|
೮೦ ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಿ ನಿಕೋಬಾರ್ ದ್ವೀಪದಲ್ಲಿ ಕಟ್ಟುವ ಉದ್ದೇಶವಿರುವ ಗ್ರೇಟ್ ನಿಕೋಬಾರ್ ಪ್ರಾಜೆಕ್ಟ್ ಕಾಂಗ್ರೆಸ್ ಪಕ್ಷ ಮತ್ತು ವಿಶೇಷವಾಗಿ ಆ ಪಕ್ಷದ ಮಾಲೀಕತ್ವ ಹೊಂದಿರುವ ಗಾಂಧಿ-ವಾದ್ರಾ ಕುಟುಂಬವು ತೀವ್ರವಾಗಿ ವಿರೋಧಿಸುತ್ತಿದೆ. ಸೋನಿಯಾ ಗಾಂಧಿಯವರು ಸೆಪ್ಟೆಂಬರ್ ೨೦೨೫ ರಲ್ಲಿ ದಿ ಹಿಂದೂ ಎಂಬ ಸಾಮ್ಯವಾದಿ-ವೋಕ್ ವಿಚಾರಧಾರೆಯ ಮುಖಪತ್ರದಲ್ಲಿ ಲೇಖನವೊಂದನ್ನು ಬರೆದು, ಈ ಯೋಜನೆಯು ಒಂದು ಪರಿಸರ ವಿನಾಶ ಆಗಿದೆ ಎಂದು ಟೀಕಿಸಿದ್ದರು. (ಜಗತ್ತಿನಾದ್ಯಂತ ಸ್ಥಾಪಿತ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ಕುಟುಂಬ ವ್ಯವಸ್ಥೆಯನ್ನು ನಾಶಪಡಿಸುವ ವಿಕೃತಿಯೇ ವೋಕಿಝಮ್.) ಬಂಗಾಳದ ಚುನಾವಣಾ ಪ್ರಚಾರದಲ್ಲಿ ೪-೫ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ ಗಾಂಧಿಯವರು, ಅಭಿಯಾನ ಮುಗಿಯುವ ವರೆಗೆ ಕಾಯದೆ ನೇರವಾಗಿ ನಿಕೋಬಾರ್‌ಗೆ ತಲುಪಿದರು. ಅಲ್ಲಿಂದ ಅವರು ಈ ಯೋಜನೆಯು ಪರಿಸರ ಮತ್ತು ಆದಿವಾಸಿಗಳ ಜೀವನದಲ್ಲಿ ಹೇಗೆ ಸಂಕಟ ತರಲಿದೆ ಎಂದು ಟೀಕಿಸತೊಡಗಿದರು. ಈಗ ಪರಿಸರವು ಒಂದು ಮಹತ್ವದ ವಿಷಯವಾಗಿದೆ ಮತ್ತು ನೀತಿಗಳನ್ನು ರೂಪಿಸುವಾಗ ಇದಕ್ಕೆ ಆದ್ಯತೆ ನೀಡಬೇಕು ಎಂಬುದು ನಿಜ; ಆದರೆ ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು, ಭಾರತವಿರೋಧಿ ಶಕ್ತಿಗಳು ತಮ್ಮ ವಿನಾಶಕಾರಿ ಅಜೆಂಡಾವನ್ನು (ಕಾರ್ಯಸೂಚಿ) ಮರೆಮಾಚಲು ಆಕರ್ಷಕ ಮುಖವಾಡಗಳ ಹಿಂದೆ ಕೆಲಸ ಮಾಡುತ್ತವೆ. ಆದ್ದರಿಂದ, ಯಾವುದಾದರೂ ವಿಷಯವು ಹಠಾತ್ತಾಗಿ ಚರ್ಚೆಗೆ ಬರಲಾರಂಭಿಸಿದರೆ, ಅದು ಮುಖವೋ ಅಥವಾ ಮುಖವಾಡವೋ ? ಎಂದು ಆಲೋಚಿಸುವುದು ಮಹತ್ವದ್ದಾಗಿದೆ. |
೧. ನಿಕೋಬಾರ್ ಟರ್ಮಿನಲ್‌ಗೆ ವಿರೋಧ ವ್ಯಕ್ತವಾಗಲು ಕಾರಣ

