಾಹಿತಿ ತಿಳಿಯುವುದು.

೨. ಸನಾತನದ ಸಾತ್ತ್ವಿಕ ಮತ್ತು ಉತ್ಕೃಷ್ಟ ಉತ್ಪಾದನೆಗಳು

ಸನಾತನವು ಊದುಬತ್ತಿ, ಭೀಮಸೇನಿ ಕರ್ಪೂರ, ಅಷ್ಟಗಂಧ, ಕುಂಕುಮ, ದಂತಮಂಜನ, ಸಾಬೂನು, ಉಟಣೆ, ಮುಂತಾದ ನಿತ್ಯೋಪಯೋಗಿ ಉತ್ಪಾದನೆಗಳನ್ನು ತಯಾರಿಸುತ್ತದೆ. ಅದರಂತೆ ಗೋಮೂತ್ರ-ಅರ್ಕ, ತ್ರಿಫಲಾಚೂರ್ಣ ಮುಂತಾದ ಶುದ್ಧ ಆಯುರ್ವೇದೀಯ ಉತ್ಪಾದನೆಗಳು ಸಹ ದೊರೆಯುತ್ತದೆ. ವಿವಾಹದ ನಿಮಿತ್ತದಿಂದ ಈ ಉತ್ಪಾದನೆಗಳನ್ನು ಇತರರಿಗೆ ಉಡುಗೊರೆಯಾಗಿ ನೀಡಬಹುದು. ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಇತರರಿಗೆ ಉಡುಗೊರೆಯಾಗಿ ನೀಡಲಿಕ್ಕಾಗಿ ಸಾತ್ತ್ವಿಕ ಮತ್ತು ಆಕರ್ಷಕ ಉಡುಗೊರೆ ಪೆಟ್ಟಿಗೆ ಲಭ್ಯವಿದೆ. ಈ ಉತ್ಪಾದನೆಗಳನ್ನು ಈ ಉಡುಗೊರೆ ಪೆಟ್ಟಿಗೆಯಲ್ಲಿ ಹಾಕಿ ಕೊಡಬಹುದು. ಒಂದು ಉಡುಗೊರೆ ಪೆಟ್ಟಿಗೆಯ ಬೆಲೆ ರೂ. ೩೦ ಆಗಿದೆ.

೩. ಸ್ಥಳೀಯ ವಿತರಕರ ಬಳಿ ಗ್ರಂಥ, ಕಿರುಗ್ರಂಥ ಅಥವಾ ಉತ್ಪಾದನೆಗಳ ಬೇಡಿಕೆಯನ್ನು ಸಲ್ಲಿಸಿರಿ !

ನಾಮಕರಣ ವಿಧಿ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ವಾಸ್ತುಶಾಂತಿ ಮುಂತಾದ ಕಾರ್ಯಕ್ರಮಗಳ ನಿಮಿತ್ತದಿಂದಲೂ ಸನಾತನದ ಗ್ರಂಥ, ಕಿರುಗ್ರಂಥಗಳ ಉತ್ಪಾದನೆಯನ್ನು ಉಡುಗೊರೆ ರೂಪದಲ್ಲಿ ನೀಡಬಹುದು. ಹಾಗೆಯೇ ಈ ಗ್ರಂಥಗಳಲ್ಲದೇ ಇತರೆ ಗ್ರಂಥಗಳು ಸಹ ಲಭ್ಯವಿದೆ. ಅವುಗಳ ಬೇಡಿಕೆ ಸಲ್ಲಿಸುವುದಿದ್ದಲ್ಲಿ ಸ್ಥಳೀಯ ವಿತರಕರನ್ನು ಆದಷ್ಟು ಬೇಗನೆ ಸಂಪರ್ಕಿಸಿರಿ. ಈ ಗ್ರಂಥ ಮತ್ತು ಕಿರುಗ್ರಂಥಗಳು https://sanatanshop.com ಈ ಜಾಲತಾಣದಿಂದ ಮನೆಯಲ್ಲಿದ್ದುಕೊಂಡೇ ಖರೀದಿಸಬಹುದು.