ಯಜ್ಞಯಾಗಗಳ ವಿಷಯದಲ್ಲಿ ‘ಯು.ಎ.ಎಸ್. (ಯುನಿವರ್ಸಲ್‌ ಆರಾ ಸ್ಕ್ಯಾನರ್‌)’ ಈ ಉಪಕರಣದ ಮೂಲಕ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಮಾಡಿದ ವೈಶಿಷ್ಟ್ಯಪೂರ್ಣ ಸಂಶೋಧನೆ !

ಯಜ್ಞದ ಚೈತನ್ಯದಿಂದ ಯಜ್ಞದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಷಟ್ಚಕ್ರಗಳ ಮೇಲೆ ಹಾಗೂ ಸೂಕ್ಷ್ಮ- ಉರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು

ಸದ್ಗುರು ಡಾ. ಮುಕುಲ ಗಾಡಗೀಳ

‘ಹಿಂದೂ ಸಂಸ್ಕೃತಿಯಲ್ಲಿ ಯಜ್ಞಯಾಗಗಳಿಗೆ ವಿಶೇಷ ಮಹತ್ವವಿದೆ. ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮದಲ್ಲಿ ಮಹರ್ಷಿಗಳ ಆಜ್ಞೆಯಿಂದ ಘಟಸ್ಥಾಪನೆಯಿಂದ ದಸರಾದ (ವಿಜಯದಶಮಿಯ) ವರೆಗೆ (೨೬.೯.೨೦೨೨ ರಿಂದ ೫.೧೦.೨೦೨೨ ರ ವರೆಗೆ) ಪ್ರತಿದಿನ ಯಜ್ಞಯಾಗಗಳನ್ನು ಮಾಡಲಾಯಿತು. ಯಜ್ಞದಲ್ಲಿನ ಚೈತನ್ಯದಿಂದ ಯಜ್ಞದಲ್ಲಿ ಭಾಗವಹಿಸಿದ ವ್ಯಕ್ತಿಗಳ ಷಟ್ಚಕ್ರಗಳ ಮೇಲೆ ಹಾಗೂ ಅವರ ಸೂಕ್ಷ್ಮ-ಉರ್ಜೆಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ಅಭ್ಯಾಸ ಮಾಡಲು ೪ ಸಾಧಕಿಯರು ಹಾಗೂ ಸದ್ಗುರು ಡಾ. ಮುಕುಲ ಗಾಡಗೀಳರನ್ನು ತಪಾಸಣೆ ಮಾಡಲಾಯಿತು. ಈ ಸಂಶೋಧನೆಯನ್ನು ‘ಯು.ಎ.ಎಸ್‌.’ ಉಪಕರಣದ ಮೂಲಕ ಮಾಡಲಾಯಿತು. ಅದನ್ನು ಮುಂದೆ ನೀಡಲಾಗಿದೆ.

ಯು.ಎ.ಎಸ್. ಉಪಕರಣ ದಿಂದ ಪರೀಕ್ಷಿಸುತ್ತಿರುವ ಶ್ರೀ. ಆಶೀಷ ಸಾವಂತ

ಸೌ. ಮಧುರಾ ಧನಂಜಯ ಕರ್ವೆ

೧. ತಪಾಸಣೆಯಲ್ಲಿನ ಪ್ರಯೋಗ

ಈ ತಪಾಸಣೆಯ ಪ್ರಯೋಗದಲ್ಲಿ ೪ ಸಾಧಕಿ ಯರು ಹಾಗೂ ಓರ್ವ ಸಂತರು ಭಾಗವಹಿಸಿದ್ದರು. ಯಜ್ಞದಲ್ಲಿ ಭಾಗವಹಿಸುವ ಮೊದಲು ಹಾಗೂ ಯಜ್ಞದಲ್ಲಿ ಒಂದುವರೆ ಗಂಟೆ ಪಾಲ್ಗೊಂಡ ನಂತರ ‘ಯು.ಎ.ಎಸ್. ಉಪಕರಣದ ಮೂಲಕ ಈ ಮುಂದಿನಂತೆ ಅವರ ತಪಾಸಣೆ ಮಾಡಲಾಯಿತು.