ಈ ಹಠಾತ್ತಾಗಿ ಆರಂಭವಾಗಿರುವ ಕೋಲಾಹಲದ ಹಿಂದಿನ ವಾಸ್ತವವನ್ನು ಅರ್ಥಮಾಡಿಕೊಳ್ಳುವ ಮೊದಲು, ಈ ಯೋಜನೆ ಏನೆಂದು ಅರ್ಥ ಮಾಡಿಕೊಳ್ಳೋಣ. ಅಂತಾರಾಷ್ಟ್ರೀಯ ವ್ಯಾಪಾರವು ಬೃಹತ್ ಹಡಗುಗಳ ಮೂಲಕ ನಡೆಯುತ್ತಿದ್ದು ಅವುಗಳಿಗೆ ಲಂಗರು ಹಾಕಲು ಸಾಧ್ಯವಾಗುವ ಬಂದರುಗಳು ಕಡಿಮೆ ಇವೆ. ಆದ್ದರಿಂದ ಅಂತಹ ಬಂದರುಗಳ ಸೇವೆಗಾಗಿ ಹಣ ಪಾವತಿಸಿ, ಈ ಬೃಹತ್ ಹಡಗುಗಳಿಂದ ಸರಕುಗಳನ್ನು ಸಣ್ಣ ಹಡಗುಗಳಿಗೆ ಇಳಿಸಿ ವಿವಿಧ ಬಂದರುಗಳಿಗೆ ಸಾಗಿಸಬೇಕಾಗುತ್ತದೆ. ಭಾರತದ ಅಂತಾರಾಷ್ಟ್ರೀಯ ವ್ಯಾಪಾರದ ಶೇ. ೭೫ ರಷ್ಟು ಸರಕುಗಳನ್ನು ಈ ರೀತಿ ಟ್ರಾನ್ಸಶಿಪ್‌ಮೆಂಟ್ ಮಾಡಬೇಕಾಗುತ್ತದೆ ಮತ್ತು ಅದಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ಡಾಲರ್ ಹಣವನ್ನು ಇತರ ದೇಶಗಳಿಗೆ ನೀಡಿ ಅವರ ಬಂದರುಗಳ ಸೇವೆಯನ್ನು ಪಡೆಯಬೇಕಾಗುತ್ತದೆ. ಪ್ರಸ್ತುತ ಅಸ್ಥಿರ ಜಾಗತಿಕ ಪರಿಸ್ಥಿತಿಯಲ್ಲಿ, ಸ್ವಾವಲಂಬನೆಯು ಅತ್ಯಂತ ಮಹತ್ವದ್ದಾಗಿದೆ. ಅದಕ್ಕಾಗಿಯೇ ಮೋದಿ ಸರಕಾರವು ನಿಕೋಬಾರ್ ದ್ವೀಪದಲ್ಲಿ ಇಂಟರನ್ಯಾಷನಲ್ ಕಂಟೈನರ್ ಟ್ರಾನ್ಸಶಿಪ್‌ಮೆಂಟ್ ಟರ್ಮಿನಲ್ ನಿರ್ಮಿಸಲು ಯೋಜಿಸಿದೆ. ಈ ಟರ್ಮಿನಲ್‌ನಿಂದ ಪ್ರತಿ ವರ್ಷ ೨೦೦ ಮಿಲಿಯನ್ ಡಾಲರ್ (೧ ಸಾವಿರದ ೮೯೭ ಕೋಟಿ ರೂಪಾಯಿ) ಉಳಿತಾಯವಾಗಲಿದೆ ಮತ್ತು ಟರ್ಮಿನಲ್ ಸೇವೆಯನ್ನು ಇತರರಿಗೆ ನೀಡುವುದರಿಂದ ಪ್ರತಿ ವರ್ಷ ೩೦ ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ. ಎಲ್ಲಕ್ಕಿಂತ ಮಹತ್ವದ್ದೆಂದರೆ, ಕಾರ್ಗೋ ಹ್ಯಾಂಡ್ಲಿಂಗ್ (ಸರಕು ನಿರ್ವಹಣೆ) ನಲ್ಲಿ ಸಂಪೂರ್ಣ ಸ್ವಾವಲಂಬಿ ಆಗುವುದರಿಂದ ಭಾರತೀಯ ಆರ್ಥಿಕತೆಯು ಅತಿ ಹೆಚ್ಚು ಸದೃಢ ಮತ್ತು ಸುರಕ್ಷಿತವಾಗಲಿದೆ. ಭಾರತೀಯ ಆರ್ಥಿಕತೆಯ ಬೆಳವಣಿಗೆಯ ವೇಗ ನೋಡಿದರೆ, ಭಾರತವು ಬೇಗನೇ ಅಮೇರಿಕಾ ಮತ್ತು ಚೀನಾದ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ ಎಂಬುದು ಈಗ ಜಗಜ್ಜಾಹೀರಾಗಿದೆ. ಆದ್ದರಿಂದಲೇ, ಭಾರತದ ಆರ್ಥಿಕ ಪ್ರಗತಿಯಲ್ಲಿ ಸಾಧ್ಯವಾದಷ್ಟು ಅಡೆತಡೆಗಳನ್ನು ತರಲು ಈ ಮಹಾಶಕ್ತಿಗಳು ಪ್ರಯತ್ನಿಸುವುದು ಸಹಜ. ಇದಕ್ಕಾಗಿಯೇ ನಿಕೋಬಾರ್ ಟರ್ಮಿನಲ್ ಆಗಬಾರದೆಂದು ಕಾಂಗ್ರೆಸ್ ಪರಿಸರವಾದದ ಮುಖವಾಡ ಧರಿಸಿದೆ.
