ಸಮಾಜವನ್ನು ವಿಭಜಿಸುವ ಸದ್ಯದ ಅನೇಕ ಅಸಮರ್ಥ ರಾಜಕಾರಣಿಗಳು ಮತ್ತು ಹಿಂದೂ ರಾಷ್ಟ್ರದ ಅವಶ್ಯಕತೆ !

(ಪೂ.) ಸಂದೀಪ ಆಳಶಿ

‘ಸ್ವಾತಂತ್ರ್ಯ ಪೂರ್ವದಲ್ಲಿ, ದೇಶ ಭಕ್ತರು ದೇಶಕ್ಕಾಗಿ ಹೋರಾಡು ವಾಗ ಮತ್ತು ಸ್ವಾತಂತ್ರ್ಯೋತ್ತರ ಅವಧಿಯಲ್ಲಿ, ದೇಶದ ಸೈನಿಕರು ಶತ್ರು ರಾಷ್ಟ್ರಗಳ ವಿರುದ್ಧ ಹೋರಾಡುವಾಗ, ಅವರೆಲ್ಲರೂ ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಒಗ್ಗಟ್ಟಾಗಿ ಹೋರಾಡಿದರು; ಏಕೆಂದರೆ ಅವರ ದೃಷ್ಟಿಯಲ್ಲಿ ಎಲ್ಲ ಭಾರತೀಯರಲ್ಲಿದ್ದ ರಕ್ತದ ವರ್ಣ ಕೆಂಪೇ ಆಗಿತ್ತು. ಹಾಗಾದರೆ ಇಂದು ಅನೇಕ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವಾಗ ಜಾತಿ ರಾಜಕಾರಣ ಮತ್ತು ಅಲ್ಪಸಂಖ್ಯಾತರನ್ನು ಏಕೆ ಓಲೈಸಬೇಕಾಗುತ್ತದೆ ?

ಸ್ವತಃ ಸಾಮರ್ಥ್ಯವಿಲ್ಲವೆಂದು, ಮತಪೆಟ್ಟಿಗೆಯ ರಾಜಕೀಯಮಾಡಿ ಚುನಾಯಿತರಾಗಲು ಸಮಾಜವನ್ನು ವಿಭಜಿಸುವ ವಿಷಯಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಅಂತಹ ರಾಜಕೀಯ ನಾಯಕರು ರಾಷ್ಟ್ರವನ್ನು ಒಗ್ಗೂಡಿಸಿ ರಾಷ್ಟ್ರಕ್ಕೆ ಸ್ಥಿರ ಮತ್ತು ಆದರ್ಶ ಸರಕಾರವನ್ನು ಹೇಗೆ ನೀಡಬಹುದು ? ಭಾವಿ ಹಿಂದೂ ರಾಷ್ಟ್ರದ ಎಲ್ಲಾ ರಾಜಕೀಯ ನಾಯಕರು ಕಠಿಣ ಪರಿಶ್ರಮ ಮತ್ತು ತೀವ್ರ ದೇಶಭಕ್ತರು ಇರುವರು. ಹಾಗಾಗಿ ಹಿಂದೂ ರಾಷ್ಟ್ರ ಆದರ್ಶ ರಾಷ್ಟ್ರವಾಗಲಿದೆ. ಅದಕ್ಕಾಗಿಯೇ ಹಿಂದೂ ರಾಷ್ಟ್ರ ಸ್ಥಾಪನೆಗೆ ನಾವು ಒಟ್ಟಾಗಿ ಪ್ರಯತ್ನಿಸೋಣ ! ‘

– (ಪೂ.) ಸಂದೀಪ ಆಳಶಿ