೧ ಅ. ಸಾಧಕಿಯರು ಹಾಗೂ ಸಂತರ ಷಟ್ಚಕ್ರಗಳ ಸ್ಥಿತಿಯನ್ನು ಅಭ್ಯಾಸ ಮಾಡುವುದು : ಇದಕ್ಕೆ ಷಟ್ಚಕ್ರಗಳ ಮಾದರಿಯನ್ನು ಉಪಯೋಗಿಸಿ ಎಲ್ಲರ ತಪಾಸಣೆ ಮಾಡಲಾಯಿತು. ಷಟ್ಚಕ್ರಗಳ ಮಾದರಿಯನ್ನು ಉಪಯೋಗಿಸಿ ವ್ಯಕ್ತಿಯ ಪರೀಕ್ಷಣೆ
ಮಾಡುವಾಗ ‘ಔರಾ ಸ್ಕ್ಯಾನರ್‌’ನ ಭುಜ ತೆರೆದುಕೊಳ್ಳುವುದು, ಅಂದರೆ ವ್ಯಕ್ತಿಯ ಆಯಾ ಚಕ್ರಗಳ ಸುತ್ತಲೂ ತೊಂದರೆದಾಯಕ ಸ್ಪಂದನಗಳ (ಕಪ್ಪು ಶಕ್ತಿಯ) ಆವರಣ ಇರುವುದು. ‘ಔರಾ ಸ್ಕ್ಯಾನರ್‌’ನ ಭುಜ ತೆರೆದು ಕೊಳ್ಳದಿರುವುದು, ಅಂದರೆ ಅವರ ಆಯಾ ಚಕ್ರಗಳ ಸುತ್ತಲೂ ತೊಂದರೆದಾಯಕ ಸ್ಪಂದನಗಳ ಆವರಣ ಇಲ್ಲದಿರುವುದು.

೧ ಆ. ಸಾಧಕಿಯರು ಮತ್ತು ಸಂತರ ಸೂಕ್ಷ್ಮ-ಉರ್ಜೆಯ ಸ್ಥಿತಿಯನ್ನು ಅಭ್ಯಾಸ ಮಾಡುವುದು : ಅದಕ್ಕಾಗಿ ‘ನಕಾರಾತ್ಮಕ’ ಮತ್ತು ‘ಸಕಾರಾತ್ಮಕ’ ಉರ್ಜೆಯ ಮಾದರಿಯನ್ನು ಉಪಯೋಗಿಸಿ ಎಲ್ಲರನ್ನೂ ತಪಾಸಣೆ ಮಾಡಲಾಯಿತು.

೨. ತಪಾಸಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

೨ ಅ. ಯಜ್ಞದ ಚೈತನ್ಯದಿಂದ ಯಜ್ಞದಲ್ಲಿ ಪಾಲ್ಗೊಂಡ ಸಾಧಕಿಯರು ಮತ್ತು ಸಂತರ ಷಟ್ಚಕ್ರಗಳ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು : ಯಜ್ಞದ ಮೊದಲು ಎಲ್ಲರ ಆರೂ ಚಕ್ರಗಳಲ್ಲಿ ಹೆಚ್ಚುಕಡಿಮೆ ಪ್ರಮಾಣದಲ್ಲಿ ತೊಂದರೆದಾಯಕ ಸ್ಪಂದನಗಳ ಆವರಣ ಇತ್ತು. ಯಜ್ಞದ ನಂತರ ಸಾಧಕಿಯರಲ್ಲಿನ ತೊಂದರೆದಾಯಕ ಸ್ಪಂದನಗಳ ಆವರಣ ತುಂಬಾ ಕಡಿಮೆಯಾಯಿತು ಹಾಗೂ ಸಂತರ ಚಕ್ರಗಳಲ್ಲಿನ ತೊಂದರೆದಾಯಕ ಸ್ಪಂದನಗಳ ಆವರಣ ಸಂಪೂರ್ಣ ಅದೃಶ್ಯವಾಗಿತ್ತು. ಯಜ್ಞದಲ್ಲಿನ ಚೈತನ್ಯದಿಂದ ಸಾಧಕಿಯರ ಮತ್ತು ಸಂತರ ಷಟ್ಚಕ್ರಗಳ ಮೇಲೆ ಸಕಾರಾತ್ಮಕ ಪರಿಣಾಮವಾಗಿರುವುದು ಈ ಮುಂದಿನ ನಿರೀಕ್ಷಣೆಯಿಂದ ಕಂಡು ಬಂತು.