೨. ಭೌಗೋಳಿಕ – ರಾಜಕೀಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಗ್ರೇಟ್ ನಿಕೋಬಾರ್ ಯೋಜನೆ
ಇದಲ್ಲದೇ ಈ ಯೋಜನೆಯಲ್ಲಿ ಎಸ್.ಇ.ಝಡ್. (ವಿಶೇಷ ಆರ್ಥಿಕ ವಲಯ), ವಿಮಾನ ನಿಲ್ದಾಣ ಮತ್ತು ಭಾರತೀಯ ನೌಕಾದಳದ ಒಂದು ದೊಡ್ಡ ನೆಲೆಯೂ ಸೇರಿದೆ. ಈ ನೌಕಾ ನೆಲೆಯಿಂದ ನಿಕೋಬಾರ್‌ನಿಂದ ಕೇವಲ ೭೪ ಕಿ.ಮೀ. ದೂರದಲ್ಲಿರುವ ಮಲಕ್ಕಾ ಜಲಸಂಧಿಯ ಮೇಲೆ ನಿಯಂತ್ರಣ ಸಾಧಿಸಲು ಭಾರತೀಯ ನೌಕಾದಳಕ್ಕೆ ಸಾಧ್ಯವಾಗಲಿದೆ. ಭೂ-ರಾಜಕೀಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಅಂಶವಾಗಿದೆ; ಏಕೆಂದರೆ ಚೀನಾದ ಶೇ. ೬೦ ರಷ್ಟು ವ್ಯಾಪಾರ ಮತ್ತು ಶೇ. ೮೦ ರಷ್ಟು ತೈಲ ಆಮದು ಮಲಕ್ಕಾ ಜಲಸಂಧಿಯ ಮೂಲಕವೇ ನಡೆಯುತ್ತದೆ. ಹಾರ್ಮುಜ್ ಜಲಸಂಧಿಯ ಮೇಲೆ ನಿಯಂತ್ರಣ ಹೊಂದಿರುವುದರಿಂದ ಇರಾನ್ ಅಮೇರಿಕಾವನ್ನು ಹೇಗೆ ಸಂಕಷ್ಟಕ್ಕೆ ಸಿಲುಕಿಸಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮಲಕ್ಕಾ ಜಲಸಂಧಿಯ ಮೇಲಿನ ನಿಯಂತ್ರಣವು ಭವಿಷ್ಯದಲ್ಲಿ ಭಾರತಕ್ಕೆ ಎಷ್ಟು ಮಹತ್ವದ್ದಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. ಈ ಯೋಜನೆಯು ರದ್ದಾಗಬೇಕೆಂದು ಚೀನಾ ಹರಸಾಹಸ ಮಾಡಲಿದೆ ಎಂಬುದು ಸ್ಪಷ್ಟವಾಗಿದೆ. ೨೦೦೮ ರಲ್ಲಿ ಕಾಂಗ್ರೆಸ್ ಪಕ್ಷವು ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಮಾಡಿಕೊಂಡ ರಹಸ್ಯ ಒಪ್ಪಂದಕ್ಕೂ, ಗ್ರೇಟ್ ನಿಕೋಬಾರ್ ಯೋಜನೆಯ ಬಗ್ಗೆ ಕಾಂಗ್ರೆಸ್ ತಳೆದಿರುವ ನಿಲುವಿಗೂ ಏನು ಸಂಬಂಧವಿದೆ ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಮೂಡುವುದು ಸಹಜ.
