‘ಡೀಪ್‌ಫೇಕ್’ ಪ್ರಕರಣದಲ್ಲಿ ಕಾನೂನಿನ ಸಹಾಯ !

ಪ್ರಾತಿನಿಧಿಕ ಮೂಲ ಛಾಯಾಚಿತ್ರ ಮತ್ತು ‘ಡೀಪ್‌ಫೇಕ್’ ಮಾಡಿರುವ ಛಾಯಾಚಿತ್ರ

(ಟಿಪ್ಪಣಿ : ಡೀಪ್‌ಫೇಕ್’ ಎಂದರೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸಿನ (ಕೃತಕಬುದ್ಧಿಮತ್ತೆಯ) ಮಾಧ್ಯಮದಿಂದ ಯಾವುದೇ ವ್ಯಕ್ತಿಯ ಮುಖವನ್ನು ಎರಡನೇ ವ್ಯಕ್ತಿಯ ಸ್ಥಾನದಲ್ಲಿ ಅಂಟಿಸಿ ವಿಡಿಯೋವನ್ನು ತಯಾರಿಸುವುದು)

      ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಇವರ ‘ಡೀಪ್‌ಫೇಕ್’ ವಿಡಿಯೋ ಪ್ರಸಾರವಾದ ನಂತರ ಎಲ್ಲರೂ ಚಿಂತೆಗೊಳಗಾಗಿದ್ದಾರೆ. ಆ ವಿಡಿಯೋವನ್ನು ನೋಡಿ ಇದೊಂದು ಸುಳ್ಳು ವಿಡಿಯೋ ಎಂದು ಯಾರಿಗೂ ನಂಬಲು ಸಾಧ್ಯವಾಗುವುದಿಲ್ಲ. ಈ ಚಿತ್ರಸುರುಳಿ ಪ್ರಸಾರವಾದ ನಂತರ ನಮ್ಮ ವಿಷಯದಲ್ಲಿ ಯಾರೂ ಇಂತಹದ್ದನ್ನು ಮಾಡಬಾರದು, ಎಂದು ಕೆಲವರು ಚಿಂತೆಗೊಳಗಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಭಾರತದ ಕಾನೂನು ಏನು ಹೇಳುತ್ತದೆ ? ಇದರಲ್ಲಿ ಕಾನೂನು ನಿಮಗೆ ಹೇಗೆ ಸಹಾಯ ಮಾಡಬಹುದು ?

ಈ ಬಗೆಗಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

೧. ‘ಡೀಪ್‌ಫೇಕ್’ ಎಂದರೇನು ?

ಸದ್ಯ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫೀಶಿಯಲ್‌ ಇಂಟಲಿಜನ್ಸ ಅನ್ನು) ಆಧರಿಸಿದ ಸಾಧನಗಳ ಸಹಾಯದಿಂದ ಯಾವುದೇ ಚಿತ್ರ, ಚಿತ್ರಸುರುಳಿ ಅಥವಾ ಧ್ವನಿಸುರುಳಿಯನ್ನು ಸಂಪೂರ್ಣವಾಗಿ ಬೇರೆಯಾಗಿ ಮಾಡ ಬಹುದು. ಉದಾಹರಣೆಗೆ, ಯಾವುದಾದರೊಬ್ಬ ನೇತಾರ, ನಟ ಅಥವಾ ಪ್ರಸಿದ್ಧ ವ್ಯಕ್ತಿಯ ಭಾಷಣವನ್ನು ಕೃತಕ ಬುದ್ಧಿಮತ್ತೆಯ ಸಾಧನಗಳ ಸಹಾಯದಿಂದ ಸಂಪೂರ್ಣವಾಗಿ ಬದಲಾಯಿಸಬಹುದು; ಆದರೆ ನೋಡುವವರಿಗೆ ಅದು ಗೊತ್ತೇ ಆಗುವುದಿಲ್ಲ ಮತ್ತು ಅವರು ಅದನ್ನು ನಿಜವೆಂದು ತಿಳಿಯುತ್ತಾರೆ. ಇದಕ್ಕೆ ‘ಡೀಪ್‌ಫೇಕ್’ ಎಂದು ಕರೆಯುತ್ತಾರೆ. ಈ ಪ್ರಕರಣಗಳಲ್ಲಿ ಉಪಯುಕ್ತವಾಗುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳೋಣ.