೨ ಆ. ಯಜ್ಞದ ನಂತರ ಸಾಧಕಿಯರಲ್ಲಿನ ಮತ್ತು ಸಂತರಲ್ಲಿನ ನಕಾರಾತ್ಮಕ ಊರ್ಜೆ ತುಂಬಾ ಕಡಿಮೆಯಾಗಿ ಅಥವಾ ಅದೃಶ್ಯವಾಗಿ ಅವರಲ್ಲಿನ ಸಕಾರಾತ್ಮಕ ಉರ್ಜೆಯು ತುಂಬಾ ಹೆಚ್ಚಾಗುವುದು : ಯಜ್ಞದ ಮೊದಲು ಸಾಧಕಿಯರು ಮತ್ತು ಸಂತರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಉರ್ಜೆಯಿತ್ತು. ಯಜ್ಞದ ನಂತರ ಸಾಧಕಿಯರಲ್ಲಿನ ನಕಾರಾತ್ಮಕ ಉರ್ಜೆಯು ಬಹಳ ಕಡಿಮೆಯಾಗಿ ಅವರಲ್ಲಿನ ಸಕಾರಾತ್ಮಕ ಉರ್ಜೆ ಹೆಚ್ಚಾಯಿತು ಹಾಗೂ ಸಂತರಲ್ಲಿನ ನಕಾರಾತ್ಮಕ ಉರ್ಜೆಯು ಸಂಪೂರ್ಣ ನಷ್ಟವಾಗಿ ಅವರಲ್ಲಿನ ಸಕಾರಾತ್ಮಕ ಉರ್ಜೆ ಹೆಚ್ಚಾಯಿತು.

೩. ನಿಷ್ಕರ್ಷ – ಯಜ್ಞದಲ್ಲಿನ ಚೈತನ್ಯದಿಂದ ಯಜ್ಞದಲ್ಲಿ ಪಾಲ್ಗೊಂಡ ವ್ಯಕ್ತಿಗಳ ಷಟ್ಚಕ್ರಗಳ ಮೇಲೆ, ಸಹಸ್ರಾರದ ಮೇಲೆ ಮತ್ತು ಅವರ ಸೂಕ್ಷ್ಮ-ಉರ್ಜೆಯ ಮೇಲೆ ಸಕಾರಾತ್ಮಕ ಪರಿಣಾಮವಾಗುವುದು

ಯಜ್ಞದಲ್ಲಿ ಪಾಲ್ಗೊಂಡ ಸಾಧಕಿಯರು ಹಾಗೂ ಸಂತರು ತಮ್ಮ ಕ್ಷಮತೆಗನುಸಾರ ಯಜ್ಞದ ಚೈತನ್ಯವನ್ನು ಗ್ರಹಣ ಮಾಡಿದರು. ಅದರಿಂದ ಅವರ ಷಟ್ಚಕ್ರಗಳ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಯಿತು ಅಥವಾ ಇಲ್ಲವಾಯಿತು. ಚಕ್ರಗಳ ಮೇಲಿನ ತೊಂದರೆದಾಯಕ ಸ್ಪಂದನಗಳ ಆವರಣ ಕಡಿಮೆಯಾಗಿರುವುದರಿಂದ ಆಯಾ ಚಕ್ರಗಳ ಕಾರ್ಯ ಸುಧಾರಿಸುತ್ತದೆ. ಸಾಧಕಿಯರಿಗೆ ಮತ್ತು ಸಂತರಿಗೆ ಯಜ್ಞದ ಚೈತನ್ಯ ಲಭಿಸಿದ ಕಾರಣ ಅವರ ಸಾತ್ತ್ವಿಕತೆ ಬಹಳ ಹೆಚ್ಚಾಯಿತು. ಇದರಿಂದ ಯಜ್ಞದಲ್ಲಿ ಪಾಲ್ಗೊಳ್ಳುವುದರ ಆಧ್ಯಾತ್ಮಿಕ ಮಹತ್ವವು ಗಮನಕ್ಕೆ ಬರುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೮.೪.೨೦೨೩)

ವಿ-ಅಂಚೆ : [email protected]