೩. ಗ್ರೇಟ್ ನಿಕೋಬಾರ್ ಯೋಜನೆ ರದ್ದುಗೊಳಿಸಲು ಹೆಣೆಯಲಾದ ಕಥಾನಕ
ಈ ಯೋಜನೆಯು ರದ್ದಾಗಬೇಕೆಂಬ ಉದ್ದೇಶದಿಂದ ಧರಿಸಿದ ಪರಿಸರವಾದದ ಮುಖವಾಡವು ಪ್ರಭಾವಶಾಲಿಯಾಗಲು ಹೇಗೆ ವಾತಾವರಣ ನಿರ್ಮಿಸಲಾಗುತ್ತಿದೆ ಎಂಬುದನ್ನು ನೋಡೋಣ. ಈ ವರ್ಷದ ಬೇಸಿಗೆಯು ಹಿಂದೆಂದೂ ಕಂಡರಿಯದಷ್ಟು ತೀವ್ರವಾಗಿದೆ ಎಂದು ಚರ್ಚೆ ವಿವಿಧ ಮಾಧ್ಯಮಗಳ ಮೂಲಕ ಆರಂಭಿಸಲಾಗಿದೆ. ಈ ವರ್ಷ ವಿಶ್ವದ ೧೦೦ ಅತ್ಯಂತ ಉಷ್ಣ ನಗರಗಳಲ್ಲಿ ೯೮ ನಗರಗಳು ಭಾರತದಲ್ಲಿವೆ ಎಂಬ ಸುದ್ದಿಯನ್ನು ಅತಿ ರಂಜಿತವಾಗಿ ಹರಡಲಾಗುತ್ತಿದೆ. ವಾಸ್ತವವಾಗಿ ಏಪ್ರಿಲ್-ಮೇ ತಿಂಗಳುಗಳಲ್ಲಿ ಇಂತಹ ಪರಿಸ್ಥಿತಿ ಸಾಮಾನ್ಯ ಮತ್ತು ಅದು ಅತ್ಯಂತ ಸೀಮಿತ ಕಾಲ ಇರುತ್ತದೆ. ಆದರೆ ವರ್ಷವಿಡೀ ವಿಶ್ವದ ಅತ್ಯಂತ ಬಿಸಿಯಾದ ನಗರಗಳು ಭಾರತದಲ್ಲಿಯೇ ಇವೆ ಎಂಬಂತೆ ಸುದ್ದಿಗಳನ್ನು ನೀಡಲಾಗುತ್ತಿದೆ. ಇದರ ಹಿಂದೆ ಪರಿಸರದ ಬಗ್ಗೆ ಚರ್ಚೆಯನ್ನು ತಾರಕಕ್ಕೇರಿಸಿ ನಿಕೋಬಾರ್ ಯೋಜನೆಯನ್ನು ರದ್ದುಗೊಳಿಸಲು ಜನಮತದ ಒತ್ತಡವನ್ನು ಸೃಷ್ಟಿಸುವ ಸಂಚಿದೆ ಎಂಬುದು ಜನರಿಗೆ ಅರಿವಾಗುವುದು ಅಸಾಧ್ಯ. ಮಹಾಶಕ್ತಿಗಳ ಬೆಂಬಲದಿಂದ ಅವರ ಧ್ವನಿ ಏರುತ್ತಾ ಹೋಗುತ್ತದೆ. ದೇಶದ ಮತ್ತು ವಿಶ್ವದ ವೋಕ್ ಲಿಬರಲ್ ಲಾಬಿಯು ಈ ಪ್ರಯತ್ನಗಳ ಸುತ್ತ ಒಳ್ಳೆಯತನದ ಒಂದು ವೀರತ್ವದ ಪ್ರಭೆಯನ್ನು ನಿರ್ಮಿಸುತ್ತದೆ. ಕಾಂಗ್ರೆಸ್ಸಿನ ರಾಹುಲ ಗಾಂಧಿಯವರಿಗೆ ಬಹುಶಃ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನೂ ನೀಡಬಹುದು. ಭಾರತೀಯರು ಈ ಸಾಹಸದ ಹಿಂದಿನ ನೈಜ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.
೪. ಭಾರತ ವಿರೋಧಿ ಮತ್ತು ಚೀನಾ ಪರ ಅಜೆಂಡಾ !
ಇದರ ಅರ್ಥ ಪರಿಸರದ ನಾಶ ಮತ್ತು ಅದರಿಂದ ಹೆಚ್ಚುತ್ತಿರುವ ತಾಪಮಾನದ ಸಮಸ್ಯೆ ನಗಣ್ಯ ಎಂದಲ್ಲ; ಆದರೆ ಇದಕ್ಕೆ ದೀರ್ಘಕಾಲೀನ ಮತ್ತು ನಿರಂತರ ಪ್ರಯತ್ನಗಳ ಅಗತ್ಯವಿದೆ. ದೇಶಕ್ಕೆ ಅತ್ಯಂತ ಮಹತ್ವದ್ದಾಗಿರುವ ನಿಕೋಬಾರ್ ಯೋಜನೆ ರದ್ದಾಗಲಿ ಎಂದು ಈ ಸಮಸ್ಯೆಯನ್ನು ಮುಂದಿಡುವುದು ಪರಿಸರವಾದವಲ್ಲ, ಬದಲಿಗೆ ಅದು ಭಾರತವಿರೋಧಿ ಮತ್ತು ಚೀನಾಪರ ಅಜೆಂಡಾ ಎಂಬುದನ್ನು ನಾವು ಗಮನಿಸಬೇಕು. ನಿಕೋಬಾರ್ ದ್ವೀಪದ ಕೇವಲ ಶೇ. ೮ ರಷ್ಟು ಜಾಗವನ್ನು ಮಾತ್ರ ಈ ಯೋಜನೆಗಾಗಿ ಬಳಸಲಾಗುತ್ತಿದೆ. ರಾಷ್ಟ್ರೀಯ ಹಸಿರು ಪ್ರಾಧಿಕಾರಣವು ಈ ಯೋಜನೆಯ ಮಹತ್ವವನ್ನು ಅರಿತು ಅದಕ್ಕೆ ಅನುಮತಿ ನೀಡಿದೆ. ಪರಿಸರದ ರಕ್ಷಣೆ ಮತ್ತು ಸಂವರ್ಧನೆಯೊಂದಿಗೆ ಭಾರತದ ಆರ್ಥಿಕ ಮತ್ತು ಸಾಮರಿಕ ಸುರಕ್ಷತೆಯೂ ಅಷ್ಟೇ ಮಹತ್ವದ್ದಾಗಿದೆ. ಅದನ್ನು ಅಪಾಯಕ್ಕೆ ಸಿಲುಕಿಸಲು ಪರಿಸರಪ್ರೇಮದ ಮುಖವಾಡ ಧರಿಸುವ ದೇಶದ್ರೋಹಿ ಶಕ್ತಿಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಬೇಕಿದೆ !
– ಶ್ರೀ. ಅಭಿಜಿತ ಜೋಗ, ಪ್ರಸಿದ್ಧ ಲೇಖಕರು, ಪುಣೆ. (೩೦.೪.೨೦೨೬)

ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಂದ ಗಲಾಟೆ : ಎರಡೂ ಸದನಗಳ ಕಲಾಪ ಕೆಲವು ಗಂಟೆಗಳ ಕಾಲ ಮುಂದೂಡಿಕೆ : Adjournment of both houses
ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ
ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರಿಂದ ಜೈಪುರದ ಪ್ರಸಿದ್ಧ ‘ಖೋಲೆ ಹನುಮಾನ’ಗೆ ಪ್ರಾರ್ಥನೆ !