೨. ಗೌಪ್ಯತಾ ಕಾನೂನು

ಅ. ‘ಮಾಹಿತಿ ತಂತ್ರಜ್ಞಾನ ಅಧಿನಿಯಮ, ೨೦೦೦’ : ಈ ಕಾನೂನು ಮತ್ತು ಅದರ ನಿಯಮಗಳು ‘ಮಾಹಿತಿ ಗೌಪ್ಯತಾನೀತಿಯ ಅಧಿಕಾರ’ ಸಹಿತ ವ್ಯಕ್ತಿಯ ಗೌಪ್ಯತೆಗೆ ಕೆಲವೊಂದು ಸಂರಕ್ಷಣೆಯನ್ನು ನೀಡುತ್ತವೆ. ಯಾವುದೇ ‘ಡೀಪ್‌ಫೇಕ್’ ವಿಡಿಯೋ ಯಾವುದಾದರೊಬ್ಬ ವ್ಯಕ್ತಿಯ ಸಮ್ಮತಿಯಿಲ್ಲದೇ ಅವರ ಹೋಲಿಕೆಯನ್ನು ಬಳಸಿ ಆ ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸಿದರೆ ಸಂತ್ರಸ್ತರು ಈ ಕಾನೂನಿನಡಿಯಲ್ಲಿ ದೂರನ್ನು ಸಲ್ಲಿಸಬಹುದು. ‘ಮಾಹಿತಿ ತಂತ್ರಜ್ಞಾನ ಅಧಿನಿಯಮ, ೨೦೦೦’ನೇ ಕಲಮ್‌ ೬೬ ಡಿ’ ಇದು ಗಣಕಯಂತ್ರದ ಸಂಪನ್ಮೂಲಗಳನ್ನು ಬಳಸಿಕೊಂಡು ವಂಚಿಸಿದಕ್ಕಾಗಿ ಶಿಕ್ಷೆಗೆ ಸಂಬಂಧಿಸಿದೆ. ಈ ನಿಬಂಧನೆಗನುಸಾರ ಅಪರಾಧಿ ಎಂದು ಸಿದ್ಧವಾದಲ್ಲಿ ೩ ವರ್ಷ ಜೈಲು ಶಿಕ್ಷೆ ಮತ್ತು ೧ ಲಕ್ಷ ರೂಪಾಯಿಗಳ ದಂಡವನ್ನೂ ಹಾಕಬಹುದು.

ಆ. ಮಾಹಿತಿ ತಂತ್ರಜ್ಞಾನ ಮದ್ಯಸ್ಸ್ಥ ನಿಯಮದ ಅಂತರ್ಗತ, ನಿಯಮ ೩ (೧)(ಬಿ) : ‘ಐಟಿ’ ಮಧ್ಯಸ್ಥ ನಿಯಮದ ಅಂತರ್ಗತ ನಿಯಮ ೩ (೧)(ಬಿ) ಹೇಳುವುದೇನೆಂದರೆ, ಸಾಮಾಜಿಕ ಮಾಧ್ಯಮಗಳ ಮಧ್ಯಸ್ಥ ನಿಯಮ ಮತ್ತು ಗೌಪ್ಯತಾ ನೀತಿ ಅಥವಾ ಬಳಕೆದಾರರ ಒಪ್ಪಂದವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅದರ ಪಾಲನೆ ಮಾಡು ವುದರೊಂದಿಗೆ ಯೋಗ್ಯ ಕಾನೂನುಬದ್ಧ ಪ್ರಕ್ರಿಯೆಯನ್ನು ಅನುಸರಿಸುವುದು ಆವಶ್ಯಕವಾಗಿದೆ. ಎರಡನೇ ವ್ಯಕ್ತಿಯ ಮೋಸ ಮಾಡುವ ಅಥವಾ ನಕಲು ಮಾಡುವ ಯಾವುದೇ ಸಾಮಗ್ರಿಗಳನ್ನು ‘ಹೋಸ್ಟ್‌’ (ಆಯೋಜಕ) ಮಾಡಬಾರದೆಂದು’ ಬಳಕೆದಾರನಿಗೆ ಸೂಚಿಸುವುದು ಆವಶ್ಯಕ ವಾಗಿದೆ. ಈ ನಿಬಂಧನೆಗನುಸಾರ ಇದರ ಜವಾಬ್ದಾರಿಯು ಸಾಮಾಜಿಕ ಮಾಧ್ಯಮಗಳ ಪ್ಲಾಟಫಾರ್ಮನ ಮೇಲೆ (ಕಂಪನಿಗೆ) ಇರುತ್ತದೆ. ಅವರು ‘ಐಟಿ’ ನಿಯಮಗಳಿಗನುಸಾರ ಮಧ್ಯವರ್ತಿಗಳಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ

ಇ. ಇದನ್ನು ಹೊರತುಪಡಿಸಿ ನಿಯಮ ೩(೨)(ಬಿ) : ಇದರಲ್ಲಿ ಉಲ್ಲೇಖಿಸಿದಂತೆ ಇಲೆಕ್ಟ್ರಾನಿಕ್‌ ಸ್ವರೂಪದ ಯಾವುದೇ ಸಾಮಗ್ರಿಗಳ ಸಂದರ್ಭದಲ್ಲಿ ದೂರನ್ನು ಸ್ವೀಕರಿಸಿದ ೨೪ ಗಂಟೆಗಳೊಳಗೆ ಈ ಕುಂದುಕೊರತೆಗಳ ಪರಿಹಾರ ಮಾಡುವುದು ಆವಶ್ಯಕವಾಗಿದೆ. ಕೃತಕವಾಗಿ ಬದಲಾಯಿಸಿದ ‘ಪ್ಯಾರಾಮೀಟರ’ಗಳು ಸೇರಿದಂತೆ ಯಾವುದೇ ವ್ಯಕ್ತಿಯ ಬರವಣಿಗೆಯನ್ನು ತೆಗೆದುಹಾಕಲು ಅಥವಾ ನಾಶ ಮಾಡಲು ‘ಫರ್ಮ್‌’ (ಕಂಪನಿ) ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದು.

೩. ಮಾನಹಾನಿಯ ಖಟ್ಲೆಯನ್ನು ಹೂಡಬಹುದು

ಭಾರತೀಯ ದಂಡ ಸಂಹಿತೆಯ ಕಲಮ್‌ ೪೯೯ ಮತ್ತು ೫೦೦ ರಲ್ಲಿ ಮಾನಹಾನಿಯ ವಿಷಯದ ನಿಬಂಧನೆ ಇದೆ. ಸುಳ್ಳು ಮಾಹಿತಿಯನ್ನು ಹಬ್ಬಿಸಿ ಯಾವುದಾದರೊಬ್ಬ ವ್ಯಕ್ತಿಯ ಘನತೆಗೆ ಹಾನಿಯನ್ನುಂಟು ಮಾಡುವ ಉದ್ದೇಶದಿಂದ ‘ಡೀಪ್‌ಫೇಕ್’ ವಿಡಿಯೋವನ್ನು ತಯಾರಿಸಿದ್ದರೆ ಸಂತ್ರಸ್ತ ವ್ಯಕ್ತಿಯು ನಿರ್ಮಾಪಕನ ವಿರುದ್ಧ ಮಾನಹಾನಿ ಮೊಕದ್ದಮೆ ಯನ್ನು ಹೂಡಬಹುದು. ಆದರೆ ಈ ‘ಡೀಪ್‌ಫೇಕ್‌’ನ ನಕಲಿ ವಿಡಿಯೋಗಳು ಸಾಮಾನ್ಯವಾಗಿ ನಿಜವಾಗಿವೆ ಎಂದು ಕಾಣಿಸುತ್ತವೆ. ಆದುದರಿಂದ ಮಾನನಷ್ಟ ಕಾನೂನಿನ ಎದುರೂ ಬಹುದೊಡ್ಡ ಸವಾಲುಗಳಿವೆ (ಅದು ಡೀಪ್‌ಫೇಕ್’ ವಿಡಿಯೋ ಇದೆ ಎಂದು ಸಿದ್ಧಪಡಿಸುವುದು ಕಠಿಣ ಆಗಬಹುದು). ‘ಡೀಪ್‌ಫೇಕ್’ ವಿಡಿಯೋ ಟೇಪ್‌ನ್ನು ತಪ್ಪು ಪರಿಸ್ಥಿತಿ ಅಥವಾ ಹೇಳಿಕೆಗಳನ್ನು ಸಾಬೀತು ಪಡಿಸಲು ಸಹ ಬಳಸÀಬಹುದಾಗಿದೆ. ನಿರ್ಮಾಪಕನು ವಿಡಿಯೋದಲ್ಲಿ ತೋರಿಸಿದ ವಿಷಯವು ಪ್ರತ್ಯಕ್ಷದಲ್ಲಿ ಎಂದಿಗೂ ಹೇಳದಿದ್ದರು ಅಥವಾ ಮಾಡಿರದಿದ್ದರೂ ಅದು
ನಿಜವೆನಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಈ ವಿಷಯಗಳನ್ನು ಸಾಬೀತುಪಡಿಸಬೇಕಾಗುತ್ತದೆ.

೪. ‘ಡೀಪ್‌ಫೇಕ್’ ವಿಡಿಯೋಗಳ ಸಂದರ್ಭದಲ್ಲಿ ಮಾನಹಾನಿಯ ಮೊಕದ್ದಮೆಯನ್ನು ದಾಖಲಿಸಲು ಆವಶ್ಯಕವಿರುವ ಅಂಶಗಳು

ಅ. ಅಸತ್ಯತೆ : ವಿಡಿಯೋದಲ್ಲಿ ತಪ್ಪು ಮಾಹಿತಿ ಅಥವಾ ವಿಷಯವನ್ನು ತಪ್ಪು ಪದ್ಧತಿಯಿಂದ ಚಿತ್ರಿಸಲಾಗಿದ್ದರೆ, ಅದರ ಕಾಪಿ (ಪ್ರಿಂಟ) ಮತ್ತು ಅದಕ್ಕೆ ಸಾಕ್ಷಿ.

ಆ. ಪ್ರಕಟಣೆ : ವಿಡಿಯೋವನ್ನು ಮೂರನೇ ಪಕ್ಷದವರಿಗೆ (ವ್ಯಕ್ತಿಗೆ) ತೋರಿಸಲಾಗಿದ್ದರೆ ಅಥವಾ ಸಾರ್ವಜನಿಕಗೊಳಿಸಿ ದ್ದರೆ, ಪುರಾವೆಯೊಂದಿಗೆ ಅದರ ಮಾಹಿತಿ.

ಇ. ಹಾನಿ : ನಕಲಿ ವಿಡಿಯೋದಿಂದ ವಿಷಯಕ್ಕೆ ಅಥವಾ ಅವನ ಖ್ಯಾತಿಗೆ ಹಾನಿಯನ್ನುಂಟಾಗಿದ್ದರೆ ಅದರ ಪುರಾವೆ.

ಈ. ದೋಷ : ಕೆಲವು ಪ್ರಕರಣಗಳಲ್ಲಿ ಫಿರ್ಯಾದಿಗೆ (ಅರ್ಜಿದಾರನಿಗೆ), ‘ವಿಡಿಯೋ ಟೇಪ್‌ ತಯಾರಕರು ಅದನ್ನು ನಿರ್ಲಕ್ಷದಿಂದ ಅಥವಾ ನಿಜವಾದ ದುರುದ್ದೇಶದಿಂದ ಮಾಡಿದ್ದಾರೆ’ ಎಂದು ದೃಡ ಪಡಿಸಬೇಕಾಗುತ್ತದೆ.

೫. ಸೈಬರ್‌ ಅಪರಾಧಕ್ಕೆ ಸಂಬಂಧಿಸಿದ ಕಾನೂನು

‘ಮಾಹಿತಿ ತಂತ್ರಜ್ಞಾನ ಅಧಿನಿಯಮ, ೨೦೦೦’ ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಅನಧಿಕೃತ ಸಾಕ್ಷಿ , ಮಾಹಿತಿಯ ಕಳ್ಳತನ ಮತ್ತು ‘ಸೈಬರ್‌ಬುಲ್ಲಿಂಗ್‌’ನಂತಹ ವ್ಯಾಪಕ ಶ್ರೇಣಿಯ ಸೈಬರ್‌ ಅಪರಾಧಗಳನ್ನು ಒಳಗೊಂಡಿದೆ. ‘ಹ್ಯಾಕಿಂಗ್’ ಅಥವಾ ಮಾಹಿತಿ ಕಳ್ಳತನದಂತಹ ಅನಧಿಕೃತ ಮಾರ್ಗದಿಂದ ‘ಡೀಪ್‌ ಫೇಕ್’ ವಿಡಿಯೋವನ್ನು ತಯಾರಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಈ ಕಾನೂನಿಗನುಸಾರ ಸಹಾಯ ಸಿಗುತ್ತದೆ. ಸಂತ್ರಸ್ತರು ದೂರನ್ನು ಸಲ್ಲಿಸಬಹುದು; ಏಕೆಂದರೆ ಈ ಕ್ರಿಯೆಗಳಲ್ಲಿ ಸಾಮಾನ್ಯವಾಗಿ ಗಣಕಯಂತ್ರ ಸಂಪನ್ಮೂಲಗಳಲ್ಲಿ ಅನಧಿಕೃತವಾಗಿ ತಲುಪಿದ ಸಾಕ್ಷಿಯನ್ನು ಒಳಗೊಂಡಿರುತ್ತವೆ ಮತ್ತು ಸಂವೇದನಾಶೀಲ ವೈಯಕ್ತಿಕ ಮಾಹಿತಿಯ ಸುರಕ್ಷತೆಯ ಉಲ್ಲಂಘನೆಯಾಗಿರಬಹುದು. ಇಂತಹ ಅಪರಾಧಗಳನ್ನು ಪರಿ ಹರಿಸಲು ಮತ್ತು ಸೈಬರ್‌ ಅಪರಾಧಗಳಿಗೆ ಸಂಬಂಧಿಸಿದ ‘ಡೀಪ್‌ಫೇಕ್’ ವಿಡಿಯೋ ಟೇಪ್‌ಗಳ ರಚನೆ ಮತ್ತು ಪ್ರಸಾರ ದಿಂದ ತೊಂದರೆಗೊಳಗಾದವರಿಗೆ ಪರಿಹಾರವನ್ನು ಒದಗಿಸಲು ಈ ಕಾನೂನು ‘ಫ್ರೆಮ್‌ ವರ್ಕ್‌’ (ಚೌಕಟ್ಟು) ಒದಗಿಸುತ್ತದೆ.

೬. ಕಾಪಿರೈಟ್‌ (ಸ್ವಾಮಿತ್ವ ಹಕ್ಕು ) ಕಾನೂನಿನ ಉಲ್ಲಂಘನೆ

ಯಾವಾಗ ‘ಡೀಪ್‌ಫೇಕ್’ ವಿಡಿಯೋಗಳಲ್ಲಿ ನಿರ್ಮಾಪಕನ ಅನುಮತಿ ಇಲ್ಲದೇ ಕಾಪಿರೈಟ್‌ (ಸ್ವಾಮಿತ್ವ ಹಕ್ಕು) ಸಾಮಗ್ರಿ ಇರುತ್ತದೆಯೋ, ಆಗ ಕಾಪಿರೈಟ್‌ ಕಾಯಿದೆ ೧೯೫೭’ ಅನ್ವಯಿಸು ತ್ತದೆ. ಕಾಪಿರೈಟ್‌ ಇದ್ದವರಿಗೆ ಇಂತಹ ಉಲ್ಲಂಘನೆಯ ವಿರುದ್ಧ ಕ್ರಮಕೈಗೊಳ್ಳಲು ಕಾನೂನುಬದ್ಧ ಅಧಿಕಾರ ಇದೆ. ಈ ಕಾನೂನು ಮೂಲ ಕೆಲಸವನ್ನು ರಕ್ಷಿಸುತ್ತದೆ ಮತ್ತು ‘ಡೀಪ್‌ ಫೇಕ್’ ಸಾಮಗ್ರಿಗಳಲ್ಲಿ ಅದರ ಅನಧಿಕೃತ ಬಳಕೆಯನ್ನು ತಡೆಯುತ್ತದೆ. ಕಾಪಿರೈಟ್‌ ಉಲ್ಲಂಘನೆಯ ಕಾನೂನುಗಳು ಕಾಪಿರೈಟ್‌ ಹೊಂದಿರುವ ಮಾಲೀಕರಿಗೆ ಅವರ ಸೃಜನಶೀಲ ಆಸ್ತಿಪಾಸ್ತಿಯನ್ನು ರಕ್ಷಿಸಲು ಬಲವಾದ ‘ಫ್ರೇಮ್‌ ವರ್ಕ್‌’ ಒದಗಿಸುತ್ತದೆ ಮತ್ತು ಅವರ ಬೌದ್ಧಿಕ ಶಕ್ತಿಯನ್ನು ಗೌರವಿಸುತ್ತದೆ, ಎಂಬುದನ್ನು ಖಚಿತಪಡಿಸುತ್ತದೆ, ಹಾಗೆಯೇ ‘ಡೀಪ್‌ಫೇಕ್’ ಟೇಪ್‌ಗಳಿಗೆ ಸಂಬಂಧಿಸಿದಂತೆ ಅವರ ಕೆಲಸದ ಅನಧಿಕೃತ ಬಳಕೆಯನ್ನು ನಿಲ್ಲಿಸಲು ಕಾನೂನು ಕ್ರಮವನ್ನು ನೀಡುತ್ತದೆ.

೭. ಮರೆಯುವ ಹಕ್ಕು

ಭಾರತದಲ್ಲಿ ‘ಮರೆಯುವ ಹಕ್ಕು’ ಎಂಬ ಯಾವುದೇ ನಿರ್ದಿಷ್ಟ ಕಾನೂನು ಇಲ್ಲದಿದ್ದರೂ, ವ್ಯಕ್ತಿಯು ಅಂತರ್ಜಾಲದಿಂದ ‘ಡೀಪ್‌ಫೇಕ್’ ವಿಡಿಯೋ ಟೇಪ್‌ಗಳನ್ನು ಒಳಗೊಂಡಂತೆ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದು ಹಾಕಲು ವಿನಂತಿಸಲು ವ್ಯಕ್ತಿಯು ನ್ಯಾಯಾಲಯಕ್ಕೆ ಹೋಗಬಹುದು. ಗೌಪ್ಯತೆಯ ಮತ್ತು ಮಾಹಿತಿ ರಕ್ಷಣೆಯ ತತ್ತ್ವದ ಆಧಾರದಲ್ಲಿ ನ್ಯಾಯಾಲಯಗಳು ಇಂತಹ ವಿನಂತಿಗಳ ವಿಚಾರವನ್ನು ಮಾಡಬಹುದು.

೮. ಗ್ರಾಹಕ ರಕ್ಷಣಾ ಕಾನೂನುಗಳು

‘ಡೀಪ್‌ಫೇಕ್‌ ವಿಡಿಯೋ ಟೇಪ್‌ಗಳನ್ನು ಗ್ರಾಹಕರಿಗೆ ಹಾನಿಯನ್ನುಂಟು ಮಾಡುವ, ವಂಚಿಸುವ ಉದ್ದೇಶದಿಂದ ತಯಾರಿಸಿ ದ್ದರೆ ಅಥವಾ ವಿತರಿಸಿದ್ದರೆ ಪ್ರಭಾವಿತ ವ್ಯಕ್ತಿಯು ‘ಗ್ರಾಹಕ ಸಂರಕ್ಷಣ ಕಾನೂನು, ೨೦೧೯’ ನಂತಹ ಗ್ರಾಹಕ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಪರಿಹಾರವನ್ನು ಪಡೆಯಬಹುದು. ಈ ಕಾನೂನಿನ ಉದ್ದೇಶ ಗ್ರಾಹಕರ ಹಕ್ಕುಗಳ ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ. ಈ ಕಾನೂನನ್ನು ವಂಚನೆ ಅಥವಾ ತಪ್ಪು ಮಾಹಿತಿಯ ಸಂದರ್ಭದಲ್ಲಿ ಬಳಸಬಹುದಾಗಿದೆ.

(ಆಧಾರ : ‘ಆಜ ತಕ್’ ವಾರ್ತಾವಾಹಿನಿಯ ಜಾಲತಾಣ, ೮.೧೧.೨೦೨